ಮತ್ತೊಬ್ಬನ ಸೇವಕನ ವಿಷಯವಾಗಿ ತೀರ್ಪುಮಾಡುವದಕ್ಕೆ ನೀನು ಯಾರು? ಅವನು ನಿಂತರೂ ಬಿದ್ದರೂ ಅದು ಅವನ ಯಜಮಾನನಿಗೇ ಸೇರಿದ್ದು. ಹೌದು, ಅವನು ನಿಲ್ಲಿಸಲ್ಪಡುವನು; ಅವನನ್ನು ನಿಲ್ಲಿಸುವದಕ್ಕೆ ದೇವರು ಶಕ್ತನಾಗಿದ್ದಾನೆ.
ಒಬ್ಬನು ಒಂದು ದಿವಸಕ್ಕಿಂತ ಮತ್ತೊಂದು ದಿವಸವನ್ನು ವಿಶೇಷವೆಂದು ಎಣಿಸುತ್ತಾನೆ. ಮತ್ತೊಬ್ಬನು ಎಲ್ಲಾ ದಿವಸಗಳನ್ನೂ ಒಂದೇ ರೀತಿಯಾಗಿ ಎಣಿಸುತ್ತಾನೆ; ಹೀಗಿರಲಾಗಿ ಪ್ರತಿಯೊಬ್ಬನು ತನ್ನ ಮನಸ್ಸಿ ನಲ್ಲಿ ನಿಶ್ಚಯಿಸಿಕೊಂಡಿರಲಿ.
ದಿನವನ್ನು ಗಣ್ಯ ಮಾಡುವವನು ಅದನ್ನು ಕರ್ತನಿಗಾಗಿ ಗಣ್ಯಮಾಡು ತ್ತಾನೆ; ದಿನವನ್ನು ಗಣ್ಯಮಾಡದವನು ಅದನು ಕರ್ತನಿಗಾಗಿ ಗಣ್ಯಮಾಡುವದಿಲ್ಲ; ತಿನ್ನುವವನು ಕರ್ತನಿಗಾಗಿ ತಿನ್ನುತ್ತಾನೆ; ಅವನು ದೇವರಿಗೆ ಉಪಕಾರ ಸ್ತುತಿ ಹೇಳುತ್ತಾನೆ; ತಿನ್ನದಿರುವವನು ಕರ್ತನಿಗಾಗಿ ತಿನ್ನದೆ ದೇವರಿಗೆ ಸೆ
ಆದಕಾರಣ ಇನ್ನು ಮೇಲೆ ಒಬ್ಬರ ವಿಷಯದ ಲ್ಲೊಬ್ಬರು ಎಂದಿಗೂ ತೀರ್ಪು ಮಾಡದೆ ಇರೋಣ; ಇದಲ್ಲದೆ ಸಹೋದರನ ಎದುರಿಗೆ ಅಡ್ಡಿಯನ್ನಾಗಲಿ ಎಡೆತಡೆಯನ್ನಾಗಲಿ ಹಾಕಲೇಬಾರದೆಂದು ತೀರ್ಮಾನಿ ಸಿಕೊಳ್ಳಿರಿ.
ಯಾವ ಪದಾರ್ಥವೂ ಸ್ವತಃ ಅಶುದ್ಧ ವಾದದ್ದಲ್ಲವೆಂದು ನಾನು ಬಲ್ಲೆನು, ಇದನ್ನು ನಾನು ಕರ್ತನಾದ ಯೇಸುವಿನ ಮುಖಾಂತರ ದೃಢವಾಗಿ ನಂಬಿದ್ದೇನೆ; ಆದರೆ ಯಾವದಾದರೂ ಒಂದು ಪದಾರ್ಥವನ್ನು ಅಶುದ್ಧವೆಂದು ಒಬ್ಬನು ಭಾವಿಸಿದರೆ ಅವನಿಗೆ ಅದು ಅಶುದ್ಧವೇ.