Indian Language Bible Word Collections
Psalms 27:2
Psalms Chapters
Psalms 27 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Assamese
Books
Old Testament
New Testament
Psalms Chapters
Psalms 27 Verses
1
ಕರ್ತನು ನನ್ನ ಬೆಳಕೂ ರಕ್ಷಣೆಯೂ ಆಗಿದ್ದಾನೆ; ನಾನು ಯಾರಿಗೆ ಭಯಪಡು ವೆನು? ಕರ್ತನು ನನ್ನ ಜೀವದ ಬಲವಾಗಿದ್ದಾನೆ; ನಾನು ಯಾರಿಗೆ ಹೆದರುವೆನು?
2
ನನ್ನ ಮಾಂಸವನ್ನು ತಿನ್ನಬೇಕೆಂದು ದುಷ್ಟರು ಅಂದರೆ ನನ್ನ ವೈರಿಗಳೂ ಶತ್ರುಗಳೂ ಬಂದಾಗ ಅವರು ಎಡವಿಬಿದ್ದರು.
3
ನನಗೆ ವಿರೋಧವಾಗಿ ದಂಡು ಇಳಿದರೂ ನನ್ನ ಹೃದಯವು ಭಯಪಡದು; ಯುದ್ಧವು ನನ್ನ ಮೇಲೆ ಎದ್ದರೂ ಇದರಲ್ಲಿಯೂ ನಾನು ಭರವಸವಾಗಿರುವೆನು.
4
ಒಂದ ನ್ನೇ ಕರ್ತನಿಂದ ಬಯಸಿದೆನು, ಅದನ್ನೇ ಹುಡುಕುವೆನು; ಕರ್ತನ ರಮ್ಯತೆಯನ್ನು ದೃಷ್ಟಿಸುವದೂ ಆತನ ಮಂದಿರ ದಲ್ಲಿ ವಿಚಾರಿಸುವದೂ ನನ್ನ ಜೀವನದ ದಿನಗಳಲ್ಲೆಲ್ಲಾ ಕರ್ತನ ಆಲಯದಲ್ಲಿ ವಾಸಮಾಡುವದೂ ಆಗಿದೆ.
5
ಕೇಡಿನ ಸಮಯದಲ್ಲಿ ಆತನು ತನ್ನ ಗುಡಾರದಲ್ಲಿ ನನ್ನನ್ನು ಬಚ್ಚಿಡುವನು. ತನ್ನ ಗುಪ್ತವಾದ ಡೇರೆಯಲ್ಲಿ ನನ್ನನ್ನು ಮರೆಮಾಡುವನು; ಬಂಡೆಯ ಮೇಲೆ ನನ್ನನ್ನು ನಿಲ್ಲಿಸುವನು.
6
ಈಗ ನನ್ನ ಸುತ್ತಲಿರುವ ಶತ್ರುಗಳ ಮೇಲೆ ನನ್ನ ತಲೆಯು ಎತ್ತಲ್ಪಟ್ಟಿರುವದು. ಆದದರಿಂದ ಆತನ ಗುಡಾರದಲ್ಲಿ ಉತ್ಸಾಹದ ಬಲಿಗಳನ್ನು ಅರ್ಪಿ ಸುವೆನು; ಹೌದು, ಕರ್ತನಿಗೆ ಹಾಡಿ ಕೀರ್ತಿಸುವೆನು.
7
ಓ ಕರ್ತನೇ, ನಾನು ಕೂಗುವ ಸ್ವರವನ್ನು ಕೇಳು; ನನ್ನನ್ನು ಕರುಣಿಸಿ ನನಗೆ ಉತ್ತರಕೊಡು.
8
ನೀನು--ನನ್ನ ಮುಖವನ್ನು ನೀವು ಹುಡುಕಿರಿ ಎಂದು ಹೇಳಿದಿಯಲ್ಲಾ. ಕರ್ತನೇ, ನಿನ್ನ ಮುಖವನ್ನು ಹುಡು ಕುವೆನು ಎಂದು ನನ್ನ ಹೃದಯವು ನಿನಗೆ ಹೇಳಿತು.
9
ನಿನ್ನ ಮುಖವನ್ನು ನನಗೆ ಮರೆಮಾಡಬೇಡ; ನಿನ್ನ ಸೇವಕನನ್ನು ಕೋಪದಿಂದ ತಳ್ಳಬೇಡ; ನೀನು ನನಗೆ ಸಹಾಯಕನಾಗಿದ್ದೀ; ನನ್ನನ್ನು ವಿಸರ್ಜಿಸಬೇಡ; ನನ್ನ ರಕ್ಷಣೆಯ ಓ ದೇವರೇ, ನನ್ನನ್ನು ಬಿಟ್ಟುಬಿಡಬೇಡ.
10
ನನ್ನ ತಂದೆತಾಯಂದಿರು ನನ್ನನ್ನು ತೊರೆದುಬಿಟ್ಟರೂ ಕರ್ತನು ನನ್ನನ್ನು ಸೇರಿಸಿಕೊಳ್ಳುತ್ತಾನೆ.
11
ಓ ಕರ್ತನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನನ್ನ ವಿರೋಧಿಗಳ ನಿಮಿತ್ತ ಸಮವಾದ ಹಾದಿಯಲ್ಲಿ ನನ್ನನ್ನು ನಡಿಸು.
12
ನನ್ನ ವೈರಿಗಳ ಇಷ್ಟಕ್ಕೆ ನನ್ನನ್ನು ಕೊಟ್ಟುಬಿಡಬೇಡ; ಸುಳ್ಳು ಸಾಕ್ಷಿಗಳೂ ಕ್ರೂರತ್ವದ ಶ್ವಾಸಬಿಡುವವರೂ ನನಗೆ ವಿರೋಧವಾಗಿ ಎದ್ದಿದ್ದಾರೆ.
13
ಜೀವಿತರ ದೇಶದಲ್ಲಿ ಕರ್ತನ ಒಳ್ಳೇತನ ವನ್ನು ನೋಡುವೆನೆಂದು ನಾನು ನಂಬದೆ ಹೋಗಿದ್ದರೆ ಮೂರ್ಛೆ ಹೋಗುತ್ತಿದ್ದೆನು.
14
ಕರ್ತನಿಗಾಗಿ ಕಾದಿರು, ಧೈರ್ಯವಾಗಿರು; ಆತನು ನಿನ್ನ ಹೃದಯವನ್ನು ಬಲ ಪಡಿಸುವನು. ಕರ್ತನಿಗಾಗಿ ಕಾದಿರು ಎಂದು ನಾನು ಹೇಳುವೆನು.