Indian Language Bible Word Collections
Proverbs 3:5
Proverbs Chapters
Proverbs 3 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Books
Old Testament
New Testament
Proverbs Chapters
Proverbs 3 Verses
1
|
ನನ್ನ ಮಗನೇ, ನನ್ನ ಕಟ್ಟಳೆಯನ್ನು ಮರೆಯಬೇಡ. ನಿನ್ನ ಹೃದಯವು ನನ್ನ ಆಜ್ಞೆ ಗಳನ್ನು ಕಾಪಾಡಲಿ: |
2
|
ಆಗ ಹೆಚ್ಚಾದ ದಿನಗಳೂ ದೀರ್ಘಾಯುಷ್ಯವೂ ಸಮಾಧಾನವೂ ನಿನಗೆ ಕೂಡಿಸ ಲ್ಪಡುವವು. |
3
|
ಕರುಣೆಯೂ ಸತ್ಯವೂ ನಿನ್ನನ್ನು ಬಿಡದಿರಲಿ. ನಿನ್ನ ಕೊರಳಿನ ಸುತ್ತಲೂ ಅವುಗಳನ್ನು ಕಟ್ಟಿಕೋ; ನಿನ್ನ ಹೃದಯದ ಹಲಗೆಯ ಮೇಲೆ ಅವುಗಳನ್ನು ಬರೆ. |
4
|
ಹೀಗೆ ನೀನು ದೇವರ ಮುಂದೆಯೂ ಮನುಷ್ಯನ ಮುಂದೆಯೂ ದಯೆಯನ್ನೂ ಒಳ್ಳೆಯ ವಿವೇಕವನ್ನೂ ಪಡೆದುಕೊಳ್ಳುವಿ. |
5
|
ಪೂರ್ಣಹೃದಯದಿಂದ ಕರ್ತನಲ್ಲಿ ಭರವಸವಿಡು; ನಿನ್ನ ಸ್ವಂತ ಬುದ್ಧಿಯ ಮೇಲೆ ಆಧಾರ ಮಾಡಿಕೊಳ್ಳಬೇಡ. |
6
|
ನಿನ್ನ ಎಲ್ಲಾ ಮಾರ್ಗಗಳಲ್ಲಿ ಆತನನ್ನು ಸನ್ಮಾನಿಸು. ಆಗ ಆತನು ನಿನ್ನ ಮಾರ್ಗಗಳನ್ನು ಸರಾಗಮಾಡುವನು. |
7
|
ನಿನ್ನ ದೃಷ್ಟಿಯಲ್ಲಿ ಜ್ಞಾನಿಯಂತೆ ನೀನು ಇರಬೇಡ; ಕರ್ತನಿಗೆ ಭಯಪಟ್ಟು ಕೆಟ್ಟತನದಿಂದ ನೀನು ತೊಲಗಿಹೋಗು. |
8
|
ಅದು ನಿನ್ನ ದೇಹಕ್ಕೆ ಆರೋಗ್ಯವೂ ಎಲುಬುಗಳಿಗೆ ಸಾರವೂ ಆಗಿರುವದು. |
9
|
ನಿನ್ನ ಆಸ್ತಿಯಿಂದಲೂ ಅಭಿವೃದ್ಧಿಯ ಎಲ್ಲಾ ಪ್ರಥಮ ಫಲಗಳಿಂದಲೂ ಕರ್ತನನ್ನು ಸನ್ಮಾನಿಸು. |
10
|
ಹೀಗೆ ನಿನ್ನ ಕಣಜಗಳು ಸಮೃದ್ಧಿಯಿಂದ ತುಂಬಲ್ಪಡುವವು, ಹೊಸ ದ್ರಾಕ್ಷಾರಸದಿಂದ ನಿನ್ನ ತೊಟ್ಟಿಗಳು ತುಂಬಿ ತುಳುಕುವವು. |
11
|
ನನ್ನ ಮಗನೇ, ಕರ್ತನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ. ಮಾತ್ರವಲ್ಲದೆ ಆತನ ತಿದ್ದುವಿಕೆಗೆ ಬೇಸರ ಗೊಳ್ಳಬೇಡ; |
12
|
ತಾನು ಮೆಚ್ಚುವ ಮಗನನ್ನು ತಂದೆಯು ಶಿಕ್ಷಿಸುವಂತೆ ಕರ್ತನು ಯಾರನ್ನು ಪ್ರೀತಿಸುತ್ತಾನೋ ಅವನನ್ನು ಆತನು ತಿದ್ದುವನು. |
13
|
ಜ್ಞಾನವನ್ನು ಕಂಡು ಕೊಳ್ಳುವವನೂ ವಿವೇಕವನ್ನು ಸಂಪಾದಿಸಿಕೊಳ್ಳುವವನೂ ಧನ್ಯನು. |
14
|
ಅದರ ವ್ಯಾಪಾರವೂ ಬೆಳ್ಳಿಯ ವ್ಯಾಪಾರಕ್ಕಿಂತಲೂ ಅದರ ಲಾಭವು ಸೋಸಿದ ಬಂಗಾರಕ್ಕಿಂತಲೂ ಉತ್ತಮವಾಗಿದೆ. |
15
|
ಅದು ಮಾಣಿಕ್ಯಗಳಿಗಿಂತಲೂ ಬಹು ಅಮೂಲ್ಯವುಳ್ಳದ್ದಾಗಿದ್ದು ನಿನ್ನ ಇಷ್ಟ ವಸ್ತುಗಳೆಲ್ಲವೂ ಅದಕ್ಕೆ ಸಮವಾಗುವದಿಲ್ಲ. |
16
|
ಆಕೆಯ ಬಲಗೈಯಲ್ಲಿ ದೀರ್ಘಾಯುಷ್ಯವೂ ಎಡಗೈಯಲ್ಲಿ ಐಶ್ವರ್ಯವೂ ಘನತೆಯೂ ಇವೆ. |
17
|
ಅವಳ ಮಾರ್ಗ ಗಳು ಸಂತೋಷಕರವೂ ಎಲ್ಲಾ ದಾರಿಗಳು ಸಮಾ ಧಾನಕರವೂ ಆಗಿವೆ. |
18
|
ತನ್ನನ್ನು ಹಿಡಿದುಕೊಳ್ಳುವ ವರಿಗೆ ಆಕೆಯು ಜೀವದ ವೃಕ್ಷವಾಗಿದ್ದಾಳೆ; ಆಕೆಯನ್ನು ಭದ್ರವಾಗಿ ಇಟ್ಟುಕೊಳ್ಳುವ ಪ್ರತಿಯೊಬ್ಬನೂ ಧನ್ಯನು. |
19
|
ಕರ್ತನು ಜ್ಞಾನದಿಂದ ಭೂಮಿಯನ್ನು ಸ್ಥಾಪಿಸಿದನು; ವಿವೇಕದ ಮೂಲಕ ಆತನು ಆಕಾಶಗಳನ್ನು ಸ್ಥಿರಪಡಿಸಿ ದನು. |
20
|
ಆತನ ತಿಳುವಳಿಕೆಯಿಂದ ಅಗಾಧಗಳು ಒಡೆದು ಮೇಘಗಳು ಇಬ್ಬನಿಯನ್ನು ಸುರಿಸುತ್ತವೆ. |
21
|
ನನ್ನ ಮಗನೇ, ನಿನ್ನ ಕಣ್ಣುಗಳಿಂದ ಅವುಗಳು ತಪ್ಪಿಸಿಕೊಳ್ಳದೆ ಇರಲಿ. ಸುಜ್ಞಾನವನ್ನೂ ವಿವೇಕವನ್ನೂ ಇಟ್ಟುಕೋ. |
22
|
ಅವು ನಿನ್ನ ಪ್ರಾಣಕ್ಕೆ ಜೀವವೂ ಕೊರ ಳಿಗೆ ಸೊಬಗೂ ಆಗಿರುವವು. |
23
|
ನಿನ್ನ ಮಾರ್ಗದಲ್ಲಿ ನೀನು ನಿರ್ಭಯವಾಗಿ ನಡೆಯುವಿ, ನಿನ್ನ ಪಾದವು ಎಡವುವದಿಲ್ಲ. |
24
|
ನೀನು ಮಲಗುವಾಗ ನಿನಗೆ ಹೆದರಿಕೆ ಇರುವದಿಲ್ಲ, ಹೌದು, ನೀನು ಮಲಗಿಕೊಳ್ಳುವಿ. ನಿನ್ನ ನಿದ್ರೆಯು ಸುಖವಾಗಿರುವದು. |
25
|
ಆಕಸ್ಮತ್ತಾದ ಭಯ ಕ್ಕಾಗಲಿ ಇಲ್ಲವೆ ಅವರ ಮೇಲೆ ಬರುವ ದುಷ್ಟರ ನಾಶನಕ್ಕಾಗಲಿ ನೀನು ಭಯಪಡದಿರು. |
26
|
ಕರ್ತನೇ ನಿನಗೆ ಭರವಸನಾಗಿದ್ದು ನಿನ್ನ ಪಾದವು ತೆಗೆಯಲ್ಪಡ ದಂತೆ ಆತನು ಕಾಪಾಡುವನು. |
27
|
ನಿನಗೆ ಸಾಧ್ಯವಿರುವಾಗ ಹೊಂದತಕ್ಕವರಿಗೆ ಒಳ್ಳೆ ಯದು ಮಾಡುವದನ್ನು ತಪ್ಪಿಸಬೇಡ. |
28
|
ಕೊಡತಕ್ಕದ್ದು ನಿನ್ನಲ್ಲಿರುವಾಗ--ಹೋಗಿ ಬಾ, ನಾಳೆ ನಿನಗೆ ಕೊಡು ವೆನು ಎಂದು ನಿನ್ನ ನೆರೆಯವನಿಗೆ ಹೇಳಬೇಡ. |
29
|
ನಿನ್ನ ನೆರೆಯವನು ಭದ್ರತೆಯಿಂದ ನಿನ್ನ ಪಕ್ಕದಲ್ಲಿ ಜೀವಿ ಸುತ್ತಿರುವಾಗ ಅವನಿಗೆ ವಿರೋಧವಾಗಿ ಕೇಡನ್ನು ಕಲ್ಪಿಸ ಬೇಡ. |
30
|
ಒಬ್ಬನು ನಿನಗೆ ಯಾವ ಕೇಡನ್ನೂ ಮಾಡ ದಿದ್ದರೆ ಅವನೊಂದಿಗೆ ಯಾವ ಕಾರಣವಿಲ್ಲದೆ ಜಗಳ ವಾಡಬೇಡ. |
31
|
ಬಲಾತ್ಕಾರಿಯ ವಿಷಯದಲ್ಲಿ ನೀನು ಹೊಟ್ಟೇಕಿಚ್ಚುಪಡಬೇಡ, ಅವನ ಮಾರ್ಗಗಳಲ್ಲಿ ಯಾವದನ್ನೂ ನೀನು ಆರಿಸಿಕೊಳ್ಳಬೇಡ. |
32
|
ವಕ್ರ ಬುದ್ಧಿಯವನು ಕರ್ತನಿಗೆ ಅಸಹ್ಯನಾಗಿದ್ದಾನೆ; ಆದರೆ ಆತನ ಗುಟ್ಟು ನೀತಿವಂತರೊಂದಿಗೆ ಇದೆ. |
33
|
ಕರ್ತನ ಶಾಪವು ದುಷ್ಟರ ಮನೆಯಲ್ಲಿದೆ; ಆದರೆ ನ್ಯಾಯಸ್ಥರ ನಿವಾಸವನ್ನು ಆತನು ಆಶೀರ್ವದಿಸುತ್ತಾನೆ. |
34
|
ಆತನು ನಿಶ್ಚಯವಾಗಿಯೂ ಪರಿಹಾಸ್ಯಕರನ್ನು ತಿರಸ್ಕರಿಸುತ್ತಾನೆ; ಆದರೆ ದೀನರಿಗೆ ಆತನು ಕೃಪೆಯನ್ನು ಕೊಡುತ್ತಾನೆ. |
35
|
ಜ್ಞಾನಿಯು ಮಹಿಮೆಗೆ ಬಾಧ್ಯನಾಗುವನು, ಜ್ಞಾನ ಹೀನರ ಏಳಿಗೆಯು ಅವಮಾನವಾಗುವದು. |