ನಾನು ಕದಗಳನ್ನು ಬಾಗಲುದ್ವಾರಗಳಲ್ಲಿ ನಿಲ್ಲಿಸುವದಕ್ಕಿಂತ ಮುಂಚೆ ಗೋಡೆಯನ್ನು ಕಟ್ಟಿಸಿದೆನೆಂದೂ ಅದರಲ್ಲಿ ಒಂದು ಸಂದೂ ಬಿಡಲ್ಪಡ ಲಿಲ್ಲವೆಂದೂ ಸನ್ಬಲ್ಲಟನೂ ಟೋಬೀಯನೂ ಅರಬ್ಯ ನಾದ ಗೆಷೆಮನೂ ಮಿಕ್ಕಾದ ನಮ್ಮ ಶತ್ರುಗಳೂ ಕೇಳಿದಾಗ
ಆದ ಕಾರಣ ನಾನು ಅವರ ಬಳಿಗೆ ಸೇವಕರನ್ನೂ ಕಳು ಹಿಸಿ--ನಾನು ದೊಡ್ಡ ಕಾರ್ಯವನ್ನು ಮಾಡುತ್ತಾ ಇದ್ದೇನೆ; ಬರಲಾರೆನು; ನಾನು ಅದನ್ನು ಬಿಟ್ಟು ನಿಮ್ಮ ಬಳಿಗೆ ಬರುವಲ್ಲಿ ಆ ಕೆಲಸ ಯಾಕೆ ನಿಂತು ಹೋಗ ಬೇಕು ಎಂದು ಹೇಳಿದೆನು.
ಇದಲ್ಲದೆ, ಯೆಹೂದದಲ್ಲಿ ಅರಸನು ಇದ್ದಾನೆಂದು ಯೆರೂಸಲೇಮಿನಲ್ಲಿ ನಿನ್ನನ್ನು ಕುರಿತು ಕೂಗುವದಕ್ಕೆ ನೀನು ಪ್ರವಾದಿಗಳನ್ನು ನೇಮಿಸಿದಿ ಎಂಬದಾಗಿ ಜನಾಂಗಗಳಲ್ಲಿ ಸುದ್ದಿ ಉಂಟು; ಗೆಷೆಮನು ಹಾಗೆಯೇ ಹೇಳುತ್ತಾನೆ. ಈಗ ಈ ವರ್ತಮಾನ ಅರಸನಿಗೆ ತಿಳಿಸಲ್ಪಡುವದು. ಆದಕಾರಣ ನಾವು ಕೂಡಿ ಕೊಂಡು ಯೋಚನೆ ಮಾಡಿಕೊಳ್ಳುವ ಹಾಗೆ ಬಾ ಎಂದು ಬರೆದಿತ್ತು.
ಆದದರಿಂದ ಈಗ ಓ ದೇವರೇ, ನನ್ನ ಕೈಗಳನ್ನು ಬಲಪಡಿಸು ಅಂದೆನು. ತರುವಾಯ ನಾನು ಅಡಗಿ ಕೊಂಡಿದ್ದ ಮೆಹೇಟಬೇಲನ ಮಗನಾದ ದೆಲಾಯನ ಮಗನಾದ ಶೆಮಾಯನ ಮನೆಗೆ ಬಂದೆನು. ಅವನುನಿನ್ನನ್ನು ಕೊಂದುಹಾಕಲು ಬರುತ್ತಾರೆ. ಹೌದು, ರಾತ್ರಿಯಲ್ಲಿ ನಿನ್ನನ್ನು ಕೊಂದು ಹಾಕಲು ಬರುತ್ತಾರೆ ಆದದರಿಂದ ನಾವಿಬ್ಬರೂ ದೇವರ ಆಲಯದಲ್ಲಿ ಪ್ರವೇಶಿಸಿ ಮಂದಿರದ ಬಾಗಲುಗಳನ್ನು ಮುಚ್ಚೊಣ ಬಾ ಅಂದನು.
ನನ್ನ ದೇವರೇ, ನೀನು ಅವರ ಈ ಕಾರ್ಯಗಳ ಪ್ರಕಾರ ಟೋಬೀಯನನ್ನೂ ಸನ್ಬಲ್ಲಟ ನನ್ನೂ ನನ್ನನ್ನು ಭಯಪಡಿಸುವವರಾಗಿದ್ದ ಪ್ರವಾದಿನಿ ಯಾದ ನೋವದ್ಯಳನ್ನೂ ಮಿಕ್ಕಾದ ಪ್ರವಾದಿಗಳನ್ನೂ ಜ್ಞಾಪಕಮಾಡಿಕೋ.
ನಮ್ಮ ಶತ್ರುಗಳು ಅದನ್ನು ಕೇಳಿದಾಗಲೂ ನಮ್ಮ ಸುತ್ತಲಿದ್ದ ಜನಾಂಗಗಳು ಇದನ್ನು ನೋಡಿ ದಾಗಲೂ ಅವರು ತಮ್ಮ ದೃಷ್ಟಿಯಲ್ಲಿ ಬಹಳ ಕುಂದಿ ಹೋದರು. ಯಾಕಂದರೆ ಈ ಕಾರ್ಯವು ನಮ್ಮ ದೇವರಿಂದ ಉಂಟಾಯಿತೆಂದು ಅವರು ತಿಳಿದು ಕೊಂಡರು.
ಯಾಕಂದರೆ ಅವನು ಅರಾಹನ ಮಗನಾದ ಶೆಕೆನ್ಯನ ಅಳಿಯನಾದದ ರಿಂದಲೂ ಅವನ ಮಗನಾದ ಯೆಹೋಹಾನಾನನು ಬೆರೆಕ್ಯನ ಮಗನಾದ ಮೆಷುಲ್ಲಾಮನ ಮಗಳನ್ನು ತಕ್ಕೊಂಡದ್ದರಿಂದಲೂ ಯೆಹೂದದಲ್ಲಿ ಅನೇಕರು ಅವನಿಗೆ ಪ್ರಮಾಣಮಾಡಿದರು.