ದೇವರು ನಿಮ್ಮ ಕೈಯಲ್ಲಿ ಮಿದ್ಯಾನ್ಯರ ಪ್ರಧಾನರಾದ ಓರೇಬನ್ನೂ ಜೇಬನ್ನೂ ಒಪ್ಪಿಸಿ ಕೊಡ ಲಿಲ್ಲವೇ? ನೀವು ಮಾಡಿದ್ದಕ್ಕೆ ನಾನು ಮಾಡಿದ್ದು ಎಷ್ಟು ಅಂದನು. ಅವನು ಈ ಮಾತು ಹೇಳಿದಾಗ ಅವನ ವಿಷಯವಾಗಿ ಅವರ ಕೋಪವು ಶಾಂತವಾಯಿತು.
ಅವನು ಸುಖೋತಿನ ಮನುಷ್ಯರಿಗೆ--ದಯಮಾಡಿ ನನ್ನ ಕೂಡ ಇರುವ ಜನರಿಗೆ ಕೆಲವು ರೊಟ್ಟಿಗಳನ್ನು ಕೊಡಿರಿ. ಅವರು ದಣಿದಿದ್ದಾರೆ; ನಾನು ಮಿದ್ಯಾನ್ಯರ ಅರಸುಗಳಾದ ಜೆಬಹನನ್ನೂ ಚಲ್ಮುನ್ನನನ್ನೂ ಹಿಂದಟ್ಟು ತ್ತೇನೆ ಅಂದನು.
ಆಗ ಗಿದ್ಯೋನನು--ಹಾಗಾದರೆ ಕರ್ತನು ಜೆಬಹನನ್ನೂ ಚಲ್ಮುನ್ನನನ್ನೂ ನನ್ನ ಕೈಯಲ್ಲಿ ಒಪ್ಪಿಸಿ ಕೊಟ್ಟ ತರುವಾಯ ನಿಮ್ಮ ಮಾಂಸವನ್ನು ಅರಣ್ಯದ ಮುಳ್ಳುಗಳಿಂದಲೂ ನೆಗ್ಗಿಲು ಮುಳ್ಳುಗಳಿಂದಲೂ ಹರಿದುಬಿಡುವೆನು ಅಂದನು.
ಆದರೆ ಜೆಬಹನೂ ಚಲ್ಮುನ್ನನೂ ತಮ್ಮ ಸೈನ್ಯವಾದ ಹೆಚ್ಚುಕಡಿಮೆ ಹದಿನೈದು ಸಾವಿರ ಜನರ ಸಂಗಡ ಕರ್ಕೋರಿನಲ್ಲಿ ಇದ್ದರು. ಇವರೆಲ್ಲಾ ಕತ್ತಿ ಹಿಡಿಯತಕ್ಕ ಲಕ್ಷದ ಇಪ್ಪತ್ತು ಸಾವಿರ ಜನ ಬಿದ್ದುಹೋದಾಗ ಮೂಡಣದ ಸಮಸ್ತ ಮಕ್ಕಳು ಅಲ್ಲಿ ಉಳಿದರು.
ಗಿದ್ಯೋನನು ಸುಖೋತಿನ ಮನುಷ್ಯರ ಬಳಿಗೆ ಬಂದು--ಇಗೋ, ದಣಿದಿರುವ ನಿನ್ನ ಮನುಷ್ಯರಿಗೆ ನಾವು ರೊಟ್ಟಿಯನ್ನು ಕೊಡುವ ಹಾಗೆ ಜೆಬಹ ಚಲ್ಮು ನ್ನರ ಕೈ ಈಗಲೇ ನಿನ್ನ ಕೈವಶವಾಗಿದೆಯೋ ಎಂದು ನೀವು ನನ್ನನ್ನು ನಿಂದಿಸಿದ ಜೆಬಹನನ್ನೂ ಚಲ್ಮುನ್ನನನ್ನೂ ನೋಡಿರಿ ಎಂದು ಹೇಳಿ
ಅವನು ಜೆಬಹನಿಗೂ ಚಲ್ಮುನ್ನನಿಗೂ--ನೀವು ತಾಬೋರದಲ್ಲಿ ಕೊಂದುಹಾಕಿದ ಆ ಮನುಷ್ಯರು ಹೇಗಿದ್ದರು ಅಂದನು. ಅದಕ್ಕವರು--ನಿನ್ನ ಹಾಗೆಯೇ; ಅವರು ಒಬ್ಬೊಬ್ಬರು ರೂಪದಲ್ಲಿ ಅರಸನ ಮಕ್ಕಳಾ ಗಿದ್ದರು ಅಂದರು.
ಆಗ ಇಸ್ರಾಯೇಲ್ ಜನರು ಗಿದ್ಯೋನನಿಗೆನೀನು ನಮ್ಮನ್ನು ಮಿದ್ಯಾನ್ಯರ ಕೈಯಿಂದ ತಪ್ಪಿಸಿ ರಕ್ಷಿಸಿದ್ದರಿಂದ ನೀನೂ ನಿನ್ನ ಕುಮಾರನೂ ಕುಮಾರನ ಕುಮಾರನೂ ನಮ್ಮನ್ನು ಆಳಬೇಕು ಅಂದರು. ಗಿದ್ಯೋ ನನು ಅವರಿಗೆ ನಾನು ನಿಮ್ಮನ್ನು ಆಳುವದಿಲ್ಲ, ನನ್ನ ಮಗನೂ ನಿಮ್ಮನ್ನು ಆಳುವದಿಲ್ಲ, ಕರ್ತನೇ ನಿಮ್ಮನ್ನು ಆಳುವನು ಅಂದನು.
ಗಿದ್ಯೋನನು--ಒಂದು ಬಿನ್ನಹವನ್ನು ನಾನು ನಿಮಗೆ ಮಾಡುತ್ತೇನೆ. ಪ್ರತಿ ಯೊಬ್ಬನು ಕೊಳ್ಳೆ ಹೊಡೆದ ವಾಲೆಗಳನ್ನು ನನಗೆ ಕೊಡಿರಿ ಅಂದನು. (ಯಾಕಂದರೆ ಅವರು ಇಷ್ಮಾಯೇ ಲ್ಯರಾಗಿದ್ದದರಿಂದ ಅವರಿಗೆ ಬಂಗಾರದ ಮುರುವು ಗಳಿದ್ದವು).
ಆದರೆ ಆಭರಣಗಳೂ ಕಂಠಮಾಲೆ ಗಳೂ ಮಿದ್ಯಾನ್ಯರ ಅರಸುಗಳು ಹೊದ್ದುಕೊಂಡಿದ್ದ ರಕ್ತಾಂಬರ ವಸ್ತ್ರಗಳೂ ಅವರ ಒಂಟೆಗಳ ಕೊರಳಿಗೆ ಇದ್ದ ಸರಪಣಿಗಳೂ ಹೊರತು ಅವನು ಕೇಳಿ ತೆಗೆದು ಕೊಂಡ ಬಂಗಾರದ ವಾಲೆಗಳ ತೂಕವು ಸಾವಿರದ ಏಳು ನೂರು ಶೆಕೆಲ್ ತೂಕವಾಗಿತ್ತು.
ಆ ಬಂಗಾರ ದಿಂದ ಗಿದ್ಯೋನನು ಒಂದು ಏಫೋದನ್ನು ಮಾಡಿಸಿ ಅದನ್ನು ತನ್ನ ಊರಾದ ಒಫ್ರದಲ್ಲಿ ಇಟ್ಟನು. ಆದರೆ ಇಸ್ರಾಯೇಲ್ಯರೆಲ್ಲಾ ಅದರ ಹಿಂದೆ ಜಾರರಾಗಿ ಹೋದರು. ಅದು ಗಿದ್ಯೋನನಿಗೂ ಅವನ ಮನೆಗೂ ಉರುಲಾಯಿತು.