ಆಯಾ ಕಾಲದಲ್ಲಿ ಒಬ್ಬ ದೂತನು ಕೊಳ ದೊಳಗೆ ಇಳಿದುಹೋಗಿ ನೀರನ್ನು ಕದಲಿಸುತ್ತಿದ್ದನು; ನೀರು ಕದಲಿಸಲ್ಪಟ್ಟ ಮೇಲೆ ಮೊದಲು ಯಾರು ನೀರಿನೊಳಗೆ ಹೆಜ್ಜೆಯಿಡುತ್ತಿದ್ದರೋ ಅವರಿಗೆ ಯಾವ ರೋಗವಿದ್ದರೂ ಸ್ವಸ್ಥವಾಗುತ್ತಿತ್ತು.
ಅದಕ್ಕೆ ಆ ರೋಗಿಯು ಪ್ರತ್ಯುತ್ತರವಾಗಿ ಆತನಿಗೆ--ಅಯ್ಯಾ, ನೀರು ಕದಲಿಸಲ್ಪಡುವಾಗ ನನ್ನನ್ನು ಕೊಳದೊಳಗೆ ಇಳಿಸುವದಕ್ಕೆ ನನಗೆ ಯಾರು ಇಲ್ಲ; ಆದರೆ ನಾನು ಬರುತ್ತಿರುವಾಗಲೇ ನನಗಿಂತ ಮುಂದಾಗಿ ಮತ್ತೊಬ್ಬನು ಇಳಿಯುತ್ತಾನೆ ಅಂದನು.
ಆದದರಿಂದ ಆತನು ಸಬ್ಬತ್ತನ್ನು ವಿಾರಿದ್ದು ಮಾತ್ರವಲ್ಲದೆ ದೇವರನ್ನು ತನ್ನ ಸ್ವಂತ ತಂದೆ ಎಂದು ಕರೆದು ತನ್ನನ್ನು ದೇವರಿಗೆ ಸಮಾನ ಮಾಡಿಕೊಂಡ ಕಾರಣ ಯೆಹೂದ್ಯರು ಆತನನ್ನು ಕೊಲ್ಲುವದಕ್ಕೆ ಇನ್ನಷ್ಟು ಪ್ರಯತ್ನ ಮಾಡಿದರು.
ಆಗ ಯೇಸು ಪ್ರತ್ಯುತ್ತರವಾಗಿ ಅವರಿಗೆ-- ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ತಂದೆಯು ಮಾಡುವದನ್ನು ಕಂಡದ್ದನ್ನಲ್ಲದೆ ಮಗನು ತನ್ನಷ್ಟಕ್ಕೆ ತಾನೇ ಯಾವದನ್ನೂ ಮಾಡಲಾರನು; ಆತನು ಮಾಡುವದನ್ನೆಲ್ಲಾ ಹಾಗೆಯೇ ಮಗನೂ ಮಾಡುವನು.
ಯಾಕಂದರೆ ತಂದೆಯು ಮಗನನ್ನು ಪ್ರೀತಿಸಿ ತಾನು ಸ್ವತಃ ಮಾಡುವವುಗಳನ್ನೆಲ್ಲಾ ಮಗನಿಗೆ ತೋರಿಸುತ್ತಾನೆ; ನೀವು ಆಶ್ಚರ್ಯಪಡುವ ಹಾಗೆ ಇವುಗಳಿಗಿಂತ ಮಹತ್ತಾದ ಕೆಲಸಗಳನ್ನು ಆತನಿಗೆ ತೋರಿಸುವನು.
ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿ ದಾತನನ್ನು ನಂಬುವವನು ನಿತ್ಯಜೀವವನ್ನು ಹೊಂದಿ ದ್ದಾನೆ. ಅವನು ತೀರ್ಪಿಗೆ ಗುರಿಯಾಗುವದಿಲ್ಲ; ಆದರೆ ಮರಣದಿಂದ ಜೀವಕ್ಕೆ ದಾಟಿದ್ದಾನೆ.
ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು; ನಾನು ಕೇಳುವಂತೆಯೇ ತೀರ್ಪು ಮಾಡುತ್ತೇನೆ ಮತ್ತು ನನ್ನ ತೀರ್ಪು ನ್ಯಾಯ ವಾದದ್ದು; ಯಾಕಂದರೆ ನಾನು ನನ್ನ ಸ್ವಂತಚಿತ್ತವನ್ನಲ್ಲ, ಆದರೆ ನನ್ನನ್ನು ಕಳುಹಿಸಿದ ತಂದೆಯ ಚಿತ್ತವು ನೆರವೇರ ಬೇಕೆಂದು ಅಪೆಕ್ಷಿಸುತ್ತೇನೆ.
ಆದರೆ ಯೋಹಾನನಿಗಿಂತಲೂ ಹೆಚ್ಚಿನ ಸಾಕ್ಷಿ ನನಗುಂಟು; ಹೇಗೆಂದರೆ ಪೂರೈಸುವದಕ್ಕಾಗಿ ತಂದೆಯು ನನಗೆ ಕೊಟ್ಟ ಕೆಲಸಗಳು ಅಂದರೆ ನಾನು ಮಾಡುತ್ತಿರುವ ಈ ಕೆಲಸಗಳೇ ತಂದೆಯು ನನ್ನನ್ನು ಕಳುಹಿಸಿದ್ದಾನೆಂದು ನನ್ನ ವಿಷಯವಾಗಿ ಸಾಕ್ಷಿ ಕೊಡುತ್ತವೆ.