ಬಿಲ್ಲು ಬೊಗ್ಗಿಸುವವನಿಗೆ ವಿರೋಧವಾಗಿಯೂ ಕವಚದಲ್ಲಿ ತನ್ನನ್ನು ಹೆಚ್ಚಿಸಿ ಕೊಳ್ಳುವವನಿಗೆ ವಿರೋಧವಾಗಿಯೂ ಬಿಲ್ಲಿನವನು ತನ್ನ ಬಿಲ್ಲನ್ನು ಬೊಗ್ಗಿಸಲಿ; ಅದರ ಯೌವನಸ್ಥರನ್ನು ಕನಿಕರಿಸಬೇಡಿರಿ; ಅದರ ಸೈನ್ಯವನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿರಿ.
ಬಾಬೆಲಿನೊಳಗಿಂದ ಓಡಿಹೋಗಿರಿ, ಒಬ್ಬೊಬ್ಬನು ತನ್ನ ತನ್ನ ಪ್ರಾಣವನ್ನು ತಪ್ಪಿಸಿಕೊಳ್ಳಲಿ; ಅದರ ಅಕ್ರಮದಲ್ಲಿ ನಾಶವಾಗ ಬೇಡಿರಿ; ಇದು ಕರ್ತನ ಪ್ರತಿದಂಡನೆಯ ಕಾಲವು; ಆತನೇ ಅದಕ್ಕೆ ಮುಯ್ಯಿಗೆಮುಯ್ಯಿ ಕೊಡುತ್ತಾನೆ.
ನಾವು ಬಾಬೆಲನ್ನು ವಾಸಿಮಾಡುವದಕ್ಕಿದ್ದೆವು. ಆದರೆ ಅದು ವಾಸಿಯಾಗಲಿಲ್ಲ; ಅದನ್ನು ಬಿಡು, ನಮ್ಮ ಸ್ವಂತ ದೇಶಗಳಿಗೆ ಹೋಗೋಣ; ಅದರ ನ್ಯಾಯ ತೀರ್ವಿಕೆಯು ಆಕಾಶಗಳಿಗೆ ಮುಟ್ಟುತ್ತದೆ; ಆಕಾಶಗಳ ವರೆಗೂ ಏಳುತ್ತದೆ.
ಬಾಣಗಳನ್ನು ಮೆರಗು ಮಾಡಿರಿ, ಡಾಲುಗಳನ್ನು ಕೂಡಿಸಿರಿ; ಕರ್ತನು ಮೇದ್ಯರ ಅರಸರ ಆತ್ಮವನ್ನು ಎಬ್ಬಿಸಿದ್ದಾನೆ; ಆತನ ಆಲೋಚನೆ ಬಾಬೆಲಿಗೆ ವಿರೋಧವಾಗಿ ಅದನ್ನು ನಾಶಮಾಡುವದಕ್ಕೆ ಇದೆ. ಇದು ಕರ್ತನ ಪ್ರತಿದಂಡ ನೆಯೂ ಆತನ ದೇವಾಲಯದ ಪ್ರತಿದಂಡನೆಯೂ ಆಗಿದೆ.
ಸೈನ್ಯಗಳ ಕರ್ತನು--ನಿಶ್ಚಯ ವಾಗಿ ನಾನು ಹುಳಗಳಿಂದಾದ ಹಾಗೆ ಮನುಷ್ಯರಿಂದ ನಿನ್ನನ್ನು ತುಂಬಿಸುತ್ತೇನೆಂದು ಅವರು ನಿನಗೆ ವಿರೋಧ ವಾಗಿ ಆರ್ಭಟವನ್ನು ಎತ್ತುವರೆಂದು ತನ್ನ ಮೇಲೆ ಆಣೆ ಇಟ್ಟುಕೊಂಡಿದ್ದಾನೆ.
ಆತನು ತನ್ನ ಶಬ್ದವನ್ನು ಎತ್ತುವಾಗ ಆಕಾಶದಲ್ಲಿ ನೀರಿನ ಘೋಷವದೆ; ಆತನು ಭೂಮಿಯ ಅಂತ್ಯದಿಂದ ಹಬೆಯನ್ನು ಏರ ಮಾಡುತ್ತಾನೆ; ಮಳೆಯ ಸಂಗಡ ಮಿಂಚುಗಳನ್ನು ಮಾಡಿ ತನ್ನ ಭಂಡಾರಗಳೊ ಳಗಿಂದ ಗಾಳಿಯನ್ನು ಹೊರಗೆ ತರುತ್ತಾನೆ.
ನಾಶಮಾಡುವ ಬೆಟ್ಟವೇ! ಭೂಮಿಯನ್ನೆಲ್ಲಾ ನಾಶಮಾಡುವಂಥಾದ್ದೇ! ಇಗೋ, ನಾನು ನಿನಗೆ ವಿರೋಧವಾಗಿದ್ದೇನೆಂದು ಕರ್ತನು ಅನ್ನುತ್ತಾನೆ. ನಿನ್ನ ಮೇಲೆ ನನ್ನ ಕೈಯನ್ನು ಚಾಚಿ ಬಂಡೆಗಳ ಮೇಲಿನಿಂದ ನಿನ್ನನ್ನು ಹೊರಳಿಸಿ ನಿನ್ನನ್ನು ಸುಟ್ಟ ಬೆಟ್ಟವಾಗಿ ಮಾಡುತ್ತೇನೆ.
ದೇಶದಲ್ಲಿ ಧ್ವಜವನ್ನೆತ್ತಿರಿ; ಜನಾಂಗಗಳಲ್ಲಿ ತುತೂರಿಯನ್ನೂದಿರಿ; ಅದಕ್ಕೆ ವಿರೋಧವಾಗಿ ಜನಾಂಗಗಳನ್ನು ಸಿದ್ಧಮಾಡಿರಿ; ಅರರಾಟ್, ಮಿನ್ನಿ, ಅಷ್ಕೆನಜ್ ರಾಜ್ಯಗಳನ್ನು ಅದಕ್ಕೆ ವಿರೋಧವಾಗಿ ಕರೆಯಿರಿ; ಅದಕ್ಕೆ ವಿರೋಧವಾಗಿ ಸೈನ್ಯಾಧಿಪತಿಯನ್ನು ನೇಮಿಸಿರಿ; ಬಿರುಸಾದ ಮಿಡತೆ ದಂಡಿನಂತೆ ಕುದುರೆ ಗಳನ್ನು ಬರಮಾಡಿರಿ.
ಬಾಬೆಲಿನ ಪರಾಕ್ರಮಶಾಲಿಗಳು ಯುದ್ಧ ಮಾಡುವದನ್ನು ಬಿಟ್ಟಿದ್ದಾರೆ; ಅವರ ಭದ್ರ ಸ್ಥಾನಗಳಲ್ಲಿ ನಿಲ್ಲುತ್ತಾರೆ; ಅವರ ಪರಾಕ್ರಮತನ ತಪ್ಪಿತು; ಅವರು ಹೆಂಗಸರಂತೆ ಅಬಲರಾದರು. ಅದರ ನಿವಾಸಗಳನ್ನು ಸುಟ್ಟಿದ್ದಾರೆ. ಅದರ ಅಗುಳಿಗಳು ಮುರಿಯಲ್ಪಟ್ಟಿವೆ.
ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ತುಳಿಯುವ ವೇಳೆಯಲ್ಲಿ ಕಣವು ಹೇಗೋ, ಹಾಗೆಯೇ ಬಾಬೆಲಿನ ಮಗಳು ಇದ್ದಾಳೆ; ಇನ್ನು ಸ್ವಲ್ಪ ಹೊತ್ತಾದ ಮೇಲೆ ಅದಕ್ಕೆ ಸುಗ್ಗೀಕಾಲ ಬರುವದು.
ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನನ್ನನ್ನು ನುಂಗಿಬಿಟ್ಟಿದ್ದಾನೆ; ಜಜ್ಜಿದ್ದಾನೆ; ಬರಿದಾದ ಪಾತ್ರೆಯಾಗಿ ಮಾಡಿದ್ದಾನೆ; ಘಟಸರ್ಪದ ಹಾಗೆ ನುಂಗಿಬಿಟ್ಟಿದ್ದಾನೆ; ನನ್ನ ರಮ್ಯವಾದವುಗಳಿಂದ ತನ್ನ ಹೊಟ್ಟೆ ತುಂಬಿಸಿದ್ದಾನೆ; ನನ್ನನ್ನು ತಳ್ಳಿಬಿಟ್ಟಿದ್ದಾನೆ.
ಆದದರಿಂದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನಿನ್ನ ನಿಮಿತ್ತ ವ್ಯಾಜ್ಯವಾಡುತ್ತೇನೆ; ನಿನಗೋಸ್ಕರ ಪ್ರತಿದಂಡನೆ ಮಾಡುತ್ತೇನೆ; ಅದರ ಸಮುದ್ರವನ್ನು ಒಣಗಿಸುತ್ತೇನೆ; ಅದರ ಬುಗ್ಗೆಯನ್ನು ಬತ್ತಿ ಹೋಗುವಂತೆ ಮಾಡುತ್ತೇನೆ;
ನಾನು ಬಾಬೆಲಿನಲ್ಲಿರುವ ಬೇಲ್ನನ್ನು ದಂಡಿಸಿ ಅವನು ನುಂಗಿದ್ದನ್ನು ಅವನ ಬಾಯೊಳಗಿಂದ ಹೊರಗೆ ತರಿಸುವೆನು; ಇನ್ನು ಮೇಲೆ ಜನಾಂಗಗಳು ಅವನ ಬಳಿಗೆ ಪ್ರವಾಹವಾಗಿ ಬರುವದಿಲ್ಲ; ಹೌದು, ಬಾಬೆಲಿನ ಗೋಡೆ ಬೀಳುವದು.
ನಿಮ್ಮ ಹೃದಯವು ಕುಂದದ ಹಾಗೆ ದೇಶದಲ್ಲಿ ಕೇಳಲ್ಪಡುವ ಸುದ್ದಿಗೆ ನೀವು ಭಯಪಡದ ಹಾಗೆ ಒಂದು ವರುಷದಲ್ಲಿ ಒಂದು ಸುದ್ದಿಯೂ ಇನ್ನೊಂದು ವರುಷದಲ್ಲಿ ಇನ್ನೊಂದು ಸುದ್ದಿಯೂ ಬರುವದು; ದೇಶದಲ್ಲಿ ಬಲಾತ್ಕಾರವಿರು ವದು, ಆಳುವವನು ಆಳುವವನಿಗೆ ವಿರೋಧವಾಗಿರು ವನು.
ಸೂರೆ ಮಾಡುವವನು ಅದರ ಮೇಲೆ ಅಂದರೆ ಬಾಬೆಲಿನ ಮೇಲೆಯೇ ಬಂದಿದ್ದಾನೆ; ಅದರ ಪರಾಕ್ರಮಶಾಲಿಗಳು ಹಿಡಿಯಲ್ಪಟ್ಟಿದ್ದಾರೆ; ಅವಳ ಬಿಲ್ಲುಗಳು ಮುರಿಯಲ್ಪಟ್ಟಿವೆ; ಪ್ರತಿದಂಡನೆಗಳ ದೇವರಾದ ಕರ್ತನು ನಿಶ್ಚಯವಾಗಿ ಮುಯ್ಯಿಗೆ ಮುಯ್ಯಿ ತೀರಿಸುವನು.
ಇದಲ್ಲದೆ ನಾನು ಅವಳ ಪ್ರಧಾನಿಗಳನ್ನೂ, ಜ್ಞಾನಿಗಳನ್ನೂ, ಅಧಿಪತಿಗಳನ್ನೂ, ಅಧಿಕಾರಿಗಳನ್ನೂ, ಪರಾಕ್ರಮಶಾಲಿಗಳನ್ನೂ, ಮತ್ತರಾಗಮಾಡುತ್ತೇನೆ; ಅವರು ನಿತ್ಯ ನಿದ್ರೆ ಮಾಡುವರು, ಎಚ್ಚರವಾಗುವದಿಲ್ಲವೆಂದು ಸೈನ್ಯಗಳ ಕರ್ತನೆಂಬ ಹೆಸರುಳ್ಳ ಅರಸನು ಅನ್ನುತ್ತಾನೆ.
ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಬಾಬೆಲಿನ ಅಗಲವಾದ ಗೋಡೆಗಳು ಸಂಪೂರ್ಣವಾಗಿ ಕೆಡವಲ್ಪ ಡುವವು; ಅವಳ ಎತ್ತರವಾದ ಬಾಗಲುಗಳು ಬೆಂಕಿ ಯಿಂದ ಸುಡಲ್ಪಡುವವು; ಜನರು ವ್ಯರ್ಥಕ್ಕಾಗಿಯೂ ಪ್ರಜೆಗಳು ಬೆಂಕಿಗಾಗಿಯೂ ಕಷ್ಟಪಟ್ಟು ಆಯಾಸ ಪಡುವರು.
ಪ್ರವಾದಿಯಾದ ಯೆರೆವಿಾಯನು ಮಹ್ಸೇಯನ ಮಗನಾದ ನೇರೀಯನ ಮಗನಾದ ಸೆರಾಯನಿಗೆ, ಅವನು ಯೆಹೂದದ ಅರಸನಾದ ಚಿದ್ಕೀಯನ ಸಂಗಡ, ಇವನ ಆಳಿಕೆಯ ನಾಲ್ಕನೇ ವರುಷದಲ್ಲಿ ಬಾಬೆಲಿಗೆ ಹೋದಾಗ ಆಜ್ಞಾಪಿಸಿದ ವಾಕ್ಯವು. ಆ ಸೆರಾಯನು ಶಾಂತವಾದ ಪ್ರಧಾನಿಯಾಗಿದ್ದನು.
ಈ ವಾಕ್ಯಗಳನ್ನೆಲ್ಲಾ ನೋಡಿ ಓದುತ್ತಿರುವಾಗ ಹೇಳತಕ್ಕದ್ದೇನಂದರೆ--ಓ ಕರ್ತನೇ, ಈ ಸ್ಥಳಕ್ಕೆ ವಿರೋಧವಾಗಿ ಅದರಲ್ಲಿ ಮನುಷ್ಯ ರಾಗಲಿ, ಮೃಗಗಳಾಗಲಿ ನಿವಾಸಿಗಳು ಎಂದಿಗೂ ಇರದ ಹಾಗೆಯೂ ಅದು ನಿತ್ಯವಾಗಿ ಹಾಳಾಗುವ ಹಾಗೆಯೂ ಅದನ್ನು ಕಡಿದುಬಿಡುತ್ತೇನೆಂದು ನೀನೇ ಮಾತನಾ ಡಿದ್ದೀ.