1
|
ಇಗೋ, ಕರ್ತನು ಭೂಮಿಯನ್ನು (ಲೋಕವನ್ನು) ಬರಿದುಮಾಡಿ ನಿರ್ಜನ ಪ್ರದೇಶ ವನ್ನಾಗಿ ಮಾಡಿ ತಲೆಕೆಳಕಾಗಿ ತಿರುಗಿಸಿ ಅದರ ನಿವಾಸಿ ಗಳನ್ನು ಚದರಿಸಿಬಿಡುವವನಾಗಿದ್ದಾನೆ. |
2
|
ಜನಗಳಿಗೆ ಹೇಗೋ ಹಾಗೆಯೇ ಯಾಜಕರಿಗೂ ದಾಸನಿಗೆ ಹೇಗೋ ಹಾಗೆಯೇ ಅವನ ಯಜಮಾನನಿಗೆ, ದಾಸಿಗೆ ಹೇಗೋ ಹಾಗೆಯೇ ಅವಳ ಯಜಮಾನಿಗೆ; ಕೊಳ್ಳುವವನಿಗೆ ಹೇಗೋ ಹಾಗೆಯೇ ಮಾರುವವನಿಗೆ; ಸಾಲಕೊಡುವವನಿಗೆ ಹೇಗೋ ಹಾಗೆಯೇ ತರುವ ವನಿಗೆ; ಬಡ್ಡಿಕೊಡುವವನಿಗೆ ಹೇಗೋ ಹಾಗೆಯೇ ತಕ್ಕೊಳ್ಳುವವನಿಗೆ ಆಗುವದು. |
3
|
ಭೂಮಿಯು ಬರಿದೇ ಬರಿದಾಗುವದು ಮತ್ತು ಸಂಪೂರ್ಣ ಸುಲಿಗೆಯಾಗು ವದು. ಕರ್ತನು ತಾನೇ ಈ ಮಾತನ್ನು ಹೇಳಿದ್ದಾನೆ. |
4
|
ಭೂಮಿಯು ಪ್ರಲಾಪಿಸುತ್ತಾ ಬಾಡಿಹೋಗುವದು. ಲೋಕವು ಸೊರಗಿ ಬಾಡಿಹೋಗುವದು ಭೂಮಿಯ ಗರ್ವಿಷ್ಠರು ಕುಗ್ಗಿಹೋಗುವರು. |
5
|
ಭೂನಿವಾಸಿಗಳು ನ್ಯಾಯಪ್ರಮಾಣಗಳನ್ನು ವಿಾರಿ ನಿಯಮಗಳನ್ನು ಬದ ಲಾಯಿಸಿ ನಿತ್ಯವಾದ ಒಡಂಬಡಿಕೆಯನ್ನು ಭಂಗಪಡಿಸಿ ದ್ದರಿಂದ ಭೂಮಿಯು ಸಹ ಅದರ ನಿವಾಸಿಗಳ ಹೆಜ್ಜೆ ಯಿಂದ ಅಪವಿತ್ರವಾಗುವದು. |
6
|
ಆದಕಾರಣ ಶಾಪವು ಲೋಕವನ್ನು ನುಂಗಿಬಿಟ್ಟಿದೆ, ಅದರಲ್ಲಿ ವಾಸವಾಗಿರು ವವರು ಧ್ವಂಸವಾಗುವರು; ಆದ್ದರಿಂದ ಭೂನಿವಾಸಿ ಗಳು ಸುಟ್ಟುಹೋಗಿ ಕೆಲವರು ಮಾತ್ರ ಉಳಿದಿದ್ದಾರೆ. |
7
|
ದ್ರಾಕ್ಷಾರಸವು ದುಃಖಿಸುತ್ತದೆ, ದ್ರಾಕ್ಷೆಯು ಕ್ಷೀಣಿಸು ವದು; ಹರ್ಷ ಹೃದಯರೆಲ್ಲಾ ನಿಟ್ಟುಸಿರುಬಿಡುತ್ತಾರೆ. |
8
|
ದಮ್ಮಡಿಗಳ ಉತ್ಸಾಹವು ಮುಗಿದಿದೆ, ಉಲ್ಲಾಸದ ಅವರ ಶಬ್ದವು ಕೊನೆಗೊಂಡಿತು. ಕಿನ್ನರಿಯ ಆನಂದ ಸ್ವರವು ತೀರಿತು. |
9
|
ಇನ್ನು ಗಾನದೊಡನೆ ದ್ರಾಕ್ಷಾರಸ ವನ್ನು ಕುಡಿಯರು; ಕುಡಿಯುವವರಿಗೆ ಮದ್ಯಪಾನವು ಕಹಿಯಾಗುವದು. |
10
|
ಗಲಿಬಿಲಿಗುಂಟಾದ ಪಟ್ಟಣವು ಹಾಳಾಗಿದೆ. ಯಾರು ಒಳಗೆ ಬಾರದಂತೆ ಪ್ರತಿಯೊಂದು ಮನೆಯು ಮುಚ್ಚಿದೆ. |
11
|
ದ್ರಾಕ್ಷಾರಸದ ಕೊರತೆಯಿಂದ ಬೀದಿಗಳಲ್ಲಿ ಅರಚುತ್ತಾರೆ; ಉಲ್ಲಾಸವೆಲ್ಲ ಅಸ್ತಮಿಸಿದೆ; ದೇಶದ ಸಡಗರವು ತೊಲಗಿಹೋಗಿದೆ. |
12
|
ಪಟ್ಟಣ ದಲ್ಲಿ ಹಾಳೇ ಉಳಿದಿವೆ; ನಾಶನವು ಹೆಬ್ಬಾಗಿಲಿಗೆ ತಟ್ಟಿದೆ. |
13
|
ಎಣ್ಣೇ ಮರವನ್ನು ಬಡಿದ ಮೇಲೆಯೂ ದ್ರಾಕ್ಷೇ ಸುಗ್ಗಿಯು ತೀರಿದ ನಂತರವು ನಿಲ್ಲುವ ಉಳಿದ ಕಾಯಿಗಳ ಹಾಗೆ ದೇಶದಲ್ಲಿರುವದು. |
14
|
ಅವರು ತಮ್ಮ ಸ್ವರವನ್ನೆತ್ತಿ ಕರ್ತನ ಮಹತ್ತಿನ ನಿಮಿತ್ತ ಹಾಡು ವರು, ಸಮುದ್ರದ ಕಡೆಯಿಂದ ಆರ್ಭಟಿಸುವರು. |
15
|
ಆದದರಿಂದ ನೀವು ಕರ್ತನಿಗೆ ಬೆಂಕಿಯಲ್ಲಿಯೂ ಸಮುದ್ರದ ದ್ವೀಪಗಳಲ್ಲಿಯೂ ಇಸ್ರಾಯೇಲ್ಯರ ದೇವ ರಾದ ಕರ್ತನ ಹೆಸರನ್ನು ಘನಪಡಿಸಿರಿ. |
16
|
ಭೂಮಂಡಲದ ಕಟ್ಟಕಡೆಯಿಂದ ನೀತಿವಂತರ ಘನತೆಗೆ ಬರುವಂತಹ ಗೀತೆಗಳು ನಮಗೆ ಕೇಳಿ ಬರು ತ್ತಿವೆ. ನಾನಾದರೋ--ಕ್ಷಮಿಸೇ ಕ್ಷಮಿಸುತ್ತೇನೆ. ನನಗೆ ಅಯ್ಯೋ! ಬಾಧಕರು ಬಾಧಿಸುವದರಲ್ಲಿಯೇ ನಿರತ ರಾಗಿದ್ದಾರೆ; ಹೌದು, ಬಾಧಕರು, ಬಹಳವಾಗಿ ಬಾಧಿ ಸುವದರಲ್ಲಿ ನಿರತರಾಗಿದ್ದಾರೆ. |
17
|
ಓ, ಭೂಮಿಯ ನಿವಾಸಿಗಳೇ, ಭಯವೂ ಗುಂಡಿಯೂ ಬಲೆಯೂ ನಿಮಗೆ ಕಾದಿವೆ. |
18
|
ಆಗ ಭಯದ ಶಬ್ದಕ್ಕೆ ಓಡಿ ಹೋಗುವವನು, ಕುಣಿಯೊಳಗೆ ಬೀಳುವನು; ಆ ಕುಣಿಯೊಳಗಿಂದ ಏರಿ ಬರುವವನು ಬಲೆಗೆ ಬೀಳು ವನು; ಮೇಲಿನ ಕಿಟಕಿಗಳು (ಆಕಾಶದ ದ್ವಾರಗಳು) ತೆರೆಯಲ್ಪಟ್ಟಿವೆ. ಭೂಮಿಯ ಅಸ್ತಿವಾರಗಳು ನಡುಗು ತ್ತವೆ. (ಕಂಪಿಸುತ್ತವೆ). |
19
|
ಭೂಮಿಯು ಸಂಪೂರ್ಣ ವಾಗಿ ಮುರಿಯಲ್ಪಟ್ಟಿದೆ. ಪೂರ್ತಿಯಾಗಿ ತುಂಡು ತುಂಡಾಗಿ ಹೋಗಿದೆ. ಭೂಮಿಯು ಮಿತಿವಿಾರಿ ಚಲಿಸ ಲ್ಪಟ್ಟಿದೆ. |
20
|
ಭೂಮಿಯು ಕುಡುಕನ ಹಾಗೆ ಓಲಾಡು ತ್ತದೆ ಮತ್ತು ಗುಡಿಸಲಿನ ಹಾಗೆ ತೆಗೆಯಲ್ಪಡುತ್ತದೆ ಅದರ ಅಪರಾಧವು ಅದರ ಮೇಲೆ ಭಾರವಾಗಿರುತ್ತದೆ; ಅದು ಬಿದ್ದುಹೋಗುತ್ತದೆ ತಿರಿಗಿ ಏಳುವದೇ ಇಲ್ಲ. |
21
|
ಆ ದಿವಸದಲ್ಲಿ ಆಗುವದೇನಂದರೆ--ಕರ್ತನು ಉನ್ನತದಲ್ಲಿರುವ ಉನ್ನತವಾದವರ ಸೈನ್ಯವನ್ನೂ ಭೂಮಿಯ ಮೇಲಿರುವ ಭೂರಾಜರನ್ನೂ ದಂಡಿಸು ವನು. |
22
|
ಕುಣಿಯೊಳಗೆ ಒಟ್ಟುಗೂಡಿದ ಸೆರೆಯವರ ಹಾಗೆ ಅವರು ಒಟ್ಟುಗೂಡಿ ಸೆರೆಮನೆಯಲ್ಲಿ ಮುಚ್ಚ ಲ್ಪಟ್ಟು ಬಹಳ ದಿವಸಗಳಾದ ಮೇಲೆ ದಂಡನೆಗೆ ಗುರಿ ಯಾಗುವರು. |
23
|
ಆಮೇಲೆ ಚೀಯೋನ್ ಪರ್ವತ ದಲ್ಲಿಯೂ ಯೆರೂಸಲೇಮಿನಲ್ಲಿಯೂ ತನ್ನ ಪೂರ್ವಿ ಕರ (ಪರಿವಾರದವರ) ಮುಂದೆ ಮಹಿಮೆಯಿಂದ ಆಳುವಾಗ ಚಂದ್ರನಿಗೆ ಅವಮಾನವಾಗುವದು, ಸೂರ್ಯನು ನಾಚಿಕೆ(ಲಜ್ಜೆ)ಪಡುವನು. |
Isaiah 24:1 Kannada Language Bible Words basic statistical display
COMING SOON ...