ಕರ್ತನಾದ ದೇವರು ಮಾಡಿದ ಅಡವಿಯ ಎಲ್ಲಾ ಮೃಗಗಳಿಗಿಂತ ಸರ್ಪವು ಯುಕ್ತಿ ಯುಳ್ಳದ್ದಾಗಿತ್ತು. ಅದು ಸ್ತ್ರೀಗೆ--ನೀವು ತೋಟ ದಲ್ಲಿರುವ ಯಾವ ಮರದ ಫಲವನ್ನು ತಿನ್ನಬಾರದೆಂದು ದೇವರು ಹೇಳಿದ್ದು ನಿಜವೋ ಎಂದು ಕೇಳಿತು.
ನೀವು ಅದನ್ನು ತಿಂದ ದಿನದಲ್ಲಿ ನಿಮ್ಮ ಕಣ್ಣುಗಳು ತೆರೆಯ ಲ್ಪಡುವವೆಂದೂ ನೀವು ಒಳ್ಳೇದರ ಕೆಟ್ಟದರ ಭೇದವನ್ನು ಅರಿತವರಾಗಿ ದೇವರುಗಳ ಹಾಗೆ ಇರುವಿರೆಂದೂ ದೇವರಿಗೆ ತಿಳಿದಿದೆ ಎಂದು ಹೇಳಿತು.
ಸ್ತ್ರೀಯು--ಆ ಮರದ ಫಲವು ಆಹಾರಕ್ಕೆ ಒಳ್ಳೇದಾಗಿಯೂ ಕಣ್ಣಿಗೆ ರಮ್ಯವಾಗಿಯೂ ಒಬ್ಬನನ್ನು ಜ್ಞಾನಿಯನ್ನಾಗಿ ಮಾಡುವದಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಅದೆ ಎಂದು ನೋಡಿ ಅದರ ಫಲವನ್ನು ತೆಗೆದುಕೊಂಡು ತಿಂದಳು; ತನ್ನ ಸಂಗಡ ಇದ್ದ ತನ್ನ ಗಂಡನಿಗೂ ಕೊಟ್ಟಳು; ಅವನೂ ತಿಂದನು.
ಆಗ ಕರ್ತನಾದ ದೇವರು ಸರ್ಪಕ್ಕೆ--ನೀನು ಇದನ್ನು ಮಾಡಿದ ಕಾರಣ ಎಲ್ಲಾ ಪಶುಗಳಲ್ಲಿಯೂ ಎಲ್ಲಾ ಅಡವಿಯ ಮೃಗಗಳ ಲ್ಲಿಯೂ ಶಪಿಸಲ್ಪಟ್ಟು ಜೀವದಿಂದಿರುವ ದಿವಸಗಳಲ್ಲೆಲ್ಲಾ ಹೊಟ್ಟೆಯಿಂದ ಹರಿದಾಡಿ ಮಣ್ಣನ್ನು ತಿನ್ನುವಿ.
ಸ್ತ್ರೀಗೆ ಆತನು--ನಾನು ನಿನ್ನ ದುಃಖವನ್ನೂ ಗರ್ಭವೇದನೆಯನ್ನೂ ಅಧಿಕವಾಗಿ ಹೆಚ್ಚಿಸುವೆನು, ನೀನು ಕಷ್ಟದಿಂದ ಮಕ್ಕಳನ್ನು ಹೆರುವಿ, ನಿನ್ನ ಗಂಡನ ಮೇಲೆ ನಿನಗೆ ಆಶೆ ಇರುವದು; ಅವನು ನಿನ್ನನ್ನು ಆಳುವನು ಅಂದನು.
ಆದಾಮನಿಗೆ ಆತನು--ನೀನು ನಿನ್ನ ಹೆಂಡತಿಯ ಮಾತನ್ನು ಕೇಳಿ ತಿನ್ನಬಾರದೆಂದು ನಾನು ನಿನ ಆಜ್ಞಾಪಿಸಿದ ಮರದ ಫಲವನ್ನು ತಿಂದಕಾರಣ ನಿನ್ನ ನಿಮಿತ್ತ ಭೂಮಿಯು ಶಪಿಸಲ್ಪಟ್ಟಿದೆ; ನಿನ್ನ ಜೀವನದ ದಿನಗಳಲ್ಲೆಲ್ಲಾ ದುಃಖದಲ್ಲೇ ನೀನು ಅದರ ಫಲವನ್ನು ತಿನ್ನುವಿ.
ನೀನು ಮಣ್ಣಿಗೆ ತಿರುಗುವ ವರೆಗೆ ನಿನ್ನ ಹಣೆಯ ಬೆವರನ್ನು ಸುರಿಸಿ ರೊಟ್ಟಿಯನ್ನು ತಿನ್ನುವಿ. ಯಾಕಂದರೆ ನೀನು ಅದ ರೊಳಗಿಂದ ಅಂದರೆ (ಮಣ್ಣಿನೊಳಗಿಂದ) ತೆಗೆಯ ಲ್ಪಟ್ಟೆ; ನೀನು ಮಣ್ಣಾಗಿದ್ದಿ, ಮಣ್ಣಿಗೆ ತಿರುಗಿಕೊಳ್ಳುವಿ ಅಂದನು.
ಹೀಗೆ ಆತನು ಮನುಷ್ಯನನ್ನು ಹೊರಗೆ ಹಾಕಿ ಜೀವವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವದಕ್ಕೆ ಏದೆನ್ ತೋಟದ ಪೂರ್ವದಿಕ್ಕಿನಲ್ಲಿ ಕೆರೂಬಿಯರನ್ನೂ ಎಲ್ಲಾ ಕಡೆಯಲ್ಲಿ ಸುತ್ತುವ ಜ್ವಾಲೆಯ ಕತ್ತಿಯನ್ನೂ ಇರಿಸಿದನು.