ಎಜ್ರನು ಪ್ರಾರ್ಥಿಸಿ ಅರಿಕೆಮಾಡಿ ಅಳುತ್ತಾ ದೇವರ ಆಲಯದ ಮುಂದೆ ಬಿದ್ದಿರಲು ಇಸ್ರಾಯೇಲ್ಯರಲ್ಲಿ ಸ್ತ್ರೀಯರೂ ಪುರುಷರೂ ಮಕ್ಕಳೂ ಮಹಾ ದೊಡ್ಡ ಕೂಟವಾಗಿ ಅವನ ಬಳಿಯಲ್ಲಿ ಕೂಡಿಕೊಂಡರು. ಜನರು ಬಹಳವಾಗಿ ಅತ್ತರು.
ಆಗ ಎಲಾಮನ ಕುಮಾರರಲ್ಲಿ ಒಬ್ಬನಾದ ಯೆಹೀಯೇಲನ ಮಗನಾದ ಶೆಕೆನ್ಯನು ಎಜ್ರನಿಗೆ ಪ್ರತ್ತ್ಯುತ್ತರವಾಗಿ--ನಾವು ದೇಶದ ಜನಗಳಲ್ಲಿ ಅನ್ಯ ಸ್ತ್ರೀಯರನ್ನು ತೆಗೆದು ಕೊಂಡದ್ದರಿಂದ ನಮ್ಮ ದೇವರಿಗೆ ವಿರೋಧವಾಗಿ ಅಕೃತ್ಯಮಾಡಿದ್ದೇವೆ. ಆದಾಗ್ಯೂ ಈಗ ಈ ಕಾರ್ಯವನ್ನು ಕುರಿತು ಇಸ್ರಾಯೇಲ್ಯರಲ್ಲಿ ನಿರೀಕ್ಷೆ ಉಂಟು.
ಆದ ಕಾರಣ ನನ್ನ ಒಡೆಯನ ಯೋಚನೆಯ ಪ್ರಕಾರವಾ ಗಿಯೂ ನಮ್ಮ ದೇವರ ಆಜ್ಞೆಗೆ ನಡುಗುವವರ ಯೋಚ ನೆಯ ಪ್ರಕಾರವಾಗಿಯೂ ಆ ಸಮಸ್ತ ಸ್ತ್ರೀಯರನ್ನೂ ಅವರಿಂದ ಹುಟ್ಟಿದವರನ್ನೂ ಹೊರಡಿಸಿ ಬಿಡಲು ನಮ್ಮ ದೇವರ ಸಂಗಡ ಒಡಂಬಡಿಕೆ ಮಾಡೋಣ; ಇದು ನ್ಯಾಯಪ್ರಮಾಣದ ಪ್ರಕಾರ ಮಾಡಲ್ಪಡಲಿ.
ಎಜ್ರನು ದೇವರ ಆಲಯದ ಮುಂದಿ ನಿಂದ ಎದ್ದು ಎಲ್ಯಾಷೀಬಿನ ಮಗನಾದ ಯೆಹೋಹಾ ನಾನನ ಕೊಠಡಿಯಲ್ಲಿ ಪ್ರವೇಶಿಸಿ ಅಲ್ಲಿಗೆ ಬಂದಾಗ ರೊಟ್ಟಿಯನ್ನು ತಿನ್ನದೆ ನೀರನ್ನು ಕುಡಿಯದೆ ಇದ್ದನು; ಯಾಕಂದರೆ ಸೆರೆಯಾಗಿ ಒಯ್ಯಲ್ಪಟ್ಟವರ ಅಕೃತ್ಯಕ್ಕೋಸ್ಕರ ದುಃಖಿಸಿದನು.
ಇದಲ್ಲದೆ ಯಾವನಾದರೂ ಪ್ರಧಾನರ, ಹಿರಿಯರ ಯೋಚನೆಯ ಪ್ರಕಾರ ಮೂರು ದಿವಸದಲ್ಲಿ ಬಾರದೆ ಇದ್ದರೆ ಅವನ ಆಸ್ತಿಯಲ್ಲಾ ದಂಡವಾಗಿ ತಕ್ಕೊಳ್ಳಲ್ಪಡುವದೆಂದೂ ಅವನು ಸೆರೆಯಾಗಿ ಒಯ್ಯಲ್ಪಟ್ಟವರ ಕೂಟದಿಂದ ಹೊರಗೆ ಹಾಕಲ್ಪಡುವನೆಂದೂ ಸಾರಿದರು.
ಆಗ ಯೆಹೂದ ಮತ್ತು ಬೆನ್ಯಾವಿಾನಿನ ಮನುಷ್ಯರೆಲ್ಲರೂ ಮೂರು ದಿವಸಗಳೊಳಗೆ ಯೆರೂಸಲೇಮಿನಲ್ಲಿ ಕೂಡಿ ದರು. ಅದು ಒಂಭತ್ತನೇ ತಿಂಗಳ ಇಪ್ಪತ್ತನೇ ದಿವಸ ವಾಗಿತ್ತು. ಜನರೆಲ್ಲರು ದೇವರ ಆಲಯದ ಬೀದಿಯಲ್ಲಿ ಆ ಕಾರ್ಯಕ್ಕೊಸ್ಕರವೂ ಮಳೆಗೋಸ್ಕರವೂ ನಡುಗಿ ಕೂತುಕೊಂಡಿದ್ದರು.
ಆದದರಿಂದ ನೀವು ನಿಮ್ಮ ಪಿತೃಗಳ ದೇವರಾಗಿರುವ ಕರ್ತನ ಮುಂದೆ ಅರಿಕೆಮಾಡಿ, ಆತನ ಚಿತ್ತದ ಪ್ರಕಾರ ಮಾಡಿ, ಈ ದೇಶದ ಜನರಿಂದಲೂ ಅನ್ಯಸ್ತ್ರೀಯ ರಿಂದಲೂ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ ಅಂದನು.
ಆದಕಾರಣ ದಯಮಾಡಿ--ಸಭೆಯಲ್ಲಾದರಲ್ಲಿ ನಮ್ಮ ಪ್ರಧಾನರು ನಿಲ್ಲಲಿ. ಮತ್ತು ಈ ಕಾರ್ಯದ ನಿಮಿತ್ತ ನಮ್ಮ ದೇವರ ಉರಿಯುವ ಕೋಪವು ನಮ್ಮನ್ನು ಬಿಟ್ಟುಹೋಗುವ ವರೆಗೆ, ನಮ್ಮ ಪಟ್ಟಣಗಳಲ್ಲಿ ಅನ್ಯ ಸ್ತ್ರೀಯರನ್ನು ತಕ್ಕೊಂಡವರು ನೇಮಿಸಿದ ಕಾಲದಲ್ಲಿ ಬಂದು ಅವರ ಸಂಗಡ ಪ್ರತಿ ಪಟ್ಟಣದ ಹಿರಿಯರೂ ಅದರ ನ್ಯಾಯಾಧಿಪತಿಗಳೂ ಇರಲಿ ಅಂದರು.
ಸೆರೆ ಇರುವಿಕೆಯ ಮಕ್ಕಳು ಇದೇ ಪ್ರಕಾರ ಮಾಡಿದರು; ಆದದರಿಂದ ಯಾಜಕನಾದ ಎಜ್ರನು ತಮ್ಮ ತಂದೆಗಳ ಮನೆಯ ಪ್ರಕಾರ ತಂದೆಗಳಲ್ಲಿ ಪ್ರಮುಖರಾದ ಕೆಲ ವರು ಹೆಸರು ಹೆಸರಾಗಿ ಪ್ರತ್ಯೇಕಿಸಲ್ಪಟ್ಟು, ಈ ಕಾರ್ಯವನ್ನು ಶೋಧಿಸಲು ಹತ್ತನೇ ತಿಂಗಳ ಮೊದ ಲನೇ ದಿವಸದಲ್ಲಿ ಕುಳಿತುಕೊಂಡರು.