ತೂರಿಗೆ ಹೇಳು--ಸಮುದ್ರದ ಪ್ರವೇಶದಲ್ಲಿ ವಾಸಿಸುವವಳೇ, ಬಹು ದ್ವೀಪಗಳಿಗೆ ಜನರ ವ್ಯಾಪಾರವನ್ನು ನಡಿಸುವ ವಳೇ, ದೇವರಾದ ಕರ್ತನು ಹೀಗೆ ಹೇಳುತ್ತಾನೆ-- ಓ ತೂರೇ, ನಾನು ಪೂರ್ಣ ಸೌಂದರ್ಯವಂತಳೆಂದು ನೀನು ಹೇಳಿದ್ದೀ.
ಗೆಬಲಿನ ಹಿರಿಯರೂ ಅದರ ಜ್ಞಾನಿಗಳೂ ನಿನ್ನ ಬಿರುಕುಗಳನ್ನು ಮುಚ್ಚುವವರಾಗಿ ನಿನ್ನಲ್ಲಿದ್ದಾರೆ. ಸಮುದ್ರದ ಸಕಲ ನಾವೆಗಳೂ ನಾವಿಕರ ಸಮೇತ ನಿನ್ನ ಬಳಿಯಲ್ಲಿದ್ದು ನಿನಗೆ ಸರಕುಗಳನ್ನು ತಂದೊಪ್ಪಿಸು ತ್ತಿದ್ದವು.
ಪಾರಸೀಯರೂ ಲೂದ್ಯರೂ ಪೂಟ್ಯರೂ ನಿನ್ನ ಸೈನ್ಯಾಧಿಕಾರಿಗಳಾಗಿ ನಿನ್ನ ಸೈನ್ಯದಲ್ಲಿದ್ದರು; ಗುರಾಣಿ ಯನ್ನೂ ಶಿರಸ್ತ್ರಾಣವನ್ನೂ ನಿನ್ನಲ್ಲಿ ತೂಗಿಸಿದರು. ಇವರು ನಿನಗೆ ಮಹತ್ತನ್ನು ಕೊಟ್ಟರು.
ಅರ್ವಾದಿನವರು ನಿನ್ನ ದಂಡಿನ ಸಂಗಡ ನಿನ್ನ ಗೋಡೆಗಳ ಸುತ್ತಲೂ ಮೇಲೆ ಇದ್ದರು; ಗಮ್ಮಾದ್ಯರು ನಿನ್ನ ಕೊತ್ತಲುಗಳಲ್ಲಿ ಕಾವಲಾಗಿದ್ದರು. ತಮ್ಮ ಖೇಡ್ಯಗಳನ್ನು ಸುತ್ತ ಮುತ್ತಲೂ ನಿನ್ನ ಗೋಡೆಗಳ ಮೇಲೆ ನೇತುಹಾಕಿ ಇವರು ನಿನ್ನ ಸೌಂದರ್ಯವನ್ನು ಪೂರ್ತಿಗೊಳಿಸಿದರು.
ನಿನ್ನ ಕೈಕೆಲಸದ ವಸ್ತುಗಳು ಅಪಾರವಾಗಿದ್ದದರಿಂದ ಅರಾಮಿನವರು ನಿನ್ನವರಾಗಿ ವ್ಯಾಪಾರಮಾಡಿ ಕೆಂಪರಳು, ರಕ್ತಾಂಬರ, ಕಸೂತಿಯ ವಸ್ತ್ರ, ನಾರುಬಟ್ಟೆ, ಹವಳ, ಮಾಣಿಕ್ಯ ಮೊದಲಾದ ಸರಕುಗಳನ್ನು ನಿನಗೆ ತಂದು ಸುರಿದರು.
ಶೆಬ ದವರು, ರಗ್ಮದವರು ನಿನ್ನ ಕಡೆಯ ವರ್ತಕರಾಗಿ ಶ್ರೇಷ್ಟವಾದ ಎಲ್ಲಾ ಸುಗಂಧ ದ್ರವ್ಯದಿಂದಲೂ ಬೆಲೆ ಯುಳ್ಳ ಎಲ್ಲಾ ರತ್ನಗಳಿಂದಲೂ ಚಿನ್ನದಿಂದಲೂ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು.
ಇವರು ಎಲ್ಲಾ ತರಹದ ಸಾಮಾನುಗಳಲ್ಲೂ ನಿನ್ನ ವ್ಯಾಪಾರಿಗಳಾಗಿದ್ದರು. ಅಂದರೆ ನೀಲಿಬಟ್ಟೆಗಳು, ಕಸೂತಿಯ ಕೆಲಸ ದೇವ ದಾರುವಿನಿಂದ ಮಾಡಿ ಹಗ್ಗಗಳಿಂದ ಕಟ್ಟಿದಂತ, ರೇಷ್ಮೆ ತುಂಬಿಸಿದ ಪೆಟ್ಟಿಗೆಗಳನ್ನು ತಂದು ನಿನ್ನ ಪಟ್ಟಣಗಳಲ್ಲಿ ವರ್ತಕರಾಗಿದ್ದರು.
ನಿನ್ನ ಸರಕು ಸಮುದ್ರದಿಂದ ಹೊರಟಾಗ ಅನೇಕ ಜನರಿಗೆ ತೃಪ್ತಿಪಡಿಸಿದೆ; ಅವುಗಳಿಂದ ಬಹು ಜನಾಂಗ ಗಳನ್ನು ತುಂಬಿಸಿದೆ; ನಿನ್ನ ಅಪಾರವಾದ ಐಶ್ವರ್ಯ ದಿಂದಲೂ ವ್ಯಾಪಾರದ ದಿನಸುಗಳಿಂದಲೂ ಭೂರಾಜ ರನ್ನು ಸಮೃದ್ಧಿಪಡಿಸಿದೆ.