ಅನಂತರ ಅವನು ಬಲಿಪೀಠದ ಎಲ್ಲಾ ಸಾಮಾನುಗಳನ್ನು ಮಾಡಿ ದನು: ಕೊಡಗಳು, ಸಲಿಕೆಗಳು, ಬೋಗುಣಿಗಳು, ಮಾಂಸ ಸಿಕ್ಕಿಸುವ ಕೊಂಡಿಗಳು, ಅಗ್ಗಿಷ್ಟಿಗೆಗಳು; ಇವೆಲ್ಲ ವುಗಳನ್ನು ಅವನು ಹಿತ್ತಾಳೆಯಿಂದ ಮಾಡಿದನು.
ಅವುಗಳಿಗೆ ಇಪ್ಪತ್ತು ಸ್ತಂಭಗಳಿದ್ದವು, ಅವುಗಳಿಗೆ ಇಪ್ಪತ್ತು ಹಿತ್ತಾಳೆಯ ಕಾಲು ಕುಣಿಕೆಗಳಿದ್ದವು; ಆ ಸ್ತಂಭಗಳಿಗೆ ಇದ್ದ ಕೊಂಡಿ ಮತ್ತು ಅಲಂಕಾರದ ಪಟ್ಟಿಗಳು ಬೆಳ್ಳಿಯಿಂದ ಮಾಡಲ್ಪ ಟ್ಟಿದ್ದವು.
ಉತ್ತರ ದಿಕ್ಕಿನ ತೆರೆಗಳು ನೂರು ಮೊಳ ಉದ್ದವಾಗಿದ್ದವು; ಅವುಗಳಿಗೆ ಇಪ್ಪತ್ತು ಸ್ತಂಭಗಳಿದ್ದು ಆ ಸ್ತಂಭಗಳಿಗೆ ಇಪ್ಪತ್ತು ಹಿತ್ತಾಳೆಯ ಕಾಲು ಕುಣಿಕೆ ಗಳಿದ್ದವು. ಆ ಸ್ತಂಭಗಳ ಕೊಂಡಿ ಮತ್ತು ಅಲಂಕಾರದ ಪಟ್ಟಿಗಳು ಬೆಳ್ಳಿಯದಾಗಿದ್ದವು.
ಪಶ್ಚಿಮ ದಿಕ್ಕಿನ ತೆರೆಗಳು ಐವತ್ತು ಮೊಳ ಉದ್ದವಾಗಿದ್ದವು; ಅವುಗಳಿಗೆ ಹತ್ತು ಸ್ತಂಭಗಳಿದ್ದು ಆ ಸ್ತಂಭಗಳಿಗೆ ಹತ್ತು ಹಿತ್ತಾಳೆಯ ಕಾಲು ಕುಣಿಕೆಗಳಿದ್ದವು. ಆ ಸ್ತಂಭಗಳ ಕೊಂಡಿಗಳೂ ಮತ್ತು ಅಲಂಕಾರದ ಪಟ್ಟಿಗಳೂ ಬೆಳ್ಳಿಯದಾಗಿದ್ದವು.
ಅಂಗಳ ದ್ವಾರದ ತೆರೆಯು ನಯವಾಗಿ ಹೊಸೆದ ನೂಲಿನ ಬಟ್ಟೆಯಾಗಿತ್ತು; ಅದರ ಮೇಲೆ ನೀಲಿ ಧೂಮ್ರ ರಕ್ತವರ್ಣ ದಾರಗಳಿಂದ ಕಸೂತಿ ಕೆಲಸ ಮಾಡಲಾಗಿತ್ತು; ಅವು ಇಪ್ಪತ್ತು ಮೊಳ ಉದ್ದವಾಗಿದ್ದು ಅಗಲ ಎತ್ತರಗಳಲ್ಲಿ ಅಂಗಳದ ಉಳಿದ ತೆರೆಗಳಿಗೆ ಸರಿಯಾಗುವಂತೆ ಐದು ಮೊಳ ಇತ್ತು.
ಅವುಗಳಿಗೆ ನಾಲ್ಕು ಸ್ತಂಭಗಳು, ಆ ಸ್ತಂಭಗಳಿಗೆ ನಾಲ್ಕು ಹಿತ್ತಾಳೆಯ ಕಾಲು ಕುಣಿಕೆಗಳು ಇದ್ದವು; ಅವುಗಳ ಕೊಂಡಿಗಳು ಬೆಳ್ಳಿಯದಾಗಿದ್ದವು, ಅವುಗಳ ಬೋದಿಗಳ ಹೊದಿಕೆಯೂ ಅಲಂಕಾರದ ಪಟ್ಟಿಗಳೂ ಬೆಳ್ಳಿಯದಾಗಿದ್ದವು.
ಅವನ ಜೊತೆಯಲ್ಲಿ ದಾನ ಕುಲದವನಾದ ಅಹೀಸಾಮಾಕನ ಮಗನಾದ ಒಹೋಲಿಯಾಬನೂ ಇದ್ದನು. ಇವನು ಕೆತ್ತನೆ ಕೆಲಸ ಮಾಡುವವನೂ ಕುಶಲ ಕೆಲಸಗಾರನೂ ನೀಲಿ ಧೂಮ್ರ ರಕ್ತವರ್ಣ ನಯವಾದ ನೂಲು ಇವುಗಳಿಂದ ಕಸೂತಿ ಕೆಲಸ ಮಾಡುವವನೂ ಆಗಿದ್ದನು.
ಪರಿಶುದ್ಧಾಲಯ ನಿಯಮದ ಮೇರೆಗೆ ಪರಿಶುದ್ಧ ಕೆಲಸಕ್ಕೆ ಉಪಯೋಗಿಸಿದ ಎಲ್ಲಾ ಬಂಗಾರವು ಕಾಣಿಕೆಯ ಬಂಗಾರವನ್ನೊಳಗೊಂಡು ಒಟ್ಟು ಇಪ್ಪ ತ್ತೊಂಭತ್ತು ತಲಾಂತು ಮತ್ತು ಏಳುನೂರ ಮೂವತ್ತು ಶೆಕೆಲುಗಳಾಗಿತ್ತು.
ಪರಿಶುದ್ಧಾಲಯ ನಿಯಮದ ಮೇರೆಗೆ ತಲಾ ಒಂದು ಬೆಕಾ, ಅಂದರೆ ಅರ್ಧ ಶೆಕೆಲಿನಂತೆ ಇಪ್ಪತ್ತು ಮೊದಲುಗೊಂಡು ಅದಕ್ಕೆ ಮೇಲಿನ ಪ್ರಾಯ ದವರನ್ನು ಲೆಕ್ಕ ಮಾಡಲಾಗಿ ಆರು ಲಕ್ಷ ಮೂರು ಸಾವಿರದ ಐದು ನೂರ ಐವತ್ತು ಗಂಡಸರ ಸಂಖ್ಯೆ ಇತ್ತು.
ಪರಿಶುದ್ಧಾಲಯದ ಕುಣಿಕೆಗಳಿಗೆ ಮತ್ತು ತೆರೆಗಳ ಕುಣಿಕೆಗಳಿಗೆ ಎರಕ ಹೊಯ್ಯಲು ಒಂದು ನೂರು ತಲಾಂತು ಬೆಳ್ಳಿ ಹಿಡಿಯಿತು; ಒಂದು ಕುಣಿಕೆಗೆ ಒಂದು ತಲಾಂತಿನಂತೆ ನೂರು ಕುಣಿಕೆಗಳಿಗೆ ನೂರು ತಲಾಂತು ಬೆಳ್ಳಿ ಆಯಿತು.