English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Deuteronomy Chapters

Deuteronomy 2 Verses

1 ಆಗ ನಾವು ತಿರುಗಿಕೊಂಡು ಕರ್ತನು ನನಗೆ ಹೇಳಿದ ಪ್ರಕಾರ ಕೆಂಪು ಸಮುದ್ರದ ಮಾರ್ಗವಾಗಿ ಅರಣ್ಯಕ್ಕೆ ಹೊರಟು ಅನೇಕ ದಿವಸಗಳು ಸೇಯಾರ್ ಬೆಟ್ಟವನ್ನು ಸುತ್ತಿಕೊಂಡೆವು.
2 ಆ ಮೇಲೆ ಕರ್ತನು ನನಗೆ ಹೇಳಿದ್ದೇನಂದರೆ--
3 ನೀವು ಈ ಬೆಟ್ಟವನ್ನು ಸುತ್ತಿಕೊಂಡದ್ದು ಸಾಕು, ಉತ್ತರಕ್ಕೆ ತಿರುಗಿ ಕೊಳ್ಳಿರಿ.
4 ನೀನು ಜನರಿಗೆ ಆಜ್ಞಾಪಿಸಬೇಕಾದದ್ದೇ ನಂದರೆ--ನೀವು ಸೇಯಾರಿನಲ್ಲಿ ವಾಸಮಾಡುವ ನಿಮ್ಮ ಸಹೋದರರಾದ ಏಸಾವನ ಕುಮಾರರ ಮೇರೆಯನ್ನು ದಾಟಬೇಕು; ಅವರು ನಿಮಗೆ ಭಯಪಡುವರು; ಆದದರಿಂದ ನೀವು ಬಹಳ ಜಾಗ್ರತೆಯಿಂದಿರಬೇಕು.
5 ಅವರ ಸಂಗಡ ಜಗಳವಾಡಬೇಡಿರಿ. ನಾನು ನಿಮಗೆ ಅವರ ದೇಶದಲ್ಲಿ ಪಾದದಷ್ಟೂ ಸ್ಥಳ ಕೊಡುವದಿಲ್ಲ; ಸೇಯಾರ್ ಬೆಟ್ಟವನ್ನು ಏಸಾವನಿಗೆ ಸ್ವಾಸ್ತ್ಯವಾಗಿ ಕೊಟ್ಟೆನಲ್ಲಾ.
6 ನೀವು ಉಣ್ಣುವ ಆಹಾರವನ್ನು ಅವ ರಿಂದ ಹಣಕ್ಕೆ ತಕ್ಕೊಳ್ಳಬೇಕು; ಕುಡಿಯುವ ನೀರನ್ನು ಸಹ ಅವರಿಂದ ಹಣಕ್ಕೆ ತಕ್ಕೊಳ್ಳಬೇಕು.
7 ನಿನ್ನ ದೇವರಾದ ಕರ್ತನು ನಿನ್ನ ಎಲ್ಲಾ ಕೈಕೆಲಸದಲ್ಲಿ ನಿನ್ನನ್ನು ಆಶೀರ್ವದಿಸಿದ್ದಾನೆ; ನೀನು ಈ ದೊಡ್ಡ ಅರಣ್ಯದಲ್ಲಿ ಸಂಚಾರ ಮಾಡಿದ್ದನ್ನು ಆತನು ಬಲ್ಲನು; ಈ ನಾಲ್ವತ್ತು ವರುಷ ನಿನ್ನ ದೇವರಾದ ಕರ್ತನು ನಿನ್ನ ಸಂಗಡ ಇದ್ದಾನೆ; ನಿನಗೆ ಏನೂ ಕಡಿಮೆ ಆಗಲಿಲ್ಲ ಎಂದು ಹೇಳಿದನು.
8 ಈ ಪ್ರಕಾರ ನಾವು ಸೇಯಾರಿನಲ್ಲಿ ವಾಸಮಾಡುವ ನಮ್ಮ ಸಹೋದರರಾದ ಏಸಾವನ ಮಕ್ಕಳ ಕಡೆಯಿಂದ ಬೈಲಿನ ಮಾರ್ಗವಾಗಿ ಏಲತ್, ಎಚ್ಯೋನ್ಗೆಬೆರ್ ಎಂಬ ಪಟ್ಟಣಗಳ ಮುಂದಾಗಿ ದಾಟಿ ತಿರುಗಿಕೊಂಡು ಮೋವಾಬಿನ ಅರಣ್ಯದ ಮಾರ್ಗವಾಗಿ ಹಾದು ಹೋದೆವು.
9 ಆಗ ಕರ್ತನು ನನಗೆ--ಮೋವಾಬ್ಯರಿಗೆ ಉಪದ್ರಕೊಡಬೇಡ; ಅವರ ಸಂಗಡ ಜಗಳವಾಡಿ ಯುದ್ಧಮಾಡಬೇಡ; ನಾನು ಅವರ ದೇಶದಲ್ಲಿ ನಿನಗೆ ಸ್ವಾಸ್ತ್ಯವನ್ನು ಕೊಡುವದಿಲ್ಲ; ನಾನು ಆರ್ ಅನ್ನು ಲೋಟನ ಮಕ್ಕಳಿಗೆ ಸ್ವಾಸ್ತ್ಯವಾಗಿ ಕೊಟ್ಟೆನಲ್ಲವೇ ಅಂದನು.
10 ಅದರೊಳಗೆ ಪೂರ್ವದಲ್ಲಿ ಏಮಿಯರು ವಾಸವಾಗಿದ್ದರು. ಅವರು ಅನಾಕ್ಯರ ಹಾಗೆ ದೊಡ್ಡವ ರಾಗಿಯೂ ಬಹಳವಾದವರಾಗಿಯೂ ಉದ್ದವಾದವ ರಾಗಿಯೂ ಇರುವ ಜನರು.
11 ಅವರು ಅನಾಕ್ಯರ ಹಾಗೆ ಮಹಾಶರೀರಗಳೆನ್ನಿಸಿಕೊಂಡರು; ಮೋವಾಬ್ಯರು ಅವರನ್ನು ಏಮಿಯರೆಂದು ಕರೆದರು.
12 ಹೋರಿಯರು ಸಹ ಪೂರ್ವದಲ್ಲಿ ಸೇಯಾರಿನಲ್ಲಿ ವಾಸಮಾಡಿದರು; ಆದರೆ ಏಸಾವನ ಮಕ್ಕಳು ಅವರನ್ನು ಹೊರಡಿಸಿ ತಮ್ಮ ಎದುರಿನಲ್ಲಿ ಸಂಹರಿಸಿ ಇಸ್ರಾಯೇಲ್ಯರು, ಕರ್ತನು ತಮಗೆ ಕೊಟ್ಟ ಸ್ವಾಸ್ತ್ಯದ ದೇಶದಲ್ಲಿ ಮಾಡಿದ ಹಾಗೆ ಅವರ ಬದಲಾಗಿ ವಾಸಮಾಡಿದರು.
13 ಈಗ ಎದ್ದು ಜೆರೆದ್ ಹಳ್ಳವನ್ನು ದಾಟಿರಿ ಅಂದಮೇಲೆ ನಾವು ಜೆರೆದ್ ಹಳ್ಳವನ್ನು ದಾಟಿದೆವು.
14 ನಾವು ಕಾದೇಶ್ಬರ್ನೆಯವನ್ನು ಬಿಟ್ಟಂದಿನಿಂದ ಜೆರೆದ್ ಹಳ್ಳ ವನ್ನು ದಾಟಿದ ವರೆಗೆ ಹೋದ ಕಾಲವು ಮೂವ ತ್ತೆಂಟು ವರುಷ; ಕರ್ತನು ಅವರಿಗೆ ಪ್ರಮಾಣಮಾಡಿದ ಪ್ರಕಾರ ಯುದ್ಧಸ್ಥರ ಸಂತತಿ ಎಲ್ಲಾ ಸೈನ್ಯದೊಳಗಿಂದ ಮುಗಿದುಹೋಗುವ ವರೆಗೆ ತಡವಾಯಿತು.
15 ಅವರು ಮುಗಿದುಹೋಗುವ ವರೆಗೆ ಅವರನ್ನು ಸೈನ್ಯದೊಳ ಗಿಂದ ನಿರ್ಮೂಲ ಮಾಡುವದಕ್ಕೆ ಕರ್ತನ ಹಸ್ತವು ಅವರ ಮೇಲಿತ್ತು.
16 ಜನರೊಳಗಿಂದ ಸೈನಿಕರೆಲ್ಲರೂ ಸತ್ತುಹೋದ ನಂತರ
17 ಕರ್ತನು ನನಗೆ--ಇಂದು ನೀನು ಮೋವಾಬಿನ ಮೇರೆಯಾದ ಆರ್ ಅನ್ನು ದಾಟಬೇಕು;
18 ಅಮ್ಮೋನನ ಮಕ್ಕಳೆದುರಿಗೆ ನೀನು ಬಂದರೆ ಅವರಿಗೆ ಉಪದ್ರ ಕೊಡಬೇಡ; ಅವರ ಸಂಗಡ ಜಗಳವಾಡ ಬೇಡ;
19 ನಾನು ಅಮ್ಮೋನನ ಮಕ್ಕಳ ದೇಶದಲ್ಲಿ ನಿನಗೆ ಸ್ವಾಸ್ತ್ಯವನ್ನು ಕೊಡುವದಿಲ್ಲ. ನಾನು ಅದನ್ನು ಲೋಟನ ಮಕ್ಕಳಿಗೆ ಸ್ವಾಸ್ತ್ಯವಾಗಿ ಕೊಟ್ಟೆನಲ್ಲಾ ಅಂದನು.
20 (ಇದು ಸಹ ರಾಕ್ಷಸರ ದೇಶವೆನಿಸಿಕೊಂಡಿತು; ಪೂರ್ವದಲ್ಲಿ ರಾಕ್ಷಸರು ಅದರಲ್ಲಿ ವಾಸಮಾಡಿದರು; ಅಮ್ಮೋನಿಯರು ಅವರಿಗೆ ಜಂಜುಮ್ಯರೆಂದು ಕರೆದರು.
21 ಅವರು ಅನಾಕ್ಯರ ಹಾಗೆ ದೊಡ್ಡವರೂ ಬಹಳವಾದ ವರೂ ಉದ್ದವಾದವರೂ ಆಗಿರುವ ಜನರು; ಆದರೆ ಕರ್ತನು ಅವರನ್ನು ಇವರ ಮುಂದೆ ನಾಶಮಾಡಿದ್ದರಿಂದ ಇವರು ಅವರನ್ನು ಹೊರಡಿಸಿ ಅವರ ಬದಲಾಗಿ ವಾಸಿಸಿದರು.
22 ಕರ್ತನು ಸೇಯಾರಿನಲ್ಲಿ ವಾಸವಾಗಿ ರುವ ಏಸಾವನ ಮಕ್ಕಳಿಗೆ ಮಾಡಿದ ಹಾಗಾಯಿತು. ಅವನು ಅವರ ಮುಂದೆ ಹೋರಿಯರನ್ನು ನಾಶ ಮಾಡಿದಾಗ ಅವರು ಇವರನ್ನು ಹೊರಡಿಸಿ ಇವರ ಬದಲಾಗಿ ಇಂದಿನ ವರೆಗೂ ವಾಸಿಸಿದ್ದವರಲ್ಲಾ.
23 ಹಾಗೆ ಹಚರೀಮಿನ ಅಜ್ಹದ ಪರ್ಯಂತರ ವಾಸ ವಾಗಿದ್ದ ಅವ್ವಿಯರನ್ನು ಕಫ್ತೋರಿಂದ ಹೊರಟ ಕಫ್ತೋರ್ಯರು ನಾಶಮಾಡಿ ಅವರ ಬದಲಾಗಿ ವಾಸಿಸಿದರು.)
24 ಏಳಿರಿ, ಹೊರಡಿರಿ; ಅರ್ನೋನ್ ನದಿಯನ್ನು ದಾಟಿರಿ; ಇಗೋ, ಹೆಷ್ಬೋನಿನ ಅರಸ ನಾದ ಅಮೋರಿಯನಾದ ಸೀಹೋನನನ್ನೂ ಅವನ ದೇಶವನ್ನೂ ನಿನ್ನ ಕೈಯಲ್ಲಿ ಕೊಟ್ಟಿದ್ದೇನೆ, ಸ್ವಾಧೀನ ಪಡಿಸಿಕೊಳ್ಳುವದಕ್ಕೆ ಆರಂಭಮಾಡು. ಅವನ ಸಂಗಡ ಜಗಳವಾಡಿ ಯುದ್ಧಮಾಡು.
25 ಇದೇ ದಿವಸ ಆಕಾಶವೆಲ್ಲಾದರ ಕೆಳಗಿರುವ ಜನಾಂಗಗಳ ಮೇಲೆ ನಿನ್ನ ಹೆದರಿಕೆಯನ್ನೂ ನಿನ್ನ ಭಯವನ್ನೂ ಉಂಟು ಮಾಡಲಾರಂಭಿಸುತ್ತೇನೆ. ಅವರು ನಿನ್ನ ಸುದ್ದಿಯನ್ನು ಕೇಳಿ ನಿನಗೋಸ್ಕರ ನಡುಗಿ ಅಂಜುವರು.
26 ಆಗ ನಾನು ಕೆದೇಮೋತೆಂಬ ಅರಣ್ಯದಿಂದ ಹೆಷ್ಬೋನಿನ ಅರಸನಾದ ಸೀಹೋನನಿಗೆ ಸಮಾಧಾನ ಸಂದೇಶ ದೂತರನ್ನು ಕಳುಹಿಸಿ--
27 ನಾನು ನಿನ್ನ ದೇಶ ವನ್ನು ದಾಟಿಹೋಗುತ್ತೇನೆ. ನಾನು ರಾಜ ಮಾರ್ಗ ದಿಂದಲೇ ಹೋಗುತ್ತೇನೆ; ಎಡಕ್ಕೂ ಬಲಕ್ಕೂ ತಿರುಗು ವದಿಲ್ಲ.
28 ನೀನು ಹಣಕ್ಕೋಸ್ಕರ ನನಗೆ ಮಾರುವ ಆಹಾರವನ್ನು ಉಣ್ಣುತ್ತೇನೆ; ಹಣಕ್ಕೋಸ್ಕರ ನನಗೆ ಕೊಡುವ ನೀರನ್ನು ಕುಡಿಯುತ್ತೇನೆ;
29 ಕಾಲ್ನಡಿಗೆಯಾಗಿ ಹಾದು ಹೋಗುತ್ತೇನಷ್ಟೆ. ಸೇಯಾರಿನಲ್ಲಿ ವಾಸ ಮಾಡುವ ಏಸಾವನ ಮಕ್ಕಳೂ ಆರ್ನಲ್ಲಿ ವಾಸ ಮಾಡುವ ಮೋವಾಬ್ಯರೂ ನನಗೆ ಮಾಡಿದ ಹಾಗೆ ನಾನು ಯೊರ್ದನಿನ ಆಚೆಗೆ ನಮ್ಮ ದೇವರಾದ ಕರ್ತನು ನಮಗೆ ಕೊಡುವ ದೇಶಕ್ಕೆ ಹೋಗುವ ವರೆಗೆ ನನಗೆ ಮಾಡು ಅಂದೆನು.
30 ಆದರೆ ಹೆಷ್ಬೋನಿನ ಅರಸ ನಾದ ಸೀಹೋನನು ನಮ್ಮನ್ನು ತನ್ನ ಬಳಿಯಿಂದ ದಾಟಿಹೋಗಲು ಮನಸ್ಸು ಮಾಡಲಿಲ್ಲ; ಯಾಕಂದರೆ ಅವನನ್ನು ನಿನ್ನ ಕೈಯಲ್ಲಿ ಒಪ್ಪಿಸುವ ಹಾಗೆ ನಿನ್ನ ದೇವರಾದ ಕರ್ತನು ಅವನ ಬುದ್ಧಿಯನ್ನು ಮಂಕು ಮಾಡಿ ಹೃದಯವನ್ನು ಕಠಿಣಪಡಿಸಿದನೆಂದು ಈಗಾ ಗಲೇ ಪ್ರಸಿದ್ಧವಾಗಿದೆ.
31 ಇದಲ್ಲದೆ ಕರ್ತನು ನನಗೆ--ಇಗೋ, ಸೀಹೋ ನನನ್ನೂ ಅವನ ದೇಶವನ್ನೂ ನಿನ್ನ ಮುಂದೆ ಒಪ್ಪಿಸು ವದಕ್ಕೆ ಆರಂಭಮಾಡಿದ್ದೇನೆ; ಅವನ ದೇಶವನ್ನು ಸ್ವಾಸ್ತ್ಯವಾಗಿ ಹೊಂದುವ ಹಾಗೆ ಸ್ವತಂತ್ರಿಸಿಕೊಳ್ಳುವದಕ್ಕೆ ಆರಂಭಮಾಡು ಅಂದನು.
32 ಆಗ ಸೀಹೋನನು ತನ್ನ ಜನರೆಲ್ಲರ ಸಂಗಡ ಯುದ್ಧಮಾಡುವದಕ್ಕೆ ಯಹ ಜಿಗೆ ಸವಿಾಪದಲ್ಲಿ ನಮ್ಮೆದುರಿಗೆ ಹೊರಟನು.
33 ನಮ್ಮ ದೇವರಾದ ಕರ್ತನು ಅವನನ್ನು ನಮ್ಮ ಕೈಗೆ ಕೊಟ್ಟುಬಿಟ್ಟಿ ದ್ದರಿಂದ ಅವನನ್ನೂ ಅವನ ಮಕ್ಕಳನ್ನೂ ಅವನ ಜನರೆಲ್ಲರನ್ನೂ ಹೊಡೆದೆವು;
34 ಆ ಕಾಲದಲ್ಲಿ ಅವನ ಪಟ್ಟಣಗಳನ್ನೆಲ್ಲಾ ತಕ್ಕೊಂಡು ಪ್ರತಿಯೊಂದು ಪಟ್ಟಣದ ಗಂಡಸರನ್ನೂ ಹೆಂಗಸರನ್ನೂ ಚಿಕ್ಕವರನ್ನೂ ನಿರ್ಮೂಲ ಮಾಡಿದೆವು, ಒಬ್ಬರನ್ನೂ ಉಳಿಸಲಿಲ್ಲ.
35 ಪಶುಗಳನ್ನು ಮಾತ್ರ ನಮಗೆ ಸುಲುಕೊಂಡು ಪಟ್ಟಣಗಳನ್ನು ಕೊಳ್ಳೆ ಹೊಡೆದೆವು.
36 ಅರ್ನೋನಿನ ತೀರದಲ್ಲಿರುವ ಅರೋ ಯೇರ್ ಮತ್ತು ಆ ಹಳ್ಳದ ಪಟ್ಟಣವು ಮೊದಲ್ಗೊಂಡು ಗಿಲ್ಯಾದಿನ ವರೆಗೂ ಒಂದು ಪಟ್ಟಣವಾದರೂ ನಮಗೆ ಅಸಾಧ್ಯವಾಗಿರಲಿಲ್ಲ; ನಮ್ಮ ದೇವರಾದ ಕರ್ತನು ಅವುಗಳನ್ನೆಲ್ಲಾ ನಮ್ಮ ಕೈಗೆ ಒಪ್ಪಿಸಿದನು.
37 ಅಮ್ಮೋನಿಯರ ಮಕ್ಕಳ ದೇಶಕ್ಕೂ ಯಬ್ಬೋಕ್ ನದಿಯ ಯಾವ ದೊಂದು ಸ್ಥಳಕ್ಕೂ ಪರ್ವತ ಪಟ್ಟಣಗಳಿಗೂ ನಮ್ಮ ದೇವರಾದ ಕರ್ತನು ನಮಗೆ ಬೇಡವೆಂದ ಯಾವ ಸ್ಥಳಕ್ಕೂ ನೀನು ಮಾತ್ರ ಬರಲಿಲ್ಲ.
×

Alert

×