1
|
ದೇವರ ಚಿತ್ತಾನುಸಾರವಾಗಿ ಯೇಸು ಕ್ರಿಸ್ತನ ಅಪೊಸ್ತಲನಾದ ಪೌಲನೂ ನಮ್ಮ ಸಹೋದರನಾದ ತಿಮೊಥೆಯನೂ |
2
|
ಕೊಲೊಸ್ಸೆಯಲ್ಲಿ ಕ್ರಿಸ್ತನಲ್ಲಿರುವ ಪರಿಶುದ್ಧರಿಗೆ ಮತ್ತು ನಂಬಿಗಸ್ತರಾದ ಸಹೋದರರಿಗೆ--ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. |
3
|
ನಾವು ಪ್ರಾರ್ಥನೆ ಮಾಡುವಾಗೆಲ್ಲಾ ನಿಮ್ಮ ನಿಮಿತ್ತ ವಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರಿಗೂ ತಂದೆಗೂ ಸ್ತೋತ್ರ ಮಾಡುತ್ತೇವೆ. |
4
|
ಕ್ರಿಸ್ತ ಯೇಸುವಿನಲ್ಲಿ ನೀವು ಇಟ್ಟ ನಂಬಿಕೆಯ ವಿಷಯವಾಗಿಯೂ ಪರಿಶುದ್ಧ ರೆಲ್ಲರ ಮೇಲಿರುವ ನಿಮ್ಮ ಪ್ರೀತಿಯ ವಿಷಯವಾಗಿಯೂ ನಾವು ಕೇಳಿದ್ದೇವೆ; |
5
|
ಪರಲೋಕದಲ್ಲಿ ನಿಮಗೋಸ್ಕರ ಇಡಲ್ಪಟ್ಟಿರುವ ನಿರೀಕ್ಷೆಯನ್ನು ಕುರಿತು ಸುವಾರ್ತೆಯೆಂಬ ಸತ್ಯವಾಕ್ಯದಿಂದ ನೀವು ಮೊದಲೇ ಕೇಳಿದಿರಿ. |
6
|
ನೀವು ಸತ್ಯದಲ್ಲಿ ದೇವರ ಕೃಪೆಯನ್ನು ಕೇಳಿ ತಿಳುಕೊಂಡ ದಿವಸದಿಂದ ನಿಮ್ಮ ಬಳಿಗೆ ಬಂದ ಆ ಸುವಾರ್ತೆಯು ಲೋಕದಲ್ಲೆಲ್ಲಾ ಫಲಕೊಟ್ಟಂತೆ ನಿಮ್ಮಲ್ಲಿಯೂ ಫಲ ಕೊಡುತ್ತದೆ. |
7
|
ಇದನ್ನು ನೀವು ನಮ್ಮ ಪ್ರಿಯ ಜೊತೆಯ ದಾಸನಾದ ಎಪಫ್ರನಿಂದ ಕಲಿತುಕೊಂಡಿರಿ; ಅವನು ನಿಮಗೋಸ್ಕರ ಕ್ರಿಸ್ತನ ನಂಬಿಗಸ್ತನಾದ ಸೇವಕನು. |
8
|
ಆತ್ಮನಲ್ಲಿರುವ ನಿಮ್ಮ ಪ್ರೀತಿಯ ವಿಷಯದಲ್ಲಿ ನನಗೆ ತಿಳಿಸಿದವನೂ ಅವನೇ. |
9
|
ಆದಕಾರಣ ನಾವು ಸಹ ಅದನ್ನು ಕೇಳಿದ ದಿವಸ ದಿಂದ ನಿಮಗೋಸ್ಕರ ಪ್ರಾರ್ಥಿಸುವದನ್ನು ಬಿಡದೆ ನೀವು ಸಕಲಜ್ಞಾನವನ್ನೂ ಆತ್ಮೀಯ ಗ್ರಹಿಕೆಯನ್ನೂ ಹೊಂದಿ ಆತನ ಚಿತ್ತದ ವಿಷಯವಾದ ತಿಳುವಳಿಕೆ ಯಿಂದ ತುಂಬಿಕೊಂಡು |
10
|
ಕರ್ತನಿಗೆ ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿ ಸುವವರಾಗಿರಬೇಕೆಂತಲೂ ನೀವು ಸಕಲ ಸತ್ಕಾರ್ಯ ವೆಂಬ ಫಲವನ್ನು ಕೊಡುತ್ತಾ ದೇವರ ಜ್ಞಾನದಲ್ಲಿ ಅಭಿವೃದ್ಧಿಯಾಗುತ್ತಿರಬೇಕೆಂತಲೂ |
11
|
ಆತನ ಮಹಿಮಾ ಶಕ್ತಿಯ ಪ್ರಕಾರ ಪರಿಪೂರ್ಣ ಬಲಹೊಂದಿ ಬಲಿಷರಾಗಿ ಆನಂದ ಪೂರ್ವಕವಾದ ತಾಳ್ಮೆಯನ್ನು ಮತ್ತು ದೀರ್ಘಶಾಂತಿಯನ್ನು ತೋರಿಸುವವರೂ |
12
|
ಬೆಳಕಿ ನಲ್ಲಿರುವ ಪರಿಶುದ್ದರ ಬಾಧ್ಯತೆಯಲ್ಲಿ ಪಾಲುಗಾರ ರಾಗುವದಕ್ಕೆ ನಮ್ಮನ್ನು ಯೋಗ್ಯರನ್ನಾಗಿ ಮಾಡಿದ ತಂದೆಗೆ ಕೃತಜ್ಞತಾಸ್ತುತಿ ಮಾಡುವವರಾಗಿರಬೇಕೆಂತಲೂ ನಾನು ಆಶಿಸುತ್ತೇನೆ. |
13
|
ಆತನು (ದೇವರು) ನಮ್ಮನ್ನು ಅಂಧಕಾರದ ಶಕ್ತಿಯಿಂದ ಬಿಡಿಸಿ ತನ್ನ ಪ್ರಿಯಕುಮಾರನ ರಾಜ್ಯ ದೊಳಗೆ ಸೇರಿಸಿದನು. |
14
|
ಆತನಲ್ಲಿ (ಆ ಕುಮಾರನಲ್ಲಿ) ಆತನ ರಕ್ತದ ಮೂಲಕ ನಮಗೆ ವಿಮೋಚನೆಯು ಅಂದರೆ ಪಾಪಪರಿಹಾರವು ಉಂಟಾಯಿತು. |
15
|
ಆತನು ಅದೃಶ್ಯನಾದ ದೇವರ ಪ್ರತಿರೂಪನೂ ಪ್ರತಿಯೊಂದು ಸೃಷ್ಟಿಗೆ ಜ್ಯೇಷ್ಠನೂ ಆಗಿದ್ದಾನೆ. |
16
|
ಭೂಪರಲೋಕ ಗಳಲ್ಲಿರುವ ದೃಶ್ಯಾದೃಶ್ಯವಾದವುಗಳೆಲ್ಲವೂ ಸಿಂಹಾಸನ ಗಳಾಗಲಿ ಇಲ್ಲವೆ ಪ್ರಭುತ್ವಗಳಾಗಲಿ ಇಲ್ಲವೆ ದೊರೆ ತನಗಳಾಗಲಿ ಇಲ್ಲವೆ ಅಧಿಕಾರಗಳಾಗಲಿ ಆತನಲ್ಲಿ ಸೃಷ್ಟಿಸಲ್ಪಟ್ಟವು. ಸರ್ವವು ಆತನಿಂದಲೂ ಆತನಿ ಗೋಸ್ಕರವಾಗಿಯೂ ಸೃಷ್ಟಿಸಲ್ಪಟ್ಟಿತು. |
17
|
ಆತನು ಎಲ್ಲದಕ್ಕೂ ಮೊದಲು ಇದ್ದಾತನು; ಆತನು ಸಮಸ್ತಕ್ಕೂ ಆಧಾರನಾಗಿದ್ದಾನೆ. |
18
|
ಸಭೆಯೆಂಬ ದೇಹಕ್ಕೆ ಆತನು ಶಿರಸ್ಸಾಗಿದ್ದಾನೆ. ಆತನೇ ಆದಿಯಾಗಿದ್ದು ಎಲ್ಲಾದರಲ್ಲಿ ಪ್ರಮುಖನಾಗಿರುವಂತೆ ಆತನು ಸತ್ತವರೊಳಗಿಂದ ಬಂದ ಜ್ಯೇಷ್ಠನೂ ಆಗಿದ್ದಾನೆ. |
19
|
ಆತನಲ್ಲಿ ಸರ್ವ ಸಂಪೂರ್ಣತೆಯು ವಾಸವಾಗಿರುವದು ತಂದೆಗೆ ಇಷ್ಟ ವಾಗಿತ್ತು. |
20
|
ಆತನ ಶಿಲುಬೆಯ ರಕ್ತದಿಂದ ತಾನು ಸಮಾಧಾನವನ್ನು ಉಂಟುಮಾಡಿ ಆತನಿಂದ ಭೂಪರ ಲೋಕಗಳಲ್ಲಿರುವ ಎಲ್ಲವುಗಳನ್ನು ಆತನ ಮೂಲಕ ತನಗೆ ಸಂಧಾನಪಡಿಸಿಕೊಂಡನು. |
21
|
ಇದಲ್ಲದೆ ನೀವು ಹಿಂದಿನ ಕಾಲದಲ್ಲಿ ಅನ್ಯರೂ ದುಷ್ಕೃತ್ಯಗಳಿಂದ ದ್ವೇಷ ಮನಸ್ಸುಳ್ಳವರೂ ಆಗಿದ್ದಿರಿ. ಆದಾಗ್ಯೂ ಈಗ ಆತನು ನಿಮ್ಮನ್ನು ಸಂಧಾನಪಡಿಸಿ ಕೊಂಡಿದ್ದಾನೆ. |
22
|
ತನ್ನ ಸ್ಥೂಲ ದೇಹದಲ್ಲಿ ಉಂಟಾದ ಮರಣದ ಮೂಲಕ ನಿಮ್ಮನ್ನು ಪರಿಶುದ್ಧರನ್ನಾಗಿಯೂ ನಿರ್ದೋಷಿಗಳನ್ನಾಗಿಯೂ ನಿರಪರಾಧಿಗಳನ್ನಾಗಿಯೂ ತನ್ನ ಸನ್ನಿಧಿಯಲ್ಲಿ ನಿಲ್ಲಿಸಬೇಕೆಂದಿದ್ದಾನೆ. |
23
|
ಪೌಲನೆಂಬ ನಾನು ಈ ಸುವಾರ್ತೆಗೆ ಸೇವಕನಾದೆನು; ನೀವು ಕೇಳಿದಂಥ ಮತ್ತು ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲ್ಪಟ್ಟಂಥ ಸುವಾರ್ತೆಯಿಂದ ಉಂಟಾದ ನಿರೀಕ್ಷೆ ಯನ್ನು ಬಿಟ್ಟು ತೊಲಗಿಹೋಗದೆ ಅಸ್ತಿವಾರದ ಮೇಲೆ ನಿಂತು ಸ್ಥಿರವಾಗಿದ್ದು ನಂಬಿಕೆಯಲ್ಲಿ ನೆಲೆಗೊಂಡಿರು ವದಾದರೆ |
24
|
ನಾನು ಈಗ ನಿಮಗೋಸ್ಕರ ಅನುಭವಿ ಸುತ್ತಿರುವ ಬಾಧೆಗಳಲ್ಲಿ ಸಂತೋಷಪಟ್ಟು ಕ್ರಿಸ್ತನ ಸಂಕಟ ಗಳೊಳಗೆ ಇನ್ನೂ ಉಳಿದದ್ದನ್ನು ಸಭೆಯೆಂಬ ಆತನ ದೇಹಕ್ಕೋಸ್ಕರ ನನ್ನ ಶರೀರದಲ್ಲಿ ಅನುಭವಿಸಿ ತೀರಿಸು ತ್ತೇನೆ. |
25
|
ಅದಕ್ಕೆ ನಿಮಗೋಸ್ಕರ ನನಗೆ ಕೊಡಲ್ಪಟ್ಟ ದೇವರ ಯುಗಕ್ಕನುಸಾರ ದೇವರ ವಾಕ್ಯವನ್ನು ಪೂರೈಸು ವದಕ್ಕೆ ನಾನು ಸೇವಕನಾದೆನು. |
26
|
ಆ ವಾಕ್ಯವು ಹಿಂದಿನ ಯುಗಗಳಿಂದಲೂ ತಲಾತಲಾಂತರಗಳಿಂದಲೂ ಮರೆ ಯಾಗಿತ್ತು; ಅದು ಈಗಿನ ಕಾಲದಲ್ಲಿ ಆತನ ಪರಿಶುದ್ಧರಿಗೆ ತಿಳಿಸಲ್ಪಟ್ಟಿದೆ; |
27
|
ಅನ್ಯಜನಗಳಲ್ಲಿ ಈ ಮರ್ಮದ ಮಹಿಮಾತಿಶಯವು ಎಷ್ಟೆಂಬದನ್ನು ದೇವರು ತನ್ನ ಜನರಿಗೆ (ಪರಿಶುದ್ಧರಿಗೆ) ತಿಳಿಸುವದಕ್ಕೆ ಮನಸ್ಸು ಮಾಡಿ ಕೊಂಡನು. ಈ ಮರ್ಮವು ಏನೆಂದರೆ ನಿಮ್ಮಲ್ಲಿರುವ ಕ್ರಿಸ್ತನು ಮಹಿಮೆಯ ನಿರೀಕ್ಷೆಯಾಗಿದ್ದಾನೆ ಎಂಬದೇ. |
28
|
ಕ್ರಿಸ್ತ ಯೇಸುವಿನಲ್ಲಿ ಪ್ರತಿಯೊಬ್ಬನನ್ನು ಪರಿಪೂರ್ಣ ನನ್ನಾಗಿ ಮಾಡುವಂತೆ ಪ್ರತಿಯೊಬ್ಬನನ್ನು ಎಚ್ಚರಿಸುತ್ತಾ ಎಲ್ಲಾ ಜ್ಞಾನದಲ್ಲಿ ಪ್ರತಿಯೊಬ್ಬನಿಗೂ ಬೋಧಿಸುತ್ತಾ ನಾವು ಆತನನ್ನು ಸಾರುವವರಾಗಿದ್ದೇವೆ. |
29
|
ನನ್ನಲ್ಲಿ ಬಲದಿಂದ ಕಾರ್ಯ ಮಾಡುವಾತನ ಕೆಲಸಕ್ಕನು ಸಾರವಾಗಿ ನಾನು ಸಹ ಅದಕ್ಕಾಗಿ ಪ್ರಯಾಸಪಡುತ್ತಾ ಹೋರಾಡುತ್ತೇನೆ. |
Colossians 1:21 Kannada Language Bible Words basic statistical display
COMING SOON ...