ಆದರೆ ಸೌಲನ ಮಗ ನಿಗೆ ಪಟಾಲಮಿನ ಅಧಿಪತಿಗಳಾದ ಇಬ್ಬರು ಮನುಷ್ಯ ರಿದ್ದರು; ಒಬ್ಬನ ಹೆಸರು ಬಾಣ ಮತ್ತೊಬ್ಬನ ಹೆಸರು ರೇಕಾಬ್; ಅವರು ಬೆನ್ಯಾವಿಾನನ ಮಕ್ಕಳಲ್ಲಿ ಬೇರೋತಿ ನವನಾದ ರಿಮ್ಮೋನನ ಮಕ್ಕಳು.
ಆದರೆ ಸೌಲನ ಮಗನಾದ ಯೋನಾತಾನನಿಗೆ ಕಾಲು ಕುಂಟಾದ ಒಬ್ಬ ಮಗನಿದ್ದನು. ಇಜ್ರೇಲಿನಿಂದ ಸೌಲನೂ ಯೋನಾತಾನನೂ ಸತ್ತರೆಂಬ ವರ್ತಮಾನ ಬಂದಾಗ ಅವನು ಐದು ವರುಷದವನಾಗಿದ್ದನು. ಆಗ ಅವನ ದಾದಿಯು ಅವನನ್ನು ಎತ್ತಿಕೊಂಡು ಓಡಿ ಹೋದಳು. ಅವಳು ತ್ವರೆಯಾಗಿ ಓಡಿದಾಗ ಏನಾಯಿ ತಂದರೆ, ಅವನು ಬಿದ್ದು ಕುಂಟನಾದನು. ಅವನ ಹೆಸರು ಮೆಫೀಬೋಶೆತನು.
ಅವರು ಮನೆಯೊಳಗೆ ಪ್ರವೇಶಿಸಿದಾಗ ಅವನು ಮಲಗುವ ಮನೆಯಲ್ಲಿ ತನ್ನ ಹಾಸಿಗೆಯ ಮೇಲೆ ಮಲಗಿದ್ದನು; ಇವರು ಅವನನ್ನು ಹೊಡೆದು ಕೊಂದುಹಾಕಿ ತಲೆಯನ್ನು ಕಡಿದು ಅದನ್ನು ತೆಗೆದುಕೊಂಡು ರಾತ್ರಿಯೆಲ್ಲಾ ಬೈಲಿನಲ್ಲಿ ನಡೆದು
ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಈಷ್ಬೋ ಶೆತನ ತಲೆಯನ್ನು ತಂದು ಅರಸನಿಗೆ--ಇಗೋ, ನಿನ್ನ ಪ್ರಾಣವನ್ನು ಹುಡುಕಿದ ನಿನ್ನ ಶತ್ರುವಾಗಿದ್ದ ಸೌಲನ ಮಗನಾದ ಈಷ್ಬೋಶೆತನ ತಲೆಯು. ಈ ದಿನದಲ್ಲಿ ಕರ್ತನು ಅರಸನಾದ ನಮ್ಮ ಒಡೆಯನಿಗೋಸ್ಕರ ಸೌಲ ನಿಗೂ ಅವನ ಸಂತಾನಕ್ಕೂ ಮುಯ್ಯಿತೀರಿಸಿದ್ದಾನೆ ಅಂದರು.
ಆಗ ದಾವೀದನು ಬೇರೋತಿನ ಮಗನಾ ಗಿರುವ ರಿಮ್ಮೋನನ ಮಕ್ಕಳಾದ ರೇಕಾಬಿಗೂ ಅವನ ಸಹೋದರನಾದ ಬಾಣನಿಗೂ ಪ್ರತ್ಯುತ್ತರವಾಗಿ--ಎಲ್ಲಾ ಇಕ್ಕಟ್ಟಿನಿಂದ ನನ್ನ ಪ್ರಾಣವನ್ನು ವಿಮೋಚಿಸಿದ ಕರ್ತನ ಜೀವದಾಣೆ, ತನ್ನ ಕಣ್ಣಿಗೆ ಸುವರ್ತಮಾನವನ್ನು ತಂದವನು ಎಂದು ಕಾಣಿಸಿಕೊಂಡವನಾಗಿ ನಾನು ತನ್ನ ವರ್ತಮಾನಕ್ಕೋಸ್ಕರ ಬಹುಮಾನವನ್ನು ಕೊಡು ವೆನೆಂದು ನೆನಸಿ
ತನ್ನ ಮನೆಯಲ್ಲಿ ತನ್ನ ಹಾಸಿಗೆಯ ಮೇಲೆ ಮಲಗಿದ್ದ ನೀತಿವಂತನನ್ನು ಕೊಲೆಮಾಡಿದ ದುಷ್ಟ ಮನುಷ್ಯರನ್ನು ಎಷ್ಟೋ ಹೆಚ್ಚಾಗಿ ಕೊಲೆಮಾಡುವೆನು. ಹಾಗಾದರೆ ಈಗ ನಾನು ನಿಮ್ಮ ಕೈಯಿಂದ ಅವನ ರಕ್ತ ವಿಚಾ ರಣೆ ಮಾಡಿ ನಿಮ್ಮನ್ನು ಭೂಮಿಯಿಂದ ತೆಗೆದುಬಿಡದೆ ಇರುವೆನೋ ಅಂದನು.
ದಾವೀದನು ತನ್ನ ಯೌವ ನಸ್ಥರಿಗೆ ಆಜ್ಞಾಪಿಸಿದ್ದರಿಂದ ಅವರು ಅವರನ್ನು ಕೊಂದು ಹಾಕಿ, ಅವರ ಕೈಕಾಲುಗಳನ್ನು ಕಡಿದು ಹೆಬ್ರೋ ನಿನಲ್ಲಿರುವ ಕೊಳದ ಬಳಿಯಲ್ಲಿ ತೂಗುಹಾಕಿದರು. ಅವರು ಈಷ್ಬೋಶೆತನ ತಲೆಯನ್ನು ತಕ್ಕೊಂಡು ಅದನ್ನು ಹೆಬ್ರೋನಿನಲ್ಲಿರುವ ಅಬ್ನೇರನ ಸಮಾಧಿಯಲ್ಲಿ ಹೂಣಿಟ್ಟರು.