ಎಲೀಷನು ತಾನು ಬದುಕಿಸಿದ ಮಗನ ತಾಯಿಯಾದವಳಿಗೆ -- ನೀನು ಎದ್ದು ನೀನೂ ನಿನ್ನ ಮನೆಯವರೂ ಎಲ್ಲಿ ಇಳುಕೊಳ್ಳುವದಕ್ಕೆ ಸ್ಥಳ ಉಂಟೋ ಅಲ್ಲಿ ಹೋಗಿ ಇಳುಕೊಂಡಿರು. ಯಾಕಂದರೆ ಕರ್ತನು ಬರವನ್ನು ಕಳುಹಿಸುವದಕ್ಕಿದ್ದಾನೆ. ಅದು ದೇಶದ ಮೇಲೆ ಏಳು ವರುಷದ ವರೆಗೂ ಇರುವದು ಎಂದು ಹೇಳಿದನು.
ಅರಸನು ಆ ಸ್ತ್ರೀಯನ್ನು ಕೇಳಿದಾಗ ಅವಳು ವಿವರವಾಗಿ ಹೇಳಿದಳು. ಆಗ ಅರಸನು ಅವಳಿಗಾಗಿ ಒಬ್ಬ ಅಧಿಕಾರಿಯನ್ನು ಕಳುಹಿಸಿಕೊಟ್ಟು ಅವಳಿಗೆ ಉಂಟಾದದ್ದನ್ನೆಲ್ಲಾ ಅವಳು ದೇಶವನ್ನು ಬಿಟ್ಟ ದಿನ ಮೊದಲುಗೊಂಡು ಆ ಕಾಲದ ವರೆಗೂ ಆ ಹೊಲದ ಹುಟ್ಟುವಳಿಯೆಲ್ಲಾ ಅವಳಿಗೆ ಬರುವ ಹಾಗೆ ಮಾಡು ಅಂದನು.
ಆಗ ಅರಸನು ಹಜಾಯೇಲನಿಗೆ--ನೀನು ಕೈಯಲ್ಲಿ ಕಾಣಿಕೆಯನ್ನು ತಕ್ಕೊಂಡು ಹೋಗಿ ದೇವರ ಮನುಷ್ಯನನ್ನು ಎದುರುಗೊಂಡು ಈ ವ್ಯಾಧಿಯಿಂದ ನಾನು ಗುಣವಾಗುವೆನೋ ಇಲ್ಲವೋ ಎಂದು ಅವ ನಿಂದ ಕರ್ತನನ್ನು ವಿಚಾರಿಸು ಅಂದನು.
ಹಾಗೆಯೇ ಹಜಾಯೇಲನು ದಮಸ್ಕದಲ್ಲಿರುವ ಸಕಲ ಉತ್ತಮ ವಾದವುಗಳಲ್ಲಿ ನಾಲ್ವತ್ತು ಒಂಟೆಗಳು ಹೊರುವಷ್ಟನ್ನು ಕಾಣಿಕೆಯೊಂದಿಗೆ ಅವನನ್ನು ಎದುರುಗೊಳ್ಳಲು ಹೋಗಿ ಅವನ ಮುಂದೆ ಬಂದು ನಿಂತು--ಅರಾಮ್ಯರ ಅರಸನಾಗಿರುವ ನಿನ್ನ ಮಗನಾದ ಬೆನ್ಹದದನು--ಈ ವ್ಯಾಧಿಯಿಂದ ನಾನು ಬದುಕುವೆನೋ ಇಲ್ಲವೋ ಎಂದು ಕೇಳಲು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ ಅಂದನು.
ಆಗ ಹಜಾಯೇ ಲನು--ನನ್ನ ಒಡೆಯನು ಅಳುವದೇನು ಅಂದನು.ಅದಕ್ಕವನು -- ಇಸ್ರಾಯೇಲ್ ಮಕ್ಕಳಿಗೆ ನೀನು ಮಾಡಲು ಹೋಗುವ ಕೇಡು ನನಗೆ ತಿಳಿದದೆ; ನೀನು ಅವರ ಕೋಟೆಗಳಿಗೆ ಬೆಂಕಿ ಹೊತ್ತಿಸಿ ಅವರ ಯೌವನ ಸ್ಥರನ್ನು ಕತ್ತಿಯಿಂದ ಕೊಂದು ಅವರ ಕೂಸುಗಳನ್ನು ಅಪ್ಪಳಿಸಿ ಅವರ ಗರ್ಭಿಣೀ ಸ್ತ್ರೀಯರನ್ನು ಸೀಳಿಬಿಡುವಿ ಅಂದನು.
ಅವನು ಎಲೀಷನನ್ನು ಬಿಟ್ಟು ಹೊರಟು ತನ್ನ ಯಜಮಾನನ ಬಳಿಗೆ ಬಂದನು. ಇವನು ಅವನಿಗೆ--ಎಲೀಷನು ನಿನಗೆ ಏನು ಹೇಳಿದ ನೆಂದು ಕೇಳಿದ್ದಕ್ಕೆ ಅವನು--ನೀನು ನಿಜವಾಗಿ ಸ್ವಸ್ಥನಾ ಗುವಿ ಎಂದು ನನಗೆ ಹೇಳಿದನು ಅಂದನು. ಮಾರನೇ ದಿವಸದಲ್ಲಿ ಏನಾಯಿತಂದರೆ,
ಕರ್ತನು ದಾವೀದನಿಗೂ ಅವನ ಮಕ್ಕಳಿಗೂ ನಿರಂತರವಾಗಿ ದೀಪವನ್ನು ಕೊಡುವೆನೆಂದು ಅವನಿಗೆ ವಾಗ್ದಾನ ಮಾಡಿದ ಹಾಗೆ ತನ್ನ ಸೇವಕನಾದ ದಾವೀದನ ನಿಮಿತ್ತ ಯೆಹೂದವನ್ನು ಕೆಡಿಸಲು ಮನಸ್ಸಿಲ್ಲದೆ ಇದ್ದನು.
ಆದದರಿಂದ ಯೆಹೋ ರಾಮನು ತನ್ನ ಬಳಿಯಲ್ಲಿದ್ದ ಎಲ್ಲಾ ರಥಗಳನ್ನು ತಕ್ಕೊಂಡು ಚಾಯಾರಿಗೆ ಹೋಗಿ ರಾತ್ರಿಯಲ್ಲಿ ಎದ್ದು ತನ್ನನ್ನು ಸುತ್ತಿಕೊಂಡಿದ್ದ ಎದೋಮ್ಯರನ್ನೂ ರಥಗಳ ಯಜಮಾನರನ್ನೂ ಸಂಹರಿಸಿದನು.
ಅರಸನಾದ ಯೋರಾಮನು ಅರಾಮ್ಯರ ದೇಶದ ಅರಸನಾದ ಹಜಾಯೇಲನ ಮೇಲೆ ಯುದ್ಧಮಾಡಿದಾಗ ರಾಮೋ ತಿನಲ್ಲಿ ಅರಾಮ್ಯರು ತನ್ನನ್ನು ಹೊಡೆದ ಗಾಯಗಳನ್ನು ಗುಣಮಾಡಿಕೊಳ್ಳುವದಕ್ಕೆ ಇಜ್ರೇಲಿಗೆ ತಿರುಗಿ ಹೋದನು. ಆಗ ಅಹಾಬನ ಮಗನಾದ ಯೋರಾ ಮನು ಇಜ್ರೇಲಿನಲ್ಲಿ ಅಸ್ವಸ್ಥನಾಗಿರುವದರಿಂದ ಯೆಹೂದದ ಅರಸನಾಗಿರುವ ಯೆಹೋರಾಮನ ಮಗನಾದ ಅಹಜ್ಯನು ಅವನನ್ನು ನೋಡಲು ಅಲ್ಲಿಗೆ ಹೋದನು.