ಅವನ ಆಳಿಕೆಯ ಒಂಭತ್ತನೇ ವರುಷದ ಹತ್ತನೇ ತಿಂಗಳಿನ ಹತ್ತನೇ ದಿವಸದಲ್ಲಿ ಏನಾಯಿತಂದರೆ, ಬಾಬೆಲಿನ ಅರಸನಾದ ನೆಬೂಕ ದ್ನೆಚರನು ತಾನೂ ತನ್ನ ಎಲ್ಲಾ ಸೈನ್ಯವೂ ಯೆರೂಸ ಲೇಮಿನ ಮೇಲೆ ಬಂದು ಅದಕ್ಕೆ ಎದುರಾಗಿ ದಂಡಿಳಿದು ಅದರ ಸುತ್ತಲೂ ದಿಣ್ಣೆಗಳನ್ನು ಹಾಕಿದರು.
ಐದನೇ ತಿಂಗಳಿನ ಏಳನೇ ದಿವಸಕ್ಕೆ ಸರಿಯಾಗಿ ಬಾಬೆಲಿನ ಅರಸನಾದ ನೆಬೂಕದ್ನೆಚರನ ಆಳ್ವಿಕೆಯ ಹತ್ತೊಂಭತ್ತನೇ ವರುಷದಲ್ಲಿ ಬಾಬೆಲಿನ ಅರಸನ ಸೇವಕ ನಾದ ಕಾವಲಿನ ಅಧಿಪತಿಯಾದ ನೆಬೂಜರದಾನನು ಯೆರೂಸಲೇಮಿಗೆ ಬಂದು,
ಇದಲ್ಲದೆ ಕರ್ತನ ಮನೆಯಲ್ಲಿದ್ದ ಹಿತ್ತಾಳೆ ಸ್ತಂಭಗಳನ್ನೂ ಆಧಾರಗಳನ್ನೂ ಕರ್ತನ ಮನೆಯಲ್ಲಿದ್ದ ಹಿತ್ತಾಳೆ ಸಮುದ್ರವೆಂಬ ಪಾತ್ರೆ ಯನ್ನೂ ಕಸ್ದೀಯರು ಒಡೆದು ಹಾಕಿ ಅದರ ಹಿತ್ತಾಳೆ ಯನ್ನು ಬಾಬೆಲಿಗೆ ಒಯ್ದರು.
ಒಂದು ಸ್ತಂಭವು ಹದಿನೆಂಟು ಮೊಳ ಎತ್ತರವಾಗಿತ್ತು. ಅದರ ಮೇಲಿದ್ದ ಬೋದಿಗೆ ತಾಮ್ರ ದ್ದಾಗಿ ಮೂರು ಮೊಳ ಉದ್ದವಾಗಿತ್ತು. ಬೋದಿಗೆಯ ಸುತ್ತಲಿದ್ದ ಹೆಣೆತದ ಕೆಲಸವೂ ದಾಳಿಂಬರಗಳೂ ಎಲ್ಲಾ ತಾಮ್ರವಾಗಿತ್ತು. ಎರಡನೇ ಸ್ತಂಭಕ್ಕೆ ಇದರ ಹಾಗೆಯೇ ಹೆಣೆತದ ಕೆಲಸ ಉಂಟಾಗಿತ್ತು.
ಇದಲ್ಲದೆ ಪಟ್ಟಣದೊಳಗಿಂದ ಯುದ್ಧಸ್ಥರ ಮೇಲಿದ್ದ ಒಬ್ಬ ಅಧಿ ಕಾರಿಯನ್ನೂ ಪಟ್ಟಣದಲ್ಲಿ ಸಿಕ್ಕಿದ ಅರಸನ ಸಮ್ಮುಖ ದಲ್ಲಿದ್ದ ಐದು ಮಂದಿಯನ್ನೂ ದೇಶದ ಜನರನ್ನೂ ಸೈನ್ಯದ ತರಬೇತು ಮಾಡಿದ ಪ್ರಧಾನನ ಲೇಖಕನೂ ಪಟ್ಟಣದಲ್ಲಿ ಸಿಕ್ಕಿದ ದೇಶದ ಜನರಾದ ಅರವತ್ತು ಮಂದಿಯನ್ನೂ ಅವನು ಹಿಡಿದನು.
ಆದರೆ ಬಾಬೆಲಿನ ಅರಸನು ಗೆದಲ್ಯನನ್ನು ಅಧಿಪತಿ ಯಾಗಿ ಮಾಡಿದ್ದಾನೆಂದು ದಂಡುಗಳ ಅಧಿಪತಿಗಳೂ ಅವರ ಜನರೂ ಕೇಳಿದ ಮೇಲೆ ನೆತನ್ಯನ ಮಗನಾದ ಇಷ್ಮಾಯೇಲನೂ ಕಾರೇಹನ ಮಗನಾದ ಯೋಹಾ ನನೂ ನೆಟೋಫದವನಾದ ತನ್ಹುಮೆತನ ಮಗನಾದ ಸೆರಾಯನೂ ಮಾಕಾತ್ಯರಲ್ಲಿ ಒಬ್ಬನ ಮಗನಾದ ಯಾಜನ್ಯನೂ ಅವರ ಜನರೂ ಮಿಚ್ಪದಲ್ಲಿದ್ದ ಗೆದಲ್ಯನ ಬಳಿಗೆ ಬಂದರು.
ಆಗ ಗೆದಲ್ಯನು ಅವರಿಗೂ ಅವರ ಜನರಿಗೂ ಆಣೆಯನ್ನಿಟ್ಟು--ನೀವು ಕಸ್ದೀಯರನ್ನು ಸೇವಿಸಲು ಭಯಪಡಬೇಡಿರಿ; ದೇಶದಲ್ಲಿ ವಾಸವಾ ಗಿದ್ದು ಬಾಬೆಲಿನ ಅರಸನನ್ನು ಸೇವಿಸಿರಿ; ಆಗ ನಿಮಗೆ ಒಳ್ಳೇದಾಗಿರುವದು ಅಂದನು.
ಆದರೆ ಏಳನೇ ತಿಂಗಳಲ್ಲಿ ರಾಜ ಸಂತಾನದವನಾದ ಎಲೀಷಾಮನ ಮೊಮ್ಮಗನೂ ನೆತನ್ಯನ ಮಗನೂ ಆದ ಇಷ್ಮಾಯೇ ಲನು ಅವನ ಸಂಗಡ ಹತ್ತು ಮಂದಿ ಬಂದು ಗೆದಲ್ಯ ನನ್ನೂ ಅವನ ಸಂಗಡ ಮಿಚ್ಪದಲ್ಲಿದ್ದ ಯೆಹೂದ್ಯರನ್ನೂ ಕಸ್ದೀಯರನ್ನೂ ಹೊಡೆದು ಕೊಂದುಹಾಕಿದರು.