ಅವನು ಉನ್ನತ ಸ್ಥಳಗಳನ್ನು ತೆಗೆದುಹಾಕಿ, ವಿಗ್ರಹ ಗಳನ್ನು ಒಡೆದುಬಿಟ್ಟು, ತೋಪುಗಳನ್ನು ಕಡಿದುಹಾಕಿ, ಮೋಶೆಯು ಮಾಡಿದ ತಾಮ್ರದ ಸರ್ಪವನ್ನು ಚೂರುಚೂರು ಮಾಡಿದನು. ಆ ದಿವಸಗಳ ವರೆಗೂ ಇಸ್ರಾ ಯೇಲಿನ ಮಕ್ಕಳು ಅದಕ್ಕೆ ಧೂಪಸುಡುತ್ತಿದ್ದರು. ಅದನ್ನು ತಾಮ್ರದ ತುಂಡು ಎಂದು ಅವನು ಕರೆದನು.
ಇಸ್ರಾಯೇಲಿನ ಅರಸನಾಗಿರುವ ಏಲನ ಮಗ ನಾದ ಹೋಶೇಯನ ಆಳ್ವಿಕೆಯ ಏಳನೇ ವರುಷದಲ್ಲಿ, ಅರಸನಾಗಿರುವ ಹಿಜ್ಕೀಯನ ನಾಲ್ಕನೇ ವರುಷದಲ್ಲಿ ಏನಾಯಿತಂದರೆ, ಅಶ್ಶೂರಿನ ಅರಸನಾದ ಶಲ್ಮನೆಸೆರನು ಸಮಾರ್ಯದ ಮೇಲೆ ಬಂದು ಅದನ್ನು ಮುತ್ತಿಗೆ ಹಾಕಿದನು.
ಮೂರು ವರುಷವಾದ ತರುವಾಯ ಅವರು ಅದನ್ನು ತೆಗೆದುಕೊಂಡರು. ಇಸ್ರಾಯೇಲಿನ ಅರಸನಾಗಿರುವ ಹೋಶೇಯನ ಆಳ್ವಿಕೆಯ ಒಂಭತ್ತನೇ ವರುಷವಾದ ಹಿಜ್ಕೀಯನ ಆರನೇ ವರುಷದಲ್ಲಿ ಸಮಾ ರ್ಯವು ತೆಗೆದುಕೊಳ್ಳಲ್ಪಟ್ಟಿತು.
ಆಗ ಯೆಹೂದದ ಅರಸನಾದ ಹಿಜ್ಕೀಯನು ಲಾಕೀ ಷನ ಬಳಿಯಲ್ಲಿದ್ದ ಅಶ್ಶೂರಿನ ಅರಸನಿಗೆ--ನಾನು ಪಾಪಮಾಡಿದ್ದೇನೆ; ನನ್ನನ್ನು ಬಿಟ್ಟು ಹಿಂತಿರಿಗಿ ಹೋಗು; ನೀನು ನನ್ನ ಮೇಲೆ ಹೊರಿಸುವದನ್ನು ನಾನು ತಾಳಿಕೊಳ್ಳುತ್ತೇನೆ ಎಂದು ಹೇಳಿ ಕಳುಹಿಸಿ ದನು. ಆಗ ಅಶ್ಶೂರಿನ ಅರಸನು ಯೆಹೂದದ ಅರಸನಾದ ಹಿಜ್ಕೀಯನಿಗೆ ಮುನ್ನೂರು ತಲಾಂತು ಬೆಳ್ಳಿಯನ್ನೂ ಮೂವತ್ತು ತಲಾಂತು ಬಂಗಾರವನ್ನೂ ಕೊಡಲು ನೇಮಕ ಮಾಡಿದನು.
ನೀನು ನನಗೆ ವಿರೋಧವಾಗಿ ತಿರುಗಿ ಬೀಳು ವದಕ್ಕೆ ಯಾರಲ್ಲಿ ಭರವಸ ಇಟ್ಟಿದ್ದೀ? ಇಗೋ, ನೀನು ಮುರಿದ ಬೆತ್ತದ ಕೋಲಾದ ಐಗುಪ್ತದ ಮೇಲೆ ಭರ ವಸವಾಗಿದ್ದೀ. ಅದರ ಮೇಲೆ ಮನುಷ್ಯನು ಊರಿ ಕೊಂಡರೆ ಅದು ಅವನ ಕೈಯಲ್ಲಿ ಹೊಕ್ಕು ಚುಚ್ಚುವದು. ಐಗುಪ್ತದ ಅರಸನಾದ ಫರೋಹನು ತನ್ನಲ್ಲಿ ಭರವಸ ವಾಗಿರುವ ಎಲ್ಲರಿಗೂ ಹೀಗೆಯೇ ಇದ್ದಾನೆ.
ಆದರೆ ನೀವು ನನಗೆ--ನಮ್ಮ ದೇವರಾದ ಕರ್ತನಲ್ಲಿ ಭರವಸ ವುಳ್ಳವರಾಗಿದ್ದೇವೆಂದು ಹೇಳಿದರೆ ಹಿಜ್ಕೀಯನು ಯಾವನ ಉನ್ನತ ಸ್ಥಳಗಳನ್ನೂ ಬಲಿಪೀಠಗಳನ್ನೂ ತೆಗೆದುಹಾಕಿ--ಯೆಹೂದದವರಿಗೂ ಯೆರೂಸಲೇಮಿ ನವರಿಗೂ ನೀವು ಯೆರೂಸಲೇಮಿನಲ್ಲಿ ಈ ಬಲಿಪೀಠದ ಮುಂದೆ ಅಡ್ಡಬೀಳಬೇಕೆಂದು ಹೇಳಿದವನು ಅವನೇ ಅಲ್ಲವೋ?
ಹಾಗಾದರೆ ಈಗ ನೀನು ದಯಮಾಡಿ ಅಶ್ಶೂರಿನ ಅರಸನಾದ ನನ್ನ ಯಜಮಾನನಿಗೆ ಹೊಣೆ ಗಾರರನ್ನು ಕೊಡು; ಈಗ ನೀನು ಅವುಗಳ ಮೇಲೆ ಏರುವವರನ್ನು ಇಡಲು ನಿನಗೆ ಸಾಮರ್ಥ್ಯವಿದ್ದರೆ ಎರಡು ಸಾವಿರ ಕುದುರೆಗಳನ್ನು ಕೊಡುತ್ತೇನೆ.
ಹಾಗೆ ಇಲ್ಲದಿದ್ದರೆ ನನ್ನ ಯಜಮಾನನ ಚಿಕ್ಕ ಸೇವಕರಲ್ಲಿ ಒಬ್ಬ ಅಧಿಪತಿಯ ಮುಖವನ್ನು ಹೇಗೆ ತಿರುಗಿಸುವಿ? ಆದರೆ ನೀನು ರಥಗಳಿಗೋಸ್ಕರವೂ ರಾಹುತರಿಗೋ ಸ್ಕರವೂ ಐಗುಪ್ತದ ಮೇಲೆ ಭರವಸ ಇಟ್ಟಿದ್ದೀಯೋ?
ಆಗ ಹಿಲ್ಕೀಯನ ಮಗನಾದ ಎಲ್ಯಾಕೀಮನೂ ಶೆಬ್ನನೂ ಯೋವನೂ ರಬ್ಷಾಕೆಗೆ--ನೀನು ದಯಮಾಡಿ ಅರಾಮ್ಯ ಭಾಷೆಯಲ್ಲಿ ನಿನ್ನ ಸೇವಕರ ಸಂಗಡ ಮಾತ ನಾಡು. ಅದು ನಮಗೆ ತಿಳಿಯುತ್ತದೆ; ಗೋಡೆಯ ಮೇಲಿರುವ ಜನರು ಕೇಳುವ ಹಾಗೆ ಯೆಹೂದ್ಯರ ಭಾಷೆಯಲ್ಲಿ ನಮ್ಮ ಸಂಗಡ ಮಾತನಾಡಬೇಡ ಅಂದರು.
ಆದರೆ ರಬ್ಷಾಕೆಯು ಅವರಿಗೆ--ನನ್ನ ಯಜಮಾನನು ನಿನ್ನ ಯಜಮಾನನಿಗೂ ನಿನಗೂ ಈ ಮಾತುಗಳನ್ನು ಹೇಳಲು ನನ್ನನ್ನು ಕಳುಹಿಸಿದನೋ? ಗೋಡೆಯ ಮೇಲೆ ಕುಳಿತ ಜನರು ತಮ್ಮ ಮಲವನ್ನು ತಿಂದು ತಮ್ಮ ಮೂತ್ರವನ್ನು ನಿಮ್ಮ ಸಂಗಡ ಕುಡಿಯುವ ಹಾಗೆ ಅವರ ಬಳಿಗೆ ನನ್ನನ್ನು ಕಳುಹಿಸಲಿಲ್ಲವೋ ಎಂದು ಹೇಳಿದನು.
ನಾನು ಬಂದು ನಿಮ್ಮ ದೇಶದ ಹಾಗೆ ಧಾನ್ಯವೂ ದ್ರಾಕ್ಷಾರಸವೂ ಇರುವ ದೇಶಕ್ಕೆ, ರೊಟ್ಟಿಯೂ ದ್ರಾಕ್ಷೇ ತೋಟಗಳೂ ಇರುವ ದೇಶಕ್ಕೆ, ಎಣ್ಣೆಯನ್ನು ಕೊಡುವ ಇಪ್ಪೇ ಮರ ಗಳೂ ಜೇನೂ ಇರುವ ದೇಶಕ್ಕೆ, ನಿಮ್ಮನ್ನು ಕರಕೊಂಡು ಹೋಗುವ ವರೆಗೂ ನಿಮ್ಮಲ್ಲಿ ಪ್ರತಿ ಮನುಷ್ಯನು ತನ್ನ ತನ್ನ ದ್ರಾಕ್ಷೇ ಫಲವನ್ನೂ ಅಂಜೂರದ ಫಲವನ್ನೂ ತಿಂದು ತನ್ನ ತನ್ನ ಬಾವಿಯ ನೀರನ್ನು ಕುಡಿಯಲಿ. ಆದರೆ--ಕರ್ತನು ನಮ್ಮನ್ನು ತಪ್ಪಿಸುವನೆಂದು ಹಿಜ್ಕೀ ಯನು ನಿಮ್ಮನ್ನು ಪ್ರೇರೇಪಿಸುವಾಗ ಅವನ ಮಾತು ಕೇಳಬೇಡಿರಿ.
ಹಮಾತ್ ಅರ್ಫಾದು ಗಳ ದೇವರುಗಳು ಎಲ್ಲಿ? ಸೆಫರ್ವಯಿಮ್, ಹೇನ. ಇವ್ವಾಗಳ ದೇವರುಗಳು ಎಲ್ಲಿ? ಅವರು ನನ್ನ ಕೈಗೆ ಸಮಾರ್ಯವನ್ನು ತಪ್ಪಿಸಿಬಿಟ್ಟದ್ದು ಉಂಟೋ? ಈ ದೇಶಗಳ ದೇವರುಗಳಲ್ಲಿ ತಮ್ಮ ದೇಶವನ್ನು ನನ್ನ ಕೈಗೆ ತಪ್ಪಿಸಿ ಬಿಟ್ಟ ದೇವರುಗಳು ಯಾರು
ಆಗ ಮನೆವಾರ್ತೆಯವನಾದ ಹಿಲ್ಕೀಯನ ಮಗನಾದ ಎಲ್ಯಾಕೀಮನೂ ಲೇಖಕನಾದ ಶೆಬ್ನನೂ ಸಂಪ್ರತಿಯವನಾದ ಆಸಾಫನ ಮಗನಾದ ಯೋವನೂ ತಮ್ಮ ವಸ್ತ್ರಗಳನ್ನು ಹರಿದುಕೊಂಡು ಹಿಜ್ಕೀಯನ ಬಳಿಗೆ ಬಂದು ರಬ್ಷಾಕೆಯು ಹೇಳಿದ ಮಾತುಗಳನ್ನು ಅವನಿಗೆ ತಿಳಿಸಿದರು.