1
|
ಇದಲ್ಲದೆ ಅವನು ತಾಮ್ರದ ಬಲಿಪೀಠ ವನ್ನು ಮಾಡಿದನು. ಅದರ ಉದ್ದ ಇಪ್ಪತ್ತು ಮೊಳ, ಅಗಲ ಇಪ್ಪತ್ತು ಮೊಳ, ಎತ್ತರ ಹತ್ತು ಮೊಳ. |
2
|
ಅವನು ಎರಕದ ಸಮುದ್ರವನ್ನು ಮಾಡಿಸಿದನು; ಅದು ಸುತ್ತಲಾಗಿ ಈ ಅಂಚಿನಿಂದ ಆ ಅಂಚಿಗೆ ಹತ್ತು ಮೊಳ, ಅದರ ಎತ್ತರ ಐದು ಮೊಳ, ಸುತ್ತಳತೆ ಮೂವತ್ತು ಮೊಳ ನೂಲಳತೆಯಾಗಿತ್ತು. |
3
|
ಅದರ ಕೆಳಭಾಗದಲ್ಲಿ ಸುತ್ತಲೂ ಎತ್ತುಗಳ ರೂಪಗಳಿದ್ದವು; ಅವು ಒಂದೊಂದು ಮೊಳಕ್ಕೆ ಹತ್ತಾಗಿ ಆ ಸಮುದ್ರದ ಸುತ್ತಲೂ ಇದ್ದವು. ಇದು ಎರಕ ಹೊಯ್ಯಲ್ಪಡುವಾಗ ಎತ್ತುಗಳ ರೂಪ ಎರಡು ಸಾಲಾಗಿ ಎರಕ ಹೊಯ್ಯ ಲ್ಪಟ್ಟಿದ್ದವು. |
4
|
ಅದು ಹನ್ನೆರಡು ಎತ್ತುಗಳ ಮೇಲೆ ನಿಂತಿತ್ತು. ಮೂರು ಉತ್ತರಕ್ಕೂ ಮೂರು ಪಶ್ಚಿಮಕ್ಕೂ ಮೂರು ದಕ್ಷಿಣಕ್ಕೂ ಮೂರು ಪೂರ್ವಕ್ಕೂ ನೋಡು ತ್ತಿದ್ದವು. ಆ ಸಮುದ್ರವು ಅವುಗಳ ಮೇಲೆ ಇತ್ತು, |
5
|
ಅವುಗಳ ಹಿಂಭಾಗಗಳೆಲ್ಲಾ ಒಳಗಾಗಿದ್ದವು. ಅದರ ದಪ್ಪವು ನಾಲ್ಕು ಬೆರಳಷ್ಟಾಗಿಯೂ ಅದರ ಅಂಚು ಪಾತ್ರೆಯ ಅಂಚಿನ ಹಾಗೆಯೂ ತಾವರೆ ಪುಷ್ಪದ ಹಾಗೆಯೂ ಇತ್ತು; ಅದು ಮೂರು ಸಾವಿರ ಕೊಳಗ ಹಿಡಿಯುವದಾಗಿತ್ತು. |
6
|
ಇದಲ್ಲದೆ ಹತ್ತು ತೊಟ್ಟಿಗಳನ್ನು ಮಾಡಿಸಿ ಅವುಗಳಲ್ಲಿ ದಹನಬಲಿಗೋಸ್ಕರ ಅರ್ಪಿಸು ವವುಗಳನ್ನು ತೊಳೆಯುವ ನಿಮಿತ್ತವಾಗಿ ಬಲಪಾರ್ಶ್ವ ದಲ್ಲಿ ಐದನ್ನೂ ಎಡಪಾರ್ಶ್ವದಲ್ಲಿ ಐದನ್ನೂ ಇರಿಸಿ ದನು. ಆದರೆ ಆ ಸಮುದ್ರವು ಯಾಜಕರಿಗೋಸ್ಕರ ತೊಳೆಯುವದಕ್ಕೆ ಇತ್ತು. |
7
|
ಅವುಗಳ ಮಾದರಿಯ ಪ್ರಕಾರವಾಗಿ ಹತ್ತು ಬಂಗಾರದ ದೀಪಸ್ತಂಭಗಳನ್ನು ಮಾಡಿಸಿ ಮಂದಿರದಲ್ಲಿ ಬಲಗಡೆ ಐದನ್ನೂ ಎಡಗಡೆ ಐದನ್ನೂ ಇರಿಸಿದನು. |
8
|
ಹಾಗೆಯೇ ಅವನು ಹತ್ತು ಮೇಜುಗಳನ್ನು ಮಾಡಿಸಿ ಮಂದಿರದಲ್ಲಿ ಬಲಗಡೆ ಐದನ್ನೂ ಎಡಗಡೆ ಐದನ್ನೂ ಇರಿಸಿದನು. ನೂರು ಬಂಗಾರದ ಬೋಗುಣಿಗಳನ್ನು ಮಾಡಿಸಿದನು. |
9
|
ಇದ ಲ್ಲದೆ ಅವನು ಯಾಜಕರ ಅಂಗಳವನ್ನೂ ದೊಡ್ಡ ಅಂಗಳವನ್ನೂ ಅಂಗಳಗಳಿಗೋಸ್ಕರ ಬಾಗಲುಗಳನ್ನೂ ಮಾಡಿಸಿ |
10
|
ಸಮುದ್ರವನ್ನು ತಾಮ್ರದಿಂದ ಹೊದಿಸಿ ದನು. ಸಮುದ್ರವನ್ನು ಪೂರ್ವ ಭಾಗದ ಬಲ ಪಾರ್ಶ್ವ ದಲ್ಲಿ ದಕ್ಷಿಣಕ್ಕೆ ಎದುರಾಗಿ ಇರಿಸಿದನು. |
11
|
ಹೂರಾಮನು ಪಾತ್ರೆಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ ಮಾಡಿದನು. ಹೀಗೆಯೇ ಹೂರಾ ಮನು ದೇವರ ಆಲಯಕ್ಕೋಸ್ಕರ ಅರಸನಾದ ಸೊಲೊ ಮೋನನಿಗೆ ಮಾಡಬೇಕಾದ ಕಾರ್ಯವನ್ನು ಮಾಡಿ ತೀರಿಸಿದನು. |
12
|
ಎರಡು ಸ್ತಂಭಗಳನ್ನೂ ಎರಡು ಸ್ತಂಭ ಗಳ ಮೇಲಿರುವ ಬೋದಿಗೆಗಳನ್ನೂ ಬೋದಿಗೆಗಳ ಮೇಲೆ ಮುಚ್ಚುವ ಎರಡು ಜಾಲರು ಹಣಿತೆಗಳನ್ನೂ |
13
|
ಕಂಬಗಳ ಮೇಲಿರುವ ಎರಡು ಬೋದಿಗೆಗಳನ್ನೂ ಮುಚ್ಚತಕ್ಕದ್ದಾದ ಒಂದೊಂದು ಜಾಲರು ಹೆಣಿತಕ್ಕೆ ಎರಡು ಸಾಲು ದಾಳಿಂಬರ ಕಾಯಿಗಳನ್ನೂ ಜಾಲರು ಹಣಿತೆಗಳಿಗೆ ನಾನೂರು ದಾಳಿಂಬರ ಕಾಯಿಗಳನ್ನೂ ಮಾಡಿದನು. |
14
|
ಇದಲ್ಲದೆ ಅವನು ಆಧಾರಗಳನ್ನೂ ಅದರ ಮೇಲೆ ಇರುವ ತೊಟ್ಟಿಗಳನ್ನೂ ಮಾಡಿದನು. |
15
|
ಒಂದು ಸಮುದ್ರವನ್ನೂ ಅದರ ಕೆಳಗೆ ಇರುವ ಹನ್ನೆರಡು ಎತ್ತುಗಳನ್ನೂ ಪಾತ್ರೆಗಳನ್ನೂ ಸಲಿಕೆಗಳನ್ನೂ ಕೊಂಡಿಗಳನ್ನೂ |
16
|
ಅವುಗಳ ಎಲ್ಲಾ ಸಾಮಾನುಗಳನ್ನೂ ಅರಸನಾದ ಸೊಲೊಮೋನನಿಗೆ ಅವನ ತಂದೆಯಾದ ಹೂರಾಮನು ಹೊಳೆಯುವ ತಾಮ್ರದಿಂದ ಕರ್ತನ ಆಲಯಕ್ಕೋಸ್ಕರ ಮಾಡಿದನು. |
17
|
ಯೊರ್ದನಿನ ತಗ್ಗಿ ನಲ್ಲಿ ಸುಕ್ಕೋತಿಗೂ ಚೆರೇದಕ್ಕೂ ನಡುವೆ ಇರುವ ಜೇಡಿಮಣ್ಣಿನ ಸ್ಥಳದಲ್ಲಿ ಅರಸನು ಅವುಗಳನ್ನು ಎರಕ ಹೊಯಿಸಿದನು. |
18
|
ಹೀಗೆ ಸೊಲೊಮೋನನು ಈ ಸಾಮಾನುಗಳನ್ನೆಲ್ಲಾ ಬಹಳವಾಗಿ ಮಾಡಿಸಿದನು.ಆ ತಾಮ್ರದ ತೂಕ ತಿಳಿಯಕೂಡದಷ್ಟಾಗಿತ್ತು. |
19
|
ಹೀಗೆಯೇ ಸೊಲೊಮೋನನು ಕರ್ತನ ಆಲಯದ ಎಲ್ಲಾ ಸಾಮಾನುಗಳನ್ನೂ ಬಂಗಾರದ ಧೂಪಪೀಠ ವನ್ನೂ ಸಮ್ಮುಖದ ರೊಟ್ಟಿಗಳನ್ನು ಇಡುವ ಮೇಜು ಗಳನ್ನೂ |
20
|
ಶುದ್ಧ ಬಂಗಾರವಾದ ದೈವೋಕ್ತಿಯ ಸ್ಥಾನದ ಮುಂದೆ ನ್ಯಾಯದ ಪ್ರಕಾರ ಹತ್ತಿರದ ದೀಪ ಸ್ತಂಭಗಳನ್ನೂ |
21
|
ಅವುಗಳ ದೀಪಗಳನ್ನೂ ಹೂವು ಗಳನ್ನೂ ದೀಪಗಳ ಚಿಮಟೆಗಳನ್ನೂ ಬಂಗಾರದಿಂದ ಅಂದರೆ ನಿರ್ಮಲವಾದ ಬಂಗಾರದಿಂದ ಮಾಡಿಸಿ ದನು; ಕತ್ತರಿಗಳನ್ನೂ ಬೋಗುಣಿಗಳನ್ನೂ ಸೌಟು ಗಳನ್ನೂ ಅಗ್ನಿಪಾತ್ರೆಗಳನ್ನೂ ಶುದ್ಧ ಬಂಗಾರದಿಂದ ಮಾಡಿಸಿದನು. |
22
|
ಇದಲ್ಲದೆ ಆಲಯ ಪ್ರವೇಶದ ಸ್ಥಳವೂ ಅತಿಪರಿಶುದ್ಧ ಸ್ಥಾನಕ್ಕೋಸ್ಕರವಾಗಿರುವ ಅದರ ಅಂತರಂಗದ ಬಾಗಲುಗಳೂ ಮಂದಿರದ ಮನೇ ಬಾಗಲುಗಳೂ ಬಂಗಾರದವುಗಳಾಗಿದ್ದವು. |
2-Chronicles 4:2 Kannada Language Bible Words basic statistical display
COMING SOON ...