ಸಮಸ್ತ ಇಸ್ರಾಯೇಲ್ಯರಿಗೆ ಬೋಧಿಸತಕ್ಕ ವರೂ ಕರ್ತನಿಗೆ ಪ್ರತಿಷ್ಠಿತರೂ ಆದ ಲೇವಿಯರಿಗೆಪರಿಶುದ್ಧವಾದ ಮಂಜೂಷವು ನಿಮ್ಮ ಭುಜಗಳ ಮೇಲೆ ಭಾರವಿಲ್ಲದ ಹಾಗೆ ನೀವು ಅದನ್ನು ಇಸ್ರಾ ಯೇಲಿನ ಅರಸನಾಗಿರುವ ದಾವೀದನ ಮಗನಾದ ಸೊಲೊಮೋನನು ಕಟ್ಟಿಸಿದ ಮನೆಯಲ್ಲಿ ಇರಿಸಿ ನಿಮ್ಮ ದೇವರಾದ ಕರ್ತನನ್ನೂ ಆತನ ಜನವಾದ ಇಸ್ರಾಯೇಲ್ಯರನ್ನೂ ಸೇವಿಸಿರಿ.
ಆಗ ಯೋಷೀಯನು ಸಿದ್ಧವಾಗಿದ್ದ ಸಮಸ್ತ ಜನ ರಿಗೆ ಪಸ್ಕದ ಬಲಿಗೋಸ್ಕರ ಮಂದೆಯಿಂದ ಮೂವತ್ತು ಸಾವಿರ ಕುರಿಮರಿಗಳನ್ನೂ ಮೇಕೆಯ ಮರಿಗಳನ್ನೂ ಕೊಟ್ಟನು. ಇದಲ್ಲದೆ ಮೂರು ಸಾವಿರ ಎತ್ತುಗಳನ್ನು ಕೊಟ್ಟನು; ಇವೆಲ್ಲಾ ಅರಸನ ಸೊತ್ತಿನಿಂದಲೇ
ಹಾಗೆಯೇ ಅವನ ಪ್ರಧಾನರು ಜನರಿಗೂ ಯಾಜಕ ರಿಗೂ ಲೇವಿಯರಿಗೂ ಮನಃಪೂರ್ವಕವಾಗಿ ಕೊಟ್ಟರು. ದೇವರ ಆಲಯದ ನಾಯಕರಾದ ಹಿಲ್ಕೀಯನೂ ಜೆಕರೀಯನೂ ಯೆಹೀಯೇಲನೂ ಪಸ್ಕದ ಬಲಿ ಗೋಸ್ಕರ ಎರಡು ಸಾವಿರದ ಆರು ನೂರು ಮರಿ ಗಳನ್ನೂ ಮುನ್ನೂರು ಎತ್ತುಗಳನ್ನೂ ಯಾಜಕರಿಗೆ ಕೊಟ್ಟರು.
ಇದಲ್ಲದೆ ಲೇವಿಯರಲ್ಲಿ ಪ್ರಧಾನರಾದ ಕೋನನ್ಯನೂ ಅವನ ಸಹೋದರರಾದ ಶೆಮಾಯನೂ ನೆತನೇಲನೂ ಹಷಲ್ಯನೂ ಯೆಗೀಯೇಲನೂ ಯೋಜಾಬಾದನೂ ಪಸ್ಕದ ಬಲಿಗಳ ನಿಮಿತ್ತವಾಗಿ ಐದು ಸಾವಿರ ಮರಿಗಳನ್ನೂ ಐನೂರು ಎತ್ತುಗಳನ್ನೂ ಲೇವಿಯರಿಗೆ ಕೊಟ್ಟರು.
ಹೀಗೆ ಕಟ್ಟಳೆಯ ಪ್ರಕಾರ ಪಸ್ಕವನ್ನು ಬೆಂಕಿಯಿಂದ ಬೇಯಿಸಿದರು. ಆದರೆ ಪರಿಶುದ್ಧವಾದ ವುಗಳನ್ನು ಗಡಿಗೆಗಳಲ್ಲಿಯೂ ತಪ್ಪಲೆಗಳಲ್ಲಿಯೂ ಕೊಪ್ಪರಿಗೆಗಳಲ್ಲಿಯೂ ಬೇಯಿಸಿ ಶೀಘ್ರವಾಗಿ ಜನರೆ ಲ್ಲರಿಗೆ ಕಳುಹಿಸಿದರು.
ದಾವೀದನೂ ಆಸಾ ಫನೂ ಹೇಮಾನನೂ ಅರಸನ ಪ್ರವಾದಿಯಾದ ಯೆದುತೂನನೂ ಇವರ ಆಜ್ಞೆಯ ಪ್ರಕಾರ ಆಸಾಫನ ಮಕ್ಕಳಾದ ಹಾಡುಗಾರರು ತಮ್ಮ ಸ್ಥಳದಲ್ಲಿದ್ದರು; ಹಾಗೆಯೇ ದ್ವಾರಪಾಲಕರು ಪ್ರತಿಯೊಂದು ಬಾಗಲಲ್ಲಿ ಇದ್ದರು; ಅವರು ತಮ್ಮ ಸೇವೆಯನ್ನು ಬಿಡಲು ಆಗದೆ ಇತ್ತು; ಯಾಕಂದರೆ ಅವರ ಸಹೋದರರಾದ ಲೇವಿಯರು ಅವರ ನಿಮಿತ್ತ ಸಿದ್ಧಮಾಡಿದರು.
ಯೋಷೀಯನು ಅವನ ಮೇಲೆ ಯುದ್ಧಕ್ಕೆ ಹೋದನು. ಆದರೆ ಇವನು ಯೋಷೀಯನ ಬಳಿಗೆ ಸೇವಕರನ್ನು ಕಳುಹಿಸಿ--ಯೆಹೂದದ ಅರಸನೇ, ನನಗೆ ನಿನಗೆ ಏನು? ಈ ಹೊತ್ತು ನಿನ್ನ ಮೇಲೆ ಅಲ್ಲ, ನಾನು ಯುದ್ಧಮಾಡುವ ಮನೆಯ ಮೇಲೆ ಬರುತ್ತೇನೆ; ತ್ವರೆಮಾಡು ಎಂದು ದೇವರು ನನಗೆ ಹೇಳಿದ್ದಾನೆ. ನನ್ನ ಸಂಗಡ ಇರುವ ದೇವರು ನಿನ್ನನ್ನು ನಾಶ ಮಾಡದ ಹಾಗೆ ನೀನು ಆತನ ಮುಂದೆ ಸುಮ್ಮನಿರು.
ಆದಾಗ್ಯೂ ಯೋಷೀ ಯನು ತನ್ನ ಮುಖವನ್ನು ಅವನ ಕಡೆಯಿಂದ ತಿರುಗಿಸದೆ ಅವನ ಸಂಗಡ ಯುದ್ಧಮಾಡಲು ತನ್ನನ್ನು ಮರೆ ಮಾಜಿದನು. ಅವನು ದೇವರ ಬಾಯಿಂದ ಬಂದ ನೆಕೋನನ ಮಾತುಗಳನ್ನು ಕೇಳದೆ ಮೆಗಿದ್ದೋನು ತಗ್ಗಿನಲ್ಲಿ ಯುದ್ಧಮಾಡ ಬಂದನು.
ಆದದರಿಂದ ಅವನ ಸೇವಕರು ಆ ರಥದೊಳಗಿಂದ ಅವನನ್ನು ತೆಗೆದುಕೊಂಡು ಅವನಿಗಿದ್ದ ಎರಡನೇ ರಥ ದಲ್ಲಿ ಅವನನ್ನು ಇರಿಸಿ ಯೆರೂಸಲೇಮಿಗೆ ತಂದರು. ಅವನು ಅಲ್ಲಿ ಸತ್ತು ತನ್ನ ಪಿತೃಗಳ ಸಮಾಧಿಗಳಲ್ಲಿ ಹೂಣಲ್ಪಟ್ಟನು. ಸಮಸ್ತ ಯೆಹೂದ ಯೆರೂಸಲೇಮಿ ನವರು ಯೋಷೀಯನಿಗೋಸ್ಕರ ದುಃಖಪಟ್ಟರು.
ಇದಲ್ಲದೆ ಯೆರೆವಿಾಯನು ಯೋಷೀಯನಿಗೋಸ್ಕರ ಗೋಳಾಡಿದನು. ಹಾಡುಗಾರರೂ ಹಾಡುಗಾರ್ತಿ ಯರೂ ಯೋಷೀಯನಿಗೋಸ್ಕರ ಇದುವರೆಗೂ ತಮ್ಮ ಗೋಳಾಟಗಳಲ್ಲಿ ಹೇಳುತ್ತಾರೆ. ಇದು ಇಸ್ರಾಯೇಲಿ ನಲ್ಲಿ ನೇಮಕವಾಯಿತು. ಇಗೋ, ಅವು ಪ್ರಲಾಪ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.