ಆಗ ಸೊಲೊಮೋನನು ಯೆರೂಸಲೇಮಿನಲ್ಲಿ ತನ್ನ ತಂದೆಯಾದ ದಾವೀದನಿಗೆ ಕರ್ತನು ಕಾಣಿಸಿಕೊಂಡ ಸ್ಥಳವಾದ ಮೋರೀಯಾ ಬೆಟ್ಟದ ಮೇಲೆ ದಾವೀದನು ಸಿದ್ಧಮಾಡಿದ ಯೆಬೂಸಿ ಯನಾದ ಒರ್ನಾನನ ಕಣದಲ್ಲಿ ಕರ್ತನ ಆಲಯವನ್ನು ಕಟ್ಟಲು ಪ್ರಾರಂಭಿಸಿದನು.
ಇದಲ್ಲದೆ ಅತಿಪರಿಶುದ್ಧವಾದ ಆಲಯವನ್ನು ಮಾಡಿದನು; ಅದರ ಉದ್ದವು ಆಲಯದ ಅಗಲದ ಪ್ರಕಾರ ಇಪ್ಪತ್ತು ಮೊಳ; ಅಗಲ ಇಪ್ಪತ್ತು ಮೊಳವಾಗಿ ಇತ್ತು. ಅವನು ಅದನ್ನು ಆರು ನೂರು ತಲಾಂತುಗಳ ಶುದ್ಧ ಬಂಗಾರದಿಂದ ಹೊದಿಸಿದನು.
ಕೆರೂಬಿಗಳ ರೆಕ್ಕೆಗಳು ಇಪ್ಪತ್ತು ಮೊಳ ಉದ್ದವಾಗಿ ದ್ದವು. ಒಂದು ರೆಕ್ಕೆಯು ಐದು ಮೊಳವಾಗಿದ್ದು ಆಲ ಯದ ಗೋಡೆಯ ವರೆಗೆ ಮುಟ್ಟಿತ್ತು; ಮತ್ತೊಂದು ರೆಕ್ಕೆ ಐದು ಮೊಳವಾಗಿದ್ದು ಇನ್ನೊಂದು ಕೆರೂಬಿಯ ರೆಕ್ಕೆಯ ವರೆಗೂ ಮುಟ್ಟಿತ್ತು.
ಹಾಗೆಯೇ ಮತ್ತೊಂದು ಕೆರೂಬಿಯ ರೆಕ್ಕೆಯು ಐದು ಮೊಳವಾಗಿದ್ದು ಆಲಯದ ಗೋಡೆಯ ವರೆಗೆ ಮುಟ್ಟಿತ್ತು; ಇನ್ನೊಂದು ರೆಕ್ಕೆಯು ಐದು ಮೊಳವಾಗಿದ್ದು ಬೇರೆ ಇರುವ ಕೆರೂಬಿಯ ರೆಕ್ಕೆಗೆ ಕೂಡಿ ಕೊಂಡಿತ್ತು.
ಮಂದಿರದ ಮುಂದೆ ಆ ಸ್ತಂಭಗಳಲ್ಲಿ ಒಂದನ್ನು ಬಲಪಾರ್ಶ್ವದಲ್ಲಿಯೂ ಒಂದನ್ನು ಎಡ ಪಾರ್ಶ್ವದಲ್ಲಿಯೂ ನಿಲ್ಲಿಸಿದನು; ಬಲಪಾರ್ಶ್ವದಲ್ಲಿ ಇದ್ದ ಸ್ತಂಭಕ್ಕೆ ಯಾಕೀನ್ ಎಂದೂ ಎಡಪಾರ್ಶ್ವದಲ್ಲಿದ್ದ ಸ್ತಂಭಕ್ಕೆ ಬೋವಜ್ ಎಂದೂ ಹೆಸರಿಟ್ಟನು.