ರೆಹಬ್ಬಾಮನು ಯೆರೂಸಲೇಮಿಗೆ ಬಂದ ತರುವಾಯ ಅವನು ತನಗೆ ರಾಜ್ಯವನ್ನು ತಿರಿಗಿ ಬರಮಾಡುವ ಹಾಗೆ ಇಸ್ರಾಯೇಲಿಗೆ ವಿರೋಧವಾಗಿ ಯುದ್ಧಮಾಡಲು ಯೆಹೂದ ಬೆನ್ಯಾ ವಿಾನಿನವರೊಳಗಿಂದ ಯುದ್ಧಮಾಡತಕ್ಕವರಾಗಿರುವ ಆಯಲ್ಪಟ್ಟ ಲಕ್ಷದ ಎಂಭತ್ತು ಸಾವಿರ ಜನ ರನ್ನು ಕೂಡಿಸಿದಾಗ
ಸಮಸ್ತ ಇಸ್ರಾ ಯೇಲ್ಯರಿಗೂ ಹೇಳಬೇಕಾದದ್ದೇನಂದರೆ--ಕರ್ತನು ಹೀಗೆ ಹೇಳುತ್ತಾನೆ--ನೀವು ನಿಮ್ಮ ಸಹೋದರರಿಗೆ ವಿರೋಧವಾಗಿ ಯುದ್ಧಮಾಡುವದಕ್ಕೆ ಹೋಗ ಬೇಡಿರಿ; ಪ್ರತಿ ಮನುಷ್ಯನು ತನ್ನ ಮನೆಗೆ ಹಿಂತಿ ರುಗಲಿ. ಈ ಕಾರ್ಯವು ನನ್ನಿಂದ ಉಂಟಾಯಿತು ಅಂದನು. ಆದಕಾರಣ ಅವರು ಕರ್ತನ ವಾಕ್ಯವನ್ನು ಕೇಳಿ ಯಾರೊಬ್ಬಾಮನ ಮೇಲೆ ಹೋಗದೆ ಹಿಂತಿರುಗಿದರು.
ದೆವ್ವಗಳಿಗೋಸ್ಕರವೂ ಯಾರೊಬ್ಬಾಮನು ಮಾಡಿದ ಹೋರಿಗಳಿ ಗೋಸ್ಕರವೂ ತನಗೆ ಯಾಜಕರನ್ನು ನೇಮಿಸಿದ್ದರಿಂದ ಲೇವಿಯರು ತಮ್ಮ ಉಪನಗರಗಳನ್ನೂ ಸ್ವಾಸ್ತ್ಯಗಳನ್ನೂ ಬಿಟ್ಟು ಬಿಟ್ಟು ಯೆಹೂದಕ್ಕೂ ಯೆರೂಸಲೇಮಿಗೂ ಬಂದರು.
ಇವರ ತರುವಾಯ ಇಸ್ರಾಯೇಲಿನ ಕರ್ತನಾದ ದೇವರನ್ನು ಹುಡುಕಲು ತಮ್ಮ ಹೃದಯ ಗಳನ್ನು ಕೊಟ್ಟು ತಮ್ಮ ಪಿತೃಗಳ ದೇವರಾದ ಕರ್ತನಿಗೆ ಬಲಿ ಅರ್ಪಿಸಲು ಇಸ್ರಾಯೇಲಿನ ಸಮಸ್ತ ಗೋತ್ರ ಗಳಿಂದ ಯೆರೂಸಲೇಮಿಗೆ ಬಂದರು.
ಹೀಗೆಯೇ ಅವರು ಯೆಹೂದ ರಾಜ್ಯವನ್ನು ದೃಢಪಡಿಸಿ ಸೊಲೊ ಮೋನನ ಮಗನಾದ ರೆಹಬ್ಬಾಮನನ್ನು ಮೂರು ವರುಷಗಳ ವರೆಗೂ ಬಲಪಡಿಸಿದರು. ಯಾಕಂದರೆ ಅವರು ಮೂರು ವರುಷಗಳ ವರೆಗೂ ದಾವೀದ ಸೊಲೊಮೋನ ಇವರ ಮಾರ್ಗದಲ್ಲಿ ನಡೆದರು.
ರೆಹಬ್ಬಾಮನಿಗೆ ಹದಿನೆಂಟು ಮಂದಿ ಹೆಂಡತಿಯರೂ ಅರವತ್ತು ಮಂದಿ ಉಪ ಪತ್ನಿಯರೂ ಇದ್ದರು; ಅವನು ಇಪ್ಪತ್ತೆಂಟು ಮಂದಿ ಕುಮಾರರನ್ನೂ ಅರವತ್ತು ಮಂದಿ ಕುಮಾರ್ತೆಯರನ್ನೂ ಪಡೆದನು. ಆದರೆ ಅವನು ತನ್ನ ಎಲ್ಲಾ ಹೆಂಡತಿ ಯರಿಗಿಂತಲೂ ಉಪಪತ್ನಿಯರಿಗಿಂತಲೂ ಅಬ್ಷಾಲೋ ಮನ ಮಗಳಾದ ಮಾಕಳನ್ನು ಪ್ರೀತಿಮಾಡಿದನು.
ಅವನು ವಿವೇಕದಿಂದ ನಡೆದು ತನ್ನ ಎಲ್ಲಾ ಮಕ್ಕಳನ್ನು ಯೆಹೂದ ಬೆನ್ಯಾವಿಾ ನಿನ ದೇಶಗಳಲ್ಲಿರುವ ಎಲ್ಲಾ ಬಲವಾದ ಪಟ್ಟಣಗ ಳಲ್ಲಿ ಚದುರಿಸಿ ಅವರಿಗೆ ಬಹಳ ದವಸಧಾನ್ಯಗಳನ್ನು ಕೊಟ್ಟನು. ಆದರೆ ಹೆಂಡತಿಯರ ಸಮೂಹವನ್ನು ಆಶಿಸಿದನು.