1
|
ನೀನು ನನ್ನ ಅಣ್ಣನ ಹಾಗಿದ್ದರೆ, ತಾಯಿ ಹಾಲನ್ನು ಕುಡಿಯುವ ಮಗುವಿನಂತೆ ಇದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು. ನಾನು ನಿನ್ನನ್ನು ಹೊರಗೆ ಕಂಡು ನಿನಗೆ ಮುದ್ದಿಡುತ್ತಿದ್ದೆನು; ಆಗ ಯಾರೂ ನನ್ನ ಮೇಲೆ ದೋಷಾರೋಪಣೆ ಮಾಡುತ್ತಿರಲಿಲ್ಲ! |
2
|
ನಾನು ನಿನ್ನನ್ನು ನಡೆಸಿಕೊಂಡು ನನ್ನ ತಾಯಿಯು ನನಗೆ ಉಪದೇಶಿಸಿದ ಕೋಣೆಗೆ ಬರುತ್ತಿದ್ದೆನು. ನಾನು ನಿನಗೆ ಸಾಂಬಾರ ಪದಾರ್ಥಗಳನ್ನು ಸೇರಿಸಿದ ದ್ರಾಕ್ಷಾರಸವನ್ನು, ದಾಳಿಂಬೆ ಹಣ್ಣಿನ ರಸವನ್ನು ಕುಡಿಯಲು ಕೊಡುತ್ತಿದ್ದೆನು. |
3
|
ಆಗ ನಿನ್ನ ಎಡಗೈ ನನಗೆ ತಲೆದಿಂಬಾಗಿ ನಿನ್ನ ಬಲಗೈ ನನ್ನನ್ನು ಅಪ್ಪಿಕೊಳ್ಳುತ್ತಿತ್ತು. |
4
|
ಜೆರುಸಲೇಮಿನ ಸ್ತ್ರೀಯರೇ, ತಕ್ಕ ಕಾಲಕ್ಕೆ ಮೊದಲೇ ಪ್ರೀತಿಯನ್ನು ಹುಟ್ಟಿಸಿ ಬೆಳೆಯಿಸುವುದಿಲ್ಲವೆಂದು ನನಗೆ ಪ್ರಮಾಣ ಮಾಡಿರಿ. |
5
|
ತನ್ನ ಪ್ರಿಯನನ್ನು ಒರಗಿಕೊಂಡು ಅಡವಿಯಿಂದ ಬರುತ್ತಿರುವ ಈ ಯುವತಿ ಯಾರು? ನಾನು ನಿನ್ನನ್ನು ಸೇಬಿನ ಮರದ ಕೆಳಗೆ ಎಬ್ಬಿಸಿದೆನು. ನಿನ್ನ ತಾಯಿಯು ನಿನ್ನನ್ನು ಗರ್ಭಧರಿಸಿದ್ದು ಅಲ್ಲಿಯೇ. ನೀನು ಹುಟ್ಟಿದ್ದೂ ಅಲ್ಲಿಯೇ. |
6
|
ನನ್ನನ್ನು ನಿನ್ನ ಹೃದಯದ ಮೇಲೆ ಮುದ್ರೆಯನ್ನಾಗಿಯೂ, ನಿನ್ನ ಬೆರಳಿನಲ್ಲಿರುವ ಮುದ್ರೆಯೊತ್ತಿದ ಉಂಗುರದಂತೆಯೂ ಇಟ್ಟುಕೋ. ಪ್ರೀತಿಯು ಮರಣದಷ್ಟೇ ಬಲಿಷ್ಠ; ಕಾಮೋದ್ರೇಕವು ಸಮಾಧಿಯಷ್ಟೇ ಬಲಿಷ್ಠ. ಅದರ ಜ್ವಾಲೆಗಳು ಧಗಧಗಿಸುವ ಬೆಂಕಿ. ಅದು ಅತಿ ತೀಕ್ಷ್ಣವಾದ ಅಗ್ನಿಯೇ. |
7
|
ಜಲರಾಶಿಗಳು ಪ್ರೀತಿಯನ್ನು ನಂದಿಸಲಾರವು; ನದಿಗಳು ಪ್ರೀತಿಯನ್ನು ಮುಳುಗಿಸಲಾರವು. ಒಬ್ಬನು ಪ್ರೀತಿಗೋಸ್ಕರ ತನ್ನ ಆಸ್ತಿಯನ್ನೆಲ್ಲ ಕೊಟ್ಟುಬಿಟ್ಟರೆ ಅವನು ಕೇವಲ ತಿರಸ್ಕಾರಕ್ಕೆ ಗುರಿಯಾಗುವನು. |
8
|
ನಮಗೆ ಚಿಕ್ಕ ತಂಗಿಯಿದ್ದಾಳೆ, ಆಕೆಯ ಸ್ತನಗಳು ಇನ್ನೂ ಬೆಳೆದಿಲ್ಲ. ಆಕೆಯ ನಿಶ್ಚಿತಾರ್ಥ ದಿನದಲ್ಲಿ ನಮ್ಮ ತಂಗಿಗೋಸ್ಕರ ನಾವೇನು ಮಾಡಬೇಕು? |
9
|
[This verse may not be a part of this translation] |
10
|
ನಾನು ಕೋಟೆ; ನನ್ನ ಸ್ತನಗಳೇ ಅದರ ಗೋಪುರಗಳು. ಹೀಗೆ ಸೊಲೊಮೋನನು ನನ್ನಲ್ಲಿ ತೃಪ್ತನಾದನು. |
11
|
ಸೊಲೊಮೋನನಿಗೆ ಬಾಲ್ಹಾಮೋನಿನಲ್ಲಿ ದ್ರಾಕ್ಷಿ ತೋಟವಿತ್ತು. ಅವನು ಅದನ್ನು ರೈತರಿಗೆ ಒಪ್ಪಿಸಿದನು. ಪ್ರತಿಯೊಬ್ಬನು ಹಣ್ಣಿಗಾಗಿ ಒಂದು ಸಾವಿರ ಬೆಳ್ಳಿನಾಣ್ಯಗಳನ್ನು ಕೊಡಬೇಕಿತ್ತು. |
12
|
ಆದರೆ ನನ್ನ ಸ್ವಂತ ದ್ರಾಕ್ಷಿತೋಟವು ನನ್ನೆದುರಿನಲ್ಲಿದೆ. ಸೊಲೊಮೋನನೇ, ಆ ಸಾವಿರ ಬೆಳ್ಳಿನಾಣ್ಯಗಳು ನಿನಗಿರಲಿ. ತೋಟವನ್ನು ನೋಡಿಕೊಳ್ಳುವವರಿಗೆ ಇನ್ನೂರು ಬೆಳ್ಳಿನಾಣ್ಯಗಳಿರಲಿ. |
13
|
ಉದ್ಯಾನವನಗಳಲ್ಲಿ ವಾಸಿಸುವವಳೇ, ಗೆಳೆಯರು ನಿನ್ನ ಸ್ವರ ಕೇಳಬೇಕೆಂದಿದ್ದಾರೆ, ನನಗೂ ಸಹ ಕೇಳಿಸಲಿ. |
14
|
ನನ್ನ ಪ್ರಿಯನೇ, ತ್ವರೆಪಡು. ಸುಗಂಧ ಸಸ್ಯ ಪರ್ವತಗಳ ಮೇಲೆ ಸಾರಂಗದಂತೆಯೂ ಪ್ರಾಯದ ಜಿಂಕೆಯಂತೆಯೂ ಇರು. ಇ್ಟ್ಟ್ಞ ್ಟಜಿ ಜ್ಛ್ಛಟಜಡ್ಝಛಡಿಜಡ |
Song-of-Solomon 8:5 Kannada Language Bible Words basic statistical display
COMING SOON ...