1
|
ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು. ಸಹಾಯಕ್ಕಾಗಿ ನಾನಿಡುವ ಮೊರೆಯನ್ನು ಲಾಲಿಸು. |
2
|
ಯೆಹೋವನೇ, ನಾನು ಆಪತ್ತುಗಳಲ್ಲಿರುವಾಗ ನನಗೆ ವಿಮುಖನಾಗಬೇಡ, ನನಗೆ ಕಿವಿಗೊಡು. ಸಹಾಯಕ್ಕಾಗಿ ಮೊರೆಯಿಡುವಾಗ ಬೇಗನೆ ಸದುತ್ತರವನ್ನು ದಯಪಾಲಿಸು. |
3
|
ನನ್ನ ಜೀವಮಾನವು ಹೊಗೆಯಂತೆ ಕಣ್ಮರೆಯಾಗುತ್ತಿದೆ. ನನ್ನ ಎಲುಬುಗಳು ಬೆಂಕಿಯಂತೆ ಸುಟ್ಟುಹೋಗುತ್ತಿದೆ. |
4
|
ನಾನು ನಿರ್ಬಲನಾಗಿ ಒಣಗಿ ಹೋಗುತ್ತಿರುವ ಹುಲ್ಲಿನಂತಿದ್ದೇನೆ. ನಾನು ಊಟವನ್ನೂ ಮರೆತು ಬಿಡುವೆನು. |
5
|
ದೀರ್ಘ ದುಃಖದಿಂದಾಗಿ ನನ್ನ ಎಲುಬುಗಳು ಚರ್ಮಕ್ಕೆ ಅಂಟಿಕೊಂಡಿವೆ. |
6
|
ಅರಣ್ಯದಲ್ಲಿರುವ ಗೂಬೆಯಂತೆ ಒಬ್ಬಂಟಿಗನಾಗಿದ್ದೇನೆ. ಪಾಳುಬಿದ್ದ ಕಟ್ಟಡಗಳಲ್ಲಿರುವ ಗೂಬೆಯಂತೆ ನಾನು ಒಬ್ಬಂಟಿಗನಾಗಿದ್ದೇನೆ. |
7
|
ನನಗೆ ನಿದ್ರೆಯೂ ಬಾರದು. ಮೇಲ್ಛಾವಣಿಗೆಯ ಮೇಲಿರುವ ಏಕಾಂಗಿಯಾದ ಪಕ್ಷಿಯಂತೆ ನಾನಿದ್ದೇನೆ. |
8
|
ನನ್ನ ವೈರಿಗಳು ನನಗೆ ಅವಮಾನ ಮಾಡುತ್ತಲೇ ಇರುವರು. ಅವರು ನನ್ನನ್ನು ದೃಷ್ಟಾಂತಮಾಡಿ ಶಪಿಸುವರು. |
9
|
ನನ್ನ ದುಃಖವೇ ನನಗೆ ಆಹಾರವಾಯಿತು. ಕಣ್ಣೀರು ನನ್ನ ಪಾನೀಯದೊಳಗೆ ತೊಟ್ಟಿಕ್ಕುತ್ತಿದೆ. |
10
|
ನೀನು ನನ್ನ ಮೇಲೆ ಕೋಪಗೊಂಡಿರುವುದೇ ಅದಕ್ಕೆ ಕಾರಣ. ನೀನು ನನ್ನನ್ನು ಮೇಲೆತ್ತಿ ಎಸೆದು ಬಿಟ್ಟೆಯಲ್ಲಾ! |
11
|
ನನ್ನ ಜೀವಮಾನವು ಸಂಜೆಯ ನೆರಳಿನಂತೆ ಕೊನೆಗೊಂಡಿದೆ. ನಾನು ಒಣಗಿ ಸಾಯುತ್ತಿರುವ ಹುಲ್ಲಿನಂತಿದ್ದೇನೆ. |
12
|
ಯೆಹೋವನೇ, ನೀನಾದರೊ ಎಂದೆಂದಿಗೂ ಜೀವಿಸುವೆ! ನಿನ್ನ ಹೆಸರು ಶಾಶ್ವತವಾದದ್ದು! |
13
|
ನೀನು ಎದ್ದು ಚೀಯೋನನ್ನು ಸಂತೈಸುವೆ. ನೀನು ಚೀಯೋನಿಗೆ ದಯೆತೋರುವ ಕಾಲ ಬರುತ್ತಿದೆ. |
14
|
ನಿನ್ನ ಸೇವಕರು ಆಕೆಯ (ಜೆರುಸಲೇಮಿನ) ಕಲ್ಲುಗಳನ್ನು ಪ್ರೀತಿಸುವರು. ಅವರು ಆ ಪಟ್ಟಣದ ಧೂಳನ್ನು ಇಷ್ಟಪಡುವರು! |
15
|
ಜನರು ಯೆಹೋವನ ಹೆಸರನ್ನು ಆರಾಧಿಸುತ್ತಾರೆ. ದೇವರೇ, ಭೂರಾಜರುಗಳೆಲ್ಲಾ ನಿನ್ನನ್ನು ಸನ್ಮಾನಿಸುವರು. |
16
|
ಯಾಕಂದರೆ, ಯೆಹೋವನು ಚೀಯೋನನ್ನು ಮತ್ತೆ ಕಟ್ಟುವನು. ಜನಾಂಗಗಳು ಆಕೆಯ (ಜೆರುಸಲೇಮಿನ) ವೈಭವವನ್ನು ಮತ್ತೆ ನೋಡುವರು. |
17
|
ಆತನು ನಿರ್ಗತಿಕರ ಪ್ರಾರ್ಥನೆಗಳಿಗೆ ಉತ್ತರ ಕೊಡುವನು. ಅವರ ಮೊರೆಗಳನ್ನು ಆತನು ತಿರಸ್ಕರಿಸುವುದಿಲ್ಲ. |
18
|
ಮುಂದಿನ ತಲೆಮಾರುಗಳವರಿಗಾಗಿ ಇವುಗಳನ್ನು ಬರೆದಿಡಿ. ಮುಂದಿನ ಕಾಲದಲ್ಲಿ ಅವರು ಯೆಹೋವನನ್ನು ಸ್ತುತಿಸುತ್ತಾರೆ. |
19
|
ಯೆಹೋವನು ಉನ್ನತದಲ್ಲಿರುವ ತನ್ನ ಪರಿಶುದ್ಧ ಸ್ಥಳದಿಂದ ಕೆಳಗೆ ನೋಡುತ್ತಾನೆ. ಆತನು ಪರಲೋಕದಿಂದ ಭೂಮಿಯನ್ನು ನೋಡುತ್ತಾನೆ. |
20
|
ಆತನು ಸೆರೆಯಾಳುಗಳ ಪ್ರಾರ್ಥನೆಗಳನ್ನು ಕೇಳುತ್ತಾನೆ. ಮರಣದಂಡನೆಗೆ ಒಳಗಾದವರನ್ನು ಆತನು ಬಿಡಿಸುತ್ತಾನೆ. |
21
|
ಆಗ ಚೀಯೋನಿನಲ್ಲಿರುವ ಜನರು ಯೆಹೋವನ ಕುರಿತು ಪ್ರಕಟಿಸುವರು: ಅವರು ಆತನ ಹೆಸರನ್ನು ಜೆರುಸಲೇಮಿನಲ್ಲಿ ಸ್ತುತಿಸುವರು. |
22
|
ಜನಾಂಗಗಳು ಒಟ್ಟುಗೂಡಿ ಬರುವವು. ರಾಜ್ಯಗಳು ಯೆಹೋವನ ಸೇವೆಮಾಡಲು ಬರುವವು. |
23
|
ನನ್ನ ಬಲವು ಕುಂದಿಹೋಯಿತು. ನನ್ನ ಆಯುಷ್ಕಾಲವು ಕಡಿಮೆಯಾಯಿತು. |
24
|
ಆದ್ದರಿಂದ ನಾನು ಇಂತೆಂದೆನು: “ಯೌವನಸ್ಥನಾಗಿರುವಾಗಲೇ ನನ್ನನ್ನು ಸಾಯಿಸಬೇಡ. ದೇವರೇ, ನೀನು ಶಾಶ್ವತವಾಗಿ ಜೀವಿಸುವೆ! |
25
|
ಬಹುಕಾಲದ ಹಿಂದೆ, ನೀನು ಪ್ರಪಂಚವನ್ನು ಸೃಷ್ಟಿಮಾಡಿದೆ. ನೀನು ಆಕಾಶವನ್ನು ನಿನ್ನ ಕೈಗಳಿಂದ ನಿರ್ಮಿಸಿದೆ! |
26
|
ಲೋಕವೂ ಆಕಾಶವೂ ಕೊನೆಗೊಳುತ್ತವೆ. ನೀನಾದರೊ ಶಾಶ್ವತವಾಗಿರುವೆ! ಅವು ಬಟ್ಟೆಗಳಂತೆ ಹಳೆಯದಾಗುತ್ತವೆ. ನೀನು ಅವುಗಳನ್ನು ಉಡುಪುಗಳಂತೆ ಬದಲಾಯಿಸುವೆ. ಅವುಗಳೆಲ್ಲಾ ಬದಲಾಗುತ್ತವೆ. |
27
|
ದೇವರೇ, ನೀನಾದರೊ ಎಂದಿಗೂ ಬದಲಾಗುವುದಿಲ್ಲ. ನೀನು ಎಂದೆಂದಿಗೂ ಜೀವಿಸುವೆ! |
28
|
ನಾವು ನಿನ್ನ ಸೇವಕರಾಗಿದ್ದೇವೆ. ಇಲ್ಲಿ ನಮ್ಮ ಮಕ್ಕಳು ವಾಸವಾಗಿರುತ್ತಾರೆ; ಅವರ ಸಂತತಿಗಳವರೂ ನಿನ್ನನ್ನು ಆರಾಧಿಸಲು ಇಲ್ಲಿರುತ್ತಾರೆ.” |
Psalms 102:28 Kannada Language Bible Words basic statistical display
COMING SOON ...