Indian Language Bible Word Collections
Proverbs 7:19
Proverbs Chapters
Proverbs 7 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Books
Old Testament
New Testament
Proverbs Chapters
Proverbs 7 Verses
1
|
ನನ್ನ ಮಗನೇ, ನನ್ನ ಮಾತುಗಳನ್ನು ಜ್ಞಾಪಕ ಮಾಡಿಕೋ, ನನ್ನ ಆಜ್ಞೆಗಳನ್ನು ಮರೆಯಬೇಡ. |
2
|
ನನ್ನ ಆಜ್ಞೆಗಳಿಗೆ ವಿಧೇಯನಾಗು, ಆಗ ನೀನು ಜೀವಿಸುವೆ. ನಿನ್ನ ಕಣ್ಣುಗುಡ್ಡೆಗಳೊ ಎಂಬಂತೆ ನನ್ನ ಉಪದೇಶಗಳಿಗೆ ಎಚ್ಚರಿಕೆಯಿಂದ ವಿಧೇಯನಾಗಿರು. |
3
|
ಅವುಗಳನ್ನು ನಿನ್ನ ಬೆರಳುಗಳ ಸುತ್ತಲೂ ಕಟ್ಟಿಕೋ; ನಿನ್ನ ಹೃದಯದ ಮೇಲೆ ಬರೆದುಕೋ, |
4
|
ಜ್ಞಾನವನ್ನು ನಿನ್ನ ಸಹೋದರಿಯಂತೆ ಪ್ರೀತಿಸು. ವಿವೇಕವನ್ನು ನಿನ್ನ ಕುಟುಂಬದಂತೆ ಪ್ರೀತಿಸು. |
5
|
ಆಗ ಅವು ನಿನ್ನನ್ನು ಬೇರೆ ಹೆಂಗಸರಿಂದ ತಪ್ಪಿಸಿ ಕಾಪಾಡುತ್ತವೆ; ನಿನ್ನನ್ನು ಪಾಪಕ್ಕೆ ನಡೆಸುವಂಥ ಅವರ ಸವಿ ಮಾತುಗಳಿಂದ ತಪ್ಪಿಸಿ ಕಾಪಾಡುತ್ತವೆ. |
6
|
ಒಂದು ದಿನ ನಾನು ನನ್ನ ಮನೆಯ ಕಿಟಿಕಿಯಿಂದ ನೋಡಿದಾಗ |
7
|
ಅನೇಕ ಮೂಢ ಯೌವನಸ್ಥರನ್ನು ಕಂಡೆನು. ಅವರಲ್ಲಿ ತುಂಬಾ ಮೂಢನಾಗಿದ್ದ ಒಬ್ಬ ಯೌವನಸ್ಥನನ್ನು ಗಮನಿಸಿದೆ. |
8
|
ಅವನು ಒಬ್ಬ ಕೆಟ್ಟ ಹೆಂಗಸಿನ ಬೀದಿಯಲ್ಲಿ ಆಕೆಯ ಮನೆಯ ಕಡೆಗೆ ಹೋಗುತ್ತಿದ್ದನು. |
9
|
ಆಗ ಕತ್ತಲಾಗುತ್ತಿತ್ತು. ಸೂರ್ಯ ಮುಳುಗುತ್ತಿದ್ದನು; ರಾತ್ರಿ ಆರಂಭವಾಗುತ್ತಿತ್ತು. |
10
|
ಆ ಹೆಂಗಸು ಅವನನ್ನು ಎದುರುಗೊಳ್ಳಲು ಮನೆಯ ಹೊರಗಡೆ ಬಂದಳು. ಆಕೆಯ ಉಡುಪು ವ್ಯಭಿಚಾರಿಣಿಯ ಉಡುಪಿನಂತಿತ್ತು. ಅವನೊಡನೆ ಪಾಪಮಾಡಬೇಕೆಂಬ ಆಸೆ ಆಕೆಯಲ್ಲಿತ್ತು. |
11
|
ಅವಳು ಸುಮ್ಮನಿರದವಳೂ ಹಟಮಾರಿಯೂ ಆಗಿದ್ದಾಳೆ. ಅವಳು ಎಂದೂ ಮನೆಯಲ್ಲಿ ಇದ್ದವಳಲ್ಲ. |
12
|
ಅವಳು ಪ್ರತಿಯೊಂದು ಮೂಲೆಯಲ್ಲೂ ಗಂಡಸರನ್ನು ಬಲೆಗೆ ಹಾಕಿಕೊಳ್ಳಲು ಕಾದುಕೊಂಡಿರುವಳು. ಅವಳು ಬೀದಿಗಳಲ್ಲಿ ನಡೆದು ಹೋದಳು. |
13
|
ಅವಳು ಆ ಯೌವನಸ್ಥವನನ್ನು ಹಿಡಿದುಕೊಂಡು ಮುದ್ದಿಟ್ಟಳು. ಅವಳು ನಾಚಿಕೆಯಿಲ್ಲದೆ ಅವನಿಗೆ, |
14
|
“ಈ ದಿನ ನಾನು ಸಮಾಧಾನ ಯಜ್ಞವನ್ನು ಅರ್ಪಿಸಬೇಕಿತ್ತು. ನನ್ನ ಹರಕೆಯನ್ನು ಸಲ್ಲಿಸಿದೆನು. ಯಜ್ಞದಲ್ಲಿ ಉಳಿದ ಮಾಂಸ ನನ್ನಲ್ಲಿ ಬಹಳಷ್ಟಿದೆ. |
15
|
ಆದ್ದರಿಂದ ನನ್ನೊಂದಿಗೆ ಬರುವಂತೆ ನಿನ್ನನ್ನು ಕರೆಯಲು ಬಂದೆ. ನಿನಗಾಗಿ ಹುಡುಕಾಡಿ ಈಗ ನಿನ್ನನ್ನು ಕಂಡುಕೊಂಡೆ. |
16
|
ನನ್ನ ಹಾಸಿಗೆಯನ್ನು ಈಜಿಪ್ಟಿನ ಸುಂದರವಾದ ಹೊದಿಕೆಗಳಿಂದ ಹೊದಿಸಿ |
17
|
ಪರಿಮಳದ್ರವ್ಯವನ್ನು ಚಿಮಿಕಿಸಿರುವೆ. ಆ ಪರಿಮಳ ದ್ರವ್ಯವನ್ನು ರಕ್ತಬೋಳ, ಅಗುರು ಮತ್ತು ಲವಂಗ ಚಕ್ಕೆಗಳಿಂದ ತಯಾರಿಸಿರುವೆ. |
18
|
ಬಾ, ನಾವು ಮುಂಜಾನೆಯವರೆಗೆ ಪ್ರೇಮಿಸೋಣ; ರಾತ್ರಿಯೆಲ್ಲಾ ಸುಖಿಸೋಣ. |
19
|
ನನ್ನ ಗಂಡನು ವ್ಯಾಪಾರಕ್ಕಾಗಿ ದೂರದೇಶಕ್ಕೆ ಹೋಗಿದ್ದಾನೆ. |
20
|
ದೀರ್ಘಪ್ರಯಾಣಕ್ಕೆ ಬೇಕಾದಷ್ಟು ಹಣವನ್ನು ಅವನು ತನ್ನೊಡನೆ ತೆಗೆದುಕೊಂಡು ಹೋಗಿದ್ದಾನೆ; ಎರಡು ವಾರಗಳವರೆಗೆ ಅವನು ಮನೆಗೆ ಬರುವುದಿಲ್ಲ” ಎಂದು ಹೇಳಿದಳು. |
21
|
ಅವಳು ಆ ಯೌವನಸ್ಥನನ್ನು ಪ್ರೇರೇಪಿಸಲು ಈ ಮಾತುಗಳನ್ನಾಡಿದಳು. ಆಕೆಯ ಸವಿನುಡಿಗಳು ಅವನನ್ನು ಮರುಳುಗೊಳಿಸಿತು. |
22
|
[This verse may not be a part of this translation] |
23
|
[This verse may not be a part of this translation] |
24
|
ಗಂಡುಮಕ್ಕಳೇ, ನನಗೆ ಕಿವಿಗೊಡಿರಿ. ನಾನು ಹೇಳುವ ಮಾತುಗಳಿಗೆ ಗಮನಕೊಡಿರಿ. |
25
|
ಅಂತಹ ಹೆಂಗಸಿನ ಬಗ್ಗೆ ಯೋಚಿಸಲೂಬೇಡಿ, ಆಕೆಗಾಗಿ ಅಲೆದಾಡಲೂಬೇಡಿ. |
26
|
ಆಕೆಯಿಂದ ಅನೇಕ ಗಂಡಸರು ಬಿದ್ದುಹೋಗಿದ್ದಾರೆ; ಅವಳು ಅನೇಕ ಗಂಡಸರನ್ನು ನಾಶಮಾಡಿದ್ದಾಳೆ. |
27
|
ಅವಳ ಮನೆಯು ಪಾತಾಳದ ಮಾರ್ಗದಲ್ಲಿದೆ. ಅವಳ ದಾರಿ ನೇರವಾಗಿ ಮರಣಕ್ಕೆ ನಡೆಸುತ್ತದೆ. |