English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Numbers Chapters

Numbers 29 Verses

1 “ಏಳನೆಯ ತಿಂಗಳಿನ ಮೊದಲನೆ ದಿನದಲ್ಲಿ ವಿಶೇಷ ಸಭೆ ಸೇರಬೇಕು. ಆ ದಿನದಲ್ಲಿ ನೀವು ಯಾವ ಪ್ರಯಾಸದ ಕೆಲಸವನ್ನೂ ಮಾಡಬಾರದು. ಅದು ತುತ್ತೂರಿಗಳ ಧ್ವನಿಯಿಂದ ಪ್ರಕಟವಾಗುವ ದಿನವಾಗಿದೆ.
2 ಅದರಲ್ಲಿ ನೀವು ಯೆಹೋವನಿಗೆ ಸುಗಂಧಕರವಾದ ಸರ್ವಾಂಗಹೋಮಕ್ಕಾಗಿ ಒಂದು ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ ಸಮರ್ಪಿಸಬೇಕು. ಇವುಗಳೆಲ್ಲ ಪೂರ್ಣಾಂಗವಾದವುಗಳಾಗಿರಬೇಕು.
3 ಇವುಗಳೊಡನೆ ಧಾನ್ಯಸಮರ್ಪಣೆಗಾಗಿ ಹೋರಿಗೆ ಒಂಭತ್ತು ಸೇರು, ಟಗರಿಗೆ ಆರು ಸೇರು ಮತ್ತು
4 ಪ್ರತಿಯೊಂದು ಕುರಿಮರಿಗೆ ಮೂರು ಸೇರು, ಈ ಮೇರೆಗೆ ಎಣ್ಣೆ ಬೆರೆಸಿದ ಗೋಧಿಹಿಟ್ಟನ್ನು ಸಮರ್ಪಿಸಬೇಕು.
5 ಪಾಪಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಅರ್ಪಿಸಬೇಕು.
6 ಅಮಾವಾಸ್ಯೆಯಲ್ಲಿ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಕ್ರಮವಾಗಿ ಪ್ರತಿನಿತ್ಯ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಪಾನದ್ರವ್ಯಾರ್ಪಣೆ ಇವುಗಳಲ್ಲದೆ ಈ ಅರ್ಪಣೆಗಳನ್ನು ಅರ್ಪಿಸಬೇಕು. ಇವುಗಳನ್ನು ನಿಯಮಗಳ ಪ್ರಕಾರವಾಗಿ ಮಾಡಬೇಕು. ಅವು ಯೆಹೋವನಿಗೆ ಸುಗಂಧ ವಾಸನೆಯಾಗಿಯೂ ತ್ಯಾಗಮಯವಾದ ಕಾಣಿಕೆಯಾಗಿಯೂ ಇವೆ.
7 “ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ವಿಶೇಷ ಸಭೆ ಸೇರಬೇಕು. ಆ ದಿನದಲ್ಲಿ ನೀವು ಉಪವಾಸ ಮಾಡಬೇಕು; ಯಾವ ಕೆಲಸವನ್ನೂ ಮಾಡಬಾರದು.
8 ನೀವು ಯೆಹೋವನಿಗೆ ಸುಗಂಧಕರವಾಗಿರುವ ಸರ್ವಾಂಗಹೋಮವನ್ನಾಗಿ ಒಂದು ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನೂ ಅರ್ಪಿಸಬೇಕು. ಇವು ಪೂರ್ಣಾಂಗವಾದವುಗಳಾಗಿರಬೇಕು.
9 ಇವುಗಳೊಡನೆ, ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರೆಸಿದ ಗೋಧಿಹಿಟ್ಟನ್ನು ಒಂದು ಹೋರಿಗೆ ಒಂಭತ್ತು ಸೇರು, ಟಗರಿಗೆ ಆರು ಸೇರು
10 ಮತ್ತು ಒಂದು ಕುರಿಮರಿಗೆ ಮೂರು ಸೇರು ಸಮರ್ಪಿಸಬೇಕು.
11 ಪಾಪಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. ದೋಷಪರಿಹಾರಕ ದಿನಕ್ಕೋಸ್ಕರ ಅರ್ಪಿಸುವ ಪಾಪಪರಿಹಾರಕ ಯಜ್ಞ, ಕ್ರಮವಾಗಿ ಪ್ರತಿನಿತ್ಯ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರ ಧಾನ್ಯಾರ್ಪಣೆ ಮತ್ತು ಇವುಗಳೊಡನೆ ಅರ್ಪಿಸುವ ದ್ರವ್ಯಾರ್ಪಣೆ ಇವುಗಳಲ್ಲದೆ ಮೇಲೆ ಹೇಳಿದವುಗಳನ್ನೂ ಅರ್ಪಿಸಬೇಕು. ಇವು ಯೆಹೋವನಿಗೆ ಸುಗಂಧಕರವಾಗಿವೆ.
12 “ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ವಿಶೇಷ ಸಭೆ ಸೇರಬೇಕು. ಇದು ಪರ್ಣಶಾಲೆಗಳ ಹಬ್ಬವಾಗಿದೆ. ಆ ದಿವಸ ನೀವು ಯಾವ ಪ್ರಯಾಸದ ಕೆಲಸವನ್ನೂ ಮಾಡಬಾರದು. ಯೆಹೋವನಿಗೆ ಗೌರವಾರ್ಥವಾಗಿ “ಪರ್ಣಶಾಲೆಗಳ ಹಬ್ಬ” ವನ್ನು ನೀವು ಏಳು ದಿನಗಳವರೆಗೆ ಆಚರಿಸಬೇಕು.
13 ನೀವು ಯೆಹೋವನಿಗೆ ಸರ್ವಾಂಗಹೋಮಗಳನ್ನು ಅರ್ಪಿಸಬೇಕು. ಅದರ ಸುವಾಸನೆಯು ಯೆಹೋವನಿಗೆ ಮೆಚ್ಚಿಗೆಕರವಾಗಿದೆ. ಸರ್ವಾಂಗಹೋಮವಾಗಿ ಹದಿಮೂರು ಹೋರಿಗಳನ್ನು, ಎರಡು ಟಗರುಗಳನ್ನು ಮತ್ತು ಒಂದು ವರ್ಷದ ಹದಿನಾಲ್ಕು ಗಂಡು ಕುರಿಮರಿಗಳನ್ನು ಅರ್ಪಿಸಬೇಕು.
14 ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರೆಸಿದ ಗೋಧಿಹಿಟ್ಟನ್ನು ಅರ್ಪಿಸಬೇಕು. ಅಂದರೆ ಪ್ರತಿಯೊಂದು ಹೋರಿಗೆ ಒಂಭತ್ತು ಸೇರು, ಟಗರಿಗೆ ಆರು ಸೇರು
15 ಮತ್ತು ಒಂದು ಕುರಿಮರಿಗೆ ಮೂರು ಸೇರು ಸಮರ್ಪಿಸಬೇಕು.
16 ಕ್ರಮವಾಗಿ ಪ್ರತಿನಿತ್ಯ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಪಾನದ್ರವ್ಯಾರ್ಪಣೆಗಳಲ್ಲದೆ ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು.
17 “ಆ ಉತ್ಸವದ ಎರಡನೆಯ ದಿನದಲ್ಲಿ ನೀವು ಹನ್ನೆರಡು ಹೋರಿಗಳನ್ನು, ಎರಡು ಟಗರುಗಳನ್ನು ಮತ್ತು ಒಂದು ವರ್ಷದ ಹದಿನಾಲ್ಕು ಗಂಡು ಕುರಿಮರಿಗಳನ್ನು ಅರ್ಪಿಸಬೇಕು. ಇವುಗಳೆಲ್ಲ ಪೂರ್ಣಾಂಗವಾದವುಗಳಾಗಿರಬೇಕು.
18 ಅಲ್ಲದೆ ಈ ಪಶುಗಳಲ್ಲಿ ಪ್ರತಿಯೊಂದಕ್ಕೂ ನೇಮಕಗೊಂಡ ಧಾನ್ಯಾರ್ಪಣೆಯನ್ನು ಮತ್ತು ಪಾನದ್ರವ್ಯಾರ್ಪಣೆಯನ್ನು ಸರಿಯಾದ ಪ್ರಮಾಣದಲ್ಲಿ ಅರ್ಪಿಸಬೇಕು.
19 ಪಾಪಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. ಕ್ರಮವಾಗಿ ಪ್ರತಿನಿತ್ಯ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಪಾನದ್ರವ್ಯಾರ್ಪಣೆಗಳಲ್ಲದೆ ಮೇಲೆ ಹೇಳಿದವುಗಳನ್ನೂ ಅರ್ಪಿಸಬೇಕು.
20 “ಈ ಉತ್ಸವದ ಮೂರನೆಯ ದಿನದಲ್ಲಿ ನೀವು ಹನ್ನೊಂದು ಹೋರಿಗಳನ್ನು, ಎರಡು ಟಗರುಗಳನ್ನು ಮತ್ತು ಒಂದು ವರ್ಷದ ಹದಿನಾಲ್ಕು ಗಂಡು ಕುರಿಮರಿಗಳನ್ನು ಅರ್ಪಿಸಬೇಕು. ಇವುಗಳು ಪೂರ್ಣಾಂಗವಾದವುಗಳಾಗಿರಬೇಕು.
21 ಈ ಪಶುಗಳಲ್ಲಿ ಪ್ರತಿಯೊಂದಕ್ಕೂ ನೇಮಕವಾಗಿರುವ ಧಾನ್ಯಾರ್ಪಣೆಯನ್ನು ಮತ್ತು ಪಾನದ್ರವ್ಯಾರ್ಪಣೆಯನ್ನು ಸರಿಯಾದ ಪ್ರಮಾಣದಲ್ಲಿ ಅರ್ಪಿಸಬೇಕು.
22 ದೋಷಪರಿಹಾರಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. ಕ್ರಮಾನುಸಾರವಾದ ದೈನಂದಿನ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಪಾನದ್ರವ್ಯಾರ್ಪಣೆಗಳಲ್ಲದೆ ಮೇಲ್ಕಂಡವುಗಳನ್ನು ಅರ್ಪಿಸಬೇಕು.
23 “ಈ ಉತ್ಸವದ ನಾಲ್ಕನೆಯ ದಿನದಲ್ಲಿ ನೀವು ಹತ್ತು ಹೋರಿಗಳನ್ನು, ಎರಡು ಟಗರುಗಳನ್ನು ಮತ್ತು ಒಂದು ವರ್ಷದ ಹದಿನಾಲ್ಕು ಗಂಡು ಕುರಿಮರಿಗಳನ್ನು ಅರ್ಪಿಸಬೇಕು. ಇವು ಪೂರ್ಣಾಂಗವುಳ್ಳವುಗಳಾಗಿರಬೇಕು.
24 ಈ ಪಶುಗಳಲ್ಲಿ ಪ್ರತಿಯೊಂದಕ್ಕೆ ನೇಮಕವಾದ ಪ್ರಕಾರವೇ ಧಾನ್ಯಾರ್ಪಣೆಯನ್ನು ಮತ್ತು ಪಾನದ್ರವ್ಯಾರ್ಪಣೆಯನ್ನು ಸರಿಯಾದ ಪ್ರಮಾಣದಲ್ಲಿ ಅರ್ಪಿಸಬೇಕು.
25 ಪಾಪಪರಿಹಾರಕಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. ಕ್ರಮವಾಗಿ ಪ್ರತಿನಿತ್ಯ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಪಾನದ್ರವ್ಯಾರ್ಪಣೆಗಳಲ್ಲದೆ ಮೇಲೆ ಹೇಳಿದವುಗಳನ್ನೂ ಅರ್ಪಿಸಬೇಕು.
26 “ಈ ಉತ್ಸವದ ಐದನೆಯ ದಿನದಲ್ಲಿ ನೀವು ಒಂಭತ್ತು ಹೋರಿಗಳನ್ನು, ಎರಡು ಟಗರುಗಳನ್ನು ಮತ್ತು ಒಂದು ವರ್ಷದ ಹದಿನಾಲ್ಕು ಗಂಡು ಕುರಿಮರಿಗಳನ್ನು ಅರ್ಪಿಸಬೇಕು. ಇವುಗಳೆಲ್ಲಾ ಪೂರ್ಣಾಂಗವಾದವುಗಳಾಗಿರಬೇಕು.
27 ಈ ಪಶುಗಳಲ್ಲಿ ಪ್ರತಿಯೊಂದಕ್ಕೂ ನೇಮಕಗೊಂಡ ಧಾನ್ಯಾರ್ಪಣೆಯನ್ನು ಮತ್ತು ಪಾನದ್ರವ್ಯಾರ್ಪಣೆಯನ್ನು ಸರಿಯಾದ ಪ್ರಮಾಣದಲ್ಲಿ ಅರ್ಪಿಸಬೇಕು.
28 ಪಾಪಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. ಕ್ರಮವಾದ ದೈನಂದಿನ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸಬೇಕಾದ ಧಾನ್ಯಾರ್ಪಣೆ ಮತ್ತು ಪಾನದ್ರವ್ಯಾರ್ಪಣೆಗಳಲ್ಲದೆ ಮೇಲೆ ಹೇಳಿದವುಗಳನ್ನೂ ಅರ್ಪಿಸಬೇಕು.
29 “ಈ ಉತ್ಸವದ ಆರನೆಯ ದಿನದಲ್ಲಿ ನೀವು ಎಂಟು ಹೋರಿಗಳನ್ನು, ಎರಡು ಟಗರುಗಳನ್ನು ಮತ್ತು ಒಂದು ವರ್ಷದ ಹದಿನಾಲ್ಕು ಗಂಡು ಕುರಿಮರಿಗಳನ್ನು ಅರ್ಪಿಸಬೇಕು. ಇವುಗಳೆಲ್ಲ ಪೂರ್ಣಾಂಗವುಳ್ಳವುಗಳಾಗಿರಬೇಕು.
30 ಈ ಪಶುಗಳಲ್ಲಿ ಪ್ರತಿಯೊಂದಕ್ಕೆ ನೇಮಕವಾದ ಪ್ರಕಾರವೇ ಧಾನ್ಯಾರ್ಪಣೆಯನ್ನೂ ಪಾನದ್ರವ್ಯಾರ್ಪಣೆಯನ್ನೂ ಸರಿಯಾದ ಪ್ರಮಾಣದಲ್ಲಿ ಮಾಡಬೇಕು.
31 ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. ಕ್ರಮವಾಗಿ ಪ್ರತಿನಿತ್ಯ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಪಾನದ್ರವ್ಯಾರ್ಪಣೆಗಳಲ್ಲದೆ ಮೇಲೆ ಹೇಳಿದವುಗಳನ್ನೂ ಅರ್ಪಿಸಬೇಕು.
32 “ಈ ಉತ್ಸವದ ಏಳನೆಯ ದಿನದಲ್ಲಿ ನೀವು ಏಳು ಹೋರಿಗಳನ್ನು, ಎರಡು ಟಗರುಗಳನ್ನು ಮತ್ತು ಒಂದು ವರ್ಷದ ಹದಿನಾಲ್ಕು ಗಂಡು ಕುರಿಮರಿಗಳನ್ನು ಅರ್ಪಿಸಬೇಕು. ಅವುಗಳೆಲ್ಲ ಪೂರ್ಣಾಂಗವಾದವುಗಳಾಗಿರಬೇಕು.
33 ಈ ಪಶುಗಳಲ್ಲಿ ಪ್ರತಿಯೊಂದಕ್ಕೆ ನೇಮಕವಾದ ಪ್ರಕಾರವೇ ಧಾನ್ಯಾರ್ಪಣೆಗಳನ್ನು ಮತ್ತು ಪಾನದ್ರವ್ಯಾರ್ಪಣೆಗಳನ್ನು ಸರಿಯಾದ ಪ್ರಮಾಣದಲ್ಲಿ ಅರ್ಪಿಸಬೇಕು.
34 ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. ಕ್ರಮವಾಗಿ ಪ್ರತಿನಿತ್ಯ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಪಾನದ್ರವ್ಯಾರ್ಪಣೆಗಳಲ್ಲದೆ ಮೇಲೆ ಹೇಳಿದವುಗಳನ್ನೂ ಅರ್ಪಿಸಬೇಕು.
35 “ಎಂಟನೆಯ ದಿನದಲ್ಲಿ ಮುಕ್ತಾಯ ಸಭಾಕೂಟವಿರುವುದು. ಆ ದಿನದಲ್ಲಿ ಯಾವ ಪ್ರಯಾಸದ ಕೆಲಸವನ್ನೂ ಮಾಡಬಾರದು.
36 ನೀವು ಈ ಕೆಳಕಂಡವುಗಳನ್ನು ಯೆಹೋವನಿಗೆ ಸುಗಂಧಕರವಾದ ತ್ಯಾಗಮಯವಾದ ಸರ್ವಾಂಗಹೋಮವನ್ನಾಗಿ ಒಂದು ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನೂ ಅರ್ಪಿಸಬೇಕು. ಇವುಗಳೆಲ್ಲ ಪೂರ್ಣಾಂಗವಾದವುಗಳಾಗಿರಬೇಕು.
37 ಈ ಪಶುಗಳಲ್ಲಿ ಪ್ರತಿಯೊಂದಕ್ಕೆ ನೇಮಕವಾದ ಪ್ರಕಾರವೇ ಧಾನ್ಯಾರ್ಪಣೆಗಳನ್ನು ಮತ್ತು ಪಾನದ್ರವ್ಯಾರ್ಪಣೆಗಳನ್ನು ಸರಿಯಾದ ಪ್ರಮಾಣದಲ್ಲಿ ಅರ್ಪಿಸಬೇಕು.
38 ಪಾಪಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. ಕ್ರಮವಾಗಿ ಪ್ರತಿನಿತ್ಯ ಅರ್ಪಿಸುವ ಸರ್ವಾಂಗಹೋಮ ಮತ್ತು ಅದರೊಡನೆ ಅರ್ಪಿಸುವ ಧಾನ್ಯಾರ್ಪಣೆ ಮತ್ತು ಅದರ ಪಾನದ್ರವ್ಯಾರ್ಪಣೆಗಳಲ್ಲದೆ ಮೇಲೆ ಹೇಳಿದವುಗಳನ್ನೂ ಅರ್ಪಿಸಬೇಕು.
39 “ಮೇಲೆ ತಿಳಿಸಿರುವ ಸಾರ್ವಜನಿಕ ಯಜ್ಞಗಳನ್ನು ಇಡೀ ಸಮುದಾಯಕ್ಕೋಸ್ಕರ ಹಬ್ಬದ ದಿನಗಳಲ್ಲಿ ನಿಮ್ಮ ಸರ್ವಾಂಗಹೋಮಗಳನ್ನಾಗಿಯೂ ಧಾನ್ಯಾರ್ಪಣೆಗಳನ್ನಾಗಿಯೂ ಪಾನದ್ರವ್ಯಾರ್ಪಣೆಗಳನ್ನಾಗಿಯೂ ಮತ್ತು ಸಮಾಧಾನಯಜ್ಞಗಳನ್ನಾಗಿಯೂ ಅರ್ಪಿಸಬೇಕು. ನಿಮ್ಮ ವೈಯಕ್ತಿಕ ಹರಕೆಯ ಅರ್ಪಣೆ ಮತ್ತು ಸ್ವಯಿಚ್ಛಾರ್ಪಣೆಗಳಲ್ಲದೆ ಮೇಲೆ ಹೇಳಿದವುಗಳನ್ನೂ ಅರ್ಪಿಸಬೇಕು.”
40 ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ಮೋಶೆಯು ಇಸ್ರೇಲರಿಗೆ ತಿಳಿಸಿದನು.
×

Alert

×