ಗೋಡೆಯ ಕೆಲಸ ಪೂರ್ತಿಯಾದ ಬಳಿಕ ದ್ವಾರಗಳಿಗೆ ಬಾಗಿಲುಗಳನ್ನು ಇಡಲು ಪ್ರಾರಂಭಿಸಿದೆವು. ಮತ್ತು ಬಾಗಿಲುಗಳಿಗೆ ಕಾವಲುಗಾರರನ್ನು ನೇಮಿಸಿದೆವು. ದೇವಾಲಯದಲ್ಲಿ ಬೇಕಾಗಿರುವ ಗಾಯಕರನ್ನು ಮತ್ತು ಯಾಜಕರಿಗೆ ಬೇಕಾದ ಸಹಾಯಕರನ್ನು ಆರಿಸಿದೆವು.
ಇದಾದ ಬಳಿಕ ನನ್ನ ಸಹೋದರ ಹಾನಾನಿಯನನ್ನು ಜೆರುಸಲೇಮಿಸ ಆಡಳಿತಗಾರನನ್ನಾಗಿ ನೇಮಿಸಿದೆನು. ಹನನ್ಯನನ್ನು ಜೆರುಸಲೇಮಿನ ಕೋಟೆಗೆ ಅಧಿಪತಿಯನ್ನಾಗಿ ಆರಿಸಿದೆನು. ಹಾನಾನಿಯು ನಂಬಿಗಸ್ತನೂ ದೇವರಿಗೆ ಭಯಪಡುವವನೂ ಆಗಿದ್ದುದರಿಂದ ನಾನು ಅವನನ್ನು ಆರಿಸಿಕೊಂಡೆನು.
ಹನಾನಿಗೆ ಮತ್ತು ಹನನ್ಯನಿಗೆ ನಾನು ಆಜ್ಞಾಪಿಸಿದ್ದೇನೆಂದರೆ: “ಸೂರ್ಯೋದಯವಾಗಿ ಕೆಲವು ತಾಸು ಕಳೆದ ಮೇಲೆಯೇ ನೀವು ಜೆರುಸಲೇಮಿನ ಬಾಗಿಲುಗಳನ್ನು ತೆರೆಯಬೇಕು; ಸೂರ್ಯನು ಮುಳುಗುವ ಮೊದಲೇ ನೀವು ಬಾಗಿಲುಗಳನ್ನು ಮುಚ್ಚಿ ಬೀಗ ಹಾಕಬೇಕು. ಜೆರುಸಲೇಮಿನಲ್ಲಿ ವಾಸವಾಗಿರುವವರನ್ನೇ ಕಾವಲುಗಾರರನ್ನಾಗಿ ಆರಿಸಿಕೊಳ್ಳಿರಿ. ವಿಶೇಷವಾದ ಸ್ಥಳಗಳಲ್ಲಿ ಪಟ್ಟಣವನ್ನು ಕಾಯುವುದಕ್ಕಾಗಿ ಅವರಲ್ಲಿ ಕೆಲವರನ್ನು ನೇಮಿಸಿರಿ; ಉಳಿದವರನ್ನು ಅವರವರ ಮನೆಯ ಸಮೀಪದಲ್ಲಿಯೇ ಕಾಯಲು ನೇಮಿಸಿರಿ.”
ಆದ್ದರಿಂದ ನನ್ನ ದೇವರು ನಮ್ಮ ಜನರನ್ನು ಒಟ್ಟುಗೂಡಿಸುವಂತೆ ನನ್ನನ್ನು ಪ್ರೇರೇಪಿಸಿದನು. ಅಂತೆಯೇ ನಾನು ಎಲ್ಲಾ ಗಣ್ಯರನ್ನು, ಅಧಿಕಾರಿಗಳನ್ನು ಮತ್ತು ಸಾಮಾನ್ಯರನ್ನು ಒಟ್ಟಾಗಿ ಸೇರಿಬರಲು ಆಮಂತ್ರಿಸಿದೆನು. ಇವರ ಕುಟುಂಬಗಳ ಪಟ್ಟಿಯನ್ನು ನಾನು ಮಾಡಬೇಕಿತ್ತು. ಮೊಟ್ಟಮೊದಲನೆಯ ಸಾರಿ ಸೆರೆಯಿಂದ ಹಿಂತಿರುಗಿ ಬಂದ ಸಂಸಾರಗಳ ಪಟ್ಟಿಯು ನನಗೆ ದೊರೆಯಿತು. ಅದರ ವಿವರ ಹೀಗಿದೆ:
ಬಹಳ ಕಾಲದ ಹಿಂದೆ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಇವರನ್ನು ಸೆರೆಯಾಳುಗಳನ್ನಾಗಿ ಬಾಬಿಲೋನಿಗೆ ಒಯ್ದಿದ್ದನು. ಇವರು ಹಿಂದೆ ಜೆರುಸಲೇಮಿಗೂ ಯೆಹೂದ ಪ್ರಾಂತ್ಯಕ್ಕೂ ಹಿಂತಿರುಗಿ ತಮ್ಮತಮ್ಮ ಊರುಗಳಿಗೆ ಹೋಗಿ ನೆಲೆಸಿದರು.
ಇವರು ಜೆರುಬ್ಬಾಬೆಲ್ನೊಂದಿಗೆ ಹಿಂತಿರುಗಿದರು. ಯೇಷೂವ, ನೆಹೆಮೀಯ, ಅಜರ್ಯ, ರಗಮ್ಯ, ನಹಮಾನೀ, ಮೊರ್ದೆಕೈ, ಬಿಲ್ಷಾನ್, ಮಿಸ್ಪೆರೆತ್, ಬಿಗ್ವೈ, ನೆಹೂಮ್ ಮತ್ತು ಬಾಣ. ಇಸ್ರೇಲಿನ ಜನರಲ್ಲಿ ಹಿಂದೆ ಬಂದವರ ವಿವರ:
ತೇಲ್ಮೆಲಹ ತೇಲ್ಹರ್ಷ, ಕೆರೂಬದ್ದೋನ್ ಮತ್ತು ಇಮ್ಮೇರ್ ಪಟ್ಟಣಗಳಿಂದ ಜೆರುಸಲೇಮಿಗೆ ಕೆಲವು ಮಂದಿ ಬಂದರು. ಆದರೆ ಇವರು ನಿಜವಾಗಿಯೂ ಇಸ್ರೇಲ್ ಜನಾಂಗದವರೆಂಬದಾಗಿ ಅವರಿಗೆ ರುಜುವಾತು ಮಾಡಲಾಗಲಿಲ್ಲ.
ಇವರು ತಮ್ಮ ವಂಶಾವಳಿಯ ಪತ್ರಗಳನ್ನು ಹುಡುಕಾಡಿದರೂ ಸಿಗಲಿಲ್ಲ. ತಮ್ಮ ಪೂರ್ವಿಕರು ಯಾಜಕರೆಂದು ರುಜುವಾತು ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಯಾಜಕ ಪಟ್ಟಿಯಲ್ಲಿ ಅವರನ್ನು ಸೇರಿಸಲಿಲ್ಲ.
ಇವರ ಗೋತ್ರಪ್ರಧಾನರಲ್ಲಿ ಕೆಲವರು ಕೆಲಸಕ್ಕಾಗಿ ಹಣವನ್ನು ದಾನವಾಗಿ ಕೊಟ್ಟರು. ರಾಜ್ಯಪಾಲನು ಹತ್ತೊಂಭತ್ತು ಪೌಂಡು ಬಂಗಾರವನ್ನು. ಐವತ್ತು ಬೋಗುಣಿಗಳನ್ನು ಮತ್ತು ಐನೂರ ಮೂವತ್ತು ಯಾಜಕರ ವಸ್ತ್ರಗಳನ್ನು ಕೊಟ್ಟನು.
ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು ಮತ್ತು ದೇವಾಲಯದ ಸೇವಕರು ತಮ್ಮ ತಮ್ಮ ಊರುಗಳಿಗೆ ಹೋಗಿ ನೆಲೆಸಿದರು. ಇತರ ಎಲ್ಲಾ ಇಸ್ರೇಲರು ತಮ್ಮ ಪಟ್ಟಣಗಳಲ್ಲಿ ನೆಲೆಸಿದರು. ಆ ವರ್ಷದ ಏಳನೆಯ ತಿಂಗಳಲ್ಲಿ ಎಲ್ಲಾ ಇಸ್ರೇಲರು ತಮ್ಮತಮ್ಮ ಪಟ್ಟಣಗಳಲ್ಲಿ ನೆಲೆಸಿದರು.