ಆಗ ಅವನು ನನಗೆ ಹೇಳಿದ್ದೇನಂದರೆ--ದೇಶದ ಮೇಲೆಲ್ಲಾ ಹೊರಡುವ ಶಾಪವು ಇದೇ; ಕಳ್ಳತನ ಮಾಡುವವರೆಲ್ಲರು ಈ ದಿಕ್ಕಿನ ಪ್ರಕಾರ ತೆಗೆದುಹಾಕಲ್ಪಡುವರು; ಆಣೆ ಇಡುವವರೆಲ್ಲರು ಆ ಕಡೆ ಅದರ ಪ್ರಕಾರ ತೆಗೆದುಹಾಕಲ್ಪಡುವರು.
ನಾನು ಅದನ್ನು ಹೊರಗೆ ತರುತ್ತೇನೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ; ಅದು ಕಳ್ಳನ ಮನೆಯಲ್ಲಿಯೂ ನನ್ನ ಹೆಸರಿನಿಂದ ಸುಳ್ಳಾಗಿ ಆಣೆಯಿಡುವವನ ಮನೆಯ ಲ್ಲಿಯೂ ಪ್ರವೇಶಿಸಿ ಅವನ ಮನೆಯ ಮಧ್ಯದಲ್ಲಿ ನಿಂತು ಅದರ ಮರಗಳನ್ನೂ ಅದರ ಕಲ್ಲುಗಳನ್ನೂ ಅಳಿಸಿಬಿಡುವದು ಅಂದನು.
ಆಗ ನಾನು ಕಣ್ಣುಗಳನ್ನೆತ್ತಿ ನೋಡಿದಾಗ ಇಗೋ, ಇಬ್ಬರು ಸ್ತ್ರೀಯರು ಹೊರಟರು; ಅವರ ರೆಕ್ಕೆಗಳಲ್ಲಿ ಗಾಳಿ ಇತ್ತು; ಹೌದು, ಅವರ ರೆಕ್ಕೆಗಳು ಕೊಕ್ಕರೆಯ ರೆಕ್ಕೆಗಳ ಹಾಗಿದ್ದವು; ಅವರು ಎಫವನ್ನು ಆಕಾಶಕ್ಕೂ ಭೂಮಿಗೂ ಮಧ್ಯದಲ್ಲಿ ಎತ್ತಿದರು.