1
|
ಬೋವಜನು ಪಟ್ಟಣದ ಬಾಗಲಲ್ಲಿ ಹೋಗಿ ಕುಳಿತಿರುವಾಗ ಇಗೋ, ಬೋವಜನು ಹೇಳಿದ್ದ ಆ ಸಂಬಂಧಿಕನು ಹಾದು ಹೋಗುತ್ತಿದ್ದನು. ಆಗ ಅವನು ಓ ಮನುಷ್ಯನೇ, ಈ ಕಡೆಗೆ ಬಂದು ಇಲ್ಲಿ ಕೂತುಕೋ ಅಂದನು. ಅವನು ಬಂದು ಕೂತುಕೊಂಡನು. |
2
|
ಆಗ ಬೋವಜನು ಪಟ್ಟಣದ ಹಿರಿಯರಲ್ಲಿ ಹತ್ತು ಮಂದಿ ಯನ್ನು ಕರೆದು ಅವರಿಗೆ ಇಲ್ಲಿ ಕುಳಿತುಕೊಳ್ಳಿರಿ ಅಂದನು. ಅವರು ಕುಳಿತರು. |
3
|
ಆಗ ಅವನು ಆ ಬಂಧುವಿಗೆ ಹೇಳಿದ್ದೇನಂದರೆ ಮೋವಾಬ್ ಸೀಮೆ ಯಿಂದ ತಿರಿಗಿ ಬಂದ ನೊವೊಮಿಯು ನಮ್ಮ ಸಹೋದರನಾದ ಎಲೀಮೆಲೆಕನಿಗೆ ಇದ್ದ ಹೊಲದ ಪಾಲನ್ನು ಮಾರಿ ಬಿಡಬೇಕೆಂದಿರುತ್ತಾಳೆ. |
4
|
ನಾನು ನಿನಗೆ ಹೇಳಬೇಕೆಂದಿದ್ದೇನಂದರೆ -- ನಿವಾಸಿಗಳ ಮುಂದೆಯೂ ನನ್ನ ಜನರಾದ ಹಿರಿಯರ ಮುಂದೆಯೂ ಅದನ್ನು ಕೊಂಡುಕೊಂಡು ಬಿಡಿಸಿಕೊಂಡರೆ ಬಿಡಿಸಿಕೋ ಬಿಡಿಸಿಕೊಳ್ಳದಿದ್ದರೆ ನಾನು ತಿಳುಕೊಳ್ಳುವ ಹಾಗೆ ನನಗೆ ಹೇಳು; ಯಾಕಂದರೆ ನೀನೂ ನಿನ್ನ ತರುವಾಯ ನಾನೂ ಅಲ್ಲದೆ ಬಿಡಿಸಿಕೊಳ್ಳುವವನು ಯಾರೂ ಇಲ್ಲ ಅಂದನು. |
5
|
ಅದಕ್ಕೆ ಅವನು ನಾನು ಬಿಡಿಸಿಕೊಳ್ಳುವೆನು ಅಂದನು. ಆಗ ಬೋವಜನು ನೀನು ನೊವೊಮಿಯಿಂದ ಆ ಹೊಲವನ್ನು ಕೊಂಡು ಕೊಳ್ಳುವ ದಿವಸದಲ್ಲಿ ಸತ್ತವನ ಬಾಧ್ಯತೆಯಲ್ಲಿ ಅವನ ಹೆಸರನ್ನು ಸ್ಥಿರಮಾಡುವ ಹಾಗೆ ಅವನ ಹೆಂಡತಿಯಾಗಿರುವ ಮೋವಾಬ್ಯಳಾದ ರೂತ ಳಿಂದಲೂ ಅದನ್ನು ಕೊಂಡುಕೊಳ್ಳಬೇಕು ಅಂದನು. |
6
|
ಅದಕ್ಕೆ ಬಂಧುವು ನಾನು ನನ್ನ ಬಾಧ್ಯತೆಯನ್ನು ಕೆಡಿಸಿಕೊಳ್ಳದ ಹಾಗೆ ಅದನ್ನು ಬಿಡಿಸಿಕೊಳ್ಳಲಾರೆನು; ನಾನು ಬಿಡಿಸಿಕೊಳ್ಳತಕ್ಕದ್ದನ್ನು ನೀನು ಬಿಡಿಸಿಕೋ; |
7
|
ನಾನು ಬಿಡಿಸಿಕೊಳ್ಳಲಾರೆನು ಅಂದನು. ಬಿಡಿಸಿಕೊಳ್ಳು ವದರಲ್ಲಿಯೂ ಬದಲು ಮಾಡುವದರಲ್ಲಿಯೂ ಸಕಲ ಕಾರ್ಯಗಳೂ ದೃಢವಾಗುವ ಹಾಗೆ ಇಸ್ರಾಯೇಲಿನಲ್ಲಿ ಪೂರ್ವದವಾಡಿಕೆ ಏನಂದರೆ, ಒಬ್ಬನು ತನ್ನ ಕೆರವನ್ನು ತೆಗೆದು ತನ್ನ ನೆರೆಯವನಿಗೆ ಕೊಡುವನು. ಇದು ಇಸ್ರಾಯೇಲಿನಲ್ಲಿ ಸಾಕ್ಷಿಗಾದದ್ದು. |
8
|
ಹಾಗೆಯೇ ಆ ಬಂಧುವು ಬೋವಜನಿಗೆ--ನೀನು ನಿನಗೋಸ್ಕರ ಅದನ್ನು ಕೊಂಡುಕೋ ಎಂದು ತನ್ನ ಕೆರವನ್ನು ತೆಗೆದು ಹಾಕಿದನು. |
9
|
ಆಗ ಬೋವಜನು ಹಿರಿಯರಿಗೂ ಸಮಸ್ತ ಜನ ರಿಗೂ ನಾನು ಎಲೀಮೆಲೆಕನಿಗೆ ಇದ್ದ ಎಲ್ಲವನ್ನೂ ಕಿಲ್ಯೋನನಿಗೂ ಮಹ್ಲೋನನಿಗೂ ಇದ್ದ ಎಲ್ಲವನ್ನೂ ನೊವೊಮಿಯ ಕೈಯಿಂದ ಕೊಂಡುಕೊಂಡೆನು ಎಂಬ ದಕ್ಕೆ ಈ ಹೊತ್ತು ನೀವು ಸಾಕ್ಷಿಗಳಾಗಿದ್ದೀರಿ ಅಂದನು. |
10
|
ಇದಲ್ಲದೆ ಸತ್ತವನ ಸಹೋದರರಿಂದಲೂ ಅವನ ಸ್ಥಳದ ಬಾಗಲದಿಂದಲೂ ಅವನ ಹೆಸರು ಕಡಿದು ಹಾಕಲ್ಪಡದ ಹಾಗೆ ಸತ್ತವನ ಬಾಧ್ಯತೆಯಲ್ಲಿ ಅವನ ಹೆಸರನ್ನು ಸ್ಥಿರಮಾಡಲು ನಾನು ಮಹ್ಲೋನನ ಹೆಂಡತಿಯಾಗಿದ್ದ ಮೋವಾಬ್ಯಳಾದ ರೂತಳನ್ನು ನನಗೆ ಹೆಂಡತಿಯಾಗಿ ಕೊಂಡುಕೊಂಡೆನು. |
11
|
ಇದಕ್ಕೆ ಈ ಹೊತ್ತು ನೀವು ಸಾಕ್ಷಿಗಳಾಗಿದ್ದೀರಿ ಅಂದನು. ಆಗ ಬಾಗಲಲ್ಲಿರುವ ಸಮಸ್ತ ಜನರೂ ಹಿರಿಯರೂ ಹೇಳಿದ್ದೇನಂದರೆ--ನಾವು ಸಾಕ್ಷಿಗಳೇ; ನಿನ್ನ ಮನೆಯಲ್ಲಿ ಬಂದ ಸ್ತ್ರೀಯನ್ನು ಕರ್ತನು ಇಸ್ರಾಯೇಲ್ ಮನೆಯನ್ನು ಕಟ್ಟಿದ ಇಬ್ಬರಾದ ರಾಹೇಲಳ ಹಾಗೆಯೂ ಲೇಯಳ ಹಾಗೆಯೂ ಮಾಡುವ ವನಾಗಲಿ; ಎಫ್ರಾತದಲ್ಲಿ ಯೋಗ್ಯ ಕಾರ್ಯ ಮಾಡು, ಬೇತ್ಲೆಹೇಮಿನಲ್ಲಿ ಹೆಸರುಗೊಂಡವನಾಗಿರು. |
12
|
ಈ ಹುಡುಗಿಯಿಂದ ಕರ್ತನು ನಿನಗೆ ಕೊಡುವ ಸಂತಾನದಿಂದ ನಿನ್ನ ಮನೆಯೂ ತಾಮರಳು ಯೂದ ನಿಗೆ ಹೆತ್ತ ಪೆರೆಚನ ಮನೆಯ ಹಾಗೆಯೇ ಆಗಲಿ ಅಂದರು. |
13
|
ಬೋವಜನು ರೂತಳನ್ನು ತೆಗೆದುಕೊಂಡನು; ಅವಳು ಅವನಿಗೆ ಹೆಂಡತಿಯಾದಳು. ಅವನು ಅವಳನ್ನು ಕೂಡಿದಾಗ ಕರ್ತನು ಅವಳಿಗೆ ಗರ್ಭ ತೆರೆದದ್ದರಿಂದ ಅವಳು ಮಗನನ್ನು ಹೆತ್ತಳು. |
14
|
ಆಗ ಸ್ತ್ರೀಯರು ನೊವೊಮಿಗೆ ಹೇಳಿದ್ದೇನಂದರೆ--ಇಸ್ರಾಯೇಲಿನಲ್ಲಿ ಹೆಸರುಗೊಳ್ಳುವ ಸಂಬಂಧಿಕನು ನಿನಗೆ ಒಬ್ಬನಿಲ್ಲದ ಹಾಗೆ ಮಾಡದೆ ಇರುವ ಕರ್ತನು ಆಶೀರ್ವದಿಸಲ್ಪಡಲಿ. |
15
|
ಅವನು ನಿನಗೆ ಪ್ರಾಣವನ್ನು ಪುನರ್ಜೀವಿಸುವವ ನಾಗಿಯೂ ನಿನ್ನ ವೃದ್ಧ ವಯಸ್ಸಿನಲ್ಲಿ ಸಂರಕ್ಷಿಸುವವ ನಾಗಿಯೂ ಇರುವನು. ಯಾಕಂದರೆ ನಿನ್ನನ್ನು ಪ್ರೀತಿ ಮಾಡುವ ಏಳು ಮಂದಿ ಮಕ್ಕಳಿಗಿಂತ ನಿನಗೆ ಉತ್ತಮ ಳಾಗಿರುವ ನಿನ್ನ ಸೊಸೆಯು ಅವನನ್ನು ಹೆತ್ತಳು ಅಂದರು. |
16
|
ನೊವೊಮಿಯು ಆ ಮಗುವನ್ನು ಎತ್ತಿ ತನ್ನ ಉಡಿಲಲ್ಲಿ ಇಟ್ಟುಕೊಂಡು ಅದಕ್ಕೆ ದಾದಿಯಾದಳು. |
17
|
ಆಗ ನೆರೆಮನೆಯ ಸ್ತ್ರೀಯರು--ನೊವೊಮಿಗೆ ಒಬ್ಬ ಮಗನು ಹುಟ್ಟಿದ್ದಾನೆಂದು ಹೇಳಿ ಅವನಿಗೆ ಓಬೇದನೆಂದು ಹೆಸರಿಟ್ಟರು. ಇವನೇ ದಾವೀದನ ತಂದೆಯಾದ ಇಷಯನಿಗೆ ತಂದೆ ಯಾದವನು. |
18
|
ಪೆರೆಚನ ಸಂತತಿ ಯಾವದಂದರೆ--ಪೆರೆಚನು, ಹೆಚ್ರೋನನನ್ನು ಪಡೆದನು; ಹೆಚ್ರೋನನು ರಾಮ ನನ್ನು ಪಡೆದನು; |
19
|
ರಾಮನು ಅವ್ಮೆಾನಾದಾಬನನ್ನು ಪಡೆದನು; |
20
|
ಅವ್ಮೆಾನಾದಾಬನು ನಹಶೋನನನ್ನು ಪಡೆದನು; |
21
|
ನಹಶೋನನು ಸಲ್ಮೋನನನ್ನು ಪಡೆ ದನು; ಸಲ್ಮೋನನು ಬೋವಜನನ್ನು ಪಡೆದನು; |
22
|
ಬೋವಜನು ಓಬೇದನನ್ನು ಪಡೆದನು; ಓಬೇದನು ಇಷಯನನ್ನು ಪಡೆದನು; ಇಷಯನು ದಾವೀದನನ್ನು ಪಡೆದನು. |
Ruth 4:4 Kannada Language Bible Words basic statistical display
COMING SOON ...