1
|
ನನ್ನ ಮಗನೇ, ನನ್ನ ಮಾತುಗಳನ್ನು ಅನುಸರಿಸಿ ನನ್ನ ಆಜ್ಞೆಗಳನ್ನು ನಿನ್ನಲ್ಲಿ ಇಟ್ಟುಕೋ. |
2
|
ನನ್ನ ಅಜ್ಞೆಗಳನ್ನು ಅನುಸರಿಸಿ ಬಾಳು; ನಿನ್ನ ಕಣ್ಣು ಗುಡ್ಡೆಯಂತೆ ನನ್ನ ಕಟ್ಟಳೆಯನ್ನು ಕಾಪಾಡು. |
3
|
ಅವುಗ ಳನ್ನು ನಿನ್ನ ಬೆರಳುಗಳಿಗೆ ಕಟ್ಟಿಕೋ, ನಿನ್ನ ಹೃದಯದ ಹಲಗೆಯಲ್ಲಿ ಅವುಗಳನ್ನು ಬರೆ. |
4
|
ಜ್ಞಾನಕ್ಕೆ--ನೀನು ನನ್ನ ಸಹೋದರಿ ಎಂದೂ ವಿವೇಕವು ನನ್ನ ಬಂಧು ಎಂದೂ ಹೇಳು; |
5
|
ಪರಸ್ತ್ರೀಯಿಂದಲೂ ತನ್ನ ಮಾತು ಗಳಿಂದ ಮುಖಸ್ತುತಿ ಮಾಡುವ ಅನ್ಯಳಿಂದಲೂ ಅವು ನಿನ್ನನ್ನು ಕಾಪಾಡುವವು. |
6
|
ನನ್ನ ಮನೆಯ ಕಿಟಿಕಿಯ ಜಾಲರಿಯಿಂದ ದೃಷ್ಟಿ ಸುವವನಾಗಿ ಜ್ಞಾನಹೀನರಾದವರಲ್ಲಿ ನೋಡಿದಾಗ |
7
|
ಯುವಕರ ಮಧ್ಯದಲ್ಲಿ ತಿಳುವಳಿಕೆಯಿಲ್ಲದ ಒಬ್ಬ ಯೌವನಸ್ಥನನ್ನು ಕಂಡೆನು. |
8
|
ಅವನು ಅವಳ ಮೂಲೆಯ ಬೀದಿಯಿಂದ ಹಾದುಹೋಗುತ್ತಾ |
9
|
ಸಂಜೆಯ ಮೊಬ್ಬಿನಲ್ಲಿ ಗಾಡಾಂಧಕಾರದಲ್ಲಿ ಅವಳ ಮನೆಗೆ ಹೋದನು. |
10
|
ಇಗೋ, ವೇಶ್ಯಳ ವಸ್ತ್ರವನ್ನು ಧರಿಸಿ ಕೊಂಡು ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರು ಗೊಂಡಳು. |
11
|
(ಅವಳು ಕೂಗಾಡುವವಳು, ಹಠ ಮಾರಿ; ಅವಳ ಪಾದಗಳು ಮನೆಯಲ್ಲಿ ನಿಲ್ಲುವದಿಲ್ಲ. |
12
|
ಒಂದು ಸಮಯದಲ್ಲಿ ಅವಳು ಹೊರಗೆ ಮತ್ತೊಂದು ಸಮಯದಲ್ಲಿ ಬೀದಿಗಳಲ್ಲಿ ಪ್ರತಿಯೊಂದು ಮೂಲೆ ಯಲ್ಲಿ ಹೊಂಚುಹಾಕುವಳು). |
13
|
ಹೀಗೆ ಅವಳು ಅವ ನನ್ನು--ಹಿಡುಕೊಂಡು ಮುದ್ದಿಟ್ಟು |
14
|
ನಾಚಿಕೆಯಿಲ್ಲದೆ --ನನ್ನಲ್ಲಿ ಸಮಾಧಾನ ಅರ್ಪಣೆಗಳು ಇವೆ; ಈ ದಿವಸ ನನ್ನ ಪ್ರಮಾಣಗಳನ್ನು ನಾನು ಸಲ್ಲಿಸಿದ್ದೇನೆ. |
15
|
ಆದಕಾರಣ ನಾನು ನಿನ್ನನ್ನು ಎದುರುಗೊಳ್ಳುವದಕ್ಕೆ ಬಂದೆನು; ಅತ್ಯಾಶೆಯಿಂದ ನಿನ್ನನ್ನು ತ್ರೀವ್ರವಾಗಿ ಹುಡು ಕುವದಕ್ಕೆ ಬಂದು ನಿನ್ನನ್ನು ಕಂಡುಕೊಂಡಿದ್ದೇನೆ. |
16
|
ಚಿತ್ರವಾಗಿ ನೇಯ್ದ ವಸ್ತುಗಳಿಂದಲೂ ವಿಚಿತ್ರ ವಸ್ತು ಗಳಿಂದಲೂ ಐಗುಪ್ತದ ನಯವಾದ ನಾರುಮಡಿ ಯಿಂದಲೂ ನನ್ನ ಹಾಸಿಗೆಯನ್ನು ಅಲಂಕರಿಸಿದ್ದೇನೆ. |
17
|
ರಕ್ತಬೋಳ ಅಗರು ಲವಂಗ ಚೆಕ್ಕೆಗಳಿಂದ ನನ್ನ ಹಾಸಿಗೆಯನ್ನು ಸುವಾಸನೆ ಗೊಳಿಸಿದ್ದೇನೆ. |
18
|
ಬಾ, ಬೆಳಗಿನ ವರೆಗೂ ತೃಪ್ತಿಯಾಗುವ ತನಕ ಪ್ರೀತಿಯ ವಶದಲ್ಲಿ ತುಂಬಿಕೊಳ್ಳುವ ಕಾಮ ವಿಲಾಸಗಳಿಂದ ನಮ್ಮನ್ನು ನಾವು ಆದರಿಸಿಕೊಳ್ಳೋಣ. |
19
|
ಯಜಮಾ ನನು ಮನೆಯಲ್ಲಿ ಇಲ್ಲ; ಅವನು ದೀರ್ಘದ ಪ್ರಯಾಣ ಕೈಕೊಂಡಿದ್ದಾನೆ. |
20
|
ಅವನು ತನ್ನೊಂದಿಗೆ ಹಣದ ಚೀಲವನ್ನು ತೆಗೆದುಕೊಂಡು ಹೋಗಿದ್ದಾನೆ; ನೇಮಕ ವಾದ ದಿನದಲ್ಲಿಯೇ ಅವನು ಈ ಮನೆಗೆ ಬರುವವನಾ ಗಿದ್ದಾನೆ ಎಂದು |
21
|
ಬಹಳವಾದ ತನ್ನ ಸವಿಮಾತಿನಿಂದ ಅವಳು ಅವನನ್ನು ಒಪ್ಪಿಸಿ ತನ್ನ ತುಟಿಗಳ ಮುಖಸ್ತುತಿ ಯಿಂದ ಅವನನ್ನು ಬಲಾತ್ಕರಿಸಿದಳು. |
22
|
ಎತ್ತು ವಧೆಯ ಸ್ಥಾನಕ್ಕೆ ಹೋಗುವಂತೆ ಇಲ್ಲವೆ ಮೂರ್ಖನು ಶಿಕ್ಷೆಯ ದಂಡನೆಗೆ ಹೋಗುವಂತೆ |
23
|
ಒಂದು ಬಾಣವು ತನ್ನ ಕಾಳಿಜವನ್ನು ತಿವಿಯುವ ವರೆಗೆ ತನ್ನ ಪ್ರಾಣಕ್ಕಾಗಿ ಬಲೆಯನ್ನು ಒಡ್ಡಿದ್ದಾನೆಂದು ತಿಳಿಯದೆ ಪಕ್ಷಿಯು ಬಲೆಯ ಕಡೆಗೆ ಓಡುವ ಹಾಗೆ ಅವನು ತಟ್ಟನೆ ಅವಳ ಹಿಂದೆ ಹೋಗುತ್ತಾನೆ. |
24
|
ಆದುದರಿಂದ ಓ ನನ್ನ ಮಕ್ಕಳಿರಾ, ನನ್ನ ಕಡೆಗೆ ಕಿವಿಗೊಡಿರಿ; ನನ್ನ ಬಾಯಿಯ ಮಾತುಗಳನ್ನು ಆಲಿಸಿರಿ. |
25
|
ಅವಳ ಮಾರ್ಗಗಳಿಗೆ ನಿನ್ನ ಹೃದಯವು ತಿರುಗದೆ ಇರಲಿ. ಅವಳ ದಾರಿಗಳಲ್ಲಿ ತಪ್ಪಿಹೋಗದೆ ಇರಲಿ. |
26
|
ಬಹು ಜನರನ್ನು ಅವಳು ಗಾಯಪಡಿಸಿ ಬೀಳಿಸಿ ದ್ದಾಳೆ; ಹೌದು, ಬಲಿಷ್ಠರಾದ ಅನೇಕ ಪುರುಷರು ಅವಳಿಂದ ಹತರಾಗಿದ್ದಾರೆ. |
27
|
ಅವಳ ಮನೆಯು ಪಾತಾಳದ ದಾರಿ, ಅದು ಮೃತ್ಯುವಿನ ಕೊಠಡಿಗೆ ಇಳಿದುಹೋಗುತ್ತದೆ. |
Proverbs 7:13 Kannada Language Bible Words basic statistical display
COMING SOON ...