English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Numbers Chapters

Numbers 36 Verses

1 ಆಗ ಯೋಸೇಫನ ಕುಮಾರರ ಕುಟುಂಬ ದವರಾದ ಮನಸ್ಸೆಯ ಮಗನಾಗಿರುವ ಮಾಕೀರನ ಮಗನಾದ ಗಿಲ್ಯಾದನ ಮಕ್ಕಳ ಕುಟುಂಬ ಗಳ ಮುಖ್ಯ ಯಜಮಾನರು ಸವಿಾಪಕ್ಕೆ ಬಂದು ಮೋಶೆಯ ಮುಂದೆಯೂ
2 ಇಸ್ರಾಯೇಲ್ ಮಕ್ಕಳ ಮುಖ್ಯ ಯಜಮಾನರಾಗಿರುವ ಪ್ರಧಾನರ ಮುಂದೆ ಯೂ ಮಾತನಾಡಿ--ಇಸ್ರಾಯೇಲ್ ಮಕ್ಕಳಿಗೆ ಚೀಟಿ ನಿಂದ ಸ್ವಾಸ್ತ್ಯಕ್ಕಾಗಿ ದೇಶವನ್ನು ಕೊಡುವದಕ್ಕೆ ಕರ್ತನು ನಮ್ಮ ಒಡೆಯನಿಗೆ ಆಜ್ಞಾಪಿಸಿದನು; ನಮ್ಮ ಸಹೋದರ ನಾದ ಚಲ್ಪಹಾದನ ಸ್ವಾಸ್ತ್ಯವನ್ನು ಅವನ ಕುಮಾರ್ತೆ ಯರಿಗೆ ಕೊಡುವದಕ್ಕೆ ನಮ್ಮ ಒಡೆಯನು ಕರ್ತನಿಂದ ಆಜ್ಞೆ ಹೊಂದಿದನು.
3 ಆದರೆ ಅವರು ಇಸ್ರಾಯೇಲ್ ಮಕ್ಕಳ ಗೋತ್ರಗಳ ಮಕ್ಕಳಲ್ಲಿ ಒಬ್ಬರಿಗೆ ಮದುವೆ ಯಾದರೆ ಅವರ ಸ್ವಾಸ್ತ್ಯವು ನಮ್ಮ ಪಿತೃಗಳ ಸ್ವಾಸ್ತ್ಯ ದಿಂದ ಕಡಿಮೆಯಾಗಿ ಅವರನ್ನು ಮದುವೆಮಾಡಿಕೊಂಡ ಗೋತ್ರದವರ ಸ್ವಾಸ್ತ್ಯಕ್ಕೆ ಕೂಡಿಸಲ್ಪಡುವದು; ಮತ್ತು ನಮ್ಮ ಸ್ವಾಸ್ತ್ಯದ ಭಾಗದಿಂದ ಅದು ಕಡಿಮೆಯಾಗಿ ಹೋಗುವದು.
4 ಇಸ್ರಾಯೇಲ್ ಮಕ್ಕಳಿಗೆ ಜೂಬಿಲಿ ಯಾದರೂ ಅವರ ಸ್ವಾಸ್ತ್ಯವು ಅವರನ್ನು ತಕ್ಕೊಳ್ಳುವವರ ಗೋತ್ರದ ಸ್ವಾಸ್ತ್ಯಕ್ಕೆ ಕೂಡಿಸಲ್ಪಡುವದು. ಹಾಗೆ ಅವರ ಸ್ವಾಸ್ತ್ಯವು ನಮ್ಮ ಪಿತೃಗಳ ಗೋತ್ರದ ಸ್ವಾಸ್ತ್ಯದಿಂದ ತೆಗೆಯಲ್ಪಡುವದು.
5 ಆಗ ಮೋಶೆಯು ಕರ್ತನ ಮಾತಿನಂತೆ ಇಸ್ರಾ ಯೇಲ್ ಮಕ್ಕಳಿಗೆ ಆಜ್ಞಾಪಿಸಿ--ಯೋಸೇಫನ ಕುಮಾ ರರ ಗೋತ್ರದವರು ಸರಿಯಾಗಿ ಮಾತನಾಡುತ್ತಾರೆ.
6 ಕರ್ತನು ಚಲ್ಪಹಾದನ ಕುಮಾರ್ತೆಯರ ವಿಷಯದಲ್ಲಿ ಆಜ್ಞಾಪಿಸಿದ ಮಾತು ಏನಂದರೆ--ಅವರು ತಮ್ಮ ಮನಸ್ಸು ಬಂದವರಿಗೆ ಮದುವೆಮಾಡಿಕೊಳ್ಳಲಿ; ಆದರೆ ತಮ್ಮ ತಂದೆಯ ಕುಟುಂಬದ ಗೋತ್ರದ ವರಿಗೆ ಮಾತ್ರ ಮದುವೆಮಾಡಿಕೊಳ್ಳಬಹುದು.
7 ಇಸ್ರಾಯೇಲ್ ಮಕ್ಕಳ ಸ್ವಾಸ್ತ್ಯವು ಒಂದು ಗೋತ್ರದಿಂದ ಮತ್ತೊಂದು ಗೋತ್ರಕ್ಕೆ ತಿರುಗಿಸಲ್ಪಡ ಬಾರದು. ಇಸ್ರಾಯೇಲ್ ಮಕ್ಕಳು ಒಬ್ಬೊಬ್ಬನು ತನ್ನ ಪಿತೃಗಳ ಗೋತ್ರದ ಸ್ವಾಸ್ತ್ಯಕ್ಕೆ ಹೊಂದಿ ಕೊಂಡಿರಬೇಕು.
8 ಇಸ್ರಾಯೇಲ್ ಮಕ್ಕಳಲ್ಲಿ ಒಬ್ಬೊಬ್ಬನು ತನ್ನ ಪಿತೃಗಳ ಸ್ವಾಸ್ತ್ಯವನ್ನು ಸ್ವಾಧೀನ ಮಾಡಿಕೊಳ್ಳುವಹಾಗೆ ಇಸ್ರಾಯೇಲ್ ಮಕ್ಕಳ ಗೋತ್ರ ಗಳೊಳಗೆ ಸ್ವಾಸ್ತ್ಯವನ್ನು ಹೊಂದಿರುವ ಒಬ್ಬ ಕುಮಾ ರ್ತೆಯು ತನ್ನ ಪಿತೃವಿನ ಕುಟುಂಬದ ಗೋತ್ರದಲ್ಲಿ ಒಬ್ಬನನ್ನು ಮದುವೆಮಾಡಿಕೊಳ್ಳಬೇಕು.
9 ಒಂದು ಸ್ವಾಸ್ತ್ಯವು ಒಂದು ಗೋತ್ರದಿಂದ ಮತ್ತೊಂದು ಗೋತ್ರಕ್ಕೆ ಬದಲಾಯಿಸದೆ ಇಸ್ರಾಯೇಲ್ ಮಕ್ಕಳ ಗೋತ್ರಗಳಲ್ಲಿ ಒಬ್ಬೊಬ್ಬನು ತನ್ನ ಸ್ವಾಸ್ತ್ಯಕ್ಕೆ ತಾನೇ ಹೊಂದಿಕೊಳ್ಳಬೇಕು ಅಂದನು.
10 ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಚಲ್ಪಹಾ ದನ ಕುಮಾರ್ತೆಯರು ಮಾಡಿದರು.
11 ಚಲ್ಪಹಾದನ ಕುಮಾರ್ತೆಯರಾದ ಮಹ್ಲಾ, ತಿರ್ಚಾ, ಹೊಗ್ಲಾ, ಮಿಲ್ಕಾ, ನೋವಾ ಎಂಬವರು ತಮ್ಮ ತಂದೆಯ ಸಹೋದರರ ಕುಮಾರರನ್ನು ಮದುವೆಯಾದರು;
12 ಯೋಸೇಫನ ಮಗನಾದ ಮನಸ್ಸೆಯ ಕುಮಾರರ ಕುಟುಂಬಗಳವರಿಗೆ ಮದುವೆಯಾದರು. ಈ ಪ್ರಕಾರ ಅವರ ಸ್ವಾಸ್ತ್ಯವು ತಮ್ಮ ಪಿತೃವಿನ ಗೋತ್ರದಲ್ಲಿಯೆ ಉಳಿಯುವ ಹಾಗಾಯಿತು.
13 ಕರ್ತನು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬೈಲುಗಳಲ್ಲಿ ಮೋಶೆಯ ಮೂಲಕವಾಗಿ ಇಸ್ರಾಯೇಲ್ ಮಕ್ಕಳಿಗೆ ಆಜ್ಞಾಪಿಸಿದ ಆಜ್ಞೆಗಳೂ ನ್ಯಾಯಗಳೂ ಇವೇ.
×

Alert

×