ಆಗ ಯೋಸೇಫನ ಮಗನಾದ ಮನಸ್ಸೆಯಕುಟುಂಬಗಳಲ್ಲಿ ಮನಸ್ಸೆಗೆ ಹುಟ್ಟಿದ ಮಾಕೀರನ ಮರಿಮಗನೂ ಗಿಲ್ಯಾದನ ಮೊಮ್ಮಗನೂ ಹೇಫೆರನ ಮಗನಾದ ಚಲ್ಪಹಾದನ ಕುಮಾರ್ತೆಯ ರಾದ ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ
ಹಾಗಾದರೆ ನಮ್ಮ ತಂದೆಗೆ ಮಗನಿಲ್ಲದಿರುವ ದರಿಂದ ಅವನ ಹೆಸರನ್ನು ತನ್ನ ಕುಟುಂಬದಿಂದ ಯಾಕೆ ತೆಗೆಯಬೇಕು? ನೀನು ನಮ್ಮ ತಂದೆಯ ಸಹೋದರರ ಮಧ್ಯದಲ್ಲಿ ಒಂದು ಸ್ವಾಸ್ತ್ಯವನ್ನು ನಮಗೆ ಕೊಡು ಎಂದು ಹೇಳಿದರು.
ಚಲ್ಪಹಾದನ ಕುಮಾರ್ತೆಯರು ಹೇಳಿದ್ದು ಸರಿ; ನೀನು ಅವರಿಗೆ ಅವರ ತಂದೆಯ ಸಹೋದರರ ಮಧ್ಯದಲ್ಲಿ ಒಂದು ಸ್ವಾಸ್ತ್ಯವನ್ನು ನಿಶ್ಚಯವಾಗಿ ಕೊಡ ಬೇಕು; ಅವರ ತಂದೆಯ ಸ್ವಾಸ್ತ್ಯವನ್ನು ಅವರಿಗೆ ಸೇರಿಸಬೇಕು.
ಆದರೆ ಅವನಿಗೆ ಮಗಳು ಇಲ್ಲದಿದ್ದರೆ ನೀವು ಅವನ ಸ್ವಾಸ್ತ್ಯವನ್ನು ಅವನ ಸಹೋದರರಿಗೆ ಕೊಡಬೇಕು. ಅವನಿಗೆ ಸಹೋದರರು ಇಲ್ಲದಿದ್ದರೆ ನೀವು ಅವನ ಸ್ವಾಸ್ತ್ಯವನ್ನು ಅವನ ತಂದೆಯ ಸಹೋದರರಿಗೆ ಕೊಡಬೇಕು.
ನೀವು ಜಿನ್ ಎಂಬ ಮರುಭೂಮಿಯ ಲ್ಲಿಯೂ ಸಭೆಯ ವಾಗ್ವಾದದಲ್ಲಿಯೂ ಅವರಿಗೆದು ರಾಗಿ ನೀರಿನ ಬಳಿಯಲ್ಲಿ ನನ್ನನ್ನು ಪರಿಶುದ್ಧ ಮಾಡದೆ ನನ್ನ ಆಜ್ಞೆಯನ್ನು ವಿಾರಿದಿರಿ. ಆ ನೀರು ಅಂದರೆ ಜಿನ್ ಎಂಬ ಅರಣ್ಯದ ಕಾದೇಶಿನಲ್ಲಿರುವ ಮೆರೀಬಾದ ನೀರು ಅಂದನು.
ಅವನು ಯಾಜಕನಾದ ಎಲ್ಲಾಜಾರನ ಮುಂದೆ ನಿಲ್ಲಬೇಕು; ಇವನು ಕರ್ತನ ಮುಂದೆ ಊರೀಮಿನ ನ್ಯಾಯದ ಪ್ರಕಾರ ಅವನಿಗೋಸ್ಕರ ಆಲೋಚನೆಯ ಸಭೆಯನ್ನು ಕೇಳಬೇಕು; ಅವನ ಆಜ್ಞೆಯ ಪ್ರಕಾರವೇ ಅವನೂ ಅವನ ಸಂಗಡ ಇರುವ ಸಮಸ್ತ ಇಸ್ರಾಯೇಲ್ ಮಕ್ಕಳೂ ಸಮಸ್ತ ಸಭೆಯೂ ಹೋಗುತ್ತಾ ಬರುತ್ತಾ ಇರಬೇಕು ಅಂದನು.