ಆದರೆ ಇಸ್ರಾಯೇಲನ್ನು ಆಶೀರ್ವದಿಸು ವದಕ್ಕೆ ಕರ್ತನ ದೃಷ್ಟಿಗೆ ಒಳ್ಳೇದೆಂದು ಬಿಳಾಮನು ನೋಡಿದಾಗ ಅವನು ಮುಂಚಿನ ಹಾಗೆ ಶಕುನಗಳನ್ನು ಕಂಡುಕೊಳ್ಳುವದಕ್ಕೆ ಹೋಗದೆ ತನ್ನ ಮುಖವನ್ನು ಅರಣ್ಯದ ಕಡೆಗೆ ತಿರುಗಿಸಿಕೊಂಡನು.
ದೇವರು ಅವನನ್ನು ಐಗುಪ್ತದಿಂದ ಹೊರಗೆ ತಂದನು. ಒಂದು ಕೊಂಬುಳ್ಳ ಪ್ರಾಣಿಯಂತೆ ಬಲ ಅವನಿಗೆ ಉಂಟು. ಅವನು ತನ್ನ ವೈರಿಗಳಾಗಿರುವ ಜನಾಂಗಗಳನ್ನು ತಿಂದು ಅವರ ಎಲುಬುಗಳನ್ನು ಚೂರು ಮಾಡಿ ತನ್ನ ಬಾಣ ಗಳಿಂದ ಗಾಯಮಾಡುವನು.
ಆಗ ಬಾಲಾಕನು ಬಿಳಾಮನ ಮೇಲೆ ಕೋಪಗೊಂಡು ಚಪ್ಪಾಳೆ ಹೊಡೆದು ಅವನಿಗೆ--ನನ್ನ ಶತ್ರುಗಳನ್ನು ಶಪಿಸುವದಕ್ಕೆ ನಿನ್ನನ್ನು ಕರೆದೆನು; ಆದರೆ ಇಗೋ, ನೀನು ಈ ಮೂರುಸಾರಿ ಆಶೀರ್ವದಿಸೇ ಆಶೀರ್ವದಿಸಿದಿ.
ಬಾಲಾಕನು ನನಗೆ ತನ್ನ ಮನೆ ತುಂಬ ಬೆಳ್ಳಿ ಬಂಗಾರಗಳನ್ನು ಕೊಟ್ಟರೂ ನನ್ನ ಹೃದಯದಿಂದ ಒಳ್ಳೇದನ್ನಾದರೂ ಕೆಟ್ಟದ್ದನ್ನಾದರೂ ಮಾಡುವದಕ್ಕೆ ಕರ್ತನ ಆಜ್ಞೆಯನ್ನು ವಿಾರಲಾರೆನು; ಕರ್ತನು ಏನು ಹೇಳುತ್ತಾನೋ ಅದನ್ನು ಹೇಳುವೆನೆಂದು ನಾನು ಹೇಳಲಿಲ್ಲವೋ? ಇಗೋ, ನನ್ನ ಜನರ ಬಳಿಗೆ ಹೋಗುತ್ತೇನೆ;
ನಾನು ಅವನನ್ನು ನೋಡು ವೆನು, ಈಗಲ್ಲ; ಅವನನ್ನು ದೃಷ್ಟಿಸುವೆನು, ಸವಿಾಪದಲ್ಲಿ ಅಲ್ಲ; ಯಾಕೋಬನಿಂದ ನಕ್ಷತ್ರ ಉದಯಿಸುವದು; ಇಸ್ರಾಯೇಲ್ನಿಂದ ರಾಜದಂಡ ಏಳುವದು; ಅದು ಮೋವಾಬಿನ ಮೂಲೆಗಳನ್ನು ಹೊಡೆದು ಶೇತನ ಸಕಲ ಮಕ್ಕಳನ್ನು ಸಂಹರಿಸುವದು.