1
|
ಕರ್ತನು ಮೋಶೆಗೆ ಹೇಳಿದ್ದೇನೆಂದರೆ |
2
|
ಬೆಳ್ಳಿಯಿಂದ ಎರಡು ತುತೂರಿಗಳನ್ನು ಒಂದೇ ತುಂಡಿನಿಂದ ಮಾಡಿಸಿಕೋ; ಸಭೆಯನ್ನು ಕರೆಯುವದಕ್ಕಾಗಿಯೂ ಪಾಳೆಯಗಳ ಪ್ರಯಾಣಕ್ಕಾ ಗಿಯೂ ನೀನು ಅವುಗಳನ್ನು ಉಪಯೋಗಿಸಬೇಕು. |
3
|
ಅವುಗಳನ್ನು ಊದುವಾಗ ಸಭೆಯೆಲ್ಲಾ ಸಭೆಯ ಗುಡಾರದ ಬಾಗಲ ಬಳಿಯಲ್ಲಿರುವ ನಿನ್ನ ಬಳಿಗೆ ಕೂಡಿಬರಬೇಕು. |
4
|
ಒಂದರಿಂದ ಊದುವಾಗ ಮಾತ್ರ ಇಸ್ರಾಯೇಲಿನ ಸಹಸ್ರಗಳಿಗೆ ಮುಖ್ಯಸ್ಥರಾದ ಪ್ರಧಾ ನರು ನಿನ್ನ ಬಳಿಗೆ ಕೂಡಿಬರಬೇಕು. |
5
|
ನೀವು ಎಚ್ಚರಿಸು ವಂತೆ ಊದುವಾಗ ಪೂರ್ವದಲ್ಲಿ ಇರುವಂತ ಪಾಳೆಯ ಗಳು ಮುಂದೆ ಹೊರಡಬೇಕು. |
6
|
ನೀವು ಎರಡನೇ ಸಾರಿ ಎಚ್ಚರಿಸುವಂತೆ ಊದುವಾಗ ದಕ್ಷಿಣದಲ್ಲಿ ಇರು ವಂತ ಪಾಳೆಯಗಳು ಪ್ರಯಾಣಮಾಡಬೇಕು; ಅವರ ಪ್ರಯಾಣಕ್ಕೆ ಎಚ್ಚರಿಸುವಂತೆ ಊದಬೇಕು. |
7
|
ಸಭೆ ಯನ್ನು ಕೂಡಿಸುವಾಗ ನೀವು ಊದಬೇಕು. ಎಚ್ಚರಿಸು ವಂತೆ ಶಬ್ದಮಾಡಬೇಡಿರಿ. |
8
|
ಯಾಜಕರಾಗಿರುವ ಆರೋನನ ಕುಮಾರರು ತುತೂರಿಗಳನ್ನು ಊದಬೇಕು. ಇವು ನಿಮ್ಮ ಸಂತತಿಗಳಲ್ಲಿ ನಿಮಗೆ ನಿತ್ಯವಾದ ಕಟ್ಟಳೆಯಾಗಿರಬೇಕು. |
9
|
ನಿಮ್ಮ ದೇಶದಲ್ಲಿ ನಿಮ್ಮನ್ನು ಉಪದ್ರಪಡಿಸುವ ವೈರಿಗೆ ವಿರೋಧವಾಗಿ ಯುದ್ಧಕ್ಕೆ ಹೊರಡುವಾಗ ನೀವು ತುತೂರಿಗಳನ್ನು ಎಚ್ಚರಿಸುವಂತೆ ಊದಬೇಕು. ಆಗ ನಿಮ್ಮ ದೇವರಾದ ಕರ್ತನ ಸಮ್ಮುಖದಲ್ಲಿ ನೀವು ಜ್ಞಾಪಕ ಮಾಡಲ್ಪಟ್ಟು ನಿಮ್ಮ ಶತ್ರುಗಳಿಂದ ರಕ್ಷಿಸಲ್ಪಡುವಿರಿ. |
10
|
ನಿಮ್ಮ ಸಂತೋಷದ ದಿವಸದಲ್ಲಿಯೂ ಹಬ್ಬಗಳ ಲ್ಲಿಯೂ ತಿಂಗಳಿನ ಆರಂಭದಲ್ಲಿಯೂ ನಿಮ್ಮ ದಹನ ಬಲಿಗಳನ್ನು ನಿಮ್ಮ ಸಮಾಧಾನದ ಬಲಿಗಳನ್ನು ಅರ್ಪಿಸು ವಾಗ ಅವುಗಳನ್ನು ಊದಬೇಕು. ಅವು ನಿಮಗೆ ನಿಮ್ಮ ದೇವರ ಎದುರಿನಲ್ಲಿ ಜ್ಞಾಪಕವಾಗಿರುವವು. ನಿಮ್ಮ ದೇವರಾಗಿರುವ ಕರ್ತನು ನಾನೇ. |
11
|
ಎರಡನೆಯ ವರುಷದ ಎರಡನೇ ತಿಂಗಳಿನ ಇಪ್ಪತ್ತನೇ ದಿವಸದಲ್ಲಿ ಮೇಘವು ಸಾಕ್ಷಿ ಗುಡಾರದ ಮೇಲಿನಿಂದ ಎತ್ತಲ್ಪಟ್ಟಿತು. |
12
|
ಆಗ ಇಸ್ರಾಯೇಲ್ ಮಕ್ಕಳು ತಮ್ಮ ಕ್ರಮಗಳ ಪ್ರಕಾರ ಸೀನಾಯಿ ಅರಣ್ಯ ದಿಂದ ಪ್ರಯಾಣ ಮಾಡಿದರು; ಮೇಘವು ಪಾರಾನೆಂಬ ಅರಣ್ಯದಲ್ಲಿ ನಿಂತಿತು. |
13
|
ಆಗ ಅವರು ಮೊದಲನೇ ಸಾರಿ ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಪ್ರಯಾಣಮಾಡಿದರು. |
14
|
ಯೂದನ ಮಕ್ಕಳ ಪಾಳೆಯದ ಧ್ವಜವು ಅದರ ಸೈನ್ಯಗಳ ಪ್ರಕಾರ ಮೊದಲು ಹೊರಟಿತು. ಅವರ ಸೈನ್ಯದ ಮೇಲೆ ಅವ್ಮೆಾನಾದಾಬನ ಮಗನಾದ ನಹಶೋ ನನು ಇದ್ದನು. |
15
|
ಇಸ್ಸಾಕಾರನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಚೂವಾರನ ಮಗನಾದ ನೆತನೇಲನು ಇದ್ದನು. |
16
|
ಜೆಬುಲೂನನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಹೇಲೋನನ ಮಗನಾದ ಎಲೀಯಾಬನು ಇದ್ದನು. |
17
|
ಗುಡಾರವನ್ನು ಇಳಿಸಿದಾಗ ಗೇರ್ಷೋನನ ಮಕ್ಕಳೂ ಮೆರಾರೀಯ ಮಕ್ಕಳೂ ಗುಡಾರವನ್ನು ಹೊತ್ತುಕೊಂಡು ಮುಂದೆ ಹೊರಟರು. |
18
|
ರೂಬೇನನ ಪಾಳೆಯದ ಧ್ವಜವು ಅವರ ಸೈನ್ಯ ಗಳ ಪ್ರಕಾರ ಹೊರಟಿತು; ಅವರ ಸೈನ್ಯದ ಮೇಲೆ ಶೆದೇಯೂರನ ಮಗನಾದ ಎಲೀಚೂರನು ಇದ್ದನು. |
19
|
ಸಿಮೆಯೋನನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಚೂರೀಷದ್ದೈಯನ ಮಗನಾದ ಶೆಲುವಿಾಯೇಲನು ಇದ್ದನು. |
20
|
ಗಾದನ ಮಕ್ಕಳ ಗೋತ್ರದ ಸೈನ್ಯದ ಮೇಲೆ ದೆಗೂವೇಲನ ಮಗನಾದ ಎಲ್ಯಾಸಾಫನು ಇದ್ದನು. |
21
|
ಪರಿಶುದ್ಧ ಸ್ಥಳವನ್ನು ಹೊರುವ ಕೆಹಾತ್ಯರು ಹೊರಟರು; ಇವರು ಬರುವಷ್ಟರೊಳಗೆ ಅವರು ಗುಡಾರವನ್ನು ನಿಲ್ಲಿಸಿದರು. |
22
|
ಎಫ್ರಾಯಾಮಿನ ಮಕ್ಕಳ ಪಾಳೆಯದ ಧ್ವಜವು ಅವರ ಸೈನ್ಯಗಳ ಪ್ರಕಾರ ಹೊರಟಿತು; ಅವರ ಸೈನ್ಯದ ಮೇಲೆ ಅವ್ಮೆಾಹೂದನ ಮಗನಾದ ಎಲೀಷಾಮನು ಇದ್ದನು. |
23
|
ಮನಸ್ಸೆಯ ಮಕ್ಕಳ ಗೋತ್ರದ ಮೇಲೆ ಪೆದಾಚೂರನ ಮಗನಾದ ಗವ್ಮೆಾಯೇಲನು ಇದ್ದನು. |
24
|
ಬೆನ್ಯಾವಿಾನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಗಿದ್ಯೋನಿಯ ಮಗನಾದ ಅಬೀದಾನನು ಇದ್ದನು. |
25
|
ದಾನನ ಮಕ್ಕಳ ಪಾಳೆಯದ ಧ್ವಜವು ಸಮಸ್ತ ಪಾಳೆಯಗಳ ಹಿಂದೆ ಅವರ ಸೈನ್ಯಗಳ ಪ್ರಕಾರ ಹೊರಟಿತು. ಅವನ ಸೈನ್ಯದ ಮೇಲೆ ಅವ್ಮೆಾಷದ್ದೈಯನ ಮಗನಾದ ಅಹೀಗೆಜರನು ಇದ್ದನು. |
26
|
ಆಶೇರನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಒಕ್ರಾನನ ಮಗ ನಾದ ಪಗೀಯೇಲನು ಇದ್ದನು. |
27
|
ನಫ್ತಾಲಿಯ ಮಕ್ಕಳ ಗೋತ್ರದ ಸೈನ್ಯದ ಮೇಲೆ ಏನಾನ ಮಗನಾದ ಅಹೀರನು ಇದ್ದನು. |
28
|
ಈ ಪ್ರಕಾರ ಇಸ್ರಾಯೇಲ್ ಮಕ್ಕಳು ತಮ್ಮ ಸೈನ್ಯಗಳ ಪ್ರಕಾರ ಪ್ರಯಾಣವಾಗಿ ಹೊರಡುತ್ತಿದ್ದರು. |
29
|
ಮೋಶೆ ತನ್ನ ಮಾವನಾದ ಮಿದ್ಯಾನಿನ ರೆಗೂ ವೇಲನ ಮಗನಾದ ಹೋಬಾಬನಿಗೆ--ನಿಮಗೆ ಕೊಡು ತ್ತೇನೆಂದು ಕರ್ತನು ಹೇಳಿದ ದೇಶಕ್ಕೆ ಪ್ರಯಾಣ ಮಾಡುತ್ತಿದ್ದೇವೆ; ನಮ್ಮ ಸಂಗಡ ನೀನು ಬಾ; ನಾವು ನಿನಗೆ ಒಳ್ಳೇದನ್ನು ಮಾಡುವೆವು; ಕರ್ತನು ಇಸ್ರಾಯೇ ಲ್ಯರನ್ನು ಕುರಿತು ಒಳ್ಳೇದನ್ನು ಹೇಳಿದ್ದಾನೆ ಎಂದು ಹೇಳಿದನು. |
30
|
ಅದಕ್ಕೆ ಅವನು--ನಾನು ಬರುವದಿಲ್ಲ: ನಾನು ನನ್ನ ದೇಶಕ್ಕೂ ಬಂಧುಗಳ ಬಳಿಗೂ ಹೋಗು ತ್ತೇನೆ ಅಂದನು. |
31
|
ಅದಕ್ಕೆ ಮೋಶೆ--ನಮ್ಮನ್ನು ಬಿಟ್ಟುಹೋಗಬೇಡ, ನಾವು ಎಲ್ಲಿ ಇಳುಕೊಳ್ಳಬೇಕೋ ನಿನಗೆ ತಿಳಿದದೆ; ನೀನು ನಮಗೆ ಕಣ್ಣುಗಳಾಗಿರುವಿ. |
32
|
ನೀನು ನಮ್ಮ ಸಂಗಡ ಬಂದರೆ ಹೌದು, ಕರ್ತನು ನಮಗೆ ಮಾಡಲಿಕ್ಕಿರುವ ಒಳ್ಳೇದನ್ನು ನಾವು ನಿನಗೆ ಮಾಡುವೆವು ಅಂದನು. |
33
|
ಅವರು ಕರ್ತನ ಪರ್ವತದ ಬಳಿಯಿಂದ ಮೂರು ದಿವಸಗಳ ವರೆಗೆ ಪ್ರಯಾಣಮಾಡಿದರು. ಕರ್ತನ ಒಡಂಬಡಿಕೆಯ ಮಂಜೂಷವು ಅವರಿಗೆ ಇಳು ಕೊಳ್ಳುವ ಸ್ಥಳವನ್ನು ಹುಡುಕುವದಕ್ಕಾಗಿ ಮೂರು ದಿವಸ ಗಳ ಪ್ರಯಾಣದಷ್ಟು ಅವರ ಮುಂದಾಗಿ ಹೋಯಿತು. |
34
|
ಅವರು ಪಾಳೆಯದಿಂದ ಹೊರಟಾಗ ಕರ್ತನ ಮೇಘವು ಹಗಲಿನಲ್ಲಿ ಅವರ ಮೇಲೆ ಇತ್ತು. |
35
|
ಇದ ಲ್ಲದೆ ಮಂಜೂಷವು ಹೊರಡುವಾಗ ಮೋಶೆಯುಕರ್ತನೇ, ಎದ್ದೇಳು, ನಿನ್ನ ಶತ್ರುಗಳು ಚದರಿಹೋಗಲಿ; ನಿನ್ನನ್ನು ಹಗೆಮಾಡುವವರು ನಿನ್ನ ಎದುರಿನಿಂದ ಓಡಿ ಹೋಗಲಿ ಎಂದು ಹೇಳಿದನು. |
36
|
ಅದು ಇಳಿದಾಗ ಅವನು--ಓ ಕರ್ತನೇ, ಅನೇಕ ಸಹಸ್ರ ಇಸ್ರಾಯೇ ಲ್ಯರ ಬಳಿಗೆ ಹಿಂದಿರುಗು ಅಂದನು. |
Numbers 10:1 Kannada Language Bible Words basic statistical display
COMING SOON ...