ಅಧಿಕಾರಿಗಳು ಯೆರೂಸಲೇಮಿನಲ್ಲಿ ವಾಸವಾಗಿದ್ದರು. ಇದಲ್ಲದೆ ಹತ್ತು ಮಂದಿ ಯಲ್ಲಿ ಒಬ್ಬನು ಪರಿಶುದ್ಧ ಪಟ್ಟಣವಾದ ಯೆರೂ ಸಲೇಮಿನಲ್ಲಿ ವಾಸವಾಗಿರುವದಕ್ಕೂ ಉಳಿದ ಒಂಭತ್ತು ಮಂದಿ ಇತರ ಪಟ್ಟಣಗಳಲ್ಲಿ ವಾಸವಾಗಿರುವದಕ್ಕೂ ಚೀಟುಗಳನ್ನು ಹಾಕಿದರು.
ಯೆಹೂದನ ಮಕ್ಕಳು ಯಾರಂದರೆ--ಪೆರೆಚನ ಮಕ್ಕಳಲ್ಲಿ ಮಹಲಲೇಲನ ಮಗನಾದ ಶೆಫಟ್ಯನ ಮಗ ನಾದ ಅಮರ್ಯನ ಮಗನಾದ ಜೆಕರ್ಯನ ಮಗನಾದ ಉಜ್ಜೀಯನ ಮಗನಾದ ಅತಾಯನೂ. ಶಿಲೋನಿಯ ಮಗನಾದ ಜೆಕರೀಯನ ಮಗನಾದ ಯೋಯಾರೀಬನ ಮಗನಾದ ಅದಾಯನ ಮಗನಾದ ಹಜಾಯನ ಮಗನಾದ ಕೊಲ್ಹೋಜೆಯ ಮಗನಾದ ಬಾರೂಕನ ಮಗನಾದ ಮಾಸೇಯನೂ,
ಮನೆಯ ಕೆಲಸವನ್ನು ನಡಿಸುವ ಅವರ ಸಹೋದರರು ಎಂಟು ನೂರ ಇಪ್ಪತ್ತೆರಡು ಮಂದಿ ಇದ್ದರು. ಮಲ್ಕೀಯನ ಮಗನಾದ ಪಷ್ಹೂರನ ಮಗನಾದ ಜೆಕರೀಯನ ಮಗನಾದ ಅಮ್ಜಿಯ ಮಗನಾದ ಪೆಲಲ್ಯನ ಮಗನಾದ ಯೆರೋ ಹಾಮನ ಮಗನಾದ ಅದಾಯನೂ.
ಇದಲ್ಲದೆ ಆಸಾಫನ ಮಗ ನಾದ ಜಬ್ದೀಯ ಮಗನಾದ ವಿಾಕಾಯನ ಮಗ ನಾದ ಮತ್ತನ್ಯನು ಪ್ರಾರ್ಥನೆಯಲ್ಲಿ ಸ್ತುತಿಯನ್ನು ಪ್ರಾರಂಭಿಸಲು ಮುಖ್ಯಸ್ಥನಾಗಿದ್ದನು. ಅವನ ಸಹೋ ದರರಲ್ಲಿ ಎರಡನೆಯವನು ಬಕ್ಬುಕ್ಯನು; ಅವನ ಸಂಗಡ ಯೆದುತೂನನ ಮಗನಾದ ಗಾಲಾಲನ ಮಗನಾದ ಶಮ್ಮೂವನ ಮಗನಾದ ಅಬ್ದನು.
ಆಸಾಫನ ಕುಮಾರರಲ್ಲಿರುವ ಹಾಡುಗಾರರು ದೇವರ ಆಲಯದ ಕಾರ್ಯದ ಮೇಲೆ ವಿಚಾರಣಾ ಕರ್ತರಾಗಿದ್ದರು. ದಿನದಿನಕ್ಕೆ ಹಾಡುಗಾರರಿಗೋಸ್ಕರ ಪ್ರತಿದಿನ ಕಟ್ಟಳೆ ಇರಬೇಕೆಂದು ಅರಸನು ಅವರನ್ನು ಕುರಿತು ಆಜ್ಞಾಪಿಸಿದ್ದನು.
ಗ್ರಾಮಗಳಲ್ಲಿಯೂ ಅವರ ಹೊಲಗಳಲ್ಲಿಯೂ ಇದ್ದವರು ಯಾರಂದರೆ--ಯೆಹೂದನ ಮಕ್ಕಳಲ್ಲಿ ಕೆಲವರು ಕಿರ್ಯತರ್ಬದಲ್ಲಿಯೂ ಅದರ ಗ್ರಾಮಗಳ ಲ್ಲಿಯೂ ದೀಬೋನಿನಲ್ಲಿಯೂ ಅದರ ಗ್ರಾಮಗಳ ಲ್ಲಿಯೂ ಯೆಕಬ್ಜೆಯೇಲಿನಲ್ಲಿಯೂ ಅದರ ಗ್ರಾಮಾಗ ಳಲ್ಲಿಯೂ
ಜನೋಹನಲ್ಲಿಯೂ ಅದುಲ್ಲ್ಲಾಮಿನಲ್ಲಿಯೂ ಇವು ಗಳ ಗ್ರಾಮಗಳಲ್ಲಿಯೂ ಲಾಕೀಷನಲ್ಲಿಯೂ ಅದರ ಹೊಲಗಳಲ್ಲಿಯೂ ಅಜೇಕದಲ್ಲಿಯೂ ಅದರ ಗ್ರಾಮ ಗಳಲ್ಲಿಯೂ ವಾಸವಾಗಿದ್ದರು. ಅವರು ಬೇರ್ಷೆಬ ಮೊದಲುಗೊಂಡು ಹಿನ್ನೋಮನ ತಗ್ಗಿನ ವರೆಗೂ ವಾಸವಾಗಿದ್ದರು.