1
|
ತರುವಾಯ ಯೆರೂಸಲೇಮಿನವರಾದ ಶಾಸ್ತ್ರಿಗಳೂ ಫರಿಸಾಯರೂ ಯೇಸುವಿನ ಬಳಿಗೆ ಬಂದು-- |
2
|
ನಿನ್ನ ಶಿಷ್ಯರು ಹಿರಿಯರ ಸಂಪ್ರದಾಯ ವನ್ನು ಯಾಕೆ ಮಾರುತ್ತಾರೆ? ಯಾಕಂದರೆ ಅವರು ರೊಟ್ಟಿ ತಿನ್ನುವಾಗ ತಮ್ಮ ಕೈಗಳನ್ನು ತೊಳಕೊಳ್ಳುವದಿಲ್ಲ ಅಂದರು. |
3
|
ಅದಕ್ಕೆ ಆತನು ಪ್ರತ್ಯುತ್ತರವಾಗಿ ಅವ ರಿಗೆ--ನೀವು ಸಹ ನಿಮ್ಮ ಸಂಪ್ರದಾಯದ ನಿಮಿತ್ತವಾಗಿ ದೇವರ ಆಜ್ಞೆಯನ್ನು ಯಾಕೆ ಮಾರುತ್ತೀರಿ? |
4
|
ಯಾಕಂ ದರೆ ದೇವರು ಅಪ್ಪಣೆ ಕೊಟ್ಟು ಹೇಳಿದ್ದೇನಂದರೆ--ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು. ಮತ್ತು--ಯಾವನಾದರೂ ತಂದೆಯನ್ನಾಗಲೀ ತಾಯಿಯನ್ನಾ ಗಲೀ ಶಪಿಸಿದರೆ ಅವನು ಸಾಯಲೇಬೇಕು ಎಂಬದೇ. |
5
|
ಆದರೆ ನೀವು--ಯಾವನಾದರೂ ತನ್ನ ತಂದೆಗಾಗಲೀ ತಾಯಿಗಾಗಲೀ-- ನನ್ನಿಂದ ನಿನಗೆ ಪ್ರಯೋಜನ ವಾಗತಕ್ಕದ್ದು ಕಾಣಿಕೆಯಾಯಿತು ಎಂದು ಹೇಳುವದಾ ದರೆ |
6
|
ಅವನು ತನ್ನ ತಂದೆಯನ್ನಾಗಲೀ ತಾಯಿಯನ್ನಾ ಗಲೀ ಸನ್ಮಾನಿಸುವದರಿಂದ ಬಿಡುಗಡೆಯಾಗಿದ್ದಾನೆಂದು ನೀವು ಹೇಳುತ್ತೀರಿ. ಹೀಗೆ ನಿಮ್ಮ ಸಂಪ್ರದಾಯದ ನಿಮಿತ್ತವಾಗಿ ದೇವರ ಆಜ್ಞೆಯನ್ನು ನಿರರ್ಥಕ ಮಾಡಿದ್ದೀರಿ. |
7
|
ಕಪಟಿಗಳೇ, ನಿಮ್ಮ ವಿಷಯವಾಗಿ ಯೆಶಾಯನು ಸರಿಯಾಗಿ ಪ್ರವಾದಿಸಿದನು; |
8
|
ಆದೇ ನಂದರೆ-- ಈ ಜನರು ತಮ್ಮ ಬಾಯಿಂದ ನನ್ನನ್ನು ಸಮಾಪಿಸಿ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ; ಆದರೆ ಅವರ ಹೃದಯವು ನನ್ನಿಂದ ದೂರವಾಗಿದೆ. |
9
|
ಅವರು ಮನುಷ್ಯರ ಆಜ್ಞೆಗಳನ್ನು ಬೋಧಿಸಿ ಕಲಿಸುವ ದರಿಂದ ನನ್ನನ್ನು ಆರಾಧಿಸುವದು ವ್ಯರ್ಥ ಎಂಬದೇ. |
10
|
ಆತನುಜನ ಸಮೂಹಗಳನ್ನು ಕರೆದು ಅವರಿಗೆ--ಕೇಳಿ ತಿಳುಕೊಳ್ಳಿರಿ; |
11
|
ಬಾಯೊಳಗೆ ಹೋಗುವಂಥದು ಮನುಷ್ಯನನ್ನು ಹೊಲೆಮಾಡುವದಿಲ್ಲ; ಆದರೆ ಬಾಯೊ ಳಗಿಂದ ಹೊರಗೆ ಬರುವಂಥದೇ ಮನುಷ್ಯನನ್ನು ಹೊಲೆಮಾಡುತ್ತದೆ ಎಂದು ಹೇಳಿದನು. |
12
|
ತರುವಾಯ ಆತನ ಶಿಷ್ಯರು ಬಂದು--ಫರಿಸಾ ಯರು ನಿನ್ನ ಈ ಮಾತನ್ನು ಕೇಳಿದ ಮೇಲೆ ಅಭ್ಯಂತರ ಪಟ್ಟರೆಂದು ನಿನಗೆ ತಿಳಿಯಿತೋ ಎಂದು ಕೇಳಿದರು. |
13
|
ಅದಕ್ಕೆ ಆತನು ಪ್ರತ್ಯುತ್ತರವಾಗಿ ಅವರಿಗೆ--ಪರ ಲೋಕದ ನನ್ನ ತಂದೆಯು ನೆಡದೆ ಇರುವ ಪ್ರತಿಯೊ ಂದು ಗಿಡವು ಬೇರು ಸಹಿತವಾಗಿ ಕಿತ್ತುಹಾಕಲ್ಪಡುವದು. |
14
|
ಅವರನ್ನು ಬಿಡಿರಿ; ಅವರು ಕುರುಡರನ್ನು ನಡಿಸುವ ಕುರುಡರು. ಕುರುಡನು ಕುರುಡನನ್ನು ನಡಿಸಿದರೆ ಇಬ್ಬರೂ ಕುಣಿಯೊಳಕ್ಕೆ ಬೀಳುವರು ಎಂದು ಹೇಳಿ ದನು. |
15
|
ತರುವಾಯ ಪೇತ್ರನು ಪ್ರತ್ಯುತ್ತರವಾಗಿ ಆತ ನಿಗೆ--ಈ ಸಾಮ್ಯವನ್ನು ನಮಗೆ ತಿಳಿಯಪಡಿಸು ಅಂದನು. |
16
|
ಅದಕ್ಕೆ ಯೇಸು--ನೀವು ಸಹ ಇನ್ನೂ ಗ್ರಹಿಸದೆ ಇದ್ದೀರಾ? |
17
|
ಬಾಯೊಳಗೆ ಹೋಗಿ ಹೊಟ್ಟೆ ಯಲ್ಲಿ ಸೇರುವದೆಲ್ಲವೂ ಬಹಿರ್ಭೂಮಿಗೆ ಹೋಗುವ ದೆಂದು ನೀವು ಇನ್ನೂ ಗ್ರಹಿಸಲಿಲ್ಲವೋ? |
18
|
ಆದರೆ ಬಾಯೊಳಗಿಂದ ಹೊರಗೆ ಹೊರಡುವಂಥವುಗಳು ಹೃದಯದೊಳಗಿಂದ ಬಂದು ಮನುಷ್ಯನನ್ನು ಹೊಲೆ ಮಾಡುತ್ತವೆ. |
19
|
ಯಾಕಂದರೆ ಹೃದಯದೊಳಗಿಂದ ಕೆಟ್ಟ ಆಲೋಚನೆಗಳು, ಕೊಲೆಗಳು, ಹಾದರಗಳು, ಜಾರತ್ವ ಗಳು, ಕಳ್ಳತನಗಳು, ಸುಳ್ಳುಸಾಕ್ಷಿ, ದೇವ ದೂಷಣೆಗಳು ಹೊರಗೆ ಬರುತ್ತವೆ. |
20
|
ಇಂಥವುಗಳೇ ಮನುಷ್ಯನನ್ನು ಹೊಲೆಮಾಡುತ್ತವೆ; ಆದರೆ ಕೈತೊಳಕೊಳ್ಳದೆ ಊಟ ಮಾಡುವದು ಮನುಷ್ಯನನ್ನು ಹೊಲೆಮಾಡುವದಿಲ್ಲ ಅಂದನು. |
21
|
ತರುವಾಯ ಯೇಸು ಅಲ್ಲಿಂದ ಹೊರಟು ತೂರ್ ಸೀದೋನ್ ತೀರಗಳಿಗೆ ಬಂದನು. |
22
|
ಆಗ ಇಗೋ, ಕಾನಾನ್ಯಳಾದ ಒಬ್ಬ ಸ್ತ್ರೀಯು ಅದೇ ಪ್ರಾಂತ್ಯಗಳಿಂದ ಬಂದು ಆತನಿಗೆ--ಓ ಕರ್ತನೇ, ದಾವೀದನ ಕುಮಾ ರನೇ, ನನ್ನ ಮೇಲೆ ಕರುಣೆಯಿಡು; ನನ್ನ ಮಗಳು ದೆವ್ವದಿಂದ ಬಹಳವಾಗಿ ಸಂಕಟಪಡುತ್ತಿದ್ದಾಳೆ ಎಂದು ಕೂಗಿಕೊಂಡಳು. |
23
|
ಆದರೆ ಆತನು ಆಕೆಗೆ ಒಂದು ಮಾತೂ ಉತ್ತರ ಕೊಡಲಿಲ್ಲ; ಆಗ ಆತನ ಶಿಷ್ಯರು ಬಂದು--ಆಕೆಯನ್ನು ಕಳುಹಿಸಿಬಿಡು, ಯಾಕಂದರೆ ಆಕೆಯು ನಮ್ಮ ಹಿಂದೆ ಕೂಗಿಕೊಂಡು ಬರುತ್ತಾಳೆ ಎಂದು ಆತನನ್ನು ಬೇಡಿಕೊಂಡರು. |
24
|
ಆದರೆ ಆತನು ಪ್ರತ್ಯು ತ್ತರವಾಗಿ-- ತಪ್ಪಿಸಿಕೊಂಡ ಕುರಿಗಳಾಗಿರುವ ಇಸ್ರಾ ಯೇಲಿನ ಮನೆತನದವರ ಬಳಿಗೆ ಮಾತ್ರ ನಾನು ಕಳುಹಿಸಲ್ಪಟ್ಟಿದ್ದೇನೆ ಅಂದನು. |
25
|
ಆಗ ಆಕೆಯು ಬಂದು ಆತನನ್ನು ಆರಾಧಿಸಿ--ಕರ್ತನೇ, ನನಗೆ ಸಹಾಯ ಮಾಡು ಎಂದು ಕೇಳಿಕೊಂಡಳು. |
26
|
ಆದರೆ ಆತನು ಪ್ರತ್ಯುತ್ತರವಾಗಿ--ಮಕ್ಕಳ ರೊಟ್ಟಿಯನ್ನು ತಕ್ಕೊಂಡು ನಾಯಿಗಳಿಗೆ ಹಾಕುವದು ಸರಿಯಲ್ಲ ಎಂದು ಹೇಳಿ ದನು. |
27
|
ಆಗ ಆಕೆಯು--ಕರ್ತನೇ, ಅದು ನಿಜವೇ; ಆದರೂ ನಾಯಿಗಳು ತಮ್ಮ ಯಜಮಾನರ ಮೇಜಿನಿಂದ ಬೀಳುವ ರೊಟ್ಟಿ ತುಂಡುಗಳನ್ನು ತಿನ್ನು ತ್ತವಲ್ಲಾ ಅಂದಳು. |
28
|
ಆಗ ಯೇಸು ಪ್ರತ್ಯುತ್ತರವಾಗಿ ಆಕೆಗೆ--ಓ ಸ್ತ್ರೀಯೇ, ನಿನ್ನ ನಂಬಿಕೆಯು ದೊಡ್ಡದು; ನೀನು ಇಷ್ಟಪಟ್ಟಂತೆಯೇ ನಿನಗಾಗಲಿ ಎಂದು ಹೇಳಿ ದನು. ಮತ್ತು ಆಕೆಯ ಮಗಳು ಅದೇ ಗಳಿಗೆಯಲ್ಲಿ ಸ್ವಸ್ಥಳಾದಳು. |
29
|
ಇದಾದ ಮೇಲೆ ಯೇಸು ಅಲ್ಲಿಂದ ಹೊರಟು ಗಲಿಲಾಯ ಸಮುದ್ರದ ಸಮಾಪಕ್ಕೆ ಬಂದನು; ಮತು ಆತನು ಬೆಟ್ಟವನ್ನು ಹತ್ತಿ ಅಲ್ಲಿ ಕೂತುಕೊಂಡನು. |
30
|
ಆಗ ಜನರ ದೊಡ್ಡ ಸಮೂಹಗಳು ಕುಂಟರನ್ನು ಕುರುಡರನ್ನು ಮೂಕರನ್ನು ಊನವಾದವರನ್ನು ಮತ್ತು ಬೇರೆ ಅನೇಕರನ್ನು ತಮ್ಮೊಂದಿಗೆ ಕರಕೊಂಡು ಯೇಸು ವಿನ ಪಾದಗಳ ಬಳಿಗೆ ತಂದರು. ಮತ್ತು ಆತನು ಅವರನ್ನು ಸ್ವಸ್ಥಪಡಿಸಿದನು. |
31
|
ಮೂಕರು ಮಾತನಾಡು ವದನ್ನೂ ಊನವಾದವರು ಸ್ವಸ್ಥರಾಗಿರುವದನ್ನೂ ಕುಂಟರು ನಡೆದಾಡುವದನ್ನೂ ಕುರುಡರು ನೋಡುವ ದನ್ನೂ ಜನಸಮೂಹದವರು ಕಂಡು ಆಶ್ಚರ್ಯದಿಂದ ಇಸ್ರಾಯೇಲಿನ ದೇವರನ್ನು ಮಹಿಮೆಪಡಿಸಿದರು. |
32
|
ತರುವಾಯ ಯೇಸು ತನ್ನ ಶಿಷ್ಯರನ್ನು ಕರೆದು-- ನಾನು ಈ ಜನಸಮೂಹವನ್ನು ಕನಿಕರಿಸುತ್ತೇನೆ; ಯಾಕ ಂದರೆ ಈಗ ಬಿಟ್ಟೂಬಿಡದೆ ಮೂರು ದಿನಗಳಿಂದ ಅವರು ನನ್ನೊಂದಿಗಿದ್ದಾರೆ; ಮತ್ತು ಅವರಿಗೆ ತಿನ್ನುವದಕ್ಕೆ ಏನೂ ಇಲ್ಲ; ದಾರಿಯಲ್ಲಿ ಅವರು ಬಳಲಿಹೋದಾರೆಂದು ಅವ ರನ್ನು ಉಪವಾಸವಾಗಿ ಕಳುಹಿಸು |
33
|
ಅದಕ್ಕೆ ಆತನ ಶಿಷ್ಯರು ಆತನಿಗೆ--ಇಂಥಾ ದೊಡ್ಡ ಸಮೂಹವನ್ನು ತೃಪ್ತಿಪಡಿಸುವಂತೆ ಈ ಅರಣ್ಯದಲ್ಲಿ ನಮಗೆ ಎಲ್ಲಿಂದ ರೊಟ್ಟಿಯು ಸಿಕ್ಕೀತು ಅಂದರು. |
34
|
ಆಗ ಯೇಸು ಅವರಿಗೆ--ನಿಮ್ಮ ಹತ್ತಿರ ಎಷ್ಟು ರೊಟ್ಟಿಗಳಿವೆ ಎಂದು ಕೇಳಿದನು. ಅವರು--ಏಳು ರೊಟ್ಟಿಗಳು ಮತ್ತು ಕೆಲವು ಚಿಕ್ಕ ಮಾನುಗಳಿವೆ ಅಂದರು. |
35
|
ಆಗ ಜನಸಮೂಹವು ನೆಲದ ಮೇಲೆ ಕೂತುಕೊಳ್ಳ ಬೇಕೆಂದು ಆತನು ಅಪ್ಪಣೆಕೊಟ್ಟನು. |
36
|
ಆತನು ಆ ಏಳು ರೊಟ್ಟಿಗಳನ್ನು ಮತ್ತು ಮಾನುಗಳನ್ನು ತಕ್ಕೊಂಡು ಸ್ತೋತ್ರಮಾಡಿ ಅವುಗಳನ್ನು ಮುರಿದು ತನ್ನ ಶಿಷ್ಯರಿಗೆ ಕೊಟ್ಟನು ಮತ್ತು ಶಿಷ್ಯರು ಜನಸಮೂಹಕ್ಕೆ ಕೊಟ್ಟರು. |
37
|
ಅವರೆಲ್ಲರೂ ಊಟಮಾಡಿ ತೃಪ್ತರಾದರು; ಮತ್ತು ಅವರು ಮಿಕ್ಕ ತುಂಡುಗಳನ್ನು ಕೂಡಿಸಲಾಗಿ ಏಳು ಪುಟ್ಟಿಗಳು ತುಂಬಿದವು. |
38
|
ಊಟಮಾಡಿದವರು ಸ್ತ್ರೀಯರೂ ಮಕ್ಕಳೂ ಅಲ್ಲದೆ ನಾಲ್ಕು ಸಾವಿರ ಗಂಡಸರು. |
39
|
ತರುವಾಯ ಆತನು ಜನಸಮೂಹವನ್ನು ಕಳುಹಿಸಿಬಿಟ್ಟು ದೋಣಿಯನ್ನು ಹತ್ತಿ ಮಗ್ದಲ ತೀರಕ್ಕೆ ಬಂದನು. |
Matthew 15:18 Kannada Language Bible Words basic statistical display
COMING SOON ...