ನಿಮ್ಮ ಎದುರಾಗಿರುವ ಹಳ್ಳಿಗೆ ಹೋಗಿರಿ; ನೀವು ಅದರೊಳಗೆ ಪ್ರವೇಶಿಸುತ್ತಲೇ ಯಾರು ಎಂದಿಗೂ ಅದರ ಮೇಲೆ ಕೂತುಕೊಳ್ಳದಿರುವ ಒಂದು ಕತ್ತೇಮರಿಯನ್ನು ಅಲ್ಲಿ ಕಾಣುವಿರಿ; ಅದನ್ನು ಬಿಚ್ಚಿ ತಕ್ಕೊಂಡು ಬನ್ನಿರಿ.
ಆತನು ಎಲೆಗಳಿದ್ದ ಒಂದು ಅಂಜೂರದ ಮರವನ್ನು ದೂರದಿಂದ ನೋಡಿ ಒಂದು ವೇಳೆ ತನಗೆ ಅದರಲ್ಲಿ ಏನಾದರೂ ಸಿಕ್ಕೀತೆಂದು ಬಂದನು; ಆದರೆ ಆತನು ಅದರ ಬಳಿಗೆ ಬಂದಾಗ ಎಲೆಗಳನ್ನೇ ಹೊರತು ಮತ್ತೇನೂ ಕಾಣಲಿಲ್ಲ; ಯಾಕಂ ದರೆ ಅದು ಅಂಜೂರ ಫಲದ ಕಾಲವಾಗಿರಲಿಲ್ಲ.
ಆಗ ಅವರು ಯೆರೂಸಲೇಮಿಗೆ ಬಂದರು; ಮತ್ತು ಯೇಸು ದೇವಾಲಯದೊಳಕ್ಕೆ ಹೋಗಿ ಅಲ್ಲಿ ಮಾರುತ್ತಿದ್ದವರನ್ನೂ ಕೊಂಡು ಕೊಳ್ಳುತ್ತಿದ್ದವರನ್ನೂ ಹೊರಗೆ ಹಾಕಲಾರಂಭಿಸಿ ಹಣ ಬದಲಾಯಿಸುವವರ ಮೇಜುಗಳನ್ನೂ ಪಾರಿವಾಳಗಳನ್ನು ಮಾರುತ್ತಿದ್ದವರ ಪೀಠಗಳನ್ನೂ ಕೆಡವಿಹಾಕಿದನು.
ಆತನು ಅವರಿಗೆ ಬೋಧಿಸುತ್ತಾ--ನನ್ನ ಮನೆಯು ಎಲ್ಲಾ ಜನಾಂಗಗಳವರಿಂದ ಪ್ರಾರ್ಥನೆಯ ಮನೆ ಎಂದು ಕರೆಯಲ್ಪಡುವದೆಂದು ಬರೆದಿಲ್ಲವೇ? ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ ಎಂದು ಹೇಳಿದನು.
ಯಾಕಂದರೆ ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಯಾವನಾದರೂ ಈ ಬೆಟ್ಟಕ್ಕೆ--ನೀನು ಕಿತ್ತುಕೊಂಡು ಹೋಗಿ ಸಮುದ್ರ ದಲ್ಲಿ ಬೀಳು ಎಂದು ಹೇಳಿ ತನ್ನ ಹೃದಯದಲ್ಲಿ ಸಂಶಯ ಪಡದೆ ತಾನು ಹೇಳಿದವುಗಳು ಆಗುವವೆಂದು ನಂಬಿ ದರೆ ಅವನು ಹೇಳಿದಂತೆಯೇ ಆಗುವದು.
ನೀವು ನಿಂತು ಕೊಂಡು ಪ್ರಾರ್ಥಿಸುವಾಗ ಯಾವನಿಗಾದರೂ ವಿರೋ ಧವಾದದ್ದು ನಿಮ್ಮಲ್ಲಿದ್ದರೆ ಕ್ಷಮಿಸಿರಿ; ಆಗ ಪರಲೋಕ ದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ಅಪರಾಧಗಳನ್ನು ನಿಮಗೆ ಕ್ಷಮಿಸುವನು.
ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ನಾನು ಸಹ ಒಂದು ಪ್ರಶ್ನೆಯನ್ನು ನಿಮ್ಮಿಂದ ಕೇಳುತ್ತೇನೆ, ನನಗೆ ಉತ್ತರಕೊಡಿರಿ; ಆಗ ನಾನು ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುತ್ತೇನೆ.
ಅವರು ಪ್ರತ್ಯುತ್ತರವಾಗಿ ಯೇಸುವಿಗೆ--ನಾವು ಹೇಳಲಾರೆವು ಎಂದು ಉತ್ತರ ಕೊಟ್ಟರು. ಅದಕ್ಕೆ ಯೇಸು--ನಾನು ಯಾವ ಅಧಿಕಾರ ದಿಂದ ಇವುಗಳನ್ನು ಮಾಡುತ್ತೇನೆಂದು ನಾನೂ ನಿಮಗೆ ಹೇಳುವದಿಲ್ಲ ಎಂದು ಅವರಿಗೆ ಉತ್ತರ ಕೊಟ್ಟನು.