1
|
ಅಲ್ಲಿಂದ ಆತನು ಎದ್ದು ಯೊರ್ದನಿಗೆ ಆಚೆ ಕಡೆಗಿರುವ ಯೂದಾಯದ ಮೇರೆ ಗಳಿಗೆ ಬಂದನು; ಜನರು ತಿರಿಗಿ ಆತನ ಬಳಿಗೆ ಕೂಡಿ ಬರಲು ಆತನು ತನ್ನ ವಾಡಿಕೆಯಂತೆ ಅವರಿಗೆ ಮತ್ತೆ ಬೋಧಿಸಿದನು. |
2
|
ಆಗ ಫರಿಸಾಯರು ಆತನ ಬಳಿಗೆ ಬಂದು ಆತನನ್ನು ಶೋಧಿಸುವದಕ್ಕಾಗಿ ಆತನಿಗೆ--ಒಬ್ಬ ಮನುಷ್ಯನು ತನ್ನ ಹೆಂಡತಿಯನ್ನು ಬಿಟ್ಟು ಬಿಡುವದು ನ್ಯಾಯವೋ ಎಂದು ಕೇಳಿದರು. |
3
|
ಆತನು ಪ್ರತ್ಯುತ್ತರವಾಗಿ ಅವರಿಗೆ--ಮೋಶೆಯು ನಿಮಗೆ ಏನು ಅಪ್ಪಣೆ ಕೊಟ್ಟನು ಎಂದು ಕೇಳಿದನು. |
4
|
ಅದಕ್ಕೆ ಅವರು--ತ್ಯಾಗಪತ್ರವನ್ನು ಬರೆದುಕೊಟ್ಟು ಆಕೆಯನ್ನು ಬಿಟ್ಟುಬಿಡಬೇಕೆಂದು ಮೋಶೆಯು ಅಪ್ಪಣೆಕೊಟ್ಟನು ಅಂದರು. |
5
|
ಯೇಸು ಪ್ರತ್ಯುತ್ತರವಾಗಿ ಅವರಿಗೆ--ಅವನು ನಿಮ್ಮ ಹೃದಯದ ಕಾಠಿಣ್ಯದ ನಿಮಿತ್ತವಾಗಿ ನಿಮಗೆ ಈ ಆಜ್ಞೆಯನ್ನು ಬರೆದನು. |
6
|
ಆದರೆ ಸೃಷ್ಟಿಯ ಪ್ರಾರಂಭದಿಂದಲೇ ದೇವರು ಅವರನ್ನು ಗಂಡು ಹೆಣ್ಣಾಗಿ ಮಾಡಿದನು. |
7
|
ಈ ಕಾರಣದಿಂದ ಒಬ್ಬ ಮನುಷ್ಯನು ತನ್ನ ತಂದೆಯನ್ನೂ ತಾಯಿಯನ್ನೂ ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. |
8
|
ಅವರಿಬ್ಬರು ಒಂದೇ ಶರೀರವಾಗಿರುವರು; ಹೀಗೆ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. |
9
|
ಆದದರಿಂದ ದೇವರು ಕೂಡಿಸಿದ್ದನ್ನು ಮನುಷ್ಯನು ಅಗಲಿಸದಿರಲಿ ಅಂದನು. |
10
|
ಆತನ ಶಿಷ್ಯರು ಮನೆಯಲ್ಲಿ ಅದೇ ವಿಷಯವನ್ನು ಆತನಿಗೆ ತಿರಿಗಿ ಕೇಳಿದರು. |
11
|
ಅದಕ್ಕೆ ಆತನು ಅವರಿಗೆ-- ಯಾವನಾದರೂ ತನ್ನ ಹೆಂಡತಿ ಯನ್ನು ಬಿಟ್ಟು ಬಿಟ್ಟು ಇನ್ನೊಬ್ಬಳನ್ನು ಮದುವೆಯಾದರೆ ಅವಳಿಗೆ ವಿರೋಧವಾಗಿ ವ್ಯಭಿಚಾರ ಮಾಡುವವನಾಗಿ ದ್ದಾನೆ. |
12
|
ಇದಲ್ಲದೆ ಒಬ್ಬ ಸ್ತ್ರೀಯು ತನ್ನ ಗಂಡನನ್ನು ಬಿಟ್ಟು ಬೇರೊಬ್ಬನನ್ನು ಮದುವೆಯಾದರೆ ಅವಳು ವ್ಯಭಿಚಾರ ಮಾಡುವವಳಾಗಿದ್ದಾಳೆ ಅಂದನು. |
13
|
ಆಗ ಕೆಲವರು ಚಿಕ್ಕ ಮಕ್ಕಳನ್ನು ಆತನು ಮುಟ್ಟಬೇಕೆಂದು ಆತನ ಬಳಿಗೆ ಅವುಗಳನ್ನು ತಂದರು; ಆದರೆ ಆತನ ಶಿಷ್ಯರು ತಂದವರನ್ನು ಗದರಿಸಿದರು. |
14
|
ಆದರೆ ಯೇಸು ಅದನ್ನು ನೋಡಿದಾಗ ಬಹಳವಾಗಿ ಕೋಪಗೊಂಡು ಅವರಿಗೆ--ಚಿಕ್ಕಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡ ಬೇಡಿರಿ; ಯಾಕಂದರೆ ದೇವರ ರಾಜ್ಯವು ಇಂಥವರದೇ ಅಂದನು. |
15
|
ನಾನು ನಿಮಗೆ ನಿಜವಾಗಿ ಹೇಳುವದೇ ನಂದರೆ--ಯಾವನಾದರೂ ಚಿಕ್ಕ ಮಗುವಿನಂತೆ ದೇವರ ರಾಜ್ಯವನ್ನು ಅಂಗೀಕರಿಸದಿದ್ದರೆ ಅವನು ಅದರೊಳಗೆ ಪ್ರವೇಶಿಸುವದಿಲ್ಲ. |
16
|
ಇದಲ್ಲದೆ ಆತನು ಆ ಮಕ್ಕಳನ್ನು ಎತ್ತಿಕೊಂಡು ತನ್ನ ಕೈಗಳನ್ನು ಅವುಗಳ ಮೇಲೆ ಇಟ್ಟು ಆಶೀರ್ವದಿಸಿದನು. |
17
|
ಆತನು ದಾರಿಯಲ್ಲಿ ಮುಂದಕ್ಕೆ ಹೋದಾಗ ಒಬ್ಬನು ಓಡುತ್ತಾ ಬಂದು ಆತನ ಮುಂದೆ ಮೊಣಕಾಲೂರಿ--ಒಳ್ಳೇ ಬೋಧಕನೇ, ನಾನು ನಿತ್ಯಜೀವ ವನ್ನು ಬಾಧ್ಯವಾಗಿ ಹೊಂದುವಂತೆ ಏನು ಮಾಡಬೇಕು ಎಂದು ಆತನನ್ನು ಕೇಳಿದನು. |
18
|
ಯೇಸು ಅವನಿಗೆ --ನೀನು ನನ್ನನ್ನು ಒಳ್ಳೆಯವನೆಂದು ಯಾಕೆ ಕರೆಯುತ್ತೀ? ದೇವರೊಬ್ಬನೇ ಹೊರತು ಮತ್ತಾವನೂ ಒಳ್ಳೆಯವ ನಲ್ಲ. |
19
|
ವ್ಯಭಿಚಾರ ಮಾಡಬಾರದು, ಕೊಲ್ಲಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ಮೋಸ ಮಾಡಬಾರದು, ನಿನ್ನ ತಂದೆಯನ್ನೂ ತಾಯಿಯನ್ನೂ ಸನ್ಮಾನಿಸಬೇಕು ಎಂಬ ಈ ಆಜ್ಞೆಗಳು ನಿನಗೆ ಗೊತ್ತಿವೆ ಯಲ್ಲಾ ಅಂದನು. |
20
|
ಆಗ ಅವನು ಪ್ರತ್ಯುತ್ತರವಾಗಿ ಆತನಿಗೆ--ಬೋಧಕನೇ, ನಾನು ಇವೆಲ್ಲವುಗಳನ್ನು ನನ್ನ ಬಾಲ್ಯದಿಂದಲೇ ಅನುಸರಿಸಿದ್ದೇನೆ ಅಂದನು. |
21
|
ಆಗ ಯೇಸು ಅವನನ್ನು ದೃಷ್ಟಿಸಿ ನೋಡುತ್ತಾ ಅವನನ್ನು ಪ್ರೀತಿಸಿ ಅವನಿಗೆ--ನಿನಗೆ ಒಂದು ಕಡಿಮೆ ಇದೆ; ನೀನು ಹೊರಟುಹೋಗಿ ನಿನಗಿರುವದನ್ನೆಲ್ಲಾ ಮಾರಿ ಬಡವರಿಗೆ ಕೊಡು; ಆಗ ಪರಲೋಕದಲ್ಲಿ ನಿನಗೆ ಸಂಪತ್ತಿರುವದು; ಮತ್ತು ನೀನು ಬಂದು ಶಿಲುಬೆಯನ್ನು ತಕ್ಕೊಂಡು ನನ್ನನ್ನು ಹಿಂಬಾಲಿಸು ಅಂದ |
22
|
ಆ ಮಾತಿಗೆ ಅವನು ವ್ಯಸನಗೊಂಡು ದುಃಖದಿಂದ ಹೊರಟುಹೋದನು; ಯಾಕಂದರೆ ಅವನಿಗೆ ಬಹಳ ಆಸ್ತಿಯಿತ್ತು. |
23
|
ಆಗ ಯೇಸು ಸುತ್ತಲೂ ನೋಡಿ ತನ್ನ ಶಿಷರಿಗೆ --ಐಶ್ವರ್ಯವುಳ್ಳವರು ದೇವರ ರಾಜ್ಯದಲ್ಲಿ ಸೇರುವದು ಎಷ್ಟೋ ಕಷ್ಟ ಅಂದನು. |
24
|
ಆಗ ಶಿಷ್ಯರು ಆತನ ಮಾತುಗಳಿಗೆ ಬೆರಗಾದರು; ಆದರೆ ಯೇಸು ತಿರಿಗಿ ಉತ್ತರಕೊಟ್ಟು ಅವರಿಗೆ-- ಮಕ್ಕಳಿರಾ, ಐಶ್ವರ್ಯದಲ್ಲಿ ನಂಬಿಕೆ ಇಟ್ಟವರು ದೇವರ ರಾಜ್ಯದಲ್ಲಿ ಪ್ರವೇಶಿಸುವದು ಎಷ್ಟೋ ಕಷ್ಟ. |
25
|
ಒಬ್ಬ ಐಶ್ವರ್ಯವಂತನು ದೇವರ ರಾಜ್ಯದೊಳಗೆ ಸೇರುವದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವದು ಸುಲಭ ಅಂದನು. |
26
|
ಅದಕ್ಕೆ ಅವರು ಮಿತಿವಿಾರಿ ಆಶ್ಚರ್ಯಪಟ್ಟು ತಮ್ಮೊಳಗೆ--ಹಾಗಾದರೆ ರಕ್ಷಿಸಲ್ಪಡುವದು ಯಾರಿಗೆ ಸಾಧ್ಯ ಎಂದು ಅಂದು ಕೊಂಡರು. |
27
|
ಆಗ ಯೇಸು ಅವರನ್ನು ದೃಷ್ಟಿಸುತ್ತಾ--ಮನುಷ್ಯರಿಗೆ ಇದು ಅಸಾಧ್ಯವಾಗಿದೆ; ಆದರೆ ದೇವರಿಗೆ ಅಲ್ಲ; ಯಾಕಂದರೆ ದೇವರಿಗೆ ಎಲ್ಲವೂ ಸಾಧ್ಯವಾಗಿವೆ ಅಂದನು. |
28
|
ತರುವಾಯ ಪೇತ್ರನು ಆತನಿಗೆ-- ಇಗೋ, ನಾವು ಎಲ್ಲವನ್ನು ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ ಎಂದು ಹೇಳಲಾರಂಭಿಸಿದನು. |
29
|
ಅದಕ್ಕೆ ಯೇಸು ಪ್ರತ್ಯುತ್ತರವಾಗಿ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ; ಯಾವನಾದರೂ ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ಮನೆಯನ್ನಾಗಲೀ ಸಹೋದರರನ್ನಾಗಲೀ ಸಹೋದರಿಯರನ್ನಾಗಲೀ ತಂದೆಯನ್ನಾಗಲೀ ತಾಯಿಯನ್ನಾಗಲೀ ಹೆಂಡತಿಯನ್ನಾಗಲೀ ಮಕ್ಕಳನ್ನಾಗಲೀ ಭೂಮಿಯ ನ್ನಾಗಲೀ ಬಿಟು |
30
|
ಅವನು ಈಗಿನ ಕಾಲದಲ್ಲಿ ಹಿಂಸೆಗಳ ಸಹಿತವಾಗಿ ನೂರರಷ್ಟು ಮನೆಗಳನ್ನೂ ಸಹೋದರರನ್ನೂ ಸಹೋದರಿಯರನ್ನೂ ತಾಯಂದಿ ರನ್ನೂ ಮಕ್ಕಳನ್ನೂ ಭೂಮಿಯನ್ನೂ ಹೊಂದುವದಲ್ಲದೆ ಬರುವ ಲೋಕದಲ್ಲಿ ನಿತ್ಯ ಜೀವವನ್ನು ಹೊಂದುವನು. |
31
|
ಆದರೆ ಮೊದಲಿನವರಾದ ಅನೇಕರು ಕಡೆಯವ ರಾಗುವರು ಮತ್ತು ಕಡೆಯವರಾದವರು ಮೊದಲಿನ ವರಾಗುವರು ಅಂದನು. |
32
|
ಆಗ ಅವರು ಯೆರೂಸಲೇಮಿಗೆ ಹೋಗುವ ದಾರಿಯಲ್ಲಿದ್ದರು; ಮತ್ತು ಯೇಸು ಅವರ ಮುಂದಾಗಿ ಹೋದದ್ದರಿಂದ ಅವರು ಆಶ್ಚರ್ಯಪಟ್ಟರು; ಮತ್ತು ಆತನನ್ನು ಹಿಂಬಾಲಿಸುತ್ತಿದ್ದಾಗ ಭಯಪಟ್ಟರು. ಆತನು ತನ್ನ ಹನ್ನೆರಡು ಮಂದಿಯನ್ನು ತಿರಿಗಿ ಕರೆದು ತನಗೆ ಸಂಭವಿಸುವವುಗಳು ಯಾವವೆಂದು ಅವರಿ |
33
|
ಇಗೋ, ನಾವು ಯೆರೂಸಲೇ ಮಿಗೆ ಹೋಗುತ್ತೇವೆ; ಮತ್ತು ಮನುಷ್ಯಕುಮಾರನು ಪ್ರಧಾನಯಾಜಕರಿಗೂ ಶಾಸ್ತ್ರಿಗಳಿಗೂ ಒಪ್ಪಿಸಲ್ಪಡು ವನು; ಅವರು ಆತನಿಗೆ ಮರಣದಂಡನೆಯನ್ನು ವಿಧಿಸಿ ಆತನನ್ನು ಅನ್ಯಜನಗಳಿಗೆ ಒಪ್ಪಿಸುವರು. |
34
|
ಮತ್ತು ಅವರು ಆತನನ್ನು ಹಾಸ್ಯ ಮಾಡಿ ಕೊರಡೆಯಿಂದ ಹೊಡೆದು ಆತನ ಮೇಲೆ ಉಗುಳಿ ಆತನನ್ನು ಕೊಲ್ಲುವರು; ಮತ್ತು ಮೂರನೇ ದಿನದಲ್ಲಿ ಆತನು ತಿರಿಗಿ ಏಳುವನು ಅಂದನು. |
35
|
ಆಗ ಜೆಬೆದಾಯನ ಮಕ್ಕಳಾದ ಯಾಕೋಬ ಯೋಹಾನರು ಆತನ ಬಳಿಗೆ ಬಂದು--ಬೋಧಕನೇ, ನಾವು ಅಪೇಕ್ಷಿಸುವದನ್ನು ನೀನು ನಮಗೋಸ್ಕರ ಮಾಡಬೇಕೆಂದು ನಾವು ಬಯಸುತ್ತೇವೆ ಅಂದರು. |
36
|
ಅದಕ್ಕೆ ಆತನು ಅವರಿಗೆ--ನಾನು ನಿಮಗೆ ಏನು ಮಾಡಬೇಕೆಂದು ಅಪೇಕ್ಷಿಸುತ್ತೀರಿ ಎಂದು ಕೇಳಲು |
37
|
ಅವರು ಆತನಿಗೆ--ನಾವು ನಿನ್ನ ಮಹಿಮೆಯಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲಿಯೂ ಮತ್ತೊಬ್ಬನು ನಿನ್ನ ಎಡಗಡೆಯಲ್ಲಿಯೂ ಕೂತುಕೊಳ್ಳುವಂತೆ ನಮಗೆ ಅನುಗ್ರಹಿಸು ಅಂದರು. |
38
|
ಆದರೆ ಯೇಸು ಅವರಿಗೆ -- ನೀವು ಏನು ಬೇಡಿಕೊಳ್ಳುತ್ತೀರೋ ನಿಮಗೆ ತಿಳಿಯದು; ನಾನು ಕುಡಿಯುವ ಪಾತ್ರೆಯಲ್ಲಿ ನೀವು ಕುಡಿಯುವಿರೋ? ಮತ್ತು ನಾನು ಹೊಂದುವ ಬಾಪ್ತಿಸ್ಮವನ್ನು ನೀವು ಹೊಂದುವಿರೋ ಅಂದನು. |
39
|
ಅದಕ್ಕೆ ಅವರು ಆತನಿಗೆ--ನಮ್ಮಿಂದಾಗುವದು ಅಂದರು. ಆದರೆ ಯೇಸು ಅವರಿಗೆ--ನಾನು ಕುಡಿ ಯುವ ಪಾತ್ರೆಯಲ್ಲಿ ನೀವು ನಿಜವಾಗಿಯೂ ಕುಡಿಯು ವಿರಿ; ಮತ್ತು ನಾನು ಹೊಂದುವ ಬಾಪ್ತಿಸ್ಮದಿಂದ ನೀವು ಬಾಪ್ತಿಸ್ಮ ಹೊಂದುವಿರಿ. |
40
|
ಆದರೆ ನನ್ನ ಬಲಗಡೆಯಲ್ಲಿ ಮತ್ತು ನನ್ನ ಎಡಗಡೆಯಲ್ಲಿ ಕೂತು ಕೊಳ್ಳುವಂತೆ ಅನುಗ್ರಹ ಮಾಡುವದು ನನ್ನದಲ್ಲ; ಅದು ಯಾರಿ ಗೋಸ್ಕರ ಸಿದ್ಧಮಾಡಲ್ಪಟ್ಟಿದೆಯೋ ಅವರಿಗೆ ಕೊಡ ಲ್ಪಡುವದು ಅಂದನು. |
41
|
ಆ ಹತ್ತು ಮಂದಿಯು ಅದನ್ನು ಕೇಳಿದಾಗ ಯಾಕೋಬ ಯೋಹಾನರ ಮೇಲೆ ಅವರು ಬಹಳವಾಗಿ ಕೋಪಗೊಳ್ಳಲಾರಂಭಿಸಿದರು. |
42
|
ಆದರೆ ಯೇಸು ಅವರನ್ನು ತನ್ನ ಹತ್ತಿರಕ್ಕೆ ಕರೆದು ಅವರಿಗೆ--ಅನ್ಯಜನಗಳನ್ನು ಆಳುವದಕ್ಕೆ ನೇಮಿಸಲ್ಪ ಟ್ಟವರು ಅವರ ಮೇಲೆ ದೊರೆತನ ಮಾಡುತ್ತಾರೆ; ಮತ್ತು ಅವರಲ್ಲಿ ದೊಡ್ಡ ವರು ಅವರ ಮೇಲೆ ಅಧಿಕಾರ ಮಾಡುತ್ತಾರೆಂದು ನೀವು ಬಲ್ಲಿರಿ. |
43
|
ಆದರೆ ನಿಮ್ಮೊಳಗೆ ಹಾಗಿರಬಾರದು; ಮತ್ತು ನಿಮ್ಮೊಳಗೆ ದೊಡ್ಡವನಾಗಿರ ಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು. |
44
|
ನಿಮ್ಮಲ್ಲಿ ಮುಖ್ಯಸ್ಥನಾಗಬೇಕೆಂದಿರುವವನು ಎಲ್ಲರಿಗೆ ಸೇವಕನಾಗಿರಬೇಕು. |
45
|
ಯಾಕಂದರೆ ಮನುಷ್ಯಕು ಮಾರನು ಸಹ ಸೇವೆ ಮಾಡಿಸಿಕೊಳ್ಳುವದಕ್ಕಾಗಿ ಅಲ್ಲ, ಆದರೆ ಸೇವೆ ಮಾಡುವದಕ್ಕೂ ತನ್ನ ಪ್ರಾಣವನ್ನು ಅನೇಕರಿಗೋಸ್ಕರ ಈಡುಕೊಡುವದಕ್ಕೂ ಬಂದನು ಎಂದು ಹೇಳಿದನು. |
46
|
ತರುವಾಯ ಅವರು ಯೆರಿಕೋವಿಗೆ ಬಂದರು; ಆತನು ತನ್ನ ಶಿಷ್ಯರೊಡನೆಯೂ ಬಹುಸಂಖ್ಯೆಯ ಜನರೊಡನೆಯೂ ಯೆರಿಕೋವಿನಿಂದ ಹೊರಟಾಗ ತಿಮಾಯನ ಮಗನಾದ ಕುರುಡ ಬಾರ್ತಿಮಾಯನು ಹೆದ್ದಾರಿಯ ಬದಿಯಲ್ಲಿ ಕೂತುಕೊಂಡು ಭಿಕ್ಷೆಬೇಡು ತ್ತಿದ್ದನು. |
47
|
ಆತನು ನಜರೇತಿನ ಯೇಸು ಎಂದು ಅವನು ಕೇಳಿದಾಗ ಕೂಗಲಾರಂಭಿಸಿ--ಯೇಸುವೇ, ದಾವೀದನಕುಮಾರನೇ, ನನ್ನನ್ನು ಕರುಣಿಸು ಅಂದನು. |
48
|
ಅವನು ಸುಮ್ಮನಿರುವಂತೆ ಅನೇಕರು ಅವನಿಗೆ ಖಂಡಿತವಾಗಿ ಹೇಳಿದರು; ಆದರೆ ಅವನು ಇನ್ನೂ ಹೆಚ್ಚಾಗಿ--ದಾವೀದನಕುಮಾರನೇ, ನನ್ನನ್ನು ಕರುಣಿಸು ಎಂದು ಕೂಗಿದನು. |
49
|
ಆಗ ಯೇಸು ನಿಂತುಕೊಂಡು ಅವನನ್ನು ಕರೆಯಬೇಕೆಂದು ಆಜ್ಞಾಪಿಸಲು ಅವರು ಆ ಕುರುಡನನ್ನು ಕರೆದು--ಸಮಾಧಾನವಾಗಿರು; ಏಳು, ಆತನು ನಿನ್ನನ್ನು ಕರೆಯುತ್ತಾನೆ ಎಂದು ಅವನಿಗೆ ಹೇಳಿದರು. |
50
|
ಅವನು ತನ್ನ ಉಡುಪನ್ನು ತೆಗೆದುಹಾಕಿ ಎದ್ದು ಯೇಸುವಿನ ಬಳಿಗೆ ಬಂದನು. |
51
|
ಯೇಸು ಅವನಿಗೆ--ನಾನು ನಿನಗೆ ಏನು ಮಾಡಬೇಕೆಂದು ನೀನು ಕೋರುತ್ತೀ ಎಂದು ಕೇಳಲು ಆ ಕುರುಡನು ಆತನಿಗೆ--ಕರ್ತನೇ, ನಾನು ನನ್ನ ದೃಷ್ಟಿಯನ್ನು ಹೊಂದುವಂತೆ ಮಾಡಬೇಕು ಅಂದನು. |
52
|
ಅದಕ್ಕೆ ಯೇಸು ಅವನಿಗೆ--ಹೋಗು, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಪಡಿಸಿದೆ ಅಂದನು. ಕೂಡಲೆ ಅವನು ತನ್ನ ದೃಷ್ಟಿಯನ್ನು ಹೊಂದಿ ಆ ಮಾರ್ಗದಲ್ಲಿ ಯೇಸು ವನ್ನು ಹಿಂಬಾಲಿಸಿದನು. |
Mark 10:48 Kannada Language Bible Words basic statistical display
COMING SOON ...