ಅವನಿಗೆ ಮೇಲಂಗಿಯನ್ನು ಹೊದಿಸಿ ನಡುಕಟ್ಟಿ ನಿಂದ ಅವನ ನಡುವನ್ನು ಕಟ್ಟಿ ನಿಲುವಂಗಿಯನ್ನು ತೊಡಿಸಿ ಅವನ ಮೇಲೆ ಎಫೋದನ್ನು ಹಾಕಿ ಎಫೋದಿನ ವಿಚಿತ್ರವಾದ ನಡುಕಟ್ಟಿನಿಂದ ನಡುವನ್ನು ಕಟ್ಟಿ ಅದ ರಿಂದ ಅವನನ್ನು ಬಿಗಿದನು.
ಆಗ ಅವನು ಅದನ್ನು ವಧಿಸಿ ದನು; ಮೋಶೆಯು ಅದರ ರಕ್ತವನ್ನು ತೆಗೆದುಕೊಂಡು ಯಜ್ಞವೇದಿಯ ಮೇಲಿರುವ ಕೊಂಬುಗಳಿಗೆ ಸುತ್ತಲೂ ತನ್ನ ಬೆರಳಿನಿಂದ ಹಚ್ಚಿ ಯಜ್ಞವೇದಿಯನ್ನು ಶುದ್ಧೀಕರಿಸಿ ಉಳಿದ ರಕ್ತವನ್ನು ಯಜ್ಞವೇದಿಯ ಅಡಿಯಲ್ಲಿ ಹೊಯ್ದನು. ಅದರ ಮೇಲೆ ಸಂಧಾನಮಾಡುವದಕ್ಕಾಗಿ ಅದನ್ನು ಪವಿತ್ರಮಾಡಿದನು.
ಅವನು ಕರುಳುಗಳನ್ನೂ ಕಾಲುಗಳನ್ನೂ ನೀರಿನಲ್ಲಿ ತೊಳೆದನು. ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಆ ಟಗರನ್ನು ಪೂರ್ಣ ವಾಗಿ ಯಜ್ಞವೇದಿಯ ಮೇಲೆ ಸುಟ್ಟನು. ಅದು ದಹನ ಬಲಿಯಾಗಿ ಕರ್ತನಿಗೆ ಬೆಂಕಿಯಿಂದ ಮಾಡಿದ ಸುವಾ ಸನೆಯ ಸಮರ್ಪಣೆಯಾಗಿತ್ತು.
ಮೋಶೆಯು ಆರೋನನ ಕುಮಾರರನ್ನು ಕರತಂದು ಅವರ ಬಲಗಿವಿಯ ತುದಿಯ ಮೇಲೆಯೂ ಬಲಗೈ ಹೆಬ್ಬೆರಳುಗಳ ಮೇಲೆಯೂ ಬಲಗಾಲುಗಳ ಹೆಬ್ಬೆರಳುಗಳ ಮೇಲೆಯೂ ಆ ರಕ್ತವನ್ನು ಹಚ್ಚಿದನು; ಅವನು ಆ ರಕ್ತವನ್ನು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸಿದನು.
ಕರ್ತನ ಸನ್ನಿಧಿಯಲ್ಲಿರುವ ಹುಳಿಯಿಲ್ಲದ ರೊಟ್ಟಿಯ ಪುಟ್ಟಿಯೊಳಗಿಂದ ಅವನು ಒಂದು ಹುಳಿಯಿಲ್ಲದ ರೊಟ್ಟಿಯನ್ನೂ ಎಣ್ಣೆಯಿಂದ ಮಾಡಿದ ರೊಟ್ಟಿಯನ್ನೂ ಒಂದು ದೋಸೆಯನ್ನೂ ತೆಗೆದುಕೊಂಡು ಅವುಗಳನ್ನು ಕೊಬ್ಬಿನ ಮೇಲೆಯೂ ಬಲಭುಜದ ಮೇಲೆಯೂ ಇಟ್ಟನು.
ಮೋಶೆಯು ಎದೆಯ ಭಾಗವನ್ನು ತೆಗೆದುಕೊಂಡು ಕರ್ತನ ಸನ್ನಿಧಿ ಯಲ್ಲಿ ಆಡಿಸುವ ಸಮರ್ಪಣೆಗಾಗಿ ಅದನ್ನು ಆಡಿಸಿ ದನು; ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಪ್ರತಿ ಷ್ಠಿತ ಟಗರು ಮೋಶೆಯ ಪಾಲಾಗಿತ್ತು.
ಮೋಶೆಯು ಅಭಿಷೇಕ ತೈಲವನ್ನೂ ಯಜ್ಞ ವೇದಿಯ ಮೇಲಿರುವ ರಕ್ತವನ್ನೂ ತೆಗೆದುಕೊಂಡು ಆರೋನನ ಮೇಲೆಯೂ ಅವನ ಉಡುಪುಗಳ ಮೇಲೆ ಯೂ ಅವನೊಂದಿಗೆ ಅವನ ಕುಮಾರರ ಮೇಲೆಯೂ ಅವರ ಉಡುಪುಗಳ ಮೇಲೆಯೂ ಚಿಮುಕಿಸಿದನು ಮತ್ತು ಆರೋನನನ್ನೂ ಅವನ ಉಡುಪುಗಳನ್ನೂ ಅವನೊಂದಿಗೆ ಅವನ ಕುಮಾರರನ್ನೂ ಅವರ ಉಡುಪು ಗಳನ್ನೂ ಪವಿತ್ರಮಾಡಿದನು.
ಮೋಶೆಯು ಆರೋನನಿಗೂ ಅವನ ಕುಮಾರರಿಗೂ--ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಆ ಮಾಂಸವನ್ನು ಬೇಯಿಸಿರಿ; ಅದನ್ನು ಪ್ರತಿಷ್ಠಿತ ಬುಟ್ಟಿ ಯೊಳಗಿರುವ ರೊಟ್ಟಿಯೊಡನೆ ತಿನ್ನಬೇಕು; ನಾನು ಆಜ್ಞಾಪಿಸಿ ಹೇಳಿದಂತೆ ಆರೋನನೂ ಅವನ ಕುಮಾ ರರೂ ಅದನ್ನು ತಿನ್ನಬೇಕು.
ಇದಲ್ಲದೆ ನಿಮ್ಮ ಪ್ರತಿಷ್ಠೆಯ ದಿನದ ಕೊನೆಯ ವರೆಗೆ ಅಂದರೆ ಏಳು ದಿವಸಗಳ ವರೆಗೆ ನೀವು ಸಭೆಯ ಗುಡಾರದ ಬಾಗಲಿನಿಂದ ಹೊರಗೆ ಹೋಗಬಾರದು; ಆತನು ನಿಮ್ಮನ್ನು ಏಳು ದಿವಸಗಳ ವರೆಗೆ ಪ್ರತಿಷ್ಠಿಸುವನು.