1
|
ತರುವಾಯ ಕರ್ತನು ಮೋಶೆಗೆ ಹೇಳಿದ್ದೇನಂದರೆ--ನೀನು ಆರೋನನ ಮಕ್ಕಳಾದ ಯಾಜಕರೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳು--ಸತ್ತವರ ನಿಮಿತ್ತವಾಗಿ ಅವನ ಜನರಲ್ಲಿ ಯಾವನೂ ಹೊಲೆಯಾಗಬಾರದು. |
2
|
ಆದರೆ ತನ್ನ ಹತ್ತಿರದ ಸಂಬಂಧಿಯಾಗಿ, ಅಂದರೆ ಅವನ ತಾಯಿ, ತಂದೆ, ಮಗ, ಮಗಳು, ಸಹೋದರನಿಗಾಗಿ |
3
|
ಅವನಿಗೆ ಹತ್ತಿರದ ಗಂಡನಿಲ್ಲದ ಕನ್ನಿಕೆಯಾದ ಸಹೋದರಿಗಾಗಿ ಅವನು ಹೊಲೆಯಾಗಬಹುದು. |
4
|
ಆದರೆ ಅವನು ತನ್ನ ಜನರೊಳಗೆ ಮುಖ್ಯಸ್ಥನಾಗಿ ರುವದರಿಂದ ತನ್ನನ್ನು ತಾನು ಹೊಲೆಮಾಡಿ ಕೊಳ್ಳಬಾರದು ಅಪವಿತ್ರಮಾಡಿಕೊಳ್ಳಲೂಬಾರದು. |
5
|
ಅವರು ತಮ್ಮ ತಲೆಯನ್ನು ಬೋಳಿಸಿಕೊಳ್ಳಬಾರದು. ಅಲ್ಲದೆ ತಮ್ಮ ಗಡ್ಡದ ಮೂಲೆಯನ್ನು ಬೋಳಿಸಿ ಕೊಳ್ಳಬಾರದು. ತಮ್ಮ ಶರೀರವನ್ನು ಕೊಯ್ದುಕೊಳ್ಳ ಬಾರದು. |
6
|
ಅವರು ತಮ್ಮ ಕರ್ತನಿಗೆ ಅಗ್ನಿಯಿಂದ ಮಾಡಿದ ಸಮರ್ಪಣೆಗಳನ್ನು ಮತ್ತು ತಮ್ಮ ದೇವರ ರೊಟ್ಟಿಯನ್ನು ಅರ್ಪಿಸುವದರಿಂದ ಅವರು ತಮ್ಮ ದೇವರ ಹೆಸರನ್ನು ಅಪವಿತ್ರಪಡಿಸದೆ ತಮ್ಮ ದೇವರಿಗೆ ಪರಿಶುದ್ಧರಾಗಿರಬೇಕು; ಆದಕಾರಣ ಅವರು ಪರಿಶುದ್ಧ ರಾಗಿರುವರು. |
7
|
ಅವರು ವ್ಯಭಿಚಾರಿಯನ್ನು ಇಲ್ಲವೆ ಅಪವಿತ್ರಳನ್ನು ಹೆಂಡತಿಯಾಗಿ ತೆಗೆದುಕೊಳ್ಳಬಾರದು; ಇಲ್ಲವೆ ಗಂಡನಿಂದ ಬಿಡಲ್ಪಟ್ಟ ಸ್ತ್ರೀಯನ್ನು ತೆಗೆದು ಕೊಳ್ಳಬಾರದು; ಅವನು ತನ್ನ ದೇವರಿಗೆ ಪರಿಶುದ್ಧ ನಾಗಿದ್ದಾನೆ. |
8
|
ಅವನು ನಿನ್ನ ದೇವರಿಗೆ ರೊಟ್ಟಿಯನ್ನು ಸಮರ್ಪಿಸುವ ಕಾರಣ ನೀನು ಅವನನ್ನು ಶುದ್ಧೀಕರಿಸ ಬೇಕು, ಅವನು ನನಗೆ ಪರಿಶುದ್ಧನಾಗಿರುವನು. ನಿನ್ನನ್ನು ಶುದ್ಧೀಕರಿಸುವ ಕರ್ತನಾದ ನಾನು ಪರಿಶುದ್ಧನು. |
9
|
ಯಾವದೇ ಯಾಜಕನ ಮಗಳು ವ್ಯಭಿ ಚಾರ ಕೃತ್ಯದಿಂದ ತನ್ನನ್ನು ಅಪವಿತ್ರಮಾಡಿಕೊಂಡರೆ ಅವಳು ತನ್ನ ತಂದೆಯನ್ನು ಅಪವಿತ್ರಮಾಡುತ್ತಾಳೆ; ಅವಳನ್ನು ಬೆಂಕಿಯಿಂದ ಸುಡಬೇಕು. |
10
|
ಅವನ ಸಹೋದರರೊಳಗೆ ಮಹಾಯಾಜಕ ನಾಗಿದ್ದು ಯಾವನ ತಲೆಯ ಮೇಲೆ ಅಭಿಷೇಕ ತೈಲವು ಸುರಿಯಲ್ಪಟ್ಟಿದೆಯೋ ಮತ್ತು ಯಾವನು ಉಡುಪು ಗಳನ್ನು ಧರಿಸಿಕೊಳ್ಳುವದಕ್ಕೆ ಪ್ರತಿಷ್ಠಿಸಲ್ಪಟ್ಟಿದ್ದಾನೋ ಅವನು ತನ್ನ ತಲೆಯನ್ನು ಮುಚ್ಚಿಕೊಳ್ಳಲೂಬಾರದು ಮತ್ತು ತನ್ನ ಬಟ್ಟೆಗಳನ್ನು ಹರಿದುಕೊಳ್ಳಲೂಬಾರದು; |
11
|
ಇಲ್ಲವೆ ಯಾವ ಮೃತ ಶರೀರದ ಬಳಿಗೂ ಹೋಗಬಾರದು; ತನ್ನ ತಂದೆಗಾಗಲಿ ತಾಯಿಗಾಗಲಿ ತನ್ನನ್ನು ಹೊಲೆಮಾಡಿಕೊಳ್ಳಬಾರದು. |
12
|
ಇದಲ್ಲದೆ ಪರಿಶುದ್ಧ ಸ್ಥಳದಿಂದ ಹೊರಗೆ ಹೋಗಬಾರದು ತನ್ನ ದೇವರ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಬಾರದು; ತನ್ನ ದೇವರ ಅಭಿಷೇಕ ತೈಲದ ಕಿರೀಟವು ಅವನ ತಲೆಯ ಮೇಲೆ ಇರುತ್ತದೆ; ನಾನೇ ಕರ್ತನು. |
13
|
ಅವನು ತನಗೆ ಹೆಂಡತಿಯನ್ನು ಅವಳ ಕನ್ನಿಕಾವಸ್ಥೆಯಲ್ಲಿ ತೆಗೆದುಕೊಳ್ಳಬೇಕು. |
14
|
ವಿಧವೆ ಯನ್ನಾಗಲಿ, ಬಿಡಲ್ಪಟ್ಟ ಸ್ತ್ರೀಯನ್ನಾಗಲಿ, ಅಪವಿತ್ರ ಳನ್ನಾಗಲಿ, ಇಲ್ಲವೆ ಸೂಳೆಯನ್ನಾಗಲಿ, ಇಂಥವರನ್ನು ಅವನು ತೆಗೆದುಕೊಳ್ಳಬಾರದು. ಆದರೆ ತನ್ನ ಸ್ವಂತ ಜನರಲ್ಲಿ ಒಬ್ಬ ಕನ್ನಿಕೆಯನ್ನು ತನಗೆ ಹೆಂಡತಿಯನ್ನಾಗಿ ತೆಗೆದುಕೊಳ್ಳಬೇಕು. |
15
|
ಇದಲ್ಲದೆ ಅವನು ತನ್ನ ಜನರೊಳಗೆ ತನ್ನ ಸಂತತಿಯನ್ನು ಅಪವಿತ್ರ ಮಾಡಬಾರದು. ಕರ್ತನಾದ ನಾನು ಅವನನ್ನು ಶುದ್ಧೀಕರಿಸುತ್ತೇನೆ. |
16
|
ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ-- |
17
|
ಆರೋನನೊಂದಿಗೆ ಮಾತ ನಾಡಿ ಹೇಳಬೇಕಾದದ್ದೇನಂದರೆ--ನಿನ್ನ ಸಂತತಿಯು ಅವರ ವಂಶಾವಳಿಗಳಲ್ಲಿ ಯಾವನಿಗೆ ಯಾವದಾದರೂ ಕಳಂಕವಿರುವದಾದರೆ ಅವನು ತನ್ನ ದೇವರ ರೊಟ್ಟಿಯನ್ನು ಸಮರ್ಪಿಸುವದಕ್ಕಾಗಿ ಬರಬಾರದು. |
18
|
ಯಾವ ಮನುಷ್ಯನು ಕಳಂಕವುಳ್ಳವನಾಗಿರುತ್ತಾನೋ ಅಂದರೆ ಕಣ್ಣಿಲ್ಲದವನು ಇಲ್ಲವೆ ಕುಂಟನು ಚಪ್ಪಟೆ ಯಾದ ಮೂಗುಳ್ಳವನು ಹೆಚ್ಚಾದ ಅಂಗವುಳ್ಳವನು |
19
|
ಮುರಿದ ಪಾದವುಳ್ಳವನು ಮುರಿದ ಕೈಯುಳ್ಳವನು |
20
|
ಗೂನು ಬೆನ್ನುಳ್ಳವನು ಗಿಡ್ಡನು ಕಣ್ಣುಗಳಲ್ಲಿ ಕಳಂಕವುಳ್ಳವನು ಹುರುಕುಳ್ಳವನು ತುರಿಯುಳ್ಳವನು ತನ್ನ ಬೀಜಹೊಡೆದವನು |
21
|
ಯಾಜಕನಾದ ಆರೋನನ ಸಂತತಿಯಲ್ಲಿ ಕಳಂಕವುಳ್ಳ ಯಾವ ಮನುಷ್ಯನೂ ಅಗ್ನಿ ಸಮರ್ಪಣೆಗಳನ್ನು ಅರ್ಪಿಸು ವದಕ್ಕಾಗಿ ಕರ್ತನ ಸನ್ನಿಧಿಯಲ್ಲಿ ಬರಬಾರದು; ಕಳಂಕವುಳ್ಳವನು ತನ್ನ ದೇವರ ರೊಟ್ಟಿಯನ್ನು ಅರ್ಪಿಸುವದಕ್ಕಾಗಿ ಸವಿಾಪಬರಬಾರದು. |
22
|
ಅವನು ಅತಿ ಪರಿಶುದ್ಧವಾದ ಮತ್ತು ಪರಿಶುದ್ಧವಾದ ತನ್ನ ದೇವರ ರೊಟ್ಟಿಯನ್ನು ತಿನ್ನಬೇಕು. |
23
|
ಆದರೆ ಅವನು ಕಳಂಕವುಳ್ಳವನಾದದರಿಂದ ತೆರೆಯ ಒಳಕ್ಕೆ ಹೋಗ ಬಾರದು ಇಲ್ಲವೆ ಯಜ್ಞವೇದಿಯ ಸವಿಾಪಕ್ಕೂ ಬರಬಾರದು. ಹೀಗೆ ಅವನು ನನ್ನ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಬಾರದು; ಅವರನ್ನು ಶುದ್ಧೀಕರಿಸುವ ಕರ್ತನು ನಾನೇ. |
24
|
ಮೋಶೆಯು ಅದನ್ನು ಆರೋನ ನಿಗೂ ಅವನ ಕುಮಾರರಿಗೂ ಇಸ್ರಾಯೇಲ್ ಎಲ್ಲಾ ಮಕ್ಕಳಿಗೂ ಹೇಳಿದನು. |
Leviticus 21:10 Kannada Language Bible Words basic statistical display
COMING SOON ...