ಇಸ್ರಾಯೇಲ್ಯರ ಮಕ್ಕಳಿಗೆ ಹೇಳ ಬೇಕಾದದ್ದೇನಂದರೆ--ಒಬ್ಬ ಸ್ತ್ರೀಯು ಗರ್ಭಧರಿಸಿ ಗಂಡುಮಗುವನ್ನು ಹೆತ್ತರೆ, ಅವಳು ಏಳು ದಿನಗಳು ಅಶುದ್ಧಳಾಗಿರಬೇಕು; ತನ್ನ ಮುಟ್ಟಿಗಾಗಿ ಪ್ರತ್ಯೇಕಿಸಿದ ದಿನಗಳ ಪ್ರಕಾರ ಅವಳು ಅಶುದ್ಧಳಾಗಿರಬೇಕು.
ಮಗನಿಗಾಗಿ ಮಗಳಿಗಾಗಿ ಅವಳ ಶುದ್ಧೀಕರಣದ ದಿನಗಳು ಪೂರ್ತಿಯಾದರೆ ಅವಳು ದಹನಬಲಿಗಾಗಿ ಮೊದಲನೇ ವರುಷದ ಕುರಿಮರಿಯನ್ನೂ ಪಾಪದ ಬಲಿಗಾಗಿ ಪಾರಿವಾಳದ ಮರಿಯನ್ನೂ ಒಂದು ಬೆಳವ ವನ್ನೂ ಸಭೆಯ ಗುಡಾರದ ಬಾಗಲಲ್ಲಿ ಯಾಜಕನ ಬಳಿಗೆ ತರಬೇಕು.
ಅವನು ಕರ್ತನ ಮುಂದೆ ಅದನ್ನು ಅರ್ಪಿಸಿ ಅವಳಿಗಾಗಿ ಪ್ರಾಯಶ್ಚಿತ್ತಮಾಡುವನು. ಆಗ ಅವಳು ತನ್ನ ರಕ್ತಸ್ರಾವದಿಂದ ಶುದ್ಧಳಾಗುವಳು. ಗಂಡು ಮಗುವನ್ನಾಗಲಿ ಹೆಣ್ಣು ಮಗುವನ್ನಾಗಲಿ ಹೆತ್ತವಳ ನಿಯಮವು ಇದೇ.
ಅವಳು ಕುರಿಮರಿಯನ್ನು ತರಲು ಅಶಕ್ತಳಾಗಿದ್ದರೆ ದಹನಬಲಿಗಾಗಿ ಒಂದು ಪಾಪದ ಬಲಿಗಾಗಿ ಇನ್ನೊಂದು ಎಂಬಂತೆ ಎರಡು ಬೆಳವಗಳನ್ನು ಇಲ್ಲವೆ ಎರಡು ಪಾರಿವಾಳದ ಮರಿಗಳನ್ನು ತರಬೇಕು ಮತ್ತು ಯಾಜಕನು ಅವಳಿಗಾಗಿ ಪ್ರಾಯಶ್ಚಿತ್ತಮಾಡಬೇಕು, ಆಗ ಅವಳು ಶುದ್ಧಳಾಗುವಳು.