ಇದಾದ ಮೇಲೆ ಇಸ್ರಾಯೇಲ್ ಮಕ್ಕಳು ದಾಟಿಹೋಗುವ ಪರಿಯಂತರ ಕರ್ತನು ಅವರ ಮುಂದೆ ಯೊರ್ದನನ್ನು ಒಣಗಿಹೋಗ ಮಾಡಿ ದ್ದನ್ನು ಆಚೇ ದಡದ ಪಶ್ಚಿಮದಲ್ಲಿ ವಾಸಿಸಿದ್ದ ಅಮೋರಿ ಯರ ಸಕಲ ಅರಸುಗಳೂ ಸಮುದ್ರದ ಆಚೆಯಲ್ಲಿ ವಾಸಿಸಿದ ಕಾನಾನ್ಯರ ಸಕಲ ಅರಸುಗಳೂ ಕೇಳಿದಾಗ ಅವರ ಹೃದಯವು ಕರಗಿಹೋಯಿತು. ಇಸ್ರಾಯೇಲ್ ಮಕ್ಕಳ ನಿಮಿತ್ತವಾಗಿ ಅವರಿಗೆ ಪ್ರಾಣಹೋದಂತೆ ಆಯಿತು.
ಕರ್ತನ ಸ್ವರಕ್ಕೆ ವಿಧೇಯರಾಗದೆ ಹೋದದರಿಂದ ಐಗುಪ್ತದಿಂದ ಹೊರಟ ಯುದ್ಧದ ಮನುಷ್ಯರಾದ ಜನರೆಲ್ಲಾ ನಾಶವಾಗುವ ವರೆಗೂ ಇಸ್ರಾಯೇಲ್ ಮಕ್ಕಳು ನಾಲ್ವತ್ತು ವರುಷಗಳು ಅರಣ್ಯದಲ್ಲಿ ಅಲೆದಾಡು ತ್ತಿದ್ದರು; ಯಾಕಂದರೆ ನಮಗೆ ಕೊಡುವದಕ್ಕೆ ಕರ್ತನು ಅವರ ತಂದೆಗಳಿಗೆ ಆಣೆ ಇಟ್ಟ ದೇಶವನ್ನು ಅಂದರೆ ಹಾಲೂ ಜೇನೂ ಹರಿಯುವ ದೇಶವನ್ನು ಅವರಿಗೆ ತೋರಿಸುವದಿಲ್ಲ ಎಂದು ಕರ್ತನು ಅವರಿಗೆ ಆಣೆ ಇಟ್ಟಿದ್ದನು.
ಅವರು ಆ ದೇಶದ ಹಳೆಯ ಧಾನ್ಯವನ್ನು ತಿಂದ ಮರು ದಿನದಲ್ಲೇ ಮನ್ನವು ನಿಂತುಹೋಯಿತು; ಇಸ್ರಾಯೇಲ್ ಮಕ್ಕಳಿಗೆ ಮನ್ನ ತಿರಿಗಿ ಸಿಕ್ಕಲಿಲ್ಲ; ಆ ವರುಷದಲ್ಲೆಲ್ಲಾ ಕಾನಾನ್ ದೇಶದ ಫಲವನ್ನು ತಿಂದರು.
ಇದಾದ ಮೇಲೆ ಯೆಹೋಶುವನು ಯೆರಿ ಕೋವಿನ ಬಳಿಯಲ್ಲಿ ಇದ್ದಾಗ ಆದದ್ದೇನಂದರೆ, ತನ್ನ ಕಣ್ಣುಗಳನ್ನೆತ್ತಿ ನೋಡಿದಾಗ ಇಗೋ, ಒಬ್ಬ ಮನು ಷ್ಯನು ಅವನಿಗೆದುರಾಗಿ ನಿಂತಿದ್ದನು; ಆತನ ಕೈಯಲ್ಲಿ ಬಿಚ್ಚುಕತ್ತಿ ಇತ್ತು. ಯೆಹೋಶುವನು ಆತನ ಬಳಿಗೆ ಹೋಗಿ ಆತನಿಗೆ--ನೀನು ನಮಗೋಸ್ಕರವೋ? ನಮ್ಮ ವೈರಿಗಳಿಗೋಸ್ಕರವೋ? ಅಂದನು.
ಅದಕ್ಕೆ ಅವನು--ಅಲ್ಲ; ನಾನು ಈಗ ಕರ್ತನ ಸೈನ್ಯದ ಅಧಿಪತಿ ಯಾಗಿ ಬಂದಿದ್ದೇನೆ ಅಂದನು; ಆಗ ಯೆಹೋಶುವನು ಬೋರಲು ಬಿದ್ದು ಆತನನ್ನು ಆರಾಧಿಸಿ ಆತನಿಗೆನನ್ನ ಒಡೆಯನು ತನ್ನ ಸೇವಕನಿಗೆ ಏನು ಹೇಳುತ್ತಾನೆ ಅಂದನು.