ಯೆಹೋಶುವನು ಶೆಕೆಮಿನಲ್ಲಿ ಇಸ್ರಾಯೇಲಿನ ಸಮಸ್ತ ಗೋತ್ರದವರನ್ನು ಕೂಡಿಸಿ ಇಸ್ರಾಯೇಲಿನ ಹಿರಿಯರನ್ನೂ ಅವರ ಮುಖ್ಯಸ್ಥ ರನ್ನೂ ನ್ಯಾಯಾಧಿಪತಿಗಳನ್ನೂ ಅಧಿಕಾರಿಗಳನ್ನೂ ಕರೆಸಿದನು. ಅವರು ದೇವರ ಮುಂದೆ ಬಂದು ನಿಂತರು.
ಯೆಹೋಶುವನು ಎಲ್ಲಾ ಜನರಿಗೆ--ಇಸ್ರಾಯೇಲಿನ ದೇವರಾದ ಕರ್ತನು ಹೇಳುವದೇನಂದರೆ--ಪೂರ್ವ ದಲ್ಲಿ ನಿಮ್ಮ ತಂದೆಗಳು, ಅಬ್ರಹಾಮನೂ ನಾಹೋ ರನೂ ಅವರ ತಂದೆಯಾದ ತೆರಹನೂ ನದಿಯ ಆಚೆ ವಾಸವಾಗಿದ್ದು ಅನ್ಯದೇವರುಗಳನ್ನು ಆರಾಧಿಸುತ್ತಿದ್ದರು.
ಅವನಿಗೆ ಇಸಾಕನನ್ನು ಕೊಟ್ಟೆನು; ಇಸಾಕನಿಗೆ ಯಾಕೋಬನನ್ನೂ ಏಸಾವನನ್ನೂ ಕೊಟ್ಟು ಏಸಾವನಿಗೆ ಸೇಯಾರ್ ಪರ್ವತದ ದೇಶವನ್ನು ಸ್ವಾಸ್ತ್ಯವಾಗಿ ಕೊಟ್ಟೆನು. ಆದರೆ ಯಾಕೋಬನೂ ಅವನ ಮಕ್ಕಳೂ ಐಗುಪ್ತಕ್ಕೆ ಹೋದರು.
ನಾನು ನಿಮ್ಮ ತಂದೆಗಳನ್ನು ಐಗುಪ್ತದಿಂದ ಹೊರಡಿಸಿದಾಗ ನೀವು ಸಮುದ್ರದ ತೀರಕ್ಕೆ ಬಂದಿರಿ. ಆದರೆ ಐಗುಪ್ತ್ಯರು ರಥಗಳ ಸಂಗಡಲೂ ರಾಹುತರ ಸಂಗಡಲೂ ನಿಮ್ಮ ಪಿತೃಗಳನ್ನು ಕೆಂಪು ಸಮುದ್ರದ ವರೆಗೂ ಹಿಂದಟ್ಟಿದರು.
ನಾನು ಐಗುಪ್ತದಲ್ಲಿ ಮಾಡಿ ದ್ದನ್ನು ನಿಮ್ಮ ಕಣ್ಣುಗಳು ನೋಡಿದವು. ಅರಣ್ಯದಲ್ಲಿ ಬಹುಕಾಲದ ವರೆಗೆ ವಾಸವಾಗಿದ್ದಿರಿ. ಯೊರ್ದನಿಗೆ ಆಚೆ ವಾಸವಾಗಿದ್ದ ಅಮೋರಿಯರ ದೇಶಕ್ಕೆ ನಿಮ್ಮನ್ನು ಕರಕೊಂಡು ಬಂದೆನು. ಅವರು ನಿಮ್ಮ ಸಂಗಡ ಯುದ್ಧ ಮಾಡುವಾಗ ಅವರ ದೇಶವನ್ನು ನೀವು ಸ್ವಾಧೀನ ಮಾಡಿಕೊಳ್ಳುವ ಹಾಗೆ ಅವರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿ ಅವರನ್ನು ನಿಮ್ಮ ಎದುರಿನಿಂದ ನಾಶಮಾಡಿದೆನು.
ನೀವು ಯೊರ್ದನನ್ನು ದಾಟಿ ಯೆರಿಕೋವಿಗೆ ಬಂದಿರಿ. ಯೆರಿಕೋವಿನ ನಿವಾಸಿ ಗಳೂ ಅಮೋರಿಯರೂ ಪೆರಿಜ್ಜೀಯರೂ ಕಾನಾನ್ಯರೂ ಹಿತ್ತಿಯರೂ ಗಿರ್ಗಾಷಿಯರೂ ಹಿವ್ವಿಯರೂ ಯೆಬೂಸಿ ಯರೂ ನಿಮ್ಮ ಸಂಗಡ ಯುದ್ಧಮಾಡಿದರು. ಆದರೆ ನಾನು ಅವರನ್ನೂ ನಿಮ್ಮ ಕೈಗೆ ಒಪ್ಪಿಸಿದೆನು.
ನೀವು ದುಡಿಯದ ಭೂಮಿಯನ್ನೂ ನೀವು ಕಟ್ಟದ ಪಟ್ಟಣಗಳನ್ನೂ ನಾನು ನಿಮಗೆ ಕೊಟ್ಟೆನು; ನೀವು ಅವುಗಳಲ್ಲಿ ವಾಸವಾಗಿದ್ದೀರಿ; ನೀವು ನೆಡದ ದ್ರಾಕ್ಷೇ ತೋಟಗಳ ಫಲವನ್ನೂ ಇಪ್ಪೇತೋಪುಗಳ ಫಲವನ್ನೂ ತಿನ್ನುತ್ತೀರಿ ಎಂಬದೇ.
ಆದದರಿಂದ ಈಗ ಕರ್ತನಿಗೆ ಭಯಪಟ್ಟು ಯಥಾರ್ಥದಲ್ಲಿಯೂ ಸತ್ಯದಲ್ಲಿಯೂ ಆತನನ್ನು ಸೇವಿಸಿರಿ. ನಿಮ್ಮ ತಂದೆಗಳು ನದಿಯ ಆಚೆಯಲ್ಲಿಯೂ ಐಗುಪ್ತದಲ್ಲಿಯೂ ಸೇವಿ ಸಿದ ದೇವರುಗಳನ್ನು ತೊರೆದುಬಿಟ್ಟು ಕರ್ತನನ್ನೇ ನೀವು ಸೇವಿಸಿರಿ.
ಕರ್ತನನ್ನು ಸೇವಿಸುವದು ನಿಮಗೆ ಕೆಟ್ಟದ್ದಾಗಿ ಕಂಡರೆ ಈಹೊತ್ತು ನೀವು ಯಾರನ್ನು ಸೇವಿಸುವಿರಿ? ನಿಮ್ಮ ತಂದೆಗಳು ನದಿಯ ಆಚೆ ಸೇವಿ ಸಿದ ದೇವರುಗಳನ್ನೋ ಇಲ್ಲವೆ ನೀವು ವಾಸವಾಗಿರುವ ಅಮೋರಿಯರ ದೇವರುಗಳನ್ನೋ? ನೀವು ಆರಿಸಿ ಕೊಳ್ಳಿರಿ; ಆದರೆ ನಾನೂ ನನ್ನ ಮನೆಯವರೂ ಕರ್ತನನ್ನೇ ಸೇವಿಸುವೆವು ಅಂದನು.
ನಮ್ಮ ದೇವ ರಾದ ಕರ್ತನು ತಾನೇ ನಮ್ಮನ್ನೂ ನಮ್ಮ ತಂದೆಗಳನ್ನೂ ದಾಸತ್ವದ ಮನೆಯಾದ ಐಗುಪ್ತದೇಶದಿಂದ ಬರಮಾಡಿ ದ್ದಾನೆ. ನಮ್ಮ ಕಣ್ಣುಗಳ ಮುಂದೆ ಆ ದೊಡ್ಡ ಅದ್ಭುತ ಗಳನ್ನು ಮಾಡಿ ನಾವು ನಡೆದ ಎಲ್ಲಾ ಮಾರ್ಗಗಳ ಲ್ಲಿಯೂ ನಾವು ಅವರ ಮಧ್ಯದಲ್ಲಿ ಹಾದು ಬಂದ ಎಲ್ಲಾ ಜನಗಳಲ್ಲಿಯೂ ನಮ್ಮನ್ನು ಕಾಪಾಡಿದಾತನು.
ಯೆಹೋಶುವನು ಜನ ರಿಗೆಲ್ಲಾ--ಇಗೋ, ಈ ಕಲ್ಲು ನಿಮ್ಮ ಮಧ್ಯದಲ್ಲಿ ಸಾಕ್ಷಿಯಾಗಿರಲಿ. ಯಾಕಂದರೆ ಅದು ಕರ್ತನು ನಮ್ಮ ಸಂಗಡ ಹೇಳಿದ ಎಲ್ಲಾ ವಚನಗಳನ್ನು ಕೇಳಿತು. ಆದದರಿಂದ ನೀವು ನಿಮ್ಮ ದೇವರನ್ನು ಅಲ್ಲಗಳೆಯದ ಹಾಗೆ ಇದೇ ನಿಮಗೆ ಸಾಕ್ಷಿಯಾಗಿರಲಿ ಎಂದು ಹೇಳಿದನು.
ಇದ ಲ್ಲದೆ ಇಸ್ರಾಯೇಲ್ ಮಕ್ಕಳು ಐಗುಪ್ತದಿಂದ ತಂದ ಯೋಸೇಫನ ಎಲುಬುಗಳನ್ನು ಅವರು ಶೆಕೆಮಿನಲ್ಲಿ ಯಾಕೋಬನು ಶೆಕೆಮನ ತಂದೆಯಾದ ಹಮೋರನ ಮಕ್ಕಳಿಂದ ನೂರು ಬೆಳ್ಳಿನಾಣ್ಯಗಳಿಗೆ ಕೊಂಡು ಕೊಂಡಿದ್ದ, ಯೋಸೇಫನ ಮಕ್ಕಳಿಗೆ ಬಾಧ್ಯತೆ ಯಾದ, ನೆಲದ ಭಾಗದಲ್ಲಿ ಹೂಣಿಟ್ಟರು.