ಒಂದೊಂದು ಗೋತ್ರಕ್ಕೆ ಮೂರು ಮಂದಿಯ ಪ್ರಕಾರ ನಿಮ್ಮೊಳಗಿಂದ ಕರೆದುಕೊಂಡು ಬನ್ನಿರಿ; ನಾನು ಅವರನ್ನು ಕಳುಹಿಸುವೆನು. ಅವರು ದೇಶದಲ್ಲೆಲ್ಲಾ ಹೋಗಿ ತಮ್ಮ ಬಾಧ್ಯೆತೆಗಳ ಪ್ರಕಾರ ಅದನ್ನು ವಿವರಿಸುವರು, ತರುವಾಯ ನನ್ನ ಬಳಿಗೆ ಅವರು ತಿರುಗಿ ಬರಬೇಕು.
ನೀವು ದೇಶವನ್ನು ಏಳು ಪಾಲಾಗಿ ವಿವರಿಸಬೇಕು ಮತ್ತು ಅದರ ವಿವರಗಳನ್ನು ನನ್ನ ಬಳಿಯಲ್ಲಿ ತರಬೇಕು. ಆಗ ನಾನು ಈ ಸ್ಥಳದಲ್ಲಿ ನಮ್ಮ ದೇವರಾದ ಕರ್ತನ ಮುಂದೆ ನಿಮಗೊಸ್ಕರ ಚೀಟುಗಳನ್ನು ಹಾಕುವೆನು.
ಆದರೆ ಲೇವಿಯರಿಗೆ ನಿಮ್ಮ ಸಂಗಡ ಪಾಲಿಲ್ಲ; ಅವರಿಗೆ ಕರ್ತನ ಯಾಜಕತ್ವವೇ ಅವರ ಬಾಧ್ಯತೆಯಾಗಿದೆ. ಇದಲ್ಲದೆ ಗಾದನೂ ರೂಬೇನನೂ ಮನಸ್ಸೆಯ ಅರ್ಧ ಗೋತ್ರವೂ ಯೊರ್ದನಿನ ಆಚೆ ಮೂಡಣ ದಿಕ್ಕಿನಲ್ಲಿ ಕರ್ತನ ಸೇವಕನಾದ ಮೋಶೆಯು ಕೊಟ್ಟ ತಮ್ಮ ಬಾಧ್ಯತೆಯನ್ನು ತಕ್ಕೊಂಡಿದ್ದಾರೆ ಅಂದನು.
ಆ ಮನುಷ್ಯರು ಹೊರಟುಹೋದರು. ಯೆಹೋಶುವನು ದೇಶವನ್ನು ವಿವರಿಸುವದಕ್ಕಾಗಿ ಹೋದವರಿಗೆ ಅಪ್ಪಣೆ ಕೊಟ್ಟು--ನೀವು ಹೋಗಿ ದೇಶದಲ್ಲೆಲ್ಲಾ ಸಂಚರಿಸಿ ಅದರ ವಿವರಣೆಯನ್ನು ನನ್ನ ಬಳಿಗೆ ತಕ್ಕೊಂಡು ಬನ್ನಿ; ನಾನು ಶೀಲೋವಿನಲ್ಲಿ ಕರ್ತನ ಮುಂದೆ ನಿಮಗೊಸ್ಕರ ಚೀಟುಗಳನ್ನು ಹಾಕುವಂತೆ ನನ್ನ ಬಳಿಗೆ ತಿರಿಗಿ ಬರಲಿ ಎಂದು ಹೇಳಿದನು.
ಇದಲ್ಲದೆ ಆ ಮೇರೆಯು ದಕ್ಷಿಣ ಮೂಲೆಗೆ ಎದುರಾಗಿರುವ ಬೇತ್ಹೋರೋನಿಗೆ ಎದುರಾದ ಬೆಟ್ಟವನ್ನು ಹಿಡಿದು ದಕ್ಷಿಣವಾಗಿ ಸಮುದ್ರದ ಮೂಲೆಯನ್ನು ಸುತ್ತಿಕೊಂಡು ಕಿರ್ಯತ್ಯಾರೀಮ್ ಎಂಬ ಯೂದನ ಮಕ್ಕಳ ಪಟ್ಟಣವಾದ ಕಿರ್ಯತ್ ಬಾಳದ ಬಳಿಗೆ ಹೋಗಿ ಮುಗಿಯುವದು. ಇದು ಪಶ್ಚಿಮ ಮೂಲೆಯಾಗಿತ್ತು.
ಅಲ್ಲಿಂದ ಹಳ್ಳದ ತಗ್ಗಿನ ಉತ್ತರದಲ್ಲಿರುವ ಹಿನ್ನೋಮನ ಕುಮಾರನ ಹಳ್ಳದ ತಗ್ಗಿಗೆ ಎದುರಾದ ಬೆಟ್ಟದ ಕಡೇ ಭಾಗಕ್ಕೆ ಇಳಿದು ದಕ್ಷಿಣದಲ್ಲಿ ಯೆಬೂಸಿಯರ ಮೇರೆ ಯಾದ ಹಿನ್ನೋಮಿನ ಹಳ್ಳದ ತಗ್ಗಿಗೂ ಅಲ್ಲಿಂದ ಏನ್ರೋಗೆಲಿಗೂ ಏರಿ
ಚೇಲ, ಎಲೆಫ್, ಯೆಬೂಸಿಯರು ಇದ್ದಂಥ ಯೆರೂಸಲೇಮು ಗಿಬೆಯತ್, ಕಿರ್ಯತ್ ಎಂಬ ಹದಿನಾಲ್ಕು ಪಟ್ಟಣಗಳು ಅವುಗಳ ಗ್ರಾಮಗಳು. ಇವೇ ಬೆನ್ಯಾವಿಾನನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಇರುವ ಬಾಧ್ಯತೆಗಳಾಗಿದ್ದವು.