1
|
ಇದಲ್ಲದೆ ಯೂದನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ವಿಭಾಗಿಸಿದ ಮೇರೆ ಯಾವದಂದರೆ, ಕಟ್ಟ ಕಡೆಗಿರುವ ದಕ್ಷಿಣ ಕಡೆಗೆ ಎದೋಮಿನ ಮೇರೆಯಾದ ಜಿನ್ ಅರಣ್ಯದ ದಕ್ಷಿಣ ಭಾಗವಾಗಿದೆ. |
2
|
ಉಪ್ಪು ಸಮುದ್ರದ ಕಡೆಯಲ್ಲಿ ದಕ್ಷಿಣ ಕಡೆಗಿರುವ ಕೊನೆಯಿಂದ ದಕ್ಷಿಣ ಪಾರ್ಶ್ವದ ಲ್ಲಿರುವ ಮಾಲೆಅಕ್ರಬ್ಬೀಮೆಂಬ ಕೊಲ್ಲಿಗಳಿಗೂ ಅಲ್ಲಿಂದ ಜೀನಿಗೂ |
3
|
ಅಲ್ಲಿಂದ ದಕ್ಷಿಣದಲ್ಲಿರುವ ಕಾದೇಶ್ ಬರ್ನೇಯಕ್ಕೂ ಅಲ್ಲಿಂದ ಹೆಬ್ರೋನ್ ಮಾರ್ಗವಾಗಿ ಕರ್ಕವನ್ನು ಸುತ್ತಿ ಅಚ್ಮೊನಿಗೂ |
4
|
ಅಲ್ಲಿಂದ ಐಗುಪ್ತದ ನದಿ ಹಿಡಿದು ಸಮುದ್ರದ ಪರಿಯಂತರ ಹೋಗಿ ಸೇರುವದು; ಇದೇ ನಿಮ್ಮ ದಕ್ಷಿಣ ಮೇರೆ. |
5
|
ಅದರ ಮೂಡಣ ಮೇರೆ ಯಾವದಂದರೆ: ಯೊರ್ದನಿನ ಕೊನೇಗಿರುವ ಉಪ್ಪು ಸಮುದ್ರವು. ಉತ್ತರ ಕಡೆಗೆ ಯೊರ್ದನಿನ ಹತ್ತಿರದಲ್ಲಿದ್ದ ಸಮುದ್ರದ ಕೊನೆಯ ವರೆಗೆ ಇತ್ತು; |
6
|
ಅಲ್ಲಿಂದ ಬೇತ್ಹೊಗ್ಲಾಕ್ಕೂ ಅಲ್ಲಿಂದ ಉತ್ತರಕ್ಕಿರುವ ಬೇತ್ಅರಾಬನ್ನು ದಾಟಿರೂಬೇನನ ಮಗನಾದ ಬೋಹನನ ಕಲ್ಲಿಗೂ |
7
|
ಅಲ್ಲಿಂದ ಆಕೋರ್ ತಗ್ಗನ್ನು ಬಿಟ್ಟು ದೆಬೀರಿಗೂ ಉತ್ತರಕ್ಕೆ ನದಿಯ ದಕ್ಷಿಣ ಪಾರ್ಶ್ವವಾದ ಅದುವಿಾಮಿನ ಹೊಳೆಗೆ ಎದುರಾಗಿರುವ ಗಿಲ್ಗಾಲಿಗೂ ಅಲ್ಲಿಂದ ಏನ್ಷೆಮೆಷಿನ ನೀರಿಗೂ ಅಲ್ಲಿಂದ ಏನ್ರೋಗೆಲಿಗೂ |
8
|
ಅಲ್ಲಿಂದ ಯೆಬೂಸಿ ಯರು ವಾಸವಾಗಿರುವ ಯೆರೂಸಲೇಮಿಗೆ ದಕ್ಷಿಣ ಪಾರ್ಶ್ವವಾಗಿ ಹಿನ್ನೋಮನ ತಗ್ಗನ್ನು ದಾಟಿ ಉತ್ತರಕ್ಕಿರುವ ಯೆಬೂಸಿಯರ ತಗ್ಗಿನ ಕಡೆಯಲ್ಲಿ ಪಶ್ಚಿಮಕ್ಕಾಗಿ ಹಿನ್ನೋಮ್ ತಗ್ಗಿನ ಮುಂದಿರುವ ಬೆಟ್ಟದ ತುದಿ ವರೆಗೂ |
9
|
ಆ ಬೆಟ್ಟದ ತುದಿಯಿಂದ ನೆಪ್ತೋಹದ ನೀರಿನ ಬುಗ್ಗೆಗೂ ಅಲ್ಲಿಂದ ಎಫ್ರೋನನ ಬೆಟ್ಟದ ಪಟ್ಟಣ ಗಳಿಗೂ ಅಲ್ಲಿಂದ ಕಿರ್ಯತ್ಯಾರೀಮ್ ಆದ ಬಾಲಾಕ್ಕೂ |
10
|
ಬಾಲಾದಿಂದ ಪಶ್ಚಿಮಕ್ಕಿರುವ ಸೇಯಾರ್ ಬೆಟ್ಟ ವನ್ನು ಸುತ್ತಿ ಅಲ್ಲಿಂದ ಉತ್ತರಕ್ಕಿರುವ ಕೆಸಾಲೋನಿನ ಯಾರೀಮ್ ಬೆಟ್ಟದ ಪಾರ್ಶ್ವಕ್ಕೂ ಅಲ್ಲಿಂದ ಬೇತ್ಷೆ ಮೆಷಿಗೆ ಇಳಿದು ತಿಮ್ನಾಗೆ |
11
|
ಅಲ್ಲಿಂದ ಉತ್ತರಕ್ಕಿರುವ ಎಕ್ರೋನಿನ ಪಾರ್ಶ್ವವನ್ನು ಹಿಡಿದು ಶಿಕ್ಕೆರೋನಿಗೂ ಅಲ್ಲಿಂದ ಬಾಲಾ ಬೆಟ್ಟವನ್ನು ದಾಟಿ ಯೆಬ್ನೇಲಿಗೆ ಹೊರಟು ಸಮುದ್ರಕ್ಕೆ ಕಡೆಯಾಗುವದು. |
12
|
ಅದು ಪಶ್ಚಿಮದ ಮೇರೆಯ ದೊಡ್ಡ ಸಮುದ್ರವಾಗಿದೆ. ಇದೇ ಯೂದನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಉಂಟಾದ ಸುತ್ತಲಿರುವ ಮೇರೆ. |
13
|
ಇದಲ್ಲದೆ ಕರ್ತನು ತನಗೆ ಆಜ್ಞಾಪಿಸಿದ ಪ್ರಕಾರ ಯೆಹೋಶುವನು ಯೆಫುನ್ನೆಯ ಮಗನಾದ ಕಾಲೇಬ ನಿಗೆ ಅನಾಕನ ತಂದೆಯ ಕಿರ್ಯಾತ್ಅರ್ಬ ಎಂಬ ಹೆಬ್ರೋನನ್ನು ಯೂದನ ಮಕ್ಕಳ ನಡುವೆ ಪಾಲಾಗಿ ಕೊಟ್ಟನು. |
14
|
ಆಗ ಕಾಲೇಬನು ಅಲ್ಲಿಂದ ಅನಾಕನ ಮೂವರು ಮಕ್ಕಳಾದ ಶೇಷೈ ಅಹೀಮನ್ ತಲ್ಮೈಯ ರನ್ನು ಹೊರಡಿಸಿಬಿಟ್ಟನು. |
15
|
ಕಾಲೇಬನು ಅಲ್ಲಿಂದ ಹೊರಟು--ಯಾವನು ಪೂರ್ವದಲ್ಲಿ ಕಿರ್ಯತ್ ಸೇಫರ್ ಎಂಬ ಹೆಸರು ಉಂಟಾಗಿದ್ದ ದೆಬೀರಿನ ವಾಸಿಗಳ ಬಳಿಗೆ ಹೋಗಿ |
16
|
ಅವನು ಕಿರ್ಯತ್ ಸೇಫೆರನ್ನು ಹೊಡೆದು ಹಿಡಿಯುವನೋ ಅವನಿಗೆ ನನ್ನ ಮಗಳಾದ ಅಕ್ಷಾಳನ್ನು ಮದುವೆಮಾಡಿ ಕೊಡು ವೆನು ಎಂದು ಹೇಳಿದ್ದನು. |
17
|
ಆಗ ಕೆನಜನ ಮಗನೂ ಕಾಲೇಬನ ಸಹೋದರನೂ ಆದ ಒತ್ನೀಯೇಲನು ಅದನ್ನು ಹಿಡಿದನು. ಅವನು ತನ್ನ ಮಗಳಾದ ಅಕ್ಷಾಳನ್ನು ಅವನಿಗೆ ಮದುವೆಮಾಡಿ ಕೊಟ್ಟನು. |
18
|
ಅವಳು ಬಂದಾಗ ತನ್ನ ತಂದೆಯಿಂದ ಒಂದು ಹೊಲವನ್ನು ಕೇಳುವದಕ್ಕೆ ಅವನನ್ನು ಪ್ರೇರೇಪಿಸಿ ತಾನು ಕತ್ತೆಯ ಮೇಲಿನಿಂದ ಇಳಿದಳು. ಆಗ ಕಾಲೇಬನು ಅವಳನ್ನು ನೋಡಿ--ನಿನಗೆ ಏನು ಬೇಕು ಅಂದನು. |
19
|
ಅದಕ್ಕೆ ಅವಳು--ನನಗೆ ಒಂದು ಆಶೀರ್ವಾದ ಕೊಡು; ಯಾಕಂದರೆ ನನಗೆ ಮೊದಲು ದಕ್ಷಿಣ ಭೂಮಿಯನ್ನು ಕೊಟ್ಟಿ; ನೀರು ಬುಗ್ಗೆಗಳನ್ನು ಸಹ ನನಗೆ ಕೊಡು ಅಂದಳು. ಆಗ ಅವನು ಅವಳಿಗೆ ಮೇಲ್ಭಾಗದಲ್ಲಿಯೂ ಕೆಳಭಾಗದಲ್ಲಿಯೂ ನೀರು ಬುಗ್ಗೆಗಳನ್ನು ಕೊಟ್ಟನು. |
20
|
ಯೂದನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬ ಗಳ ಪ್ರಕಾರ ಉಂಟಾದ ಸ್ವಾಸ್ತ್ಯವೇನಂದರೆ-- |
21
|
ದಕ್ಷಿಣ ಕಡೆಗಿರುವ ಕಟ್ಟ ಕಡೆಯ ಎದೋಮಿನ ಮೇರೆಗೆ ಸರಿಯಾಗಿ ಯೂದನ ಮಕ್ಕಳ ಗೋತ್ರಕ್ಕೆ ಇರುವ ಪಟ್ಟಣಗಳು ಯಾವವಂದರೆ--ಕಬ್ಜೇಲ್, ಏದೆರ್, ಯಾಗೂರ್, |
23
|
ಕೇದೆಷ್, ಹಾಚೋರ್, ಇತ್ನಾನ್, |
24
|
ಜೀಫ್, ಟೆಲೆಮ್, ಬೆಯಾಲೋತ್, |
25
|
ಹಾಚೋರ್, ಹದತ್ತಾ, ಕಿರ್ಯೋತ್, ಹೆಜ್ರೋನ್ ಎಂಬ ಹಾಚೋರ್ |
27
|
ಹಚರ್ಗದ್ದಾ, ಹೆಷ್ಮೋನ್, ಬೇತ್ಪೆಲೆಟ್, |
28
|
ಹಚರ್ಷೊವಾಲ್, ಬೇರ್ಷೆಬ, ಬಿಜ್ಯೋತ್ಯಾ |
29
|
ಬಾಲಾ, ಇಯ್ಯಾಮ್, ಎಚೆಮ್, |
30
|
ಎಲ್ಟೋಲದ್, ಕೆಸೀಲ್, ಹೊರ್ಮಾ, |
31
|
ಚಿಕ್ಲಗ್ ಮದ್ಮನ್ನಾ, ಸನ್ಸನ್ನಾ, |
32
|
ಲೆಬಾವೋತ್, ಶಿಲ್ಹೀಮ್, ಅಯಿನ್, ರಿಮ್ಮೋನ್ ಎಂಬವುಗಳೇ; ಅವುಗಳ ಗ್ರಾಮಗಳು ಪಟ್ಟಣಗಳೆಲ್ಲಾ ಇಪ್ಪತ್ತೊಂಭತ್ತು. |
33
|
ತಗ್ಗಿನ ದೇಶ ಎಷ್ಟಾವೋಲ್, ಚೊರ್ಗಾ, ಅಶ್ನಾ, |
35
|
ತಪ್ವೂಹ, ಏನಾಮ್ ಯರ್ಮೂತ್, |
36
|
ಅದುಲ್ಲಾಮ್, ಸೋಕೋ, ಅಜೇಕಾ, ಶಾರಯಿಮ್, ಅದೀತಯಿಮ್, ಗೆದೇರಾ, ಗೆದೆರೋತಯಿಮ್ ಎಂಬ ಅವುಗಳ ಗ್ರಾಮಗಳು ಅದರ ಹದಿನಾಲ್ಕು ಪಟ್ಟಣಗಳು; |
37
|
ಚೆನಾನ್, ಹದಾಷಾ, ಮಿಗ್ದಲ್ಗಾದ್, |
38
|
ದಿಲಾನ್, ಮಿಚ್ವೆ, ಯೊಕ್ತೇಲ್, |
39
|
ಲಾಕೀಷ್, ಬೊಚ್ಕತ್, ಎಗ್ಲೋನ್ |
40
|
ಕಬ್ಬೋನ್, ಲಹ್ಮಾಸ್, ಕಿತ್ಲೀಷ್, ಗೆದೇರೋತ್, ಬೇತ್ದಾಗೋನ್, ನಾಮಾ, |
41
|
ಮಕ್ಕೇದಾ ಎಂಬ ಹದಿನಾರು ಪಟ್ಟಣಗಳೂ ಅವುಗಳ ಗ್ರಾಮಗಳೂ; |
42
|
ಇದಲ್ಲದೆ ಲಿಬ್ನಾ, ಎತೆರ್, ಆಷಾನ್, |
44
|
ಅಶ್ನಾ, ನೆಚೀಬ್, ಕೆಯಾಲಾ, ಅಕ್ಜೀಬ್, ಮಾರೇಷಾಎಂಬ ಅವುಗಳ ಗ್ರಾಮಗಳು ಒಂಭತ್ತು ಪಟ್ಟಣಗಳು; |
45
|
ಎಕ್ರೋನ್ ಅದರ ಪಟ್ಟಣಗಳು, ಗ್ರಾಮಗಳು ಸಹ. |
46
|
ಎಕ್ರೋನಿನಿಂದ ಸಮುದ್ರದ ವರೆಗೆ ಅಷ್ಡೋದಿನ ಬಳಿಯಲ್ಲಿರುವ ಸಮಸ್ತ ಗ್ರಾಮಗಳೂ |
47
|
ಅಷ್ಡೋದ್ ಅದರ ಪಟ್ಟಣಗಳೂ ಗ್ರಾಮಗಳೂ ಗಾಜಾ, ಅದರ ಪಟ್ಟಣಗಳೂ ಗ್ರಾಮಗಳೂ ಐಗುಪ್ತದ ನದಿ, ದೊಡ್ಡ ಸಮುದ್ರ, ಅದರ ಮೇರೆ, ಇವುಗಳ ವರೆಗೂ |
48
|
ಬೆಟ್ಟಗಳಲ್ಲಿರುವ ಶಾವಿಾರ್, ಯತ್ತೀರ್, ಸೋಕೋ, |
49
|
ದನ್ನಾ, ದೆಬೀರ್ ಎಂಬ ಕಿರ್ಯತ್ಸನ್ನಾ, |
50
|
ಅನಾಬ್, ಎಷ್ಟೆಮೋ, ಆನೀಮ್, |
51
|
ಗೋಷೆನ್, ಹೋಲೋನ್ಗಿಲೋ ಎಂಬ ಹನ್ನೊಂದು ಪಟ್ಟಣ ಗಳು ಅವುಗಳ ಗ್ರಾಮಗಳು. |
53
|
ಯಾನೂಮ್, ಬೇತ್ತಪ್ಪೂಹ, ಅಫೇಕಾ. |
54
|
ಹುಮ್ಟಾ, ಹೆಬ್ರೋನೆಂಬ ಕಿರ್ಯತ್ಅರ್ಬ, ಚೀಯೋರ್ ಎಂಬ ಒಂಭತ್ತು ಪಟ್ಟಣಗಳೂ ಮತ್ತು ಅವುಗಳ ಗ್ರಾಮಗಳೂ. |
55
|
ಮಾವೋನ್, ಕರ್ಮೆಲ್, ಜೀಫ್, ಯುಟ್ಟಾ, |
56
|
ಇಜ್ರೇಲ್, ಯೊಗ್ದೆಯಾಮ್, ಜನೋಹ, |
57
|
ಕಯಿನ್, ಗಿಬೆಯಾ, ತಿಮ್ನಾ ಎಂಬ ಹತ್ತು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು. |
58
|
ಹಲ್ಹೂಲ್, ಬೇತ್ಚೂರ್, ಗೆದೋರ್, |
59
|
ಮಾರಾತ್, ಬೇತನೋತ್, ಎಲ್ಟೆಕೋನ್ ಎಂಬ ಆರು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು. |
60
|
ಕಿರ್ಯತ್ಯಾರೀಮ್ ಎಂಬ ಕಿರ್ಯತ್ಬಾಳ್, ರಬ್ಬಾ ಎಂಬ ಎರಡು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು. |
61
|
ಅರಣ್ಯದಲ್ಲಿರುವ ಬೇತ್ಅರಾಬಾ, ಮಿದ್ದೀನ್, ಸೆಕಾಕಾ, |
62
|
ನಿಬ್ಷಾನ್, ಉಪ್ಪಿನಪಟ್ಟಣವು, ಏಂಗೆದೀ ಎಂಬ ಆರು ಪಟ್ಟಣಗಳು; ಮತ್ತು ಅವು ಗಳ ಗ್ರಾಮಗಳು. |
63
|
ಆದರೆ ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಯೂದನ ಮಕ್ಕಳು ಹೊರಡಿಸಿ ಬಿಡುವದಕ್ಕಾಗಲಿಲ್ಲ. ಆದದರಿಂದ ಈ ದಿವಸದ ವರೆಗೂ ಯೆಬೂಸಿಯರು ಯೂದನ ಮಕ್ಕಳ ಸಂಗಡ ಯೆರೂಸಲೇಮಿನಲ್ಲಿ ವಾಸವಾಗಿದ್ದಾರೆ. |
Joshua 15:7 Kannada Language Bible Words basic statistical display
COMING SOON ...