1
|
ಯೊರ್ದನಿಗೆ ಆಚೆ ಸೂರ್ಯನು ಉದಯಿಸುವ ದಿಕ್ಕಿನಲ್ಲಿ ಅರ್ನೋನ್ ನದಿಯಿಂದ ಹೆರ್ಮೋನ್ ಬೆಟ್ಟದ ವರೆಗೂ ಮೂಡಣ ಬೈಲಿನ ಎಲ್ಲಾದರಲ್ಲಿಯೂ ಇಸ್ರಾಯೇಲ್ ಮಕ್ಕಳು ಅವರನ್ನು ಹೊಡೆದು ಸ್ವಾಧೀನ ಪಡಿಸಿಕೊಂಡ ದೇಶಗಳ ಅರಸರು ಯಾರಂದರೆ: |
2
|
ಅರ್ನೋನ್ ನದಿಯ ಮಧ್ಯಭಾಗ, ದಡದ ಬಳಿಯಲ್ಲಿ ಇರುವ ಅರೋಯೇರಿ ನಿಂದಲೂ ಅರ್ಧ ಗಿಲ್ಯಾದಿನಿಂದಲೂ ಅಮ್ಮೋನನ ಮಕ್ಕಳ ಮೇರೆಯಾದ ಯಬ್ಬೋಕ್ ನದಿಯ ವರೆಗೆ |
3
|
ಬೈಲಿನಿಂದ ಮೂಡಣದಲ್ಲಿರುವ ಕಿನ್ನೆರೋತ್ ಸಮುದ್ರದ ಪರಿಯಂತರ ವರೆಗೂ ಬೇತ್ಯೊಷಿ ಮೋತಿನ ಮಾರ್ಗವಾಗಿ ಮೂಡಣದಲ್ಲಿರುವ ಬೈಲಿನ ಉಪ್ಪು ಸಮುದ್ರದ ವರೆಗೂ ಅಷ್ಡೋದ್ ಪಿಸ್ಗಾಕ್ಕೆ ಕೆಳಗಾದ ದಕ್ಷಿಣದಿಂದ ಇರುವ ದೇಶವನ್ನು ಆಳಿ ಕೊಂಡಿದ್ದ ಹೆಷ್ಬೋನಿನಲ್ಲಿ ವಾಸಿಸಿದ್ದ ಅಮೋರಿಯರ ಅರಸನಾದ ಸೀಹೋನನೂ |
4
|
ಅಷ್ಟರೋತಿನಲ್ಲಿಯೂ ಎದ್ರೈಯಲ್ಲಿ ವಾಸಮಾಡಿ |
5
|
ಹೆರ್ಮೋನ್ ಬೆಟ್ಟವನ್ನೂ ಸಲ್ಕಾವನ್ನೂ ಗೆಷೂರ್ಯರ ಮಾಕತೀಯರ ಮೇರೆಯ ವರೆಗೂ ಹೆಷ್ಬೋನಿನ ಅರಸನಾದ ಸೀಹೋನನ ಮೇರೆಯಾಗಿದ್ದ ಗಿಲ್ಯಾದಿನ ಅರ್ಧದ ವರೆಗೂ ಇರುವ ಬಾಷಾನೆಲ್ಲಾ ಆಳಿಕೊಂಡಿದ್ದ ರಾಕ್ಷಸರಲ್ಲಿ ಮಿಕ್ಕ ಬಾಷಾನಿನ ಅರಸನಾದ ಓಗನೂ ಇವರೇ. |
6
|
ಇವರನ್ನು ಕರ್ತನ ಸೇವಕನಾದ ಮೋಶೆಯೂ ಇಸ್ರಾಯೇಲ್ ಮಕ್ಕಳೂ ಹೊಡೆದು ಬಿಟ್ಟು ಅವರ ದೇಶವನ್ನು ರೂಬೇನ್ಯರಿಗೂ ಗಾದ್ಯರಿಗೂ ಮನಸ್ಸೆಯ ಅರ್ಧ ಗೋತ್ರದವರಿಗೂ ಸ್ವಾಸ್ತ್ಯವಾಗಿ ಕೊಟ್ಟನು. |
7
|
ಆದರೆ ಯೊರ್ದನಿಗೆ ಪಶ್ಚಿಮದಲ್ಲಿ ಲೆಬನೋ ನಿನ ತಗ್ಗಿನಲ್ಲಿರುವ ಬಾಲಾದ್ ಮೊದಲುಗೊಂಡು ಸೇಯಾರಿಗೆ ಏರಿಹೋಗುವ ಹಾಲಾಕ್ ಬೆಟ್ಟದ ವರೆಗೆ ಬೆಟ್ಟಗಳಲ್ಲಿಯೂ ತಗ್ಗುಗಳಲ್ಲಿಯೂ ಬೈಲಿನಲ್ಲಿಯೂ ನೀರು ಬುಗ್ಗೆಗಳ ಸ್ಥಳಗಳಲ್ಲಿಯೂ |
8
|
ಅರಣ್ಯದಲ್ಲಿಯೂ ದಕ್ಷಿಣದಲ್ಲಿಯೂ ಯೆಹೋಶುವನು ಇಸ್ರಾಯೇಲಿನ ಗೋತ್ರಗಳಿಗೆ ಸ್ವಾಸ್ತ್ಯವಾಗಿ ಪಾಲು ಇಟ್ಟ ದೇಶವಾದಂಥ ಹಿತ್ತಿಯರ ಅಮೋರಿಯರ ಕಾನಾನ್ಯರ ಪೆರಿಜ್ಜೀಯರ ಹಿವ್ವೀಯರ ಯೆಬೂಸಿಯರ ದೇಶದಲ್ಲಿದ್ದ ಯೆಹೋಶು ವನೂ ಇಸ್ರಾಯೇಲ್ ಮಕ್ಕಳೂ ಹೊಡೆದುಬಿಟ್ಟ ಅರಸರು ಯಾರಂದರೆ-- |
9
|
ಯೆರಿಕೋವಿನ ಅರಸನು ಒಬ್ಬನು; ಬೇತೇಲ್ ಬಳಿಯಲ್ಲಿರುವ ಆಯಿಯ ಅರಸನು ಒಬ್ಬನು; |
10
|
ಯೆರೂಸಲೇಮಿನ ಅರಸನು ಒಬ್ಬನು; ಹೆಬ್ರೋನಿನ ಅರಸನು ಒಬ್ಬನು; |
11
|
ಯರ್ಮೂತಿನ ಅರಸನು ಒಬ್ಬನು; ಲಾಕೀಷಿನ ಅರಸನು ಒಬ್ಬನು; |
12
|
ಎಗ್ಲೋನಿನ ಅರಸನು ಒಬ್ಬನು; ಗೆಜೆರಿನ ಅರಸನು ಒಬ್ಬನು; |
13
|
ದೆಬೀರಿನ ಅರಸನು ಒಬ್ಬನು; ಗೆದೆರಿನ ಅರಸನು ಒಬ್ಬನು; |
14
|
ಹೊರ್ಮದ ಅರಸನು ಒಬ್ಬನು; ಅರಾದಿನ ಅರಸನು ಒಬ್ಬನು; |
15
|
ಲಿಬ್ನದ ಅರಸನು ಒಬ್ಬನು; ಅದುಲ್ಲಾಮದ ಅರಸನು ಒಬ್ಬನು; |
16
|
ಮಕ್ಕೇದದ ಅರಸನು ಒಬ್ಬನು; ಬೇತೇಲಿನ ಅರಸನು ಒಬ್ಬನು; |
17
|
ತಪ್ಪೂಹದ ಅರಸನು ಒಬ್ಬನು; ಹೇಫೆರಿನ ಅರಸನು ಒಬ್ಬನು; |
18
|
ಅಫೇಕದ ಅರಸನು ಒಬ್ಬನು; ಲಷ್ಷಾರೋನಿನ ಅರಸನು ಒಬ್ಬನು; |
19
|
ಮಾದೋನಿನ ಅರಸನು ಒಬ್ಬನು; ಹಾಚೋರಿನ ಅರಸನು ಒಬ್ಬನು; |
20
|
ಶಿಮ್ರೋನ್ಮೆರೋನಿನ ಅರಸನು ಒಬ್ಬನು; ಅಕ್ಷಾಫಿನ ಅರಸನು ಒಬ್ಬನು; |
21
|
ತಾನಕದ ಅರಸನು ಒಬ್ಬನು; ಮೆಗಿದ್ದೋವಿನ ಅರಸನು ಒಬ್ಬನು; |
22
|
ಕೆದೆಷಿನ ಅರಸನು ಒಬ್ಬನು; ಕರ್ಮೆಲ್ ಬೆಟ್ಟದ ಯೊಕ್ನೆಯಾಮದ ಅರಸನು ಒಬ್ಬನು; |
23
|
ದೋರ್ ಪ್ರಾಂತ್ಯದಲ್ಲಿರುವ ದೋರಿನ ಅರಸನು ಒಬ್ಬನು; ಗಿಲ್ಗಾಲಿನ ಜನಾಂಗಗಳ ಅರಸನು ಒಬ್ಬನು; |
24
|
ತಿರ್ಚದ ಅರಸನು ಒಬ್ಬನು; ಒಟ್ಟು ಮೂವತ್ತೊಂದು ಅರಸರುಗಳು. |
Joshua 12:24 Kannada Language Bible Words basic statistical display
COMING SOON ...