ಕತ್ತಲೆಯೂ ಮೊಬ್ಬೂ ಉಳ್ಳ ದಿವಸವೂ; ಮೇಘವೂ ಕಾರ್ಗತ್ತಲೂ ಉಳ್ಳ ದಿವಸ ವೂ; ಬೆಟ್ಟಗಳ ಮೇಲೆ ಹಾಸಿರುವ ಉದಯದ ಹಾಗಿದೆ. ದೊಡ್ಡ ಬಲವಾದ ಜನವು; ಅದರ ಹಾಗೆ ಎಂದೂ ಇದ್ದದ್ದಿಲ್ಲ; ಅದರ ತರುವಾಯ ತಲತಲಾಂತರಗಳ ವರುಷಗಳ ವರೆಗೆ ಇನ್ನು ಇರುವದೇ ಇಲ್ಲ.
ಅವರ ಮುಂದೆ ಬೆಂಕಿ ದಹಿಸುತ್ತದೆ; ಅವರ ಹಿಂದೆ ಜ್ವಾಲೆ ಸುಡುತ್ತದೆ; ಅವರ ಮುಂದೆ ದೇಶವು ಏದೆನ್ ತೋಟದ ಹಾಗಿದೆ; ಅವರ ಹಿಂದೆ ಹಾಳಾದ ಕಾಡು; ಹೌದು, ಅವುಗಳಿಗೆ ಯಾವದೂ ತಪ್ಪಿಸಿಕೊಳ್ಳಲಾರದು.
ಕರ್ತನು ತನ್ನ ಸೈನ್ಯದ ಮುಂದೆ ತನ್ನ ಶಬ್ದವನ್ನು ಮಾಡುತ್ತಾನೆ; ಆತನ ದಂಡು ಬಹು ದೊಡ್ಡದಾಗಿದೆ; ಹೌದು, ಬಲವಾದ ದ್ದಾಗಿದ್ದು ಆತನ ವಾಕ್ಯವನ್ನು ನಡಿಸುತ್ತದೆ; ಕರ್ತನ ದಿನವು ದೊಡ್ಡದು, ಮಹಾ ಭಯಂಕರವಾದದ್ದು, ಅದನ್ನು ತಾಳಿಕೊಳ್ಳುವವನ್ಯಾರು?
ನಿಮ್ಮ ಬಟ್ಟೆಗಳನ್ನಲ್ಲ, ನಿಮ್ಮ ಹೃದಯವನ್ನು ಹರಕೊಂಡು ನಿಮ್ಮ ದೇವರಾದ ಕರ್ತನ ಕಡೆಗೆ ತಿರುಗಿಕೊಳ್ಳಿರಿ; ಆತನು ದಯೆ ಕರುಣೆ ದೀರ್ಘಶಾಂತಿ ಮಹಾ ಕೃಪೆಯೂ ಉಳ್ಳವನಾಗಿ ಕೇಡಿಗೆ ಪಶ್ಚಾತ್ತಾಪಪಡುತ್ತಾನೆ.
ಕರ್ತನ ಸೇವಕರಾದ ಯಾಜಕರು ಅಂಗಳಕ್ಕೂ ಬಲಿಪೀಠಕ್ಕೂ ನಡುವೆ ಅತ್ತು ಹೀಗೆ ಹೇಳಲಿ--ಓ ಕರ್ತನೇ, ನಿನ್ನ ಜನರನ್ನು ಕನಿಕರಿಸು, ಜನಾಂಗಗಳು ಅವರ ಮೇಲೆ ಆಳುವ ಹಾಗೆ ನಿನ್ನ ಬಾಧ್ಯತೆಯನ್ನು ನಿಂದೆಗೆ ಒಪ್ಪಿಸಬೇಡ; ಅವರ ದೇವರು ಎಲ್ಲಿ ಎಂದು ಅವರು ಜನಗಳಲ್ಲಿ ಯಾಕೆ ಹೇಳಬೇಕು?
ಹೌದು, ಕರ್ತನು ಉತ್ತರ ಕೊಟ್ಟು ತನ್ನ ಜನರಿಗೆ ಹೇಳುವದೇ ನಂದರೆ--ಇಗೋ, ನಾನು ನಿಮಗೆ ಧಾನ್ಯವನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಸಾಕಾಗುವಷ್ಟು ಕಳು ಹಿಸಿ ನಿಮ್ಮನ್ನು ಇನ್ನು ಮೇಲೆ ಜನಾಂಗಗಳಲ್ಲಿ ನಿಂದಿತ ರಾಗಿ ಇಡುವದಿಲ್ಲ.
ಆದರೆ ಉತ್ತರ ದಿಕ್ಕಿನ ಸೈನ್ಯವನ್ನು ನಿಮಗೆ ದೂರಮಾಡಿ ಅವನನ್ನು ಒಣ ಭೂಮಿಗೂ ಅರಣ್ಯಕ್ಕೂ ಅವನ ಮುಂಭಾಗವನ್ನು ಪೂರ್ವದ ಸಮುದ್ರಕ್ಕೂ ಅವನ ಹಿಂಭಾಗವನ್ನು ಪಶ್ಚಿಮ ಸಮು ದ್ರಕ್ಕೂ ಓಡಿಸಿ ಬಿಡುವೆನು; ಅವನ ದುರ್ವಾಸನೆಯು ಏರುವದು; ಅವನ ನಾತವು ಏರುವದು; ಅವನು ದೊಡ್ಡದಾದವುಗಳನ್ನು ಮಾಡಿದ್ದಾನೆ.
ಹಾಗಾದರೆ ಚೀಯೋನಿನ ಮಕ್ಕಳೇ, ನಿಮ್ಮ ದೇವ ರಾದ ಕರ್ತನಲ್ಲಿ ಉಲ್ಲಾಸಿಸಿ, ಸಂತೋಷವಾಗಿರ್ರಿ; ನಿಮಗೆ ಮುಂಗಾರು ಮಳೆಯನ್ನು ಸರಿಯಾಗಿ ಕೊಡು ತ್ತಾನೆ; ಮುಂಗಾರು ಹಿಂಗಾರು ಮಳೆಗಳನ್ನು ಮುಂಚಿನ ಹಾಗೆ ನಿಮಗೆ ಸುರಿಸುತ್ತಾನೆ.
ಆಮೇಲೆ ಆಗುವದೇನಂದರೆ--ಎಲ್ಲಾ ಶರೀರಗಳ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ಆಗ ನಿಮ್ಮ ಕುಮಾರರೂ ಕುಮಾರ್ತೆಯರೂ ಪ್ರವಾದಿ ಸುವರು; ನಿಮ್ಮ ವೃದ್ಧರು ಕನಸುಗಳನ್ನು ಕಾಣುವರು; ನಿಮ್ಮ ಯೌವನಸ್ಥರು ದರ್ಶನಗಳನ್ನು ನೋಡುವರು.
ಆಗುವದೇನಂದರೆ--ಕರ್ತನ ಹೆಸರನ್ನು ಹೇಳಿ ಕೊಳ್ಳುವವರೆಲ್ಲರೂ ರಕ್ಷಿಸಲ್ಪಡುವರು; ಚೀಯೋನ್ ಪರ್ವತದಲ್ಲಿಯೂ ಯೆರೂಸಲೇಮಿನಲ್ಲಿಯೂ ಕರ್ತನು ಕರೆಯುವ ಉಳಿದವರಲ್ಲಿಯೂ ಕರ್ತನು ಹೇಳಿದ ಪ್ರಕಾರ ಬಿಡುಗಡೆಯು ಇರುವದು.