Indian Language Bible Word Collections
Job 26:9
Job Chapters
Job 26 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Assamese
Books
Old Testament
New Testament
Job Chapters
Job 26 Verses
1
|
ಯೋಬನು ಉತ್ತರ ಕೊಟ್ಟು ಹೇಳಿದ್ದೇನಂದರೆ -- |
2
|
ಶಕ್ತಿ ಇಲ್ಲದವನಿಗೆ ನೀನು ಏನು ಸಹಾಯಮಾಡಿದಿ? ತ್ರಾಣವಿಲ್ಲದ ಕೈಗೆ ಏನು ರಕ್ಷಣೆ ಮಾಡಿದಿ? |
3
|
ಜ್ಞಾನವಿಲ್ಲದವನಿಗೆ ಏನು ಆಲೋಚನೆ ಹೇಳಿದಿ? ಇದ್ದಂತೆ ಇರುವದನ್ನು ನೀನು ಬಹಳ ವಾಗಿ ಬೋಧಿಸಿದಿಯಲ್ಲಾ; |
4
|
ಯಾವನ ಸಂಗಡ ಮಾತನಾಡುತ್ತೀ? ಯಾವನ ಶ್ವಾಸವು ನಿನ್ನಿಂದ ಹೊರಡುತ್ತದೆ? |
5
|
ಸತ್ತು ಹೋದವುಗಳೂ ಅವುಗಳ ನಿವಾಸಿಗಳೂ ನೀರುಗಳ ಕೆಳಗೆ ರೂಪಿಸಲ್ಪಡುತ್ತವೆ. |
6
|
ಆತನ ಮುಂದೆ ನರಕವು ಬೆತ್ತಲೆಯಾಗಿದೆ; ನಾಶನಕ್ಕೆ ಮರೆ ಇಲ್ಲ. |
7
|
ಉತ್ತರವನ್ನು ಶೂನ್ಯದ ಮೇಲೆ ವಿಸ್ತರಿಸುತ್ತಾನೆ; ಭೂಮಿ ಯನ್ನು ಏನೂ ಇಲ್ಲದ್ದರ ಮೇಲೆ ತೂಗ ಹಾಕಿದ್ದಾನೆ. |
8
|
ನೀರನ್ನು ತನ್ನ ಮಂದವಾದ ಮೇಘಗಳಲ್ಲಿ ಕಟ್ಟುತ್ತಾನೆ. ಮೇಘವು ಅದರ ಕೆಳಗೆ ಸೀಳಿಹೋಗದು; |
9
|
ಸಿಂಹಾ ಸನದ ಮುಖವನ್ನು ಹಿಂದೆಗೆಯುತ್ತಾನೆ; ಅದರ ಮೇಲೆ ತನ್ನ ಮೇಘವನ್ನು ವಿಸ್ತರಿಸುತ್ತಾನೆ. |
10
|
ಹಗಲು ರಾತ್ರಿ ಮುಗಿಯುವ ವರೆಗೆ ಆತನು ನೀರಿನ ಸುತ್ತಲೂ ಮೇರೆ ಯನ್ನು ಕಟ್ಟಿದ್ದಾನೆ. |
11
|
ಆಕಾಶದ ಸ್ತಂಭಗಳು ಅಲ್ಲಾಡು ತ್ತವೆ; ಆತನ ಗದರಿಕೆಗೆ ಆಶ್ಚರ್ಯಪಡುತ್ತವೆ. |
12
|
ತನ್ನ ಶಕ್ತಿಯಿಂದ ಸಮುದ್ರವನ್ನು ಭೇದಿಸುತ್ತಾನೆ. ತನ್ನ ವಿವೇ ಕದಿಂದ ಗರ್ವಿಷ್ಟನನ್ನು ಹೊಡೆಯುತ್ತಾನೆ. |
13
|
ಆತನ ಆತ್ಮನಿಂದ ಆಕಾಶವು ಶೃಂಗಾರವಾಗಿದೆ; ಆತನ ಕೈ ಓಡುವ ಸರ್ಪವನ್ನು ರೂಪಿಸಿತು. |
14
|
ಇಗೋ, ಇವು ಆತನ ಮಾರ್ಗಗಳ ಭಾಗಗಳು; ಆತನನ್ನು ಕುರಿತು ಸ್ವಲ್ಪ ಭಾಗ ಮಾತ್ರ ಕೇಳಿದ್ದೇವೆ; ಆದರೆ ಆತನ ಪರಾಕ್ರಮದ ಗುಡುಗನ್ನು ಯಾವನು ಗ್ರಹಿಸಿಕೊಳ್ಳು ವನು ಎಂಬದು. |