Indian Language Bible Word Collections
Job 24:15
Job Chapters
Job 24 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Assamese
Books
Old Testament
New Testament
Job Chapters
Job 24 Verses
1
ಸರ್ವಶಕ್ತನಿಗೆ ಕಾಲಗಳು ಮರೆಯಾಗದೆ ಇರಲಾಗಿ, ಆತನನ್ನು ತಿಳಿದವರು ಆತನ ದಿವಸಗಳನ್ನು ನೋಡದೆ ಇರುವದು ಯಾಕೆ?
2
ಗಡಿ ಗಳನ್ನು ಬದಲಿಸುತ್ತಾರೆ, ಮಂದೆಗಳನ್ನು ಬಲಾತ್ಕಾರ ದಿಂದ ತಕ್ಕೊಂಡು ಅವುಗಳನ್ನು ಸಾಕಿಕೊಳ್ಳುತ್ತಾರೆ.
3
ದಿಕ್ಕಿಲ್ಲದವರ ಕತ್ತೆಯನ್ನು ತಕ್ಕೊಂಡು ಹೋಗುತ್ತಾರೆ; ವಿಧವೆಯ ಎತ್ತನ್ನು ಒತ್ತೆಯಾಗಿ ತಕ್ಕೊಳ್ಳುತ್ತಾರೆ.
4
ದರಿದ್ರನನ್ನು ಮಾರ್ಗದಿಂದ ತೊಲಗಿಸುತ್ತಾರೆ; ದೇಶದ ದೀನರು ಕೂಡಾ ಅಡಗಿಕೊಳ್ಳುತ್ತಾರೆ.
5
ಇಗೋ, ಅವರು ಕಾಡುಕತ್ತೆಗಳ ಹಾಗೆ ತಮ್ಮ ಕೆಲಸಕ್ಕೆ ಹೊರಡುತ್ತಾರೆ. ಬೆಳಿಗ್ಗೆ ಕೊಳ್ಳೆ ಹುಡುಕುತ್ತಾರೆ; ಅರಣ್ಯವು ಅವರಿಗೂ ಮಕ್ಕಳಿಗೂ ಆಹಾರ ಕೊಡು ತ್ತದೆ.
6
ಹೊಲದಲ್ಲಿ ತಮ್ಮ ತಮ್ಮ ಬೆಳೆಯನ್ನು ಕೊಯ್ದು ದುಷ್ಟನ ದ್ರಾಕ್ಷೆಯ ತೋಟದಲ್ಲಿ ಹಣ್ಣು ಆರಿಸುತ್ತಾರೆ.
7
ಬೆತ್ತಲೆಯಾಗಿ ಬಟ್ಟೆ ಇಲ್ಲದೆ ಮಲಗುವಂತೆ ಮಾಡುತ್ತಾರೆ. ಚಳಿಯಲ್ಲಿ ಅವರಿಗೆ ಹೊದ್ದು ಕೊಳ್ಳು ವದಕ್ಕೆ ಇಲ್ಲ.
8
ಬೆಟ್ಟಗಳ ಮಳೆಯಿಂದ ತೊಯ್ದಿ ದ್ದಾರೆ; ಆಶ್ರಯವಿಲ್ಲದೆ ಬಂಡೆಯನ್ನು ಅಪ್ಪಿಕೊಳ್ಳುತ್ತಾರೆ.
9
ದಿಕ್ಕಿಲ್ಲದವರನ್ನು ತಾಯಿಯ ಮೊಲೆಯಿಂದ ಕಸಕೊಳ್ಳುತ್ತಾರೆ; ಬಡವನಿಂದ ಒತ್ತೆಯಾಗಿ ತಕ್ಕೊಳ್ಳು ತ್ತಾರೆ.
10
ವಸ್ತ್ರವಿಲ್ಲದೆ ಬೆತ್ತಲೆಯಾಗಿರುವವರನ್ನು ತಿರು ಗಾಡಿಸುತ್ತಾರೆ; ಹಸಿದವರು ಸೂಡುಗಳನ್ನು ಹೊರು ತ್ತಾರೆ
11
ಅವರ ಗೋಡೆಗಳ ನಡುವೆ ಇದ್ದುಕೊಂಡು ಎಣ್ಣೆಯನ್ನು ತೆಗೆಯುತ್ತಾರೆ; ತೊಟ್ಟಿಗಳನ್ನು ತುಳಿದು ದಾಹಪಡುತ್ತಾರೆ.
12
ಪಟ್ಟಣದೊಳಗಿಂದ ಮನುಷ್ಯರು ನರಳುತ್ತಾರೆ; ಗಾಯಪಟ್ಟವರ ಪ್ರಾಣವು ಕೂಗುತ್ತದೆ; ಆದರೂ ದೇವರು ತಪ್ಪುಹೊರಿಸುವದಿಲ್ಲ.
13
ಅವರು ಬೆಳಕಿಗೆ ವಿರೋಧವಾಗಿ ದಂಗೆಎದ್ದಿದ್ದಾರೆ; ಅದರ ಮಾರ್ಗ ಗಳನ್ನು ಅವರು ಅರಿಯರು; ಇಲ್ಲವೆ ಅದರ ದಾರಿಗಳಲ್ಲಿ ವಾಸವಾಗಿರರು.
14
ಬೆಳಿಗ್ಗೆ ಕೊಲೆಗಾರನು ಎದ್ದು ದೀನನನ್ನೂ ದರಿದ್ರನನ್ನೂ ಕೊಲ್ಲುತ್ತಾನೆ; ರಾತ್ರಿ ಯಲ್ಲಿ ಕಳ್ಳನ ಹಾಗೆ ಇದ್ದಾನೆ.
15
ವ್ಯಭಿಚಾರಿಯ ಕಣ್ಣು ಮುಂಗತ್ತಲೆಗೆ ಕಾದುಕೊಂಡು -- ಯಾವ ಕಣ್ಣೂ ನನ್ನನ್ನು ನೋಡುವದಿಲ್ಲವೆಂದು ಹೇಳುತ್ತದೆ; ಮುಖ ವನ್ನು ಮುಚ್ಚಿಕೊಳ್ಳುತ್ತಾನೆ.
16
ಹಗಲು ಹೊತ್ತು ಗೊತ್ತು ಮಾಡಿಕೊಂಡ ಮನೆಗಳನ್ನು ಕತ್ತಲೆಯಲ್ಲಿ ಕೊರೆಯು ತ್ತಾರೆ; ಅವರು ಬೆಳಕನ್ನು ತಿಳಿಯರು.
17
ಉದಯ ಕಾಲವು ಅವರಿಗೆ ಮರಣದ ನೆರಳಿನ ಹಾಗೆಯೇ ಇರುವದು; ಮರಣದ ನೆರಳಿನ ದಿಗಿಲುಗಳನ್ನು ತಿಳು ಕೊಳ್ಳುತ್ತಾರೆ.
18
ನೀರುಗಳ ಹಾಗೆ ಅವನು ತೀವ್ರವಾಗಿದ್ದಾನೆ; ಅವನ ಭಾಗವು ಭೂಮಿಯ ಮೇಲೆ ಶಪಿಸಲ್ಪಟ್ಟಿದೆ; ಅವನು ದ್ರಾಕ್ಷೇ ತೋಟಗಳ ಮಾರ್ಗಕ್ಕೆ ತಿರುಗು ವದಿಲ್ಲ.
19
ಹಿಮದ ನೀರನ್ನು ಒಣ ಭೂಮಿಯೂ ಬಿಸಿಲೂ ಹೀರಿಕೊಳ್ಳುವಂತೆ ಪಾಪಮಾಡಿದವರನ್ನು ಸಮಾಧಿಯು ಹೀರಿಕೊಳ್ಳುತ್ತದೆ.
20
ಗರ್ಭವು ಅವನನ್ನು ಮರೆತುಬಿಡುವದು; ಹುಳವು ಅವನಲ್ಲಿ ಸವಿ ಊಟ ಹೊಂದುವದು; ಇನ್ನು ಅವನ ನೆನಪು ಇರುವದಿಲ್ಲ; ಮರದ ಹಾಗೆ ಅನ್ಯಾಯವು ಮುರಿಯಲ್ಪಡುವದು.
21
ಹೆರದ ಬಂಜೆಯನ್ನು ಅವನು ಉಪದ್ರವಪಡಿಸಿ ದನು; ವಿಧವೆಗೆ ಉಪಕಾರಮಾಡಲಿಲ್ಲ.
22
ಬಲಿಷ್ಠರನ್ನು ತನ್ನ ಶಕ್ತಿಯಿಂದ ಎಳೆಯುತ್ತಾನೆ. ಅವನು ಎದ್ದರೆ ಅವನ ಜೀವದಲ್ಲಿ ಯಾವ ಮನುಷ್ಯನಿಗೂ ನಂಬಿಕೆ ಇಲ್ಲ.
23
ಅವನನ್ನು ಭದ್ರಪಡಿಸುತ್ತಾನೆ; ಅವನು ವಿಶ್ರಾಂತಿ ತೆಗೆದುಕೊಳ್ಳುತ್ತಾನೆ; ಆದಾಗ್ಯೂ ಆತನ ಕಣ್ಣುಗಳು ಅವರ ಮಾರ್ಗಗಳ ಮೇಲೆ ಅವೆ.
24
ಸ್ವಲ್ಪಕಾಲ ಅವರು ಉನ್ನತವಾಗಿದ್ದು ಇಲ್ಲದೆ ಹೋಗುತ್ತಾರೆ; ಅವರು ಕುಗ್ಗಿ ಹೋಗುತ್ತಾರೆ; ಎಲ್ಲರ ಹಾಗೆ ಅವರು ಮಾರ್ಗದಿಂದ ತೆಗೆದುಹಾಕಲ್ಪಡುತ್ತಾರೆ; ಅವರು ತೆನೆಗಳ ತಲೆಯಂತೆ ಕೊಯ್ಯಲ್ಪಡುತ್ತಾರೆ.
25
ಈಗ ಹೀಗೆ ಇಲ್ಲದಿದ್ದರೆ ಯಾವನು ನನ್ನನ್ನು ಸುಳ್ಳುಗಾರನನ್ನಾಗಿ ಮಾಡಿ ನನ್ನ ನುಡಿಯನ್ನು ವ್ಯರ್ಥ ಮಾಡುವನು?