Indian Language Bible Word Collections
Job 19:8
Job Chapters
Job 19 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Assamese
Books
Old Testament
New Testament
Job Chapters
Job 19 Verses
1
|
ಯೋಬನು ಉತ್ತರಕೊಟ್ಟು ಹೇಳಿದ್ದೇನಂದರೆ-- |
2
|
ಎಷ್ಟರ ವರೆಗೆ ನನ್ನ ಪ್ರಾಣ ವನ್ನು ನೋಯಿಸಿ, ನನ್ನನ್ನು ಮಾತುಗಳಿಂದ ಜಜ್ಜುವಿರಿ? |
3
|
ಈಗ ಹತ್ತು ಸಾರಿ ನನ್ನನ್ನು ಅವಮಾನಪಡಿಸಿದಿರಿ; ನೀವು ನನಗೆ ಅನ್ಯರಂತೆ ಮಾಡುವುದಕ್ಕೆ ನಾಚಿಕೆಪಡು ವದಿಲ್ಲ. |
4
|
ನಿಶ್ಚಯವಾಗಿ ನಾನು ತಪ್ಪು ಮಾಡಿದ್ದರೆ ನನ್ನ ತಪ್ಪು ನನ್ನ ಸಂಗಡ ಉಳುಕೊಳ್ಳುವದು. |
5
|
ನಿಶ್ಚಯವಾಗಿ ನನ್ನ ಮೇಲೆ ನಿಮ್ಮನ್ನು ಹೆಚ್ಚಿಸಿ ಕೊಂಡರೆ, ನನ್ನ ನಿಂದೆಯನ್ನು ನನ್ನ ಮೇಲೆ ಹೊರಿಸಿ ವಾದಿಸಿದರೆ, |
6
|
ದೇವರು ನನ್ನನ್ನು ತೊಲಗಿಸಿಬಿಟ್ಟು, ತನ್ನ ಬಲೆಯನ್ನು ನನ್ನ ಮೇಲೆ ಬೀಸಿದನೆಂದು ತಿಳಿಯಬೇಕಷ್ಟೆ. |
7
|
ಇಗೋ, ತಪ್ಪಿನೊಳಗಿಂದ ಕೂಗುತ್ತೇನೆ, ಉತ್ತರ ಕೊಡುವವನಿಲ್ಲ; ಗಟ್ಟಿಯಾಗಿ ಕೂಗುತ್ತೇನೆ, ನ್ಯಾಯ ತೀರ್ವಿಕೆ ಇಲ್ಲ. |
8
|
ನಾನು ದಾಟ ಕೂಡದ ಹಾಗೆ ಆತನು ನನ್ನ ದಾರಿಗೆ ಬೇಲಿ ಹಾಕಿದ್ದಾನೆ; ನನ್ನ ದಾರಿಗಳಲ್ಲಿ ಕತ್ತಲೆ ಇಡುತ್ತಾನೆ. |
9
|
ನನ್ನ ಘನತೆಯನ್ನು ನನ್ನಲ್ಲಿಂದ ಸುಲಿದುಕೊಂಡನು; ನನ್ನ ತಲೆಯ ಕಿರೀ ಟವನ್ನು ತೆಗೆದುಹಾಕಿದನು. |
10
|
ಸುತ್ತಲೂ ನನ್ನನ್ನು ನಾಶ ಪಡಿಸಿದ್ದರಿಂದ ನಾನು ಹೋಗುತ್ತೇನೆ; ಮರವನ್ನು ಕೀಳುವ ಹಾಗೆ ನನ್ನ ನಿರೀಕ್ಷೆಯನ್ನು ಕಿತ್ತುಬಿಟ್ಟನು. |
11
|
ಆತನ ಕೋಪವು ನನ್ನ ಮೇಲೆ ಹೊತ್ತಿ ಅದೆ; ತನ್ನ ವೈರಿಗಳ ಹಾಗೆ ನನ್ನನ್ನು ಎಣಿಸುತ್ತಾನೆ. |
12
|
ಆತನ ಗುಂಪುಗಳು ಸಹ ಬಂದು ನನಗೆ ವಿರೋಧವಾಗಿ ತಮ್ಮ ಮಾರ್ಗ ಕಟ್ಟುತ್ತವೆ. ನನ್ನ ಗುಡಾರದ ಸುತ್ತುದಂಡು ಇಳಿಯುತ್ತದೆ. |
13
|
ನನ್ನ ಸಹೋದರರನ್ನು ನನಗೆ ದೂರ ಮಾಡು ತ್ತಾನೆ; ನನ್ನ ಪರಿಚಯದ ಸ್ನೇಹಿತರು ನನಗೆ ಅನ್ಯರೇ ಆದರು. |
14
|
ನನ್ನ ನೆರೆಯವರು ತಡೆಯುತ್ತಾರೆ; ನನ್ನ ಪರಿಚಯದ ಸ್ನೇಹಿತರು ನನ್ನನ್ನು ಮರೆತ್ತಿದ್ದಾರೆ. |
15
|
ನನ್ನ ಮನೆಯಲ್ಲಿ ತಂಗುವವರೂ ನನ್ನ ದಾಸಿಗಳೂ ನನ್ನನ್ನೂ ಪರನೆಂದು ಎಣಿಸುತ್ತಾರೆ; ಅವರ ದೃಷ್ಟಿಯಲ್ಲಿ ನಾನು ಪರದೇಶದವನ ಹಾಗೆ ಇದ್ದೇನೆ. |
16
|
ನನ್ನ ಸೇವಕನನ್ನು ಕರೆದರೆ, ಅವನು ನನಗೆ ಉತ್ತರ ಕೊಡುವದಿಲ್ಲ; ನನ್ನ ಬಾಯಿಯಿಂದ ಅವನನ್ನು ಬೇಡಿಕೊಳ್ಳಬೇಕಾ ಯಿತು. |
17
|
ನನ್ನ ಶ್ವಾಸವು ನನ್ನ ಹೆಂಡತಿಗೆ ತಿಳಿಯದ್ದಾಗಿದೆ; ನನ್ನ ಹೊಟ್ಟೆಯ ಮಕ್ಕಳನ್ನು ಬೇಡುತ್ತೇನೆ. |
18
|
ಬಾಲಕರು ಸಹ ನನ್ನನ್ನು ತಿರಸ್ಕರಿಸುತ್ತಾರೆ; ನಾನು ಎದ್ದರೆ ನನಗೆ ಎದುರು ಮಾತಾಡುತ್ತಾರೆ. |
19
|
ನನ್ನ ಆಪ್ತ ಸ್ನೇಹಿತರೆಲ್ಲಾ ನನ್ನನ್ನು ಅಸಹ್ಯಿಸುತ್ತಾರೆ; ನಾನು ಪ್ರೀತಿಮಾಡಿದವರೇ ನನಗೆ ವಿರೋಧವಾಗಿ ತಿರುಗಿ ದ್ದಾರೆ. |
20
|
ನನ್ನ ಚರ್ಮಕ್ಕೂ ನನ್ನ ಮಾಂಸಕ್ಕೂ ನನ್ನ ಎಲುಬು ಅಂಟುತ್ತದೆ; ನನ್ನ ಹಲ್ಲುಗಳ ತೊಗಲಿ ನೊಂದಿಗೆ ತಪ್ಪಿಸಿಕೊಂಡೆನು. |
21
|
ನನ್ನ ಸ್ನೇಹಿತರಾದ ನೀವೇ ನನ್ನನ್ನು ಕನಿಕರಿಸಿರಿ, ನನ್ನನ್ನು ಕನಿಕರಿಸಿರಿ; ಯಾಕಂದರೆ ದೇವರ ಕೈ ನನ್ನನ್ನು ಮುಟ್ಟಿದೆ. |
22
|
ದೇವರ ಹಾಗೆ ನೀವು ಯಾಕೆ ನನ್ನನ್ನು ಹಿಂಸಿಸಿ; ನನ್ನ ಮಾಂಸದಿಂದ ತೃಪ್ತಿಯಾಗದೆ ಇದ್ದೀರಿ. |
23
|
ಹಾ! ನನ್ನ ಮಾತುಗಳು ಬರಯಲ್ಪಟ್ಟಿದ್ದರೆ, ಅವು ಪುಸ್ತಕದಲ್ಲಿ ರಚಿಸಲ್ಪಟ್ಟಿದ್ದರೆ |
24
|
ಕಬ್ಬಿಣದ ಕಂಠದಿಂದ ಸೀಸದ ಸಂಗಡ ನಿತ್ಯವಾಗಿ ಬಂಡೆಯಲ್ಲಿ ಅವುಗಳು ಕೆತ್ತಲ್ಪಟ್ಟಿದ್ದರೆ, ಎಷ್ಟೋ ಒಳ್ಳೇದು! |
25
|
ನನ್ನ ವಿಮೋಚಕನು ಜೀವಿಸುತ್ತಾನೆಂದೂ ಆತನು ಕಡೆಯ ದಿನದಲ್ಲಿ ಭೂಮಿಯ ಮೇಲೆ ನಿಲ್ಲುವನೆಂದೂ ತಿಳಿದಿದ್ದೇನೆ; |
26
|
ನನ್ನ ಚರ್ಮದ ಹುಳಗಳು ಈ ದೇಹ ವನ್ನು ನಾಶಪಡಿಸಿದಾಗ್ಯೂ ನಾನು ನನ್ನ ಶರೀರದಿಂದ ದೇವರನ್ನು ನೋಡುವೆನು. |
27
|
ಆತನನ್ನು ನನಗೆ ನಾನೇ ದೃಷ್ಟಿಸುವೆನು; ನನ್ನ ಕಣ್ಣುಗಳೇ ನೋಡುವವು, ಬೇರೆ ಯವರಲ್ಲ.; ನನ್ನೊಳಗೆ ನನ್ನ ಅಂತರಿಂದ್ರಿಯಗಳು ಲಯವಾಗಿವೆ. |
28
|
ನೀವು ಹೇಳುವಿರು--ಅವನನ್ನು ಯಾಕೆ ಹಿಂಸಿಸು ತ್ತೇವೆ? ಮಾತಿನ ಬೇರು ನನ್ನಲ್ಲಿ ಸಿಕ್ಕುವದು. |
29
|
ಕತ್ತಿಯ ಮುಂದೆ ಅಂಜಿಕೊಳ್ಳಿರಿ; ನ್ಯಾಯತೀರ್ವಿಕೆ ಉಂಟೆಂದು ನೀವು ತಿಳುಕೊಳ್ಳುವ ಹಾಗೆ ಕೋಪವು ಕತ್ತಿಯ ದಂಡನೆಗಳನ್ನು ಬರಮಾಡುತ್ತದೆ. |